ಶಿಷ್ಯರನ್ನಾಗಿ ಮಾಡಲು ನಮ್ಮ ಸಹಾಯಕ್ಕಾಗಿ ಕೂಟಗಳು
ಜನವರಿ 7ರ ವಾರ
ಸಂಗೀತ 80 (62)
10 ನಿ: ಸ್ಥಳೀಕ ತಿಳಿಸುವಿಕೆಗಳು ಮತ್ತು ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟಣೆಗಳು. ವಾರಾಂತ್ಯದಲ್ಲಿ ಉಪಯೋಗಿಸಲು ಪತ್ರಿಕಾ ಲೇಖನಗಳಿಂದ ನಿರ್ದಿಷ್ಟ ವಿಷಯಗಳನ್ನು ಚರ್ಚಿಸಿರಿ.
20 ನಿ: “ಸುವಾರ್ತೆಯನ್ನು ನೀಡುವುದು—ಯುವಕರಿಗೆ.” ಪ್ರಶ್ನೋತ್ತರ ಚರ್ಚೆ. ಪಾರಾ 5ನ್ನು ಚರ್ಚಿಸುವಾಗ ಒಬ್ಬ ಪ್ರಚಾರಕನು, ಹದಿವಯಸ್ಕನಿಗೆ ನೀಡುವಿಕೆ ನೀಡುವುದನ್ನು ದೃಶ್ಯಮಾಡಲಿ.
15 ನಿ: “ಯಂಗ್ ಪೀಪಲ್ ಆಸ್ಕ್” ಪುಸ್ತಕವನ್ನು ಹಿರಿಯನು ಮತ್ತು 2-3 ನುರಿತ ಪ್ರಚಾರಕರು ಕೂಡಿ ಚರ್ಚಿಸುತ್ತಾರೆ. ಸಂಕ್ಷೇಪವಾಗಿ, ಪುಸ್ತಕದ ಹತ್ತು ವಿಭಾಗಗಳನ್ನು ಎತ್ತಿಹೇಳಿರಿ. ಆಯ್ದ ಅಧ್ಯಾಯಗಳನ್ನು ಚರ್ಚಿಸಿರಿ. ಪುಟ 27 ರಲ್ಲಿರುವ ಚಿತ್ರದಂತಹ ಪ್ರಬಲ ದೃಷ್ಟಾಂತಗಳನ್ನು ಗಮನಿಸಿರಿ. ಪುಸ್ತಕದ ಕಾಲೋಚಿತ ಸೂಚನೆಯನ್ನು ಯುವಕರು, ಹೆತ್ತವರು ಮತ್ತು ಇತರರು ಗಮನಿಸುವಂತೆ ಪ್ರೋತ್ಸಾಹಿಸಿರಿ. ಕ್ಷೇತ್ರಸೇವೆಯಲ್ಲಿ ಈ ಪುಸ್ತಕವನ್ನುಪಯೋಗಿಸಲು ಎಲ್ಲರೂ ತಯಾರಿಸಬೇಕು. ಕುಟುಂಬ ಚರ್ಚೆಯಲ್ಲಿ ಇದನ್ನುಪಯೋಗಿಸುವ ವಿಧಾನಗಳನ್ನು ಸೂಚಿಸಿರಿ.
ಸಂಗೀತ 40 (31) ಮತ್ತು ಸಮಾಪ್ತಿ ಪ್ರಾರ್ಥನೆ.
ಜನವರಿ 14ರ ವಾರ
ಸಂಗೀತ 76 (61)
10 ನಿ: ಸ್ಥಳೀಕ ತಿಳಿಸುವಿಕೆಗಳು. ಎಕೌಂಟ್ಸ್ ರಿಪೋರ್ಟ್ ಮತ್ತು ದಾನ ಸ್ವೀಕಾರ ಪತ್ರಗಳನ್ನು ಓದಿರಿ. “ಅನ್ಯಾಯದ ಧನವನ್ನು” ಯೋಗ್ಯವಾಗಿ ಬಳಸುವುದಕ್ಕಾಗಿ ಸಹೋದರರನ್ನು ಪ್ರಶಂಸಿಸಿರಿ. (ಲೂಕ 16:9; it-2, ಪುಟ 806)
20 ನಿ: “ಆಪತ್ತನ್ನು ತೊಲಗಿಸುವಂತೆ ಯುವಕರಿಗೆ ಸಹಾಯ ಮಾಡುವುದು.” ಪ್ರಶ್ನೋತ್ತರ ಚರ್ಚೆ. ಪಾರಾ 8ನ್ನು ಆವರಿಸುವಾಗ ನುರಿತ ಪ್ರಚಾರಕನು, ಸಂಭಾಷಣೆಗಾಗಿ ವಿಷಯವನ್ನು ಮಾತಾಡಿ, ಸಂಕ್ಷಿಪ್ತವಾಗಿ ಪುಸ್ತಕ ನೀಡುವುದನ್ನು ದೃಶ್ಯ ಮಾಡಲಿ.
15 ನಿ: “ಮಾತು ಸಂಸರ್ಗದ ದ್ವಾರಗಳನ್ನು ನೀವು ತೆರೆದಿಡುತ್ತೀರೋ? ಫ್ಯಾಮಿಲಿ ಲೈಫ್ ಪುಸ್ತಕದ 11ನೇ ಅಧ್ಯಾಯದಲ್ಲಿ ಕಂಡು ಬರುವ ಎರಡು ಮೂರು ತತ್ವಗಳನ್ನು ಹಿರಿಯನು ಚರ್ಚಿಸುತ್ತಾನೆ. ಹೆತ್ತವರು ಹೇಗೆ ಮಗುವಿನೊಂದಿಗೆ ಮಾತು ಸಂಸರ್ಗವನ್ನು ಉತ್ತೇಜಿಸ ಅಥವಾ ನಿರುತ್ತೇಜಿಸ ಸಾಧ್ಯವಿದೆಂದು ತೋರಿಸುವ, ಪಾರಾ 5-8ರ ಸಮಾಚಾರದಲ್ಲಿ ಆಧರಿತವಾದ ಸಂಕ್ಷಿಪ್ತ ದೃಶ್ಯಗಳನ್ನು ಸೇರಿಸಿರಿ.
ಸಂಗೀತ 221 (73) ಮತ್ತು ಸಮಾಪ್ತಿ ಪ್ರಾರ್ಥನೆ.
ಜನವರಿ 21ರ ವಾರ
ಸಂಗೀತ 126 (25)
10 ನಿ: ಸ್ಥಳೀಕ ತಿಳಿಸುವಿಕೆಗಳು. ಪ್ರಶ್ನಾ ಪೆಟ್ಟಿಗೆ. ದೇವ ಪ್ರಭುತ್ವ ವಾರ್ತೆಯಲ್ಲಿರುವ ವಿಷಯವನ್ನು ಸಮಯ ಅನುಮತಿಸುವ ಮೇರೆಗೆ ಆವರಿಸಿರಿ.
15 ನಿ: “ಶಾಸ್ತ್ರ ಗ್ರಂಥವನ್ನು ಪ್ರತಿದಿನ ಪರೀಕ್ಷಿಸುವುದು—1991” ಇದರ ಸದುಪಯೋಗ ಮಾಡಿರಿ. ಪುಸ್ತಕದ ಮುನ್ನುಡಿಯಲ್ಲಿ ಆಧರಿತ ಭಾಷಣ. ದಿನವಚನದಿಂದ ವಿಷಯವನ್ನು ಹೆಕ್ಕಿ ಅದರ ಮೂಲ್ಯತೆಯನ್ನು ಚಿತ್ರಿಸಿರಿ. ಇವತ್ತಿನ ವಚನದ ಕುಟುಂಬ ಚರ್ಚೆಯಿಂದ ಹೆಕ್ಕಿದ ವಿಷಯಗಳ ದೃಶ್ಯ ಮಾಡಿರಿ.
20 ನಿ: “ಅರ್ಥಭರಿತ ಕುಟುಂಬ ಬೈಬಲಭ್ಯಾಸಗಳನ್ನು ನಡಿಸುವುದು.” ಪ್ರಶ್ನೋತ್ತರ ಚರ್ಚೆ. ಸಮಯವಿದ್ದ ಹಾಗೆ, ತಮ್ಮ ಕುಟುಂಬ ಬೈಬಲಭ್ಯಾಸಗಳನ್ನು ಬೋಧಪ್ರದವೂ ಆನಂದಕರವೂ ಆಗಿ ಮಾಡುವಂತೆ ತಾವೇನು ಮಾಡಿರುತ್ತಾರೆಂದು ಒಬ್ಬಿಬ್ಬರು ಹೆತ್ತವರು ತಿಳಿಸಲಿ.
ಸಂಗೀತ 93 (48) ಮತ್ತು ಸಮಾಪ್ತಿಯ ಪ್ರಾರ್ಥನೆ.
ಜನವರಿ 28ರ ವಾರ
ಸಂಗೀತ 91 (61)
10 ನಿ: ಸ್ಥಳೀಕ ತಿಳಿಸುವಿಕೆಗಳು. ರಜೆಗಳಲ್ಲಿ ಸಾಕ್ಷಿಕೊಡುವಂತೆ ಪ್ರೋತ್ಸಾಹನೆ ಕೊಡಿರಿ. ಪತ್ರಿಕಾ ದಿನಕ್ಕಾಗಿ ಉಪಯೋಗಿಸಲು ಲೇಖನಗಳನ್ನು ಸೂಚಿಸಿರಿ.
20 ನಿ: “ಯೆಹೋವನಿಂದ ಕಲಿಸಲ್ಪಡುವುದು.” ಶಾಲಾ ಮೇಲ್ವಿಚಾರಕನು ಸಭಿಕರೊಂದಿಗೆ ಚರ್ಚಿಸುತ್ತಾನೆ. ಆದರ್ಶ ವಿದ್ಯಾರ್ಥಿಯನ್ನು ಇಂಟರ್ವ್ಯೂ ಮಾಡಿರಿ, ಪೂರ್ವ ತಯಾರಿ ಮತ್ತು ಕೌನ್ಸಿಲ್ ಸ್ಲಿಪ್ನ ವಿಷಯಗಳ ಮೇಲೆ ಕಾರ್ಯನಡಿಸಿದರಿಂದ ದೊರೆಯುವ ಪ್ರಯೋಜನಗಳನ್ನು ಅವನು ಎತ್ತಿಹೇಳಲಿ.
15 ನಿ: ಸ್ಥಳೀಕ ಅಗತ್ಯತೆಗಳು ಅಥವಾ “ಪ್ರೇ ಫಾರ್ ವನ್ನೆನದರ್” ಎಂಬ ವಾಚ್ಟವರ್, ನವಂಬರ 15, 1990ರ ಲೇಖನದಲ್ಲಿ ಆಧರಿತ ಭಾಷಣ. (ದೇಶಭಾಷೆ: “ನಿಮ್ಮ ಪ್ರಾರ್ಥನೆಗಳು ಎಷ್ಟು ಅರ್ಥಪೂರ್ಣವು?” ಜನವರಿ 1989, ಕಾ.ಬು.)
ಸಂಗೀತ 55 (18) ಮತ್ತು ಸಮಾಪ್ತಿ ಪ್ರಾರ್ಥನೆ.