‘ದೇವರ ನಾಮವು ಪವಿತ್ರೀಕರಿಸಲ್ಪಡಲಿ’
1. ಮುಂದಿನ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮುಖ್ಯವಿಷಯ ಯಾವುದು? ಅದು ಯಾವುದರ ಮೇಲೆ ಆಧರಿತ?
1 ವಿಶ್ವದ ಪರಮಾಧಿಕಾರಿಯಾದ ಯೆಹೋವನ ನಾಮಧಾರಿಗಳಾಗಿರುವುದು ಎಂಥ ಸುಯೋಗ! ತನ್ನ ನಾಮಧಾರಿಗಳಾಗಿ ನಮ್ಮನ್ನು ಮಾಡಿರುವುದು ಸ್ವತಃ ದೇವರೇ. ವಿಶೇಷವಾಗಿ 1931ರಿಂದ ಯೆಹೋವನ ಸಾಕ್ಷಿಗಳು ಎಂಬ ಹೆಸರನ್ನು ಪಡೆದಿರುವ ನಾವು ಆ ವಿಶಿಷ್ಟ ನಾಮದೊಂದಿಗೆ ಗುರುತಿಸಲ್ಪಡುತ್ತಿದ್ದೇವೆ. (ಯೆಶಾ. 43:10) ದೇವರ ಏಕೈಕಜಾತ ಮಗನಾದ ಯೇಸು ದೇವರ ಹೆಸರನ್ನು ಬಹುಮೂಲ್ಯವೆಂದೆಣಿಸುತ್ತಾ ತನ್ನ ಮಾದರಿ ಪ್ರಾರ್ಥನೆಯಲ್ಲಿ ಅದಕ್ಕೆ ಪ್ರಥಮ ಸ್ಥಾನ ಕೊಟ್ಟನು. (ಮತ್ತಾ. 6:9) ಯೇಸುವಿನ ಆ ಮಾತುಗಳ ಮೇಲೆಯೇ 2012ರ ಸೇವಾ ವರ್ಷದ ಸರ್ಕಿಟ್ ಸಮ್ಮೇಳನ ಕಾರ್ಯಕ್ರಮದ ಮುಖ್ಯವಿಷಯ ಆಧರಿಸಿದೆ. ಅದು, “ದೇವರ ನಾಮವು ಪವಿತ್ರೀಕರಿಸಲ್ಪಡಲಿ” ಎಂದಾಗಿದೆ.
2. ನಾವು ಯಾವ ಮಾಹಿತಿಯನ್ನು ಆಲಿಸಲಿದ್ದೇವೆ?
2 ನಾವೇನನ್ನು ಆಲಿಸಲಿದ್ದೇವೆ? ಶನಿವಾರದಂದು, “ಪೂರ್ಣ ಸಮಯದ ಸೇವಕರಾಗಿ ದೇವರ ನಾಮವನ್ನು ತಿಳಿಯಪಡಿಸಿರಿ” ಎಂಬ ಭಾಷಣದಲ್ಲಿ ಪೂರ್ಣ ಸಮಯದ ಸೇವೆಯು ಸಂತೃಪ್ತಿಕರ ಜೀವನಮಾರ್ಗವೇಕೆ ಎನ್ನುವುದನ್ನು ಚರ್ಚಿಸಲಾಗುವುದು. ಅಲ್ಲದೇ, “ಯೆಹೋವನ ನಾಮಕ್ಕೆ ಕಳಂಕ ತರದಂತೆ ಎಚ್ಚರವಾಗಿರಿ” ಎಂಬ ಭಾಷಣಮಾಲೆಯನ್ನೂ ಕೇಳಲಿರುವೆವು. ನಾಲ್ಕು ಸಂಭಾವ್ಯ ಪಾಶಗಳಿಗೆ ಬಲಿಬೀಳದಿರಲು ಇದು ನಮಗೆ ಸಹಾಯ ಮಾಡುವುದು. “ದೇವರ ನಾಮ ಏಕೆ ಪವಿತ್ರೀಕರಿಸಲ್ಪಡಬೇಕು” ಎಂಬ ಭಾಷಣವು, ಜನರು ಆಸಕ್ತಿಯನ್ನು ತೋರಿಸದಿದ್ದಾಗ ಹುರುಪಿನಿಂದ ಸಾರಲು ನಮಗೆ ಯಾವುದು ಸಹಾಯ ಮಾಡುವುದು? ಫಲಪ್ರದ ಶುಶ್ರೂಷೆಯನ್ನು ನಡೆಸಲು ನಮಗೆ ಯಾವುದು ನೆರವಾಗುವುದು? ಎಂಬ ಪ್ರಶ್ನೆಗಳಿಗೆ ಉತ್ತರ ಕೊಡುವುದು. ಭಾನುವಾರದಂದು, ನಾವು ನಮ್ಮ ಯೋಚನೆಗಳು, ಮಾತು, ನಿರ್ಣಯಗಳು ಮತ್ತು ನಡತೆಯ ಮೂಲಕ ದೇವರ ನಾಮವನ್ನು ಹೇಗೆ ಪವಿತ್ರೀಕರಿಸಬಹುದು ಎಂಬದರ ಬಗ್ಗೆ ನಾಲ್ಕು ಭಾಗಗಳುಳ್ಳ ಭಾಷಣಮಾಲೆಯನ್ನು ಕೇಳಿಸಿಕೊಳ್ಳಲಿದ್ದೇವೆ. “ಅರ್ಮಗೆದ್ದೋನ್ನಲ್ಲಿ ಯೆಹೋವನು ತನ್ನ ಮಹಾ ನಾಮವನ್ನು ಪವಿತ್ರೀಕರಿಸುವನು” ಎಂಬ ಬಹಿರಂಗ ಭಾಷಣವನ್ನು ಹೊಸಬರು ವಿಶೇಷವಾಗಿ ಗಣ್ಯಮಾಡಲಿರುವರು.
3. ಯಾವ ಸುಯೋಗ ನಮಗಿದೆ? ಕಾರ್ಯಕ್ರಮ ನಮಗೆ ಹೇಗೆ ನೆರವಾಗುವುದು?
3 ಯೆಹೋವನು ತನ್ನ ನಾಮವನ್ನು ಪವಿತ್ರೀಕರಿಸಲು ಬೇಗನೆ ಕ್ರಮಕೈಗೊಳ್ಳುವನು. (ಯೆಹೆ. 36:23) ಅಷ್ಟರವರೆಗೆ, ಯೆಹೋವನ ಪವಿತ್ರ ನಾಮವು ಪ್ರತಿನಿಧಿಸುವ ಎಲ್ಲವನ್ನು ಬೆಂಬಲಿಸುವ ಅತ್ಯುತ್ಕೃಷ್ಟ ಸುಯೋಗ ನಮಗಿದೆ. ದೇವರ ನಾಮಧಾರಿಗಳಾಗಿ ನಮಗಿರುವ ಗಂಭೀರ ಜವಾಬ್ದಾರಿಯನ್ನು ಪೂರೈಸಲು ಈ ಸರ್ಕಿಟ್ ಸಮ್ಮೇಳನವು ನಮ್ಮಲ್ಲಿ ಪ್ರತಿಯೊಬ್ಬರಿಗೂ ನೆರವಾಗುವುದೆಂಬ ಭರವಸೆ ನಮಗಿದೆ.