ನಮ್ಮ ಸಾಹಿತ್ಯ ಯಾವ ಸ್ಥಿತಿಯಲ್ಲಿದೆ?
ನಾವು ಜನರಿಗೆ ನೀಡಬೇಕೆಂದಿರುವ ಯಾವುದೇ ಸಾಹಿತ್ಯದ ಬಗ್ಗೆ ಈ ಪ್ರಶ್ನೆ ಕೇಳಿಕೊಳ್ಳುವುದು ಒಳ್ಳೇದು. ಪುಟಗಳು ಮಡಿಚಿರುವ, ಬಣ್ಣಗೆಟ್ಟಿರುವ, ಹರಿದುಹೋಗಿರುವ ಯಾವುದೇ ಸಾಹಿತ್ಯ ನಮ್ಮ ಸಂಘಟನೆಗೆ ಕೆಟ್ಟ ಹೆಸರು ತರುವುದು. ಅಲ್ಲದೆ, ನಮ್ಮ ಸಾಹಿತ್ಯದಲ್ಲಿರುವ ಸುಂದರ, ಜೀವರಕ್ಷಕ ಸಂದೇಶದಿಂದ ಮನೆಯವರ ಗಮನವನ್ನು ಅಪಕರ್ಷಿಸುತ್ತದೆ.
ನಮ್ಮ ಸಾಹಿತ್ಯವನ್ನು ಹೇಗೆ ನೀಟಾಗಿಡಬಲ್ಲೆವು? ಒಂದೇ ರೀತಿಯ ಸಾಹಿತ್ಯಗಳನ್ನು ಬ್ಯಾಗ್ನ ಒಂದೇ ಕಡೆ ಇಡುವುದು ಒಳ್ಳೇದೆಂದು ಕೆಲವರು ಕಂಡುಕೊಂಡಿದ್ದಾರೆ. ಉದಾಹರಣೆಗೆ, ಒಂದು ಕಡೆಯಲ್ಲಿ ಪುಸ್ತಕಗಳು, ಇನ್ನೊಂದು ಕಡೆ ಪತ್ರಿಕೆಗಳು ಮತ್ತು ಬ್ರೋಷರುಗಳು, ಮತ್ತೊಂದು ಕಡೆ ಟ್ರ್ಯಾಕ್ಟ್ಗಳು ಹೀಗೆ ಜೋಡಿಸಿಡುತ್ತಾರೆ. ಬೈಬಲನ್ನಾಗಲಿ, ಸಾಹಿತ್ಯವನ್ನಾಗಲಿ ವಾಪಸ್ ಬ್ಯಾಗ್ನೊಳಗೆ ಹಾಕುವಾಗಲೆಲ್ಲ ಅದು ಹಾಳಾಗದ ರೀತಿಯಲ್ಲಿ ಜೋಕೆಯಿಂದ ಇಡುತ್ತಾರೆ. ಕೆಲವು ಪ್ರಚಾರಕರು ಸಾಹಿತ್ಯವನ್ನು ಫೋಲ್ಡರ್ಗಳಲ್ಲಿ ಇಲ್ಲವೆ ಪಾರದರ್ಶಕ ಪ್ಲಾಸ್ಟಿಕ್ ಬ್ಯಾಗ್ಗಳಲ್ಲಿ ಇಡುತ್ತಾರೆ. ನಾವು ಏನನ್ನೇ ಬಳಸಲಿ, ಹಾಳುಗೆಟ್ಟಿರುವ ಸಾಹಿತ್ಯವನ್ನು ಜನರಿಗೆ ಕೊಡುವ ಮೂಲಕ ಯಾರೂ ನಮ್ಮ ಶುಶ್ರೂಷೆಯ ವಿಷಯದಲ್ಲಿ ಲೋಪ ಕಂಡುಹಿಡಿಯಲು ಕಾರಣ ಕೊಡದಿರೋಣ.—2 ಕೊರಿಂ. 6:3.