ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb21 ಜುಲೈ ಪು. 9
  • ಮನಸ್ಸಿಗೆ ನಾಟಿಸಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಮನಸ್ಸಿಗೆ ನಾಟಿಸಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ಪ್ರಶ್ನೆಗಳನ್ನ ಕೇಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಸೇವೆಯಲ್ಲಿ ನಿಮ್ಮ ಸಂತೋಷ ಹೆಚ್ಚಿಸಿ—ದೇವರ ವಾಕ್ಯನ ಚೆನ್ನಾಗಿ ಬಳಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ಪ್ರಾರ್ಥನೆ ಮಾಡಿ ಯೆಹೋವನ ಸಹಾಯ ಪಡಕೊಳ್ಳಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
  • ದುಶ್ಚಟ ಬಿಡಲು ವಿದ್ಯಾರ್ಥಿಗಳಿಗೆ ಸಹಾಯಮಾಡಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2022
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
mwb21 ಜುಲೈ ಪು. 9

ಸೇವೆಯಲ್ಲಿ ನಿಪುಣರಾಗಲು ಕಲಿಯಿರಿ | ಸೇವೆಯಲ್ಲಿ ಇನ್ನೂ ಹೆಚ್ಚು ಖುಷಿ ಪಡಕೊಳ್ಳಿ

ಮನಸ್ಸಿಗೆ ನಾಟಿಸಿ

ದೇವರ ಮಾತನ್ನು ಕೇಳಬೇಕು ಅನ್ನೋ ಆಸೆ ಮನಸ್ಸಲ್ಲಿ ಇರಬೇಕು. (ಜ್ಞಾನೋ 3:1) ಅದಕ್ಕೆ ವಿದ್ಯಾರ್ಥಿಗಳಿಗೆ ಕಲಿಸುವಾಗ ಅವರ ಮನಸ್ಸಿಗೆ ನಾಟಿಸಬೇಕು. ಹೇಗೆ?

ಬರೀ ಬೈಬಲಲ್ಲಿರೋ ಸತ್ಯಗಳನ್ನ ಕಲಿಸಿದರೆ ಸಾಕಾಗಲ್ಲ. ಬದಲಿಗೆ ಕಲಿಯೋ ವಿಷಯಗಳು ಅವನಿಗೆ ಹೇಗೆ ಅನ್ವಯಿಸುತ್ತೆ ಮತ್ತು ಯೆಹೋವನ ಜೊತೆ ಅವನಿಗಿರೋ ಸ್ನೇಹನ ಹೇಗೆ ಜಾಸ್ತಿ ಮಾಡಬಹುದು ಅಂತ ಅವನು ಯೋಚಿಸೋ ತರ ಕಲಿಸಬೇಕು. ಬೈಬಲ್‌ನಲ್ಲಿ ದೇವರ ಪ್ರೀತಿ, ಒಳ್ಳೇತನ ಮತ್ತು ನೀತಿ ಹೇಗೆ ಎದ್ದು ಕಾಣುತ್ತೆ ಅಂತ ಅರ್ಥಮಾಡಿಸಿ. ಕಲಿಯೋ ವಿಷಯಗಳ ಬಗ್ಗೆ ಅವನಿಗೆ ಹೇಗೆ ಅನಿಸುತ್ತೆ ಅಂತ ತಿಳಿದುಕೊಳ್ಳೋಕೆ ಪ್ರೀತಿಯಿಂದ ಪ್ರಶ್ನೆಗಳನ್ನ ಕೇಳಿ. ಒಂದು ಕೆಟ್ಟ ಮನೋಭಾವ ಅಥವಾ ರೂಢಿಯನ್ನು ಅವನು ಬಿಟ್ಟುಬಿಟ್ಟರೆ ಜೀವನ ಎಷ್ಟು ಚೆನ್ನಾಗಿರುತ್ತೆ ಅಂತ ಯೋಚನೆ ಮಾಡೋಕೆ ಸಹಾಯಮಾಡಿ. ನಿಮ್ಮ ವಿದ್ಯಾರ್ಥಿ ಯೆಹೋವನನ್ನು ಪ್ರೀತಿಸುವಾಗ ನಿಮಗಾಗೊ ಖುಷಿಯನ್ನು ಮಾತಲ್ಲಿ ಹೇಳಕ್ಕಾಗಲ್ಲ.

ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮನಸ್ಸಿಗೆ ನಾಟಿಸಿ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ.

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮನಸ್ಸಿಗೆ ನಾಟಿಸಿ’ ವಿಡಿಯೋನ ಒಂದು ದೃಶ್ಯ. ಸ್ಟಡಿ ಮಾಡೋವಾಗ ನೀತಾ ಜಾಸ್ಮಿನ್‌ಗೆ ಪ್ರಶ್ನೆ ಕೇಳ್ತಾರೆ.

    “ಸೋಮವಾರ ನಾವು ಚರ್ಚೆ ಮಾಡಿದ್ದರ ಬಗ್ಗೆ ನೀನು ಯೋಚನೆ ಮಾಡಿದ್ಯಾ” ಅಂತ ನೀತಾ ಯಾಕೆ ಕೇಳಿದಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮನಸ್ಸಿಗೆ ನಾಟಿಸಿ’ ವಿಡಿಯೋನ ಒಂದು ದೃಶ್ಯ. ನೀತಾ ಬೈಬಲಿನ ವಚನದಿಂದ ವಿವರಿಸುತ್ತಿದ್ದಾರೆ.

    ಬೈಬಲ್‌ ನಿಯಮಗಳನ್ನು ಕೊಡೋ ಮೂಲಕ ದೇವರು ಪ್ರೀತಿ ತೋರಿಸ್ತಾನೆ ಅಂತ ಜಾಸ್ಮಿನ್‌ಗೆ ಅರ್ಥಮಾಡಿಸೋಕೆ ನೀತಾ ಏನು ಮಾಡಿದಳು?

  • ‘ಶಿಷ್ಯರನ್ನು ಮಾಡೋದ್ರಲ್ಲಿ ಖುಷಿಪಡಲು ಕೌಶಲ ಹೆಚ್ಚಿಸಿ—ಮನಸ್ಸಿಗೆ ನಾಟಿಸಿ’ ವಿಡಿಯೋನ ಒಂದು ದೃಶ್ಯ. ನೀತಾ ಹೇಳೋದನ್ನ ಜಾಸ್ಮಿನ್‌ ಗಮನಕೊಟ್ಟು ಕೇಳಿಸಿಕೊಳ್ತಿದ್ದಾಳೆ.

    ವಿದ್ಯಾರ್ಥಿಗಳಿಗೆ ಮನಸ್ಸಿಗೆ ನಾಟೋ ತರ ಕಲಿಸಿದರೆ ಅವರು ದೇವರಿಗೆ ಹತ್ತಿರ ಆಗ್ತಾ ಇರುತ್ತಾರೆ

    ದೇವರ ಮೇಲಿರುವ ಪ್ರೀತಿಯನ್ನು ತೋರಿಸಲು ನೀತಾ ಹೇಗೆ ಜಾಸ್ಮಿನ್‌ಗೆ ಸಹಾಯಮಾಡಿದಳು?

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ