ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • nwt ಪು. 2726-2727
  • ಬಿ1 ಬೈಬಲಿನ ಸಂದೇಶ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಬಿ1 ಬೈಬಲಿನ ಸಂದೇಶ
  • ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಕ್ರಿ.ಪೂ. 4026ರ ನಂತರ
  • ಕ್ರಿ.ಪೂ. 1943
  • ಕ್ರಿ.ಪೂ. 1070ರ ನಂತರ
  • ಕ್ರಿ.ಶ. 29
  • ಕ್ರಿ.ಶ. 33
  • ಕ್ರಿ.ಶ. 1914ರಷ್ಟಕ್ಕೆ
  • ಭವಿಷ್ಯತ್ತಲ್ಲಿ
  • ನಿರೀಕ್ಷೆ ಕೊಡೋ ಭವಿಷ್ಯವಾಣಿ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2022
  • ಸರ್ಪನ ಸಂತಾನ—ಹೇಗೆ ಬಯಲುಮಾಡಲ್ಪಟ್ಟಿದೆ?
    ಕಾವಲಿನಬುರುಜು—1996
  • “ಪವಿತ್ರ ರಹಸ್ಯದಲ್ಲಿನ ದೇವರ ವಿವೇಕ”
    ಯೆಹೋವನ ಸಮೀಪಕ್ಕೆ ಬನ್ನಿರಿ
  • ಬೈಬಲಿನ ಮಹಾ ಮುಖ್ಯವಿಷಯ
    ಪ್ರಕಟನೆ—ಅದರ ಮಹಾ ಪರಮಾವಧಿಯು ಹತ್ತಿರ
ಇನ್ನಷ್ಟು
ಪವಿತ್ರ ಬೈಬಲ್‌-ಹೊಸ ಲೋಕ ಭಾಷಾಂತರ
ಬಿ1 ಬೈಬಲಿನ ಸಂದೇಶ

ಬಿ1

ಬೈಬಲಿನ ಸಂದೇಶ

ಮುದ್ರಿತ ಸಂಚಿಕೆ

ಯೆಹೋವ ದೇವರಿಗೆ ಆಳೋ ಹಕ್ಕಿದೆ. ಆತನು ಆಳೋ ವಿಧಾನ ಉತ್ತಮ. ಭೂಮಿಯನ್ನೂ ಮಾನವರನ್ನೂ ಯಾವ ಉದ್ದೇಶದಿಂದ ಆತನು ಸೃಷ್ಟಿಸಿದನೋ ಅದು ಖಂಡಿತ ನಿಜ ಆಗುತ್ತೆ.

ಏದೆನ್‌ ತೋಟದಲ್ಲಿ ಆದಾಮ ಮತ್ತು ಹವ್ವ, ಪಕ್ಕದಲ್ಲಿ ಹಾವು

ಕ್ರಿ.ಪೂ. 4026ರ ನಂತರ

ಆಳೋಕೆ ಯೆಹೋವನಿಗಿರೋ ಹಕ್ಕನ್ನ ಮತ್ತು ಆತನು ಆಳೋ ವಿಧವನ್ನ “ಹಾವು” ಅಂದ್ರೆ ಸೈತಾನ ಪ್ರಶ್ನಿಸಿದ. ಯೆಹೋವ ತಾನು ಒಂದು ‘ಸಂತಾನ’ ತರ್ತಾನೆ ಅಂತ ಮತ್ತು ಆ ಸಂತಾನ ಭವಿಷ್ಯದಲ್ಲಿ ಸೈತಾನನನ್ನ ಜಜ್ಜುತ್ತೆ ಅಂತ ಮಾತುಕೊಟ್ಟನು. (ಆದಿಕಾಂಡ 3:1-5, 15) ಹಾಗಿದ್ರೂ ಸೈತಾನನ ಕೈಕೆಳಗೆ ಮನುಷ್ಯರು ತಮ್ಮನ್ನ ತಾವೇ ಆಳೋಕೆ ಯೆಹೋವ ಸಮಯ ಕೊಟ್ಟನು.

ದೇವರು ಕೊಡ್ತಿರೋ ಮಾತನ್ನ ಅಬ್ರಹಾಮ ಕೇಳಿಸ್ಕೊಳ್ತಾ ಇದ್ದಾನೆ

ಕ್ರಿ.ಪೂ. 1943

ತಾನು ಮಾತು ಕೊಟ್ಟಿದ್ದ ಆ ‘ಸಂತಾನ’ ಅಬ್ರಹಾಮನ ವಂಶಜರಲ್ಲಿ ಒಬ್ಬನಾಗಿ ಇರ್ತಾನಂತ ಯೆಹೋವ ಅಬ್ರಹಾಮನಿಗೆ ​ಹೇಳಿದನು.​—ಆದಿಕಾಂಡ 22:18.

ರಾಜ ದಾವೀದ

ಕ್ರಿ.ಪೂ. 1070ರ ನಂತರ

ಅರಸ ದಾವೀದನಿಗೆ, ಆಮೇಲೆ ಅವನ ಮಗ ಸೊಲೊಮೋನನಿಗೆ ಯೆಹೋವ ಆ ‘ಸಂತಾನ’ ಅವರ ವಂಶದಲ್ಲಿ ಬರ್ತಾನೆ ಅಂತ ​ಮಾತುಕೊಟ್ಟನು.​—2 ಸಮುವೇಲ 7:12, 16; 1 ಅರಸು 9:3-5; ಯೆಶಾಯ 9:6, 7.

ದೀಕ್ಷಾಸ್ನಾನದ ಸಮಯದಲ್ಲಿ ಯೇಸು

ಕ್ರಿ.ಶ. 29

ಮಾತು ಕೊಟ್ಟಿದ್ದ ‘ಸಂತಾನ’ ಯೇಸು ಅಂತ ಯೆಹೋವ ತೋರಿಸಿಕೊಟ್ಟನು. ಯೇಸುನೇ ದಾವೀದನ ಸಿಂಹಾಸನದ ಹಕ್ಕುದಾರ.​—ಗಲಾತ್ಯ 3:16; ಲೂಕ 1:31-33; 3:21, 22.

ಕಂಬದ ಮೇಲೆ ಯೇಸು

ಕ್ರಿ.ಶ. 33

ಯೇಸುವನ್ನ ಕೊಲ್ಲಿಸೋ ಮೂಲಕ ಸೈತಾನ ಮಾತು ಕೊಟ್ಟಿದ್ದ ‘ಸಂತಾನವನ್ನ’ ಸ್ವಲ್ಪ ಸಮಯಕ್ಕೆ ಗಾಯಗೊಳಿಸಿದ. ಆದ್ರೆ ಯೆಹೋವ ಯೇಸುವನ್ನ ಮತ್ತೆ ಎಬ್ಬಿಸಿ, ಜೀವ ಕೊಟ್ಟು ಸ್ವರ್ಗಕ್ಕೆ ಕರ್ಕೊಂಡನು. ಯೇಸುವಿನ ಪರಿಪೂರ್ಣ ಜೀವದ ಮೌಲ್ಯವನ್ನ ಯೆಹೋವ ಸ್ವೀಕರಿಸಿದನು. ಈ ಮೌಲ್ಯ ಆದಾಮನ ​ವಂಶಜರ ಪಾಪಗಳನ್ನ ಕ್ಷಮಿಸೋಕೆ, ಅವ್ರಿಗೆ ಶಾಶ್ವತ ಜೀವ ಕೊಡೋಕೆ ಆಧಾರ ಆಯ್ತು.​— ಆದಿಕಾಂಡ 3:15; ಅಪೊಸ್ತಲರ ಕಾರ್ಯ 2:​32-36; 1 ಕೊರಿಂಥ 15:​21, 22.

ಪ್ರಕಟನೆ ಪುಸ್ತಕದಲ್ಲಿ ಮಾತು ಕೊಟ್ಟ ಹಾಗೆ ಹಾವು ಅಂದ್ರೆ ಸೈತಾನನನ್ನ ಭೂಮಿಗೆ ದೊಬ್ಬುತ್ತಾ ಇರೋದು

ಕ್ರಿ.ಶ. 1914ರಷ್ಟಕ್ಕೆ

ಹಾವು ಅಂದ್ರೆ ಸೈತಾನನನ್ನ ಯೇಸು ಭೂಮಿಗೆ ದೊಬ್ಬಿದನು. ಅವನಿಗೆ ಸ್ವಲ್ಪ ಸಮಯ ಮಾತ್ರ ಇದೆ.​—ಪ್ರಕಟನೆ 12:7-9, 12.

ಪ್ರಕಟನೆ ಪುಸ್ತಕದಲ್ಲಿ ಮಾತು ಕೊಟ್ಟ ಹಾಗೆ ಸಿಂಹಾಸನದಲ್ಲಿ ಕೂತು ಸ್ವರ್ಗದಿಂದ ಯೇಸು ಭೂಮಿಯನ್ನ ಆಳ್ತಿರೋದು

ಭವಿಷ್ಯತ್ತಲ್ಲಿ

ಯೇಸು ಸೈತಾನನನ್ನ 1,000 ವರ್ಷ ತನಕ ಬಂಧಿಸಿಡ್ತಾನೆ. ಆಮೇಲೆ ನಾಶ ಮಾಡ್ತಾನೆ. ಇದು ಹಾವಿನ ತಲೆಯನ್ನ ಜಜ್ಜಿದ ತರ ಇರುತ್ತೆ. ಭೂಮಿಯನ್ನ, ಮನುಷ್ಯರನ್ನ ಸೃಷ್ಟಿಸಿದಾಗ ಯೆಹೋವನಿಗೆ ಮೊದಲು ಇದ್ದ ಉದ್ದೇಶ ನೆರವೇರುತ್ತೆ. ಆತನ ಹೆಸ್ರಿಗಿದ್ದ ಕಳಂಕ ತೊಲಗಿಹೋಗುತ್ತೆ. ಆತನು ಆಳೋ ವಿಧ ದೋಷ ಇಲ್ಲದ್ದು ಅಂತ ಸಾಬೀತಾಗುತ್ತೆ.​—ಪ್ರಕಟನೆ 20:1-3, 10; 21:3, 4.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ