ಬೈಬಲಿನಲ್ಲಿರುವ ರತ್ನಗಳು | ಆದಿಕಾಂಡ 6-8
ಅವನು ಅದೇ ರೀತಿ ಮಾಡಿದನು
ಈಗಿರುವ ಸಲಕರಣೆಗಳು, ಕಟ್ಟುವ ವಿಧಾನಗಳು ಇಲ್ಲದೇ ನೋಹ ಮತ್ತವನ ಕುಟುಂಬಕ್ಕೆ ನಾವೆ ಕಟ್ಟಲು ಎಷ್ಟು ಕಷ್ಟ ಆಗಿರಬಹುದಲ್ವಾ?
ನಾವೆ ತುಂಬ ದೊಡ್ಡದ್ದಾಗಿತ್ತು. ಸುಮಾರು 437 ಅಡಿ (133 ಮೀ.) ಉದ್ದ, 73 ಅಡಿ (22 ಮೀ.) ಅಗಲ ಮತ್ತು 44 ಅಡಿ (13 ಮೀ.) ಎತ್ತರ ಇತ್ತು
ಮರಗಳನ್ನು ಕಡಿದು ಸರಿಯಾದ ಆಕಾರಕ್ಕೆ ತರಬೇಕಿತ್ತು. ಅದನ್ನ ಹೊತ್ತುಕೊಂಡು ಬರಬೇಕಿತ್ತು
ಬೃಹತ್ತಾಕಾರದ ನಾವೆಯ ಒಳಗೂ ಹೊರಗೂ ಟಾರನ್ನು ಹಚ್ಚಬೇಕಿತ್ತು
ನೋಹನ ಕುಟುಂಬಕ್ಕೆ ಮತ್ತು ಪ್ರಾಣಿಗಳಿಗೆ ಒಂದು ವರ್ಷಕ್ಕೆ ಸಾಕಾಗುವಷ್ಟು ಆಹಾರನಾ ಶೇಖರಿಸಿ ಇಡಬೇಕಿತ್ತು
ಈ ಎಲ್ಲಾ ಕೆಲಸ ಮುಗಿಸಲು 40 ರಿಂದ 50 ವರ್ಷಗಳು ಬೇಕಿತ್ತು
ಯೆಹೋವನು ಕೊಟ್ಟ ಕೆಲಸ ಕಷ್ಟ ಅಂತ ಅನಿಸಿದಾಗ ಈ ಉದಾಹರಣೆ ನಮ್ಮನ್ನು ಹೇಗೆ ಪ್ರೋತ್ಸಾಹಿಸುತ್ತೆ?