ಯುದ್ಧ! ಒಂದು ಭಯಾನಕ ಅನುಭವ
ಯುದ್ಧಕ್ಕಿಂತ ಆ ಸಮಯದಲ್ಲಿ ಆಗೋ ಕೆಲವು ಕೆಟ್ಟ ಅನುಭವಗಳು ಜನ್ರ ಮನಸ್ಸಿಗೆ ತುಂಬ ಗಾಯ ಮಾಡುತ್ತೆ. ಸೈನಿಕರಿಗೆ ಮತ್ತು ಯುದ್ಧ ನಡಿತಿರೋ ಜಾಗದಲ್ಲಿರೋರಿಗೆ ಯುದ್ಧ ಎಷ್ಟು ಭಯಂಕರವಾಗಿರುತ್ತೆ ಅಂತ ಗೊತ್ತಿರುತ್ತೆ.
ಸೈನಿಕರು
“ಎಲ್ಲಿ ನೋಡಿದ್ರೂ ದೊಡ್ಡದೊಡ್ಡ ಗಾಯಗಳಾಗಿ ಜನ ನರಳ್ತಿರೋದು ಮತ್ತು ಸಾಯ್ತಿರೋದೇ ಕಾಣಿಸುತ್ತೆ. ಇಂಥ ಭಯಾನಕ ದೃಶ್ಯಗಳನ್ನ ನೋಡಿದಾಗ ಯಾವಾಗ ಏನಾಗುತ್ತೋ ಅನ್ನೋ ಚಿಂತೆ ಕಾಡ್ತಿರುತ್ತೆ.”—ಗ್ಯಾರಿ, ಬ್ರಿಟನ್.
“ನನ್ ಬೆನ್ನಿಗೆ ಮತ್ತು ಮುಖಕ್ಕೆ ಬುಲೆಟ್‌ಗಳು ಬಿದ್ದಿತ್ತು. ಮಕ್ಕಳು, ವಯಸ್ಸಾದವರು ಈ ತರ ಎಷ್ಟೋ ಜನ ಸಾಯೋದನ್ನ ನೋಡಿದೆ. ಇದನ್ನೆಲ್ಲಾ ನೋಡಿನೋಡಿ ಮನಸ್ಸು ಕಲ್ಲಾಗಿಬಿಡುತ್ತೆ.”—ವಿಲ್ಮಾರ್, ಕೊಲಂಬಿಯಾ.
“ಯುದ್ಧದಲ್ಲಿ ನಮ್ ಕಣ್ಮುಂದೆನೇ ಯಾರಾದ್ರೂ ಸತ್ರೆ ಅದನ್ನ ಅಷ್ಟು ಸುಲಭವಾಗಿ ಮರಿಯೋಕೆ ಆಗಲ್ಲ. ಅವರು ಕಿರಿಚಾಡ್ತಿರೋದು, ಅಳ್ತಿರೋದು ಯಾವಾಗ್ಲೂ ಕಣ್ಮುಂದೆನೇ ಇರುತ್ತೆ. ಅದನ್ನೆಲ್ಲಾ ಮರಿಯೋಕೆ ಆಗೋದೇ ಇಲ್ಲ.”—ಜ಼ಾಫಿರಾ, ಅಮೆರಿಕ.
ಜನಸಾಮಾನ್ಯರು
“ನಾನು ಇನ್ಯಾವತ್ತೂ ಖುಷಿಯಾಗಿ ಇರೋಕ್ಕಾಗಲ್ಲ ಅಂತ ಅಂದ್ಕೊಂಡೆ. ನಂಗೆ ಏನಾಗುತ್ತೋ ಅಂತ ಭಯ ಇತ್ತು. ಆದ್ರೆ ಅದಕ್ಕಿಂತ ಜಾಸ್ತಿ ನನ್ ಕುಟುಂಬದವ್ರಿಗೆ, ಸ್ನೇಹಿತರಿಗೆ ಏನಾಗುತ್ತೋ ಅನ್ನೋ ಭಯ ಇತ್ತು.”—ಒಲೆಕ್ಸಾಂದ್ರ, ಉಕ್ರೇನ್.
“ಮೊದಲೇ, ಯಾವಾಗ ಎಲ್ಲಿಂದ ಬುಲೆಟ್ ಬಂದು ಬೀಳುತ್ತೋ ಅನ್ನೋ ಭಯ ಇರುತ್ತೆ. ಅಂಥದ್ರಲ್ಲಿ ಬೆಳಗ್ಗೆ 2 ಗಂಟೆಯಿಂದ ರಾತ್ರಿ 11 ಗಂಟೆ ತನಕ ಊಟಕ್ಕೋಸ್ಕರ ಕ್ಯೂನಲ್ಲಿ ನಿಂತುಕೊಳ್ಳೋಕೆ ತುಂಬ ಹೆದ್ರಿಕೆ ಆಗುತ್ತೆ.”—ಡೇಲರ್, ತಜಿಕಿಸ್ತಾನ್.
“ಯುದ್ಧ ನನ್ನ ಅಪ್ಪ-ಅಮ್ಮನ ಕಿತ್ಕೊಂಡು ನನ್ನನ್ನ ಅನಾಥೆ ಮಾಡಿಬಿಡ್ತು. ನನ್ನನ್ನ ಪ್ರೀತಿಸೋಕೆ, ಸಮಾಧಾನ ಮಾಡೋಕೆ ಯಾರೂ ಇರ್ಲಿಲ್ಲ.”—ಮೇರಿ, ರುವಾಂಡಾ.
ಇಲ್ಲಿ ತಮ್ಮ ಅನುಭವ ಹೇಳಿರೋ ಎಲ್ರೂ ಯುದ್ಧದಿಂದ ತುಂಬ ಕಷ್ಟ ಅನುಭವಿಸಿದ್ರು. ಆದ್ರೂ ಈಗ ಅವರು ನೆಮ್ಮದಿಯಾಗಿ ಇದ್ದಾರೆ. ಯಾಕಂದ್ರೆ ಈ ಯುದ್ಧ, ಹಿಂಸೆಯೆಲ್ಲಾ ಬೇಗ ಕೊನೆ ಆಗುತ್ತೆ ಅಂತ ಅವ್ರಿಗೆ ನಂಬಿಕೆ ಬಂದಿದೆ. ಇದೆಲ್ಲಾ ಹೇಗಾಗುತ್ತೆ? ಇದಕ್ಕೆ ಬೈಬಲ್ ಕೊಡೋ ಉತ್ರನ ಕಾವಲಿನಬುರುಜುವಿನ ಈ ಸಂಚಿಕೆಲಿ ನೋಡೋಣ