ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • sjj ಗೀತೆ 159
  • ಸ್ತುತಿ ಗೀತೆ ಹಾಡುವೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸ್ತುತಿ ಗೀತೆ ಹಾಡುವೆ
  • ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ಅನುರೂಪ ಮಾಹಿತಿ
  • ರಾಜ್ಯದ ಗೀತೆ ಬನ್ನಿ ಹಾಡಿರಿ
    ಯೆಹೋವನಿಗೆ ಸಂತೋಷದಿಂದ ಹಾಡಿರಿ
  • ರಾಜ್ಯ ಗೀತೆಯಲ್ಲಿ ಜೊತೆಗೂಡಿರಿ!
    ಯೆಹೋವನಿಗೆ ಹಾಡಿರಿ
  • ಹೊಸ ಕೀರ್ತನೆ
    ಯೆಹೋವನಿಗೆ ಹಾಡಿರಿ
  • ನಮ್ಮ ದೇವರಾದ ಯೆಹೋವನನ್ನು ಸ್ತುತಿಸು!
    ಯೆಹೋವನಿಗೆ ಹಾಡಿರಿ
ಇನ್ನಷ್ಟು
ಯೆಹೋವನಿಗೆ ಸಂತೋಷದಿಂದ ಹಾಡಿರಿ
sjj ಗೀತೆ 159

ಗೀತೆ 159

ಸ್ತುತಿ ಗೀತೆ ಹಾಡುವೆ

(ಕೀರ್ತನೆ 96:8)

  1. 1. ನೀತಿ ಪರಾಕ್ರಮಿ ದೇವ

    ಕೀರ್ತಿಗೆ ಯೋಗ್ಯನು ನೀ

    ಕೂಡಿಸಲು ನಿನ್ನ ಪ್ರೀತಿ,

    ಆ ಸಾಗರ ಸಾಲದೀಗ!

    ಆಗಸ ಭೂಮಿಯು ಸೇರಿ,

    ಸಲ್ಲಿಸುತೆ ಮಹಿಮೆ.

    ಏನನು ನೀಡಲಿ ನಾನು?

    ನೀ ತೋರಿದ ಈ ಪ್ರೀತಿಗೆ.

    (ಪಲ್ಲವಿ)

    ಯೆಹೋವನೇ, ನಾ ಹಾಡುವೆ ನಿಂಗೆ

    ಸ್ತುತಿ ನೀಡೋ ಈ ಗೀತೆ

    ನಾ ನೀಡುವೆ, ಪೂರ್ಣ ಭಕ್ತಿ ನಿಂಗೆ

    ನನ್ನ ದೇವ ನೀ ತಾನೇ

    ಸ್ತುತಿ ಗೀತೆ ಹಾಡುವೆ.

  2. 2. ಈ ನನ್ನ ಜೀವವು ಮಣ್ಣು

    ರೂಪಿಸು ನೀ ನನ್ನನ್ನು

    ನಿನ್ನನು ನಾ ಸ್ತುತಿಸೋಕೆ

    ರೋಮಾಂಚನವಾಗುತಿದೆ.

    ಶಾಶ್ವತ ರಾಜನು ನೀನೇ

    ಸಾರುವೆ ನಿನ್ನ ಬಗ್ಗೆ

    ಬೇಕೆನಗೆ ನಿನ್ನ ಶಕ್ತಿ

    ಸದಾ ಸ್ತುತಿ ನೀಡೋದಕೆ.

    (ಪಲ್ಲವಿ)

    ಯೆಹೋವನೇ, ನಾ ಹಾಡುವೆ ನಿಂಗೆ

    ಸ್ತುತಿ ನೀಡೋ ಈ ಗೀತೆ

    ನಾ ನೀಡುವೆ, ಪೂರ್ಣ ಭಕ್ತಿ ನಿಂಗೆ

    ನನ್ನ ದೇವ ನೀ ತಾನೇ

    ಸ್ತುತಿ ಗೀತೆ ಹಾಡುವೆ.

  3. 3. ಸಾಗರದೆಲ್ಲೆಡೆ ನೀರೇ

    ಬಾನಲಿ ತಾರೆಯಿದೆ

    ಈ ಮನದೆಲ್ಲೆಡೆ ನೀನೇ

    ವಿವೇಕಿ ಪರಾಕ್ರಮಿಯೇ

    ತೋರಿದೆ ಶಾಶ್ವತ ಪ್ರೀತಿ

    ಕಾಣುತಿದೆ ಜಗದಿ

    ಕೀರ್ತಿಸುವೆ ಕನಸಲ್ಲೂ

    ಈ ಬಾಳಿಗೆ ನೀ ಬೆಳಕು.

    (ಪಲ್ಲವಿ)

    ಯೆಹೋವನೇ, ನಾ ಹಾಡುವೆ ನಿಂಗೆ

    ಸ್ತುತಿ ನೀಡೋ ಈ ಗೀತೆ

    ನಾ ನೀಡುವೆ, ಪೂರ್ಣ ಭಕ್ತಿ ನಿಂಗೆ

    ನನ್ನ ದೇವ ನೀ ತಾನೇ

    ಸ್ತುತಿ ಗೀತೆ ಹಾಡುವೆ.

(ಕೀರ್ತ. 96:1-10; 148:3, 7 ಸಹ ನೋಡಿ.)

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ