ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 1/91 ಪು. 5
  • ಪ್ರಶ್ನಾ ಪೆಟ್ಟಿಗೆ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಪೆಟ್ಟಿಗೆ
  • 1991 ನಮ್ಮ ರಾಜ್ಯದ ಸೇವೆ
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ದೀಕ್ಷಾಸ್ನಾನದ ಅನಂತರ
  • ಬೈಬಲ್‌ ಅಧ್ಯಯನದಲ್ಲಿ “ದೇವರ ಪ್ರೀತಿ” ಪುಸ್ತಕವನ್ನು ಬಳಸುವುದು ಹೇಗೆ?
    2010 ನಮ್ಮ ರಾಜ್ಯದ ಸೇವೆ
  • ‘ಯಾರಾದರೂ ನನಗೆ ಅರ್ಥ ತಿಳಿಸಿಕೊಟ್ಟ ಹೊರತು ಅದು ನನಗೆ ಹೇಗೆ ತಿಳಿದೀತು?’
    2000 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಚೌಕ
    2011 ನಮ್ಮ ರಾಜ್ಯದ ಸೇವೆ
  • ಶಿಷ್ಯರನ್ನಾಗಿ ಮಾಡುವ ಜರೂರಿ ಕೆಲಸದ ಕಡೆಗೆ ಒಂದು ಪ್ರಗತಿಪರ ನೋಟ
    1998 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1991 ನಮ್ಮ ರಾಜ್ಯದ ಸೇವೆ
km 1/91 ಪು. 5

ಪ್ರಶ್ನಾ ಪೆಟ್ಟಿಗೆ

● ಹೊಸ ಶಿಷ್ಯರೊಂದಿಗೆ ಎರಡು ಪುಸ್ತಕಗಳನ್ನು ಪೂರ್ಣವಾಗಿ ಅಭ್ಯಾಸ ಮಾಡಿ ಮುಗಿಸುವುದು, ಎರಡನೆಯ ಪುಸ್ತಕವನ್ನು ಮುಗಿಸುವ ಮೊದಲು ಅವರು ದೀಕ್ಷಾಸ್ನಾನ ಪಡೆದರೂ ಕೂಡಾ, ಏಕೆ ಮಹತ್ವವುಳ್ಳದ್ದಾಗಿದೆ?

ಸಭೆಗಳಿಗೆ ಹಿಂಡಾಗಿ ಒಳ ಬರುತ್ತಿರುವ ಹೊಸಬರ ಪ್ರವಾಹದೊಂದಿಗೆ ಯೆಹೋವನು ತನ್ನ ಸಂಸ್ಥೆಯನ್ನು ಆಶೀರ್ವದಿಸುತ್ತಿದ್ದಾನೆ. ಈ ಮಹಾ ಸಮ್ಮೇಳವನ್ನು ಕಾಣುವುದಕ್ಕೆ ನಾವು ಸಂತೋಷಿಸುತ್ತೇವೆ. ಆದರೂ ಈ ಕುರಿಸದೃಶ ಜನರಿಗೆ, ಯೆಹೋವನನ್ನು ಸೇವಿಸಲು ಕಲಿಯುವುದರಲ್ಲಿ ಸಹಾಯ ಮತ್ತು ಮಾರ್ಗದರ್ಶನೆಯನ್ನು ಕೊಡುತ್ತಾ ಇರುವ ಅಗತ್ಯವನ್ನು ನಾವು ಗಣ್ಯಮಾಡುತ್ತೇವೆ.

ಸತ್ಯದ ಸ್ಪಷ್ಟವಾದ ಜ್ಞಾನಕ್ಕೆ ಬರಲು ಹೊಸಬರಿಗೆ ಸಹಾಯ ಬೇಕು. (ಕೊಲೊ. 1:9, 10) ಬೈಬಲಿನ ಮೂಲಭೂತ ಬೋಧನೆಗಳ ಒಳ್ಳೇ ತಿಳುವಳಿಕೆಯನ್ನು ಪಡೆಯುವಂತೆ ಮತ್ತು ನೈತಿಕ ಮಟ್ಟಗಳು, ಸತ್ಕ್ರೈಸ್ತ ಜೀವಿತ ಮತ್ತು ಸಂಬಂಧಿತ ವಿಚಾರಗಳ ಕುರಿತು ಬೈಬಲು ಹೇಳುವುದನ್ನು ಚೆನ್ನಾಗಿ ಗ್ರಹಿಸಿಕೊಳ್ಳುವಂತೆ ಅವರಿಗೆ ನೆರವಾಗುವ ಸುಯೋಗವು ನಮಗಿದೆ. ಇದು ಅವರನ್ನು ಸತ್ಯದಲ್ಲಿ ದೃಢವಾಗಿ ಸ್ಥಾಪಿಸಲ್ಪಡಲು ಸಹಾಯಮಾಡಿ, ಮುಂದಿರುವ ಯಾವುವೇ ಪರೀಕ್ಷೆಗಳನ್ನು ನೀಗಿಸಿಕೊಳ್ಳುವಂತೆ ಮಾಡುತ್ತದೆ.

ವಿದ್ಯಾರ್ಥಿಗಳು ತಮ್ಮ ತಿಳುವಳಿಕೆಯ ಶಕ್ತಿಯಲ್ಲಿ ಪೂರ್ಣ ಬೆಳೆದವರಾಗುವ ಅಗತ್ಯವೂ ಅಲ್ಲಿದೆ. (1 ಕೊರಿ. 14:20) ಆತ್ಮಿಕವಾಗಿ ಪೂರ್ಣ ಬೆಳೆದ ಮನುಷ್ಯನಾಗಿ ಪರಿಣಮಿಸಲು ಒಬ್ಬನಿಗೆ ತನ್ನ ಶಿಕ್ಷಕನೊಂದಿಗೆ ವೈಯಕ್ತಿಕ ಬೈಬಲಧ್ಯಯನ ಸಹಾಯಕಾರಿಯೆಂದು ಅನುಭವಗಳು ತೋರಿಸಿವೆ. ಹೀಗೆ, ಎರಡು ಪುಸ್ತಕಗಳ ತನ್ನ ಅಭ್ಯಾಸ ಮುಗಿಸುವ ಮೊದಲೇ ವ್ಯಕ್ತಿಯೊಬ್ಬನು ದೀಕ್ಷಾಸ್ನಾನ ಪಡೆದರೂ, ಎರಡೂ ಪುಸ್ತಕಗಳ ಅಭ್ಯಾಸವನ್ನು ಪೂರ್ಣಗೊಳಿಸುವ ತನಕ ಅವನು ತನ್ನ ಮನೇ ಬೈಬಲ್‌ ಅಧ್ಯಯನವನ್ನು ಮುಂದರಿಸುವುದು ವಿವೇಕಪ್ರದವು.

ದೀಕ್ಷಾಸ್ನಾನದ ಅನಂತರ

ಶಿಷ್ಯರನ್ನಾಗಿ ಮಾಡಬೇಕು—ದೀಕ್ಷಾಸ್ನಾನ ಮಾಡಿಸಿ, ಕಲಿಸಬೇಕು ಎಂದು ಯೇಸು ಹೇಳಿದ್ದಾನೆ. (ಮತ್ತಾ. 28:19, 20) ಶಿಷ್ಯರಿಗೆ ಕಲಿಸುವಿಕೆಯಲಿ ಹೆಚ್ಚಿನದ್ದು, ದೀಕ್ಷಾಸ್ನಾನವನ್ನು ಹಿಂಬಾಲಿಸಿ ಮಾಡಲ್ಪಡುತ್ತದೆ. ಕೇವಲ ಒಂದೇ ಪುಸ್ತಕದಿಂದ ಒಬ್ಬನು ಪಡೆಯುವ ಜ್ಞಾನವು ಆತನ ಆತ್ಮಿಕ ತರಬೇತನ್ನು ಪೂರ್ಣಗೊಳಿಸಲು ಸಾಮಾನ್ಯವಾಗಿ ಸಾಕಾಗದು. ಶುಶ್ರೂಷೆಯ ಕಾರ್ಯಕ್ಕೆ ಅವನನ್ನು ಸಜ್ಜುಗೊಳಿಸಲು ಮತ್ತು ಈ ಕಡೇ ದಿನಗಳಲ್ಲಿ ಯೆಹೋವನನ್ನು ಸೇವಿಸುವವರ ಮೇಲೆ ಬರುವ ಒತ್ತಡಗಳನ್ನು ಎದುರಿಸಲು ಅವನನ್ನು ಸನ್ನದ್ಧಮಾಡಲು ಅಧಿಕ ಉಪದೇಶದ ಅಗತ್ಯವಿದೆ. ಸಾಕಷ್ಟು ತರಬೇತು ಕೊಡಲು ತಪ್ಪುವಿಕೆಯು ವಿದ್ಯಾರ್ಥಿಯನ್ನು ಆತ್ಮಿಕವಾಗಿ ತನ್ನ ಸ್ವಂತ ಕಾಲಲ್ಲಿ ನಿಲ್ಲಲು ಅಸಿದ್ಧಗೊಳಿಸುವುದು. ಹೊಸಬನು ದೀಕ್ಷಾಸ್ನಾನ ಪಡೆದ ಮೇಲೆ, ಎರಡು ಪುಸ್ತಕಗಳ ಅಭ್ಯಾಸವನ್ನು ಅವನು ಮುಗಿಸಿರಲಿ, ಇಲ್ಲದಿರಲಿ, ಅಧಿಕ ಪ್ರಗತಿ ಮಾಡುವಂತೆ ನಾವು ಅವನಿಗೆ ಸಹಾಯ ನೀಡುವುದನ್ನು ಮುಂದರಿಸುವೆವು. ಅಭ್ಯಾಸಿಸಿದ ಮೊದಲ ಪುಸ್ತಕವು ಮೂಲಭೂತ ತತ್ವಗಳ ತಿಳುವಳಿಕೆಯನ್ನು ಕೊಡುತ್ತದೆ. ಎರಡನೆಯ ಪುಸ್ತಕವು ಕ್ರಿಸ್ತೀಯ ಗುಣಗಳನ್ನು ಅವರಿಸುತ್ತದೆ. ಈ ಪ್ರಕಾಶನಗಳು ಲಿವ್ವ್‌ ಫಾರೆವರ್‌ ಪುಸ್ತಕ, ಮತ್ತು ಅನಂತರ, ಯುನೈಟೆಡ್‌ ಇನ್‌ ವರ್ಶಿಪ್‌ ಅಥವಾ ಟ್ರು ಪೀಸ್‌ ಪುಸ್ತಕವಾಗಿರಬಹುದು. ಈ ಪುಸ್ತಕಗಳು ದೊರೆಯದಿದ್ದಲ್ಲಿ, ತದ್ರೀತಿಯ ಸಮಾಚಾರ ಇರುವ ಬೇರೆ ಪುಸ್ತಕಗಳನ್ನು ಉಪಯೋಗಿಸಬಹುದು. ಎರಡನೆಯ ಪುಸ್ತಕವು ಮುಗಿಯುವ ತನಕ ಬೈಬಲಭ್ಯಾಸ ಮುಂದರಿಸುವುದು, ಯೆಹೋವನ ಉದ್ದೇಶದಲ್ಲಿ ಹಾಗೂ ಆತನ ಉತ್ಕೃಷ್ಟ ಕ್ರೈಸ್ತ ಮಟ್ಟಗಳಲ್ಲಿ ಮತ್ತು ಆವಶ್ಯಕತೆಗಳಲ್ಲಿ ಪಕ್ಕಾ ಶಿಕ್ಷಣವನ್ನು ಒದಗಿಸುತ್ತದೆ. ಇದು ಹೊಸಬರಿಗೆ ಕ್ರೈಸ್ತ ತತ್ವದ ಅರ್ಥವನ್ನು ತಿಳುಕೊಳ್ಳಲು ಮತ್ತು ನಂಬಿಕೆಯಲ್ಲಿ ದೃಢವಾಗಿ ಬೇರೂರಲು ಸಹಾಯ ಮಾಡುವುದು. (ಕೊಲೊ. 2:7) ಅಂಥ ಅಭ್ಯಾಸಗಳನ್ನು ವರದಿಸುವ ವಿಷಯದಲ್ಲಿ, ನಮ್ಮ ರಾಜ್ಯದ ಸೇವೆಯ ದಶಂಬರ, 1987ರ ಪ್ರಶ್ನಾಪೆಟ್ಟಿಗೆ ನೋಡಿರಿ.

ದೀಕ್ಷಾಸ್ನಾನದ ನಂತರ ಹೊಸಬರು ಆತ್ಮಿಕ ಪ್ರಗತಿಯನ್ನು ಮಾಡುವರೇ ನಿರೀಕ್ಷಿಸಲಾಗುತ್ತದೆ ನಿಶ್ಚಯ. (ಇಬ್ರಿ. 6:1-3) ಹೆಚ್ಚಿನ ಸಂದರ್ಭಗಳಲ್ಲಿ ಎರಡನೆಯ ಪುಸ್ತಕ ಮುಗಿಸಲು ಹೆಚ್ಚು ಸಮಯ ತಗಲದು. ಹೀಗೆ, ಹೊಸ ವ್ಯಕ್ತಿಗೆ ದೃಢವಾದ ಬುನಾದಿಯನ್ನು ಒದಗಿಸಲಾಗುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ