ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 9/08 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2008 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಚೌಕ
    2003 ನಮ್ಮ ರಾಜ್ಯದ ಸೇವೆ
  • ಕುಟುಂಬ ಪರಾಮರಿಕೆಯ ಜವಾಬ್ದಾರಿಗೆ ಹೆಗಲುಕೊಡುವುದು
    ಕಾವಲಿನಬುರುಜು—1998
  • ಹೆತ್ತವರೇ, ನಿಮ್ಮ ಮಕ್ಕಳಿಗೆ ಪ್ರೀತಿಯಿಂದ ತರಬೇತಿಕೊಡಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2007
  • ಸುಖ ಸಂಸಾರ ಸಾಧ್ಯ!—ಭಾಗ 2
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
2008 ನಮ್ಮ ರಾಜ್ಯದ ಸೇವೆ
km 9/08 ಪು. 3

ಪ್ರಶ್ನಾ ಚೌಕ

◼ ಕ್ರಮವಾದ ಕುಟುಂಬ ಅಧ್ಯಯನಕ್ಕಾಗಿ ವ್ಯಯಿಸಿದ ಸಮಯವನ್ನು ತಂದೆ-ತಾಯಿ ಇಬ್ಬರೂ ವರದಿಸಬಹುದೋ?

“ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ಮಕ್ಕಳಿಗೆ ನೀಡುತ್ತಾ ಅವರನ್ನು ಸಾಕಿ ಸಲಹುವ ಮುಖ್ಯ ಜವಾಬ್ದಾರಿ ತಂದೆಗಿರುವುದಾದರೂ, ತಮ್ಮ ಮಕ್ಕಳಿಗೆ ತರಬೇತು ನೀಡುವುದರಲ್ಲಿ ತಂದೆ-ತಾಯಿ ಇಬ್ಬರಿಗೂ ಪಾಲಿದೆ. (ಎಫೆ. 6:⁠4) “ಮಗನೇ, ನಿನ್ನ ತಂದೆಯ ಉಪದೇಶವನ್ನು ಕೇಳು, ನಿನ್ನ ತಾಯಿಯ ಬೋಧನೆಯನ್ನು ತೊರೆಯಬೇಡ” ಎಂದು ಬೈಬಲ್‌ ಮಕ್ಕಳಿಗೆ ಉತ್ತೇಜನ ನೀಡುತ್ತದೆ. (ಜ್ಞಾನೋ. 1:⁠8) ಹೆತ್ತವರು ನೀಡುವ ತರಬೇತಿಯಲ್ಲಿ ಕುಟುಂಬ ಬೈಬಲ್‌ ಅಧ್ಯಯನವು ಒಂದು ಪ್ರಾಮುಖ್ಯ ಅಂಶವಾಗಿದೆ.

ಹಿಂದೆ, ತಮ್ಮ ಅಸ್ನಾನಿತ ಮಕ್ಕಳೊಂದಿಗಿನ ಚರ್ಚೆಯಲ್ಲಿ ತಂದೆ-ತಾಯಿ ಇಬ್ಬರೂ ಕುಳಿತುಕೊಳ್ಳುತ್ತಿದ್ದರೂ ಅಧ್ಯಯನ ನಡೆಸುತ್ತಿದ್ದ ಒಬ್ಬರು ಮಾತ್ರ ಅದನ್ನು ವರದಿಸುತ್ತಿದ್ದರು. ಆದರೆ ಈಗ ಇದರಲ್ಲಿ ಹೊಂದಾಣಿಕೆ ಮಾಡಲಾಗಿದೆ. ಕುಟುಂಬ ಅಧ್ಯಯನದಲ್ಲಿ ತಮ್ಮ ಮಕ್ಕಳಿಗೆ ಹೆತ್ತವರಿಬ್ಬರು ಕಲಿಸುವುದಾದರೆ, ಅವರಿಬ್ಬರೂ ವಾರಕ್ಕೆ ಒಂದು ತಾಸನ್ನು ಮಾತ್ರ ಕ್ಷೇತ್ರಸೇವೆಯ ವರದಿಯಾಗಿ ಸಲ್ಲಿಸಬಹುದು. ಸಾಮಾನ್ಯವಾಗಿ ತಮ್ಮ ಮಕ್ಕಳಿಗೆ ಕಲಿಸಲು ಹೆತ್ತವರು ವಾರದಲ್ಲಿ ಒಂದು ತಾಸಿಗಿಂತ ಹೆಚ್ಚು ಸಮಯವನ್ನು ವ್ಯಯಿಸುತ್ತಾರೆ ಎಂಬುದು ಒಪ್ಪತಕ್ಕ ಮಾತು. ಏಕೆಂದರೆ, ಮಕ್ಕಳಿಗೆ ತರಬೇತು ನೀಡಲು ಹೆತ್ತವರಿಬ್ಬರೂ ನಿರಂತರವಾಗಿ ಪ್ರಯತ್ನಿಸಬೇಕಾಗುತ್ತದೆ. (ಧರ್ಮೋ. 6:​6-9) ಹಾಗಿದ್ದರೂ, ತಿಂಗಳ ಕ್ಷೇತ್ರಸೇವಾ ವರದಿಯು ಮುಖ್ಯವಾಗಿ ಕ್ಷೇತ್ರದಲ್ಲಿ ನಾವು ವ್ಯಯಿಸಿದ್ದನ್ನು ತೋರಿಸಬೇಕು. ಆದುದರಿಂದ, ಮಕ್ಕಳೊಂದಿಗೆ ಒಂದು ತಾಸಿಗಿಂತಲೂ ಹೆಚ್ಚು ಸಮಯ ಅಧ್ಯಯನ ಮಾಡಿದ್ದರೂ, ವಾರಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಅಧ್ಯಯನ ನಡೆಸಿದ್ದರೂ ಅಥವಾ ಮಕ್ಕಳೊಂದಿಗೆ ಬೇರೆ ಬೇರೆಯಾಗಿ ಅಧ್ಯಯನ ಮಾಡಿದ್ದರೂ ವಾರಕ್ಕೆ ಒಂದಕ್ಕಿಂತ ಹೆಚ್ಚು ತಾಸನ್ನು ಲೆಕ್ಕಿಸಬಾರದು. ಹೆತ್ತವರಲ್ಲಿ ಒಬ್ಬರು ಮಾತ್ರ ಕುಟುಂಬ ಅಧ್ಯಯನವನ್ನು ವರದಿಸಬಹುದು ಹಾಗೂ ಅಧ್ಯಯನ ಮಾಡಿದ ಪ್ರತಿ ವಾರಕ್ಕಾಗಿ ಒಂದು ಪುನರ್ಭೇಟಿಯನ್ನು ವರದಿಸಬಹುದು.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ