ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಮಾರ್ಚ್‌ ಪು. 7
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಮನಸ್ಸಿಗೆ ನಾಟಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಯೆಹೋವ ದೇವರ ಸ್ನೇಹಿತರಾಗಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯ ಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಮಾರ್ಚ್‌ ಪು. 7
ಸಬ್‌ ವೇ ಸ್ಟೇಷನ್‌ನಲ್ಲಿ ಒಂದು ದಂಪತಿ ತಳ್ಳುಬಂಡಿ ಸಾಕ್ಷಿಕಾರ್ಯ ಮಾಡುವಾಗ ಒಬ್ಬ ವ್ಯಕ್ತಿಗೆ ಟ್ರ್ಯಾಕ್ಟ್‌ ಕೊಡ್ತಿದ್ದಾರೆ.

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ

ಪ್ರಶ್ನೆಗಳನ್ನ ಕೇಳಿ

ನಾವು ಸಂತೋಷದಿಂದ ಸೇವೆ ಮಾಡಬೇಕು ಅಂತ ‘ಖುಷಿಯಾಗಿರೋ ದೇವರಾದ’ ಯೆಹೋವನು ಬಯಸ್ತಾನೆ. (1ತಿಮೊ 1:11) ಸೇವೆಯಲ್ಲಿ ನಿಪುಣತೆ ಬೆಳೆಸಿಕೊಳ್ಳುತ್ತಾ ಹೋದಂತೆ ನಮ್ಮ ಸಂತೋಷನೂ ಹೆಚ್ಚಾಗ್ತಾ ಹೋಗುತ್ತೆ. ಪ್ರಶ್ನೆಗಳನ್ನ ಕೇಳೋದು ಮನೆಯವರ ಆಸಕ್ತಿಯನ್ನ ಹೆಚ್ಚಿಸುತ್ತೆ. ಅಷ್ಟೇ ಅಲ್ಲ ಸಂಭಾಷಣೆ ಆರಂಭಿಸಲು ಇದೊಂದು ಒಳ್ಳೇ ವಿಧಾನ ಸಹ. ಜನರು ಚೆನ್ನಾಗಿ ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರಲು ಪ್ರಶ್ನೆಗಳು ಸಹಾಯ ಮಾಡುತ್ತವೆ. (ಮತ್ತಾ 22:41-45) ನಾವು ಪ್ರಶ್ನೆಗಳನ್ನ ಕೇಳಿದ್ರೆ ಮತ್ತು ಮನೆಯವರು ಹೇಳೋದನ್ನ ಚೆನ್ನಾಗಿ ಕೇಳಿಸಿಕೊಂಡ್ರೆ ಅವರ ಅಭಿಪ್ರಾಯ ನಮಗೆ ಮುಖ್ಯ ಅಂತ ತೋರಿಸಿಕೊಡ್ತೀವಿ. (ಯಾಕೋ 1:19) ಅಷ್ಟೇ ಅಲ್ಲ ನಮ್ಮ ಪ್ರಶ್ನೆಗೆ ಮನೆಯವರು ಉತ್ರ ಕೊಡುವಾಗ ಸಂಭಾಷಣೆಯನ್ನ ಮುಂದುವರಿಸೋದು ಹೇಗೆ ಅಂತನೂ ಗೊತ್ತಾಗುತ್ತೆ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ’ ಅನ್ನೋ ವಿಡಿಯೋದ ಒಂದು ಸೀನ್‌. ಜಾಸ್ಮಿನ್‌ ಟ್ರೇನ್‌ನಲ್ಲಿ ತನ್ನ ಸೀಟನ್ನ ಒಬ್ಬ ವಯಸ್ಸಾದ ಹೆಂಗಸಿಗೆ ಬಿಟ್ಟು ಕೊಡ್ತಿದ್ದಾಳೆ.

    ಜಾಸ್ಮಿನ್‌ ಯಾವ ಒಳ್ಳೇ ಗುಣಗಳನ್ನ ತೋರಿಸಿದ್ರು?

  • ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ’ ಅನ್ನೋ ವಿಡಿಯೋದ ಒಂದು ಸೀನ್‌. ನೀತಾ ತನ್ನ ಕೈಯನ್ನ ಮುಂದೆ ಚಾಚಿ ಜಾಸ್ಮಿನ್‌ಗೆ ತನ್ನನ್ನ ಪರಿಚಯಿಸಿಕೊಳ್ತಿದ್ದಾಳೆ.

    ಜಾಸ್ಮಿನ್‌ ಬಗ್ಗೆ ನೀತಾಗೆ ಆಸಕ್ತಿ ಇತ್ತು ಅಂತ ಅವರು ಕೇಳಿದ ಯಾವ ಪ್ರಶ್ನೆಯಿಂದ ಗೊತ್ತಾಗುತ್ತೆ?

  • ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ’ ಅನ್ನೋ ವಿಡಿಯೋದ ಒಂದು ಸೀನ್‌. ನೀತಾ ಕೇಳಿದ ಪ್ರಶ್ನೆಗೆ ಜಾಸ್ಮಿನ್‌ ಉತ್ತರಿಸುತ್ತಿದ್ದಾಳೆ.

    ಸುವಾರ್ತೆ ಬಗ್ಗೆ ಜಾಸ್ಮಿನಿನ ಆಸಕ್ತಿ ಹೆಚ್ಚಿಸಲು ನೀತಾ ಯಾವ ಪ್ರಶ್ನೆ ಕೇಳಿದ್ರು?

  • ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಪ್ರಶ್ನೆ ಕೇಳಿ’ ಅನ್ನೋ ವಿಡಿಯೋದ ಒಂದು ಸೀನ್‌. ನೀತಾ ವಚನವನ್ನ ಓದಿದ ಮೇಲೆ ಜಾಸ್ಮಿನ್‌ಗೆ ಪ್ರಶ್ನೆ ಕೇಳ್ತಿದ್ದಾಳೆ.

    ಜಾಸ್ಮಿನ್‌ ಚೆನ್ನಾಗಿ ಯೋಚಿಸಿ ಸರಿಯಾದ ತೀರ್ಮಾನಕ್ಕೆ ಬರಲು ಸಹಾಯ ಮಾಡುವ ಯಾವ ಪ್ರಶ್ನೆಯನ್ನ ನೀತಾ ಕೇಳಿದ್ರು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ