ವೈಯಕ್ತಿಕ ಸೇವಾ ಕ್ಷೇತ್ರದಿಂದ ಪ್ರಯೋಜನ ಪಡೆಯುತ್ತಿದ್ದೀರಾ?
1. ನಿಮ್ಮ ಸಭೆಗೆ ತುಂಬ ಸೇವಾ ಕ್ಷೇತ್ರವಿರುವುದಾದರೆ ನೀವೇನು ಮಾಡಬಹುದು?
1 ನಿಮ್ಮ ಸಭೆಗೆ ತುಂಬ ಸೇವಾ ಕ್ಷೇತ್ರವಿರುವಲ್ಲಿ ನಿಮಗಂತ ಒಂದು ಸೇವಾ ಕ್ಷೇತ್ರವನ್ನು ಕೇಳಿ ಪಡೆದುಕೊಳ್ಳಬಹುದು. ಬೇಕಿದ್ದರೆ ನಿಮ್ಮ ಮನೆಯ ಹತ್ತಿರವಿರುವ ಸೇವಾ ಕ್ಷೇತ್ರವನ್ನೇ ಕೇಳಬಹುದು. ಸಂಘಟಿತರು ಪುಸ್ತಕದ 103ನೇ ಪುಟದಲ್ಲಿ ಹೀಗಿದೆ: “ಅನುಕೂಲ ಸ್ಥಳದಲ್ಲಿರುವ ಸ್ವಂತ ಟೆರಿಟೊರಿಯನ್ನು ಪಡೆದುಕೊಳ್ಳುವುದು, ಕ್ಷೇತ್ರ ಸೇವೆಗಾಗಿ ನೀವು ಮೀಸಲಾಗಿಡುವ ಸಮಯದ ಅತ್ಯಂತ ಹೆಚ್ಚಿನ ಉಪಯೋಗವನ್ನು ಮಾಡುವಂತೆ ಸಾಧ್ಯಮಾಡುವುದು. ಅಲ್ಲದೆ, ನಿಮ್ಮ ವೈಯಕ್ತಿಕ ಟೆರಿಟೊರಿಯಲ್ಲಿ ಇನ್ನೊಬ್ಬ ಪ್ರಚಾರಕರನ್ನು ನಿಮ್ಮೊಂದಿಗೆ ಸೇವೆಮಾಡುವಂತೆ ನೀವು ಕರೆಯಲು ಅಪೇಕ್ಷಿಸಬಹುದು.”
2. ಸಭೆಯ ಜೊತೆ ಸೇವೆ ಮಾಡುವುದರ ಬದಲಿಯಾಗಿ ಯಾವ ಏರ್ಪಾಡಿದೆ?
2 ಸಭೆಯೊಂದಿಗೆ ಸೇವೆ ಮಾಡುವುದಕ್ಕೆ ಬದಲಿ: ನಿಮ್ಮ ಕೆಲಸದ ಸ್ಥಳಕ್ಕೆ ಹತ್ತಿರವಿರುವ ಸೇವಾ ಕ್ಷೇತ್ರವನ್ನು ತೆಗೆದುಕೊಂಡರೆ ಊಟದ ವಿರಾಮದಲ್ಲಿ ಅಥವಾ ಕೆಲಸ ಮುಗಿಸಿ ಮನೆಗೆ ಹೋಗುವ ಮುನ್ನ ಸ್ವಲ್ಪ ಹೊತ್ತು ಸೇವೆ ಮಾಡಬಹುದು. ಅಲ್ಲೆ ಹತ್ತಿರದಲ್ಲಿ ಕೆಲಸ ಮಾಡುವ ಪ್ರಚಾರಕರನ್ನು ನಿಮ್ಮ ಜೊತೆ ಕರೆಯಬಹುದು. ನಿಮ್ಮ ಮನೆ ಪಕ್ಕ ಇರುವ ಕ್ಷೇತ್ರ ತೆಗೆದುಕೊಂಡರೆ ಸಮಯ ಸಿಕ್ಕಿದಾಗೆಲ್ಲ ನೀವು ಮತ್ತು ನಿಮ್ಮ ಕುಟುಂಬದವರು ಸಂಜೆ ಸಾಕ್ಷಿಕಾರ್ಯ ಮಾಡಬಹುದು. ಪ್ರತಿ ಸಲ ಕ್ಷೇತ್ರ ಸೇವೆಗಾಗಿ ನಡೆಸುವ ಕೂಟಕ್ಕೆ ಹೋಗಲು ಸಾಧ್ಯವಿಲ್ಲದ ಕಾರಣ ಸುವಾರ್ತೆ ಸಾರಲು ಹೋಗುವ ಮುನ್ನ ಯೆಹೋವ ದೇವರ ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿ. (ಫಿಲಿ. 4:6) ನಿಮ್ಮ ಸ್ವಂತ ಸೇವಾ ಕ್ಷೇತ್ರದಲ್ಲಿ ಮಾತ್ರ ಕೆಲಸ ಮಾಡುವುದಲ್ಲ. ನಿಮ್ಮ ಕ್ಷೇತ್ರ ಸೇವಾ ಗುಂಪಿನೊಂದಿಗೂ ಕೆಲಸ ಮಾಡಬೇಕು. ಅದರಲ್ಲೂ ತುಂಬ ಜನ ವಾರಾಂತ್ಯದಲ್ಲಿ ಸೇವೆಗೆ ಬರುವುದರಿಂದ ಆಗ ನಿಮ್ಮ ಗುಂಪಿನ ಜೊತೆ ಕೆಲಸ ಮಾಡುವುದು ಒಳ್ಳೇದು.
3. ನಿಮಗಂತ ಒಂದು ಸೇವಾ ಕ್ಷೇತ್ರ ಪಡೆಯುವುದರ ಪ್ರಯೋಜನಗಳೇನು?
3 ಪ್ರಯೋಜನಗಳು: ನಿಮಗಂತ ಒಂದು ಸೇವಾ ಕ್ಷೇತ್ರ ಇರೋದಾದರೆ ನಿಮಗೆ ಸಮಯ ಸಿಕ್ಕಿದಾಗೆಲ್ಲ ತಟ್ಟನೆ ಹೋಗಿ ಸೇವೆ ಮಾಡಬಹುದು. ಪ್ರಯಾಣಕ್ಕೆ ವ್ಯಯಿಸುವ ಸಮಯವನ್ನು ಸುವಾರ್ತೆ ಸಾರಲು ಬಳಸಬಹುದು. ಅಷ್ಟೇಕೆ ಆಕ್ಸಿಲಿಯರಿ ಅಥವಾ ರೆಗ್ಯುಲರ್ ಪಯನೀಯರ್ ಸೇವೆ ಮಾಡಲು ಅನುಕೂಲವಾಗುತ್ತೆ. ಆಸಕ್ತಿ ತೋರಿಸಿದ ಮನೆಯವರು ನಿಮ್ಮ ಅಕ್ಕಪಕ್ಕ ಇರುವುದರಿಂದ ಪುನರ್ಭೇಟಿ ಮತ್ತು ಬೈಬಲ್ ಅಧ್ಯಯನ ನಡೆಸುವುದಕ್ಕೆ ಸುಲಭವಾಗಿರುತ್ತೆ. ನಮಗಂತ ಒಂದು ಸೇವಾ ಕ್ಷೇತ್ರ ಇರೋದಾದರೆ ಅಲ್ಲಿನ ಜನರ ಪರಿಚಯ ಮಾಡಿಕೊಳ್ಳಲು ಮತ್ತು ಅವರ ವಿಶ್ವಾಸಗಳಿಸಲು ನೆರವಾಗುತ್ತೆ ಅನ್ನೋದು ಅನೇಕರ ಅನುಭವ. ಹೀಗೆ ಮಾಡುವುದರಿಂದ ಸಮಯಾನಂತರ ಆ ಸೇವಾ ಕ್ಷೇತ್ರವನ್ನು ಬೇರೆಯವರಿಗೆ ಕೊಟ್ಟು ಅವರು ಸಾರಲು ಹೋಗುವಾಗ ಒಳ್ಳೇ ಪ್ರತಿಕ್ರಿಯೆ ಸಿಗುತ್ತೆ. ನಿಮಗೆ ಕೊಡಲಾಗಿರುವ ಸೇವಾ ಕ್ಷೇತ್ರದಲ್ಲಿ ಸುವಾರ್ತೆ ಸಾರುವ ಮೂಲಕ ನೀವು ಮತ್ತು ನಿಮ್ಮ ಕುಟುಂಬ ಸೇವೆಯನ್ನು ಪೂರ್ಣವಾಗಿ ನೆರವೇರಿಸುತ್ತಿದ್ದೀರಾ?—2 ತಿಮೊ. 4:5.