ಸಾರುವ ಕೆಲಸವನ್ನು ಬಹುಮೂಲ್ಯವೆಂದೆಣಿಸಿ
1. ಲೋಕದಲ್ಲಿ ಅನೇಕರಿಗೆ ನಮ್ಮ ಸಾರುವ ಕೆಲಸದ ಬಗ್ಗೆ ಹೇಗನಿಸುತ್ತದೆ?
1 ಸೈತಾನನ ಲೋಕದಲ್ಲಿನ ಅನೇಕರಿಗೆ ನಮ್ಮ ಸಾರುವ ಕೆಲಸವು ಹುಚ್ಚುತನವಾಗಿದೆ. (1 ಕೊರಿಂ. 1:18-21) ನಾವು ಎಚ್ಚರವಹಿಸದಿದ್ದರೆ ಅವರ ಈ ವಿಕೃತ ನೋಟದಿಂದ ನಿರುತ್ತೇಜನಗೊಂಡು ಬಳಲಿಹೋಗುವೆವು, ನಮ್ಮ ಹುರುಪು ಕುಂದಿಹೋಗಬಲ್ಲದು. (ಜ್ಞಾನೋ. 24:10; ಯೆಶಾ. 5:20) ಯೆಹೋವನ ಸಾಕ್ಷಿಗಳಾಗಿರುವ ನಮ್ಮ ಈ ಸುಯೋಗವನ್ನು ಬಹುಮೂಲ್ಯವೆಂದೆಣಿಸಲು ಯಾವ ಕಾರಣಗಳಿವೆ?—ಯೆಶಾ. 43:10.
2. ಶುಶ್ರೂಷೆಯನ್ನು “ಪವಿತ್ರ ಕೆಲಸ” ಎಂದು ಏಕೆ ಕರೆಯಬಹುದು?
2 “ಪವಿತ್ರ ಕೆಲಸ”: ಅಪೊಸ್ತಲ ಪೌಲನು ನಮ್ಮ ಶುಶ್ರೂಷೆಯನ್ನು “ಪವಿತ್ರ ಕೆಲಸ” ಎಂದು ಕರೆದನು. (ರೋಮ. 15:15, 16) ಈ ಕೆಲಸ “ಪವಿತ್ರ” ಆಗಿರುವುದು ಹೇಗೆ? ನಾವು ಶುಶ್ರೂಷೆಯಲ್ಲಿ ಪಾಲ್ಗೊಳ್ಳುವಾಗ, “ಪವಿತ್ರನಾಗಿರುವ” ಯೆಹೋವನ ‘ಜೊತೆಕೆಲಸಗಾರರು’ ಆಗುತ್ತೇವೆ. ಅಲ್ಲದೆ, ಅದು ಆತನ ನಾಮದ ಪವಿತ್ರೀಕರಣಕ್ಕೆ ನೆರವಾಗುತ್ತದೆ. (1 ಕೊರಿಂ. 3:9; 1 ಪೇತ್ರ 1:15) ನಾವು ಸಾರುವಾಗ ಯೆಹೋವನು ಅದನ್ನು “ಸ್ತೋತ್ರ ಯಜ್ಞವಾಗಿ” ಪರಿಗಣಿಸುತ್ತಾನೆ. ಹಾಗಾಗಿ ಶುಶ್ರೂಷೆಯು ನಮ್ಮ ಆರಾಧನೆಯ ಮುಖ್ಯ ಭಾಗವಾಗಿದೆ.—ಇಬ್ರಿ. 13:15.
3. ಸಾರುವ ಕೆಲಸವು ದೊಡ್ಡ ಗೌರವದ ಕೆಲಸ ಏಕೆ?
3 ಸುವಾರ್ತೆ ಸಾರುವ ಕೆಲಸವು ಕೆಲವರಿಗೆ ಮಾತ್ರ ಕೊಡಲಾಗಿರುವ ದೊಡ್ಡ ಗೌರವದ ಕೆಲಸ. ಆ ನೇಮಕವನ್ನು ದೇವದೂತರಿಗೆ ಕೊಡುತ್ತಿದ್ದರೆ ಅವರದನ್ನು ಸಂತೋಷದಿಂದ ಮಾಡುತ್ತಿದ್ದರು. ಖಂಡಿತವಾಗಿ ತುಂಬ ಚೆನ್ನಾಗಿಯೂ ಮಾಡುತ್ತಿದ್ದರು. (1 ಪೇತ್ರ 1:12) ಆದರೆ ಈ ಮಹತ್ತಾದ ಸುಯೋಗಕ್ಕಾಗಿ ಯೆಹೋವನು ಆಯ್ಕೆಮಾಡಿರುವುದು ‘ಮಣ್ಣಿನ ಪಾತ್ರೆಗಳಾಗಿರುವ’ ಅಪರಿಪೂರ್ಣ ಮಾನವರಾದ ನಮ್ಮನ್ನು.—2 ಕೊರಿಂ. 4:7.
4. ಶುಶ್ರೂಷೆ ನಮಗೆ ಬಹುಮೂಲ್ಯವೆಂದು ಹೇಗೆ ತೋರಿಸಬಲ್ಲೆವು?
4 ಆದ್ಯತೆ: ನಮ್ಮ ಶುಶ್ರೂಷೆಯ ಸುಯೋಗ ನಮಗೆ ನಿಜವಾಗಿ ಬಹುಮೂಲ್ಯ ಆಗಿರುವುದರಿಂದ, ಅದನ್ನು ನಮ್ಮ ಜೀವನದ ‘ಹೆಚ್ಚು ಪ್ರಮುಖವಾದ ವಿಷಯಗಳಲ್ಲಿ’ ಒಂದಾಗಿ ಎಣಿಸುತ್ತೇವೆ. (ಫಿಲಿ. 1:10) ಆದುದರಿಂದ ಪ್ರತಿವಾರವೂ ಅದರಲ್ಲಿ ಪಾಲ್ಗೊಳ್ಳಲು ನಾವು ಸಮಯವನ್ನು ಬದಿಗಿರಿಸುತ್ತೇವೆ. ಉದಾಹರಣೆಗೆ ಜಗತ್ಪ್ರಸಿದ್ಧ ವಾದ್ಯಮೇಳದಲ್ಲಿ ಸಂಗೀತ ನುಡಿಸುವ ಸಂಗೀತಕಾರನೊಬ್ಬನನ್ನು ತಕ್ಕೊಳ್ಳಿ. ಅವನು ತನ್ನ ಸುಯೋಗವನ್ನು ಮಾನ್ಯಮಾಡುವದರಿಂದ ಪ್ರತಿಯೊಂದು ಪ್ರದರ್ಶನದ ಮುಂಚೆ ತಯಾರಿಮಾಡುವನು ಮತ್ತು ತನ್ನ ಕೌಶಲವನ್ನು ಇನ್ನಷ್ಟು ಬೆಳೆಸಿಕೊಳ್ಳಲು ಪ್ರಯತ್ನಿಸುವನು. ಹಾಗೆಯೇ, ‘ಸತ್ಯವಾಕ್ಯವನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಲಿಕ್ಕಾಗಿ’ ಶುಶ್ರೂಷೆಯಲ್ಲಿ ಪಾಲ್ಗೊಳ್ಳುವ ಮುಂಚೆ ನಾವು ತಯಾರಿ ಮಾಡುವೆವು. ಅಲ್ಲದೆ, ನಮ್ಮ “ಬೋಧಿಸುವ ಕಲೆ”ಯನ್ನು ಉತ್ತಮಗೊಳಿಸಲೂ ಪ್ರಯತ್ನಿಸುವೆವು.—2 ತಿಮೊ. 2:15; 4:2.
5. ನಮ್ಮ ಶುಶ್ರೂಷೆಯನ್ನು ಯಾರೆಲ್ಲ ಮಾನ್ಯಮಾಡುತ್ತಾರೆ?
5 ಹೆಚ್ಚಿನ ಜನರ ನಕಾರಾತ್ಮಕ ಪ್ರತಿಕ್ರಿಯೆಯಿಂದ ನಿರುತ್ತೇಜಿತರಾಗಬೇಡಿ. ನಮ್ಮ ಸಾರುವ ಕೆಲಸವನ್ನು ಮಾನ್ಯಮಾಡುವ ಅನೇಕರು ಈಗಲೂ ನಮ್ಮ ಟೆರಿಟೊರಿಯಲ್ಲಿದ್ದಾರೆ ಎಂಬದನ್ನು ನೆನಪಿಡಿ. ಆದರೆ ನಮಗೆ ಬೇಕಾಗಿರುವುದು ಮನುಷ್ಯರ ಮೆಚ್ಚಿಕೆಯಲ್ಲ. ಯೆಹೋವನಿಗೆ ಹೇಗನಿಸುತ್ತದೆ ಎಂಬುದೇ ಹೆಚ್ಚು ಪ್ರಾಮುಖ್ಯ. ಆತನು ನಮ್ಮ ಶ್ರದ್ಧಾಪೂರ್ವಕ ಪ್ರಯತ್ನಗಳನ್ನು ತುಂಬ ಮಾನ್ಯಮಾಡುತ್ತಾನೆ.—ಯೆಶಾ. 52:7.