ಪತ್ರಿಕೆಗಳ ಕುರಿತು ಏನು ಹೇಳಬೇಕು?
ಕಾವಲಿನಬುರುಜು ಏಪ್ರಿಲ್-ಜೂನ್
“ಮಕ್ಕಳನ್ನು ಸರಿಯಾಗಿ ಸಾಕಿಸಲಹಲು ಶಿಸ್ತು ಎಷ್ಟು ಮಹತ್ವವೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಈ ಕುರಿತು ಒಂದು ವಚನವನ್ನು ನಿಮಗೆ ತೋರಿಸಲೋ? [ಸಂಭಾಷಣೆ ಮುಂದರಿಸಲು ಮನೆಯವನು ಬಯಸಿದರೆ ಜ್ಞಾನೋಕ್ತಿ 13:24 ಓದಿ.] ನಮ್ಮ ಮಕ್ಕಳನ್ನು ಶಿಸ್ತುಗೊಳಿಸುವ ಪ್ರಾಯೋಗಿಕ ಮಾರ್ಗದರ್ಶಕಗಳನ್ನು ಈ ಲೇಖನ ಕೊಡುತ್ತದೆ.” ಪುಟ 10ರಲ್ಲಿರುವ ಲೇಖನ ತೋರಿಸಿ.
ಎಚ್ಚರ! ಏಪ್ರಿಲ್-ಜೂನ್
“ಆರ್ಥಿಕ ಸಮಸ್ಯೆಗಳಿಂದಾಗಿ ಇಂದು ಅನೇಕರು ಕಷ್ಟಪಡುತ್ತಿದ್ದಾರೆ. ವಿಶೇಷವಾಗಿ ಇಂದಿನ ಆರ್ಥಿಕ ಮುಗ್ಗಟ್ಟಿನ ಸಮಯದಲ್ಲಿ. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗೆ ಅವಕಾಶಕೊಡಿ.] ಶಾಸ್ತ್ರದಲ್ಲಿ ಕೊಡಲಾದ ಒಂದು ವಿವೇಕಯುತ ಸಲಹೆಯನ್ನು ನಾನು ಓದಲೋ? [ಮನೆಯವನು ಸಂಭಾಷಣೆ ಮುಂದರಿಸಲು ಒಪ್ಪುವುದಾದರೆ 1 ತಿಮೊಥೆಯ 6:8, 10 ಓದಿ.] ಈ ಪತ್ರಿಕೆ, ತೃಪ್ತಿಕರವಾಗಿ ನಮ್ಮ ಹಣಕಾಸನ್ನು ಉಪಯೋಗಿಸಲು ನೆರವಾಗುವ ಕೆಲವು ಶಾಸ್ತ್ರೀಯ ಮೂಲತತ್ತ್ವಗಳನ್ನು ನೀಡುತ್ತದೆ.