ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿ.-ಜೂನ್
“ಚರ್ಚ್ಗೆ ಹೋಗುವ ವ್ಯಕ್ತಿಯನ್ನು ನೀವು ಭೇಟಿಯಾದಲ್ಲಿ ಹೀಗೆ ಹೇಳಬಹುದು: ಈ ಸುಪರಿಚಿತ ವಚನದ ಕುರಿತು ನಿಮ್ಮ ಅಭಿಪ್ರಾಯವನ್ನು ಕೇಳಲು ನಾನು ಬಯಸುತ್ತೇನೆ. [ಯೋಹಾನ 3:16ನ್ನು ಓದಿ.] ಒಬ್ಬ ಮನುಷ್ಯನ ಮರಣವು ಹೇಗೆ ಇತರರೆಲ್ಲರಿಗೆ ನಿತ್ಯಜೀವವನ್ನು ತರಬಲ್ಲದು ಎಂಬುದರ ಕುರಿತು ನೀವೆಂದಾದರೂ ಯೋಚಿಸಿದ್ದೀರೋ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ. ಪುಟ 23ರಲ್ಲಿರುವ ಲೇಖನವನ್ನು ತೋರಿಸಿರಿ.] ನಾವು ಯೇಸುವಿನ ಮರಣದಿಂದ ಹೇಗೆ ಪ್ರಯೋಜನ ಪಡೆಯಸಾಧ್ಯವಿದೆ ಎಂಬುದರ ಕುರಿತು ಈ ಪತ್ರಿಕೆಯು ಸ್ಪಷ್ಟವಾದ ಸಂತೃಪ್ತಿಕರ ವಿವರಣೆಯನ್ನು ನೀಡುತ್ತದೆ.”
ಎಚ್ಚರ! ಏಪ್ರಿ.-ಜೂನ್
“ಮೂಢನಂಬಿಕೆಗಳು ಹಾನಿಕರವೋ ಹಾನಿಕರವಲ್ಲವೋ, ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅವಕಾಶಕೊಡಿ.] ನಿಮಗೆ ಇಷ್ಟವಿರುವುದಾದರೆ ನಾನು ಒಂದು ಆಸಕ್ತಿಕರವಾದ ಹೇಳಿಕೆಯನ್ನು ತೋರಿಸಲು ಬಯಸುತ್ತೇನೆ. [ಒಳ್ಳೇ ಪ್ರತಿಕ್ರಿಯೆ ತೋರಿಸಿದಲ್ಲಿ ಯೆಶಾಯ 65:11ನ್ನು ಓದಿ.] ಮೂಢನಂಬಿಕೆಗಳು ಶಾಸ್ತ್ರೀಯ ಬೋಧನೆಗಳೊಂದಿಗೆ ಹೊಂದಿಕೆಯಲ್ಲಿವೆಯೊ ಎಂಬುದನ್ನು ಈ ಲೇಖನವು ಚರ್ಚಿಸುತ್ತದೆ.” ಪುಟ 28ರಲ್ಲಿರುವ ಲೇಖನವನ್ನು ತೋರಿಸಿರಿ.