ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 11/03 ಪು. 3
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2003 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ಚೌಕ
    2008 ನಮ್ಮ ರಾಜ್ಯದ ಸೇವೆ
  • ಸುವಾರ್ತೆ ಸಾರುವ ಪ್ರಚಾರಕರು
    ಯೆಹೋವನ ಕೆಲಸವನ್ನು ಮಾಡಲು ನಾವು ಸಂಘಟಿತರು
  • ಕುಟುಂಬ ಕಾಲತಖ್ತೆ—ಕುಟುಂಬ ಅಧ್ಯಯನ
    2005 ನಮ್ಮ ರಾಜ್ಯದ ಸೇವೆ
  • ಸಮಯೋಚಿತ ಸಹಾಯವು
    1990 ನಮ್ಮ ರಾಜ್ಯದ ಸೇವೆ
ಇನ್ನಷ್ಟು
2003 ನಮ್ಮ ರಾಜ್ಯದ ಸೇವೆ
km 11/03 ಪು. 3

ಪ್ರಶ್ನಾ ಚೌಕ

◼ಒಂದು ಕುಟುಂಬ ಬೈಬಲ್‌ ಅಧ್ಯಯನವನ್ನು ಸಭೆಗೆ ವರದಿಸಬೇಕೋ?

ಒಬ್ಬ ಕ್ರೈಸ್ತ ಹೆತ್ತವರು ಕುಟುಂಬ ಬೈಬಲ್‌ ಅಧ್ಯಯನವನ್ನು ನಡೆಸುವುದಾದರೆ ಮತ್ತು ಅದರಲ್ಲಿ ಅಸ್ನಾತ ಮಕ್ಕಳು ಒಳಗೂಡಿರುವುದಾದರೆ, ಅವರು ವಾರಕ್ಕೆ ಹೆಚ್ಚಿನಾಂಶ ಒಂದು ತಾಸು, ವಾರಕ್ಕೆ ಒಂದು ಪುನರ್ಭೇಟಿ, ಮತ್ತು ತಿಂಗಳಿಗೆ ಒಂದು ಮನೆ ಬೈಬಲ್‌ ಅಧ್ಯಯನವನ್ನು ವರದಿಸಬಹುದು. ಒಂದುವೇಳೆ ಅಧ್ಯಯನವು ಒಂದು ತಾಸಿಗಿಂತಲು ಹೆಚ್ಚು ಸಮಯದ ವರೆಗೆ, ವಾರಕ್ಕೆ ಒಂದಾವರ್ತಿಗಿಂತಲು ಹೆಚ್ಚು ಸಲ ನಡೆಸಲ್ಪಡುವುದಾದರೂ, ಅಥವಾ ಮಕ್ಕಳೊಂದಿಗೆ ವೈಯಕ್ತಿಕವಾಗಿ ನಡೆಸಲ್ಪಡುವುದಾದರೂ ಇದು ಅನ್ವಯಿಸುವುದು.​—⁠ನಮ್ಮ ಶುಶ್ರೂಷೆ ಪುಸ್ತಕದ 104ನೇ ಪುಟವನ್ನು ನೋಡಿರಿ.

ಮನೆವಾರ್ತೆಯಲ್ಲಿರುವ ಎಲ್ಲರೂ ಸ್ನಾತ ಸಾಕ್ಷಿಗಳಾಗಿರುವುದಾದರೆ, ಸಮಯ ಅಥವಾ ಅಧ್ಯಯನವನ್ನು (ಒಬ್ಬ ಮಗ/ಮಗಳು ದೀಕ್ಷಾಸ್ನಾನದ ನಂತರ ಎರಡನೇ ಪುಸ್ತಕವನ್ನು ಅಧ್ಯಯನ ಮಾಡುತ್ತಿರುವ ಹೊರತು) ಕ್ಷೇತ್ರ ಸೇವೆಯಾಗಿ ವರದಿಸಲಾಗುವುದಿಲ್ಲ. ಏಕೆಂದರೆ ಸಭೆಯ ಕ್ಷೇತ್ರ ಸೇವಾ ವರದಿಯು ಪ್ರಾಥಮಿಕವಾಗಿ ಯೆಹೋವನ ಸಮರ್ಪಿತ ಮತ್ತು ಸ್ನಾತ ಸೇವಕರಾಗಿಲ್ಲದವರಿಗೆ ಸುವಾರ್ತೆಯನ್ನು ಸಾರುವುದರಲ್ಲಿ ಮತ್ತು ಬೈಬಲ್‌ ಸತ್ಯವನ್ನು ಬೋಧಿಸುವುದರಲ್ಲಿ ಏನು ಸಾಧಿಸಲ್ಪಟ್ಟಿದೆ ಎಂಬುದನ್ನು ಪ್ರತಿಬಿಂಬಿಸುತ್ತದೆ. (ಮತ್ತಾ. 24:14; 28:19, 20) ಆದರೂ ಇದು, ಈ ರೀತಿಯ ಒಂದು ಕ್ರಮವಾದ ಅಧ್ಯಯನವನ್ನು ಯಾವುದೇ ರೀತಿಯಲ್ಲಿ ಅಲ್ಪ ಪ್ರಾಮುಖ್ಯಗೊಳಿಸುವುದಿಲ್ಲ.

ತಮ್ಮ ಮಕ್ಕಳೊಂದಿಗೆ ಅಧ್ಯಯನ ಮಾಡುವುದು ಕ್ರೈಸ್ತ ಹೆತ್ತವರ ಜವಾಬ್ದಾರಿಯಾಗಿದೆ. ತಮ್ಮ ಕುಟುಂಬ ಅಧ್ಯಯನವನ್ನು ಸ್ಥಾಪಿಸುವುದರಲ್ಲಿ ಅಥವಾ ಉತ್ತಮಗೊಳಿಸುವುದರಲ್ಲಿ ಸಹಾಯದ ಅಗತ್ಯವಿರುವವರು ಹಿರಿಯರ ನೆರವನ್ನು ಕೋರಬಹುದು. ಸಭೆಯೊಂದಿಗೆ ಸಹವಾಸಿಸುತ್ತಿರುವ ಒಂದು ಕ್ರೈಸ್ತ ಕುಟುಂಬಕ್ಕೆ ಸೇರಿದ ಒಬ್ಬ ಅಸ್ನಾತ ಮಗನಿಗೆ ಅಥವಾ ಮಗಳಿಗೆ ಬೈಬಲ್‌ ಅಧ್ಯಯನವನ್ನು ನಡೆಸಲು ಮತ್ತೊಬ್ಬ ಪ್ರಚಾರಕನನ್ನು ಏರ್ಪಡಿಸುವುದು ಸೂಕ್ತವಾಗಿರುವುದಾದರೆ, ಅಧ್ಯಕ್ಷ ಮೇಲ್ವಿಚಾರಕ ಅಥವಾ ಸೇವಾ ಮೇಲ್ವಿಚಾರಕನನ್ನು ಸಂಪರ್ಕಿಸಬೇಕು. ಈ ರೀತಿಯ ಒಂದು ಅಧ್ಯಯನವು ಅಂಗೀಕರಿಸಲ್ಪಡುವುದಾದರೆ, ಇದನ್ನು ನಡೆಸುವವನು ಇತರ ಯಾವುದೇ ಬೈಬಲ್‌ ಅಧ್ಯಯನದಂತೆಯೇ ಇದನ್ನೂ ವರದಿಸುವನು.

ಯೆಹೋವನ ಮಾರ್ಗಗಳಲ್ಲಿ ಮಕ್ಕಳನ್ನು ತರಬೇತುಗೊಳಿಸುವುದರಲ್ಲಿ ವರದಿಸಲ್ಪಡುವುದಕ್ಕಿಂತಲೂ ಹೆಚ್ಚಿನ ಸಮಯ ಮತ್ತು ಪ್ರಯತ್ನವು ಒಳಗೂಡಿದೆ. (ಧರ್ಮೋ. 6:6-9; ಜ್ಞಾನೋ. 22:6) ಮಕ್ಕಳಿಗೆ “ಕರ್ತನಿಗೆ ಮೆಚ್ಚಿಗೆಯಾಗಿರುವ ಬಾಲಶಿಕ್ಷೆಯನ್ನೂ ಬಾಲೋಪದೇಶವನ್ನೂ” ಕೊಡುವ ತಮ್ಮ ಗಹನವಾದ ಜವಾಬ್ದಾರಿಯನ್ನು ವಹಿಸಿಕೊಂಡಿರುವ ಕ್ರೈಸ್ತ ಹೆತ್ತವರು ನಿಜವಾಗಿಯೂ ಶ್ಲಾಘನೆಗೆ ಅರ್ಹರು.​—⁠ಎಫೆ. 6:⁠4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ