ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 1 ಪು. 10-13
  • ಪ್ರಾರ್ಥನೆ ಹೇಗೆ ಮಾಡಬೇಕು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಾರ್ಥನೆ ಹೇಗೆ ಮಾಡಬೇಕು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಉಪಶೀರ್ಷಿಕೆಗಳು
  • ಅನುರೂಪ ಮಾಹಿತಿ
  • ಯೇಸುವಿನ ಹೆಸರಲ್ಲಿ ಪ್ರಾರ್ಥಿಸಬೇಕು
  • ಮನಬಿಚ್ಚಿ ಪ್ರಾರ್ಥಿಸಬೇಕು
  • ದೇವರ ಇಷ್ಟಕ್ಕೆ ತಕ್ಕಂತೆ ಸರಿಯಾದ ವಿಷಯಗಳಿಗಾಗಿ ಪ್ರಾರ್ಥಿಸಬೇಕು
  • ಯಾವ ವಿಷಯಗಳಿಗಾಗಿ ಪ್ರಾರ್ಥಿಸಬೇಕು?
  • ಪಟ್ಟುಹಿಡಿದು ಪ್ರಾರ್ಥಿಸ್ತಾ ಇರಿ
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರು ಆಲಿಸುವ ಪ್ರಾರ್ಥನೆಯ ಕುರಿತು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2009
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 1 ಪು. 10-13

ಪ್ರಾರ್ಥನೆ ಹೇಗೆ ಮಾಡಬೇಕು?

ಯೆಹೋವ ದೇವರನ್ನ “ಪ್ರಾರ್ಥನೆಯನ್ನು ಕೇಳುವವನೇ” ಅಂತ ಕರೆಯಲಾಗಿದೆ. (ಕೀರ್ತನೆ 65:2) ನಾವು ಆತನ ಹತ್ರ ಯಾವಾಗ ಬೇಕಾದ್ರು ಎಲ್ಲಿ ಬೇಕಾದ್ರು ಮಾತಾಡಬಹುದು. ನಾವು ಜೋರಾಗಿ ಮಾತಾಡ್ಲಿ ಅಥವಾ ಮನಸ್ಸಲ್ಲೇ ಮಾತಾಡ್ಲಿ ಆತನಿಗೆ ಅದು ಕೇಳಿಸುತ್ತೆ. ನಿಜ ಹೇಳಬೇಕಂದ್ರೆ ನಾವೆಲ್ರೂ ದೇವರ ಮಕ್ಕಳು. ನಾವು ಆತನನ್ನ “ತಂದೆ” ಅಂತ ಕರೆಯಬೇಕು, ಮನಸ್ಸು ಬಿಚ್ಚಿ ಎಲ್ಲ ವಿಷಯಗಳನ್ನ ಹೇಳಿಕೊಳ್ಳಬೇಕು ಅನ್ನೋದೇ ದೇವರ ಇಷ್ಟ. (ಮತ್ತಾಯ 6:9) ಅಷ್ಟೇ ಅಲ್ಲ ಪ್ರಾರ್ಥನೆ ಮಾಡೋ ಸರಿಯಾದ ವಿಧಾನ ಯಾವುದು ಅಂತನೂ ಹೇಳಿಕೊಟ್ಟಿದ್ದಾನೆ. ಆ ವಿಧಾನದಲ್ಲಿ ಏನೆಲ್ಲಾ ಸೇರಿದೆ ಅಂತ ನಾವೀಗ ನೋಡೋಣ.

ಯೇಸುವಿನ ಹೆಸರಲ್ಲಿ ಪ್ರಾರ್ಥಿಸಬೇಕು

“ನೀವು ತಂದೆಯನ್ನು ಏನೇ ಬೇಡಿಕೊಳ್ಳುವುದಾದರೂ ಅದನ್ನು ಆತನು ನನ್ನ ಹೆಸರಿನಲ್ಲಿ ನಿಮಗೆ ಕೊಡುವನು.”—ಯೋಹಾನ 16:23.

ಯೇಸುವಿನ ಈ ಮೇಲಿನ ಮಾತುಗಳಿಂದ ನಾವು ತಂದೆಗೆ ಅಂದ್ರೆ ಯೆಹೋವನಿಗೆ ಪ್ರಾರ್ಥಿಸಬೇಕು ಅಂತ ಗೊತ್ತಾಗುತ್ತೆ. ಆದ್ರೆ ವಿಗ್ರಹ, ಸಾಧು-ಸಂತರು, ದೇವದೂತರು ಅಥವಾ ನಮ್ಮ ಪೂರ್ವಜರ ಮೂಲಕ ಪ್ರಾರ್ಥಿಸೋದು ಸರಿಯಲ್ಲ. ಬದಲಿಗೆ ಯೇಸು ಕ್ರಿಸ್ತನ ಹೆಸರಿನಲ್ಲಿ ಪ್ರಾರ್ಥಿಸಬೇಕು. ಇದರ ಅರ್ಥ ಯೆಹೋವನಿಗೆ ಪ್ರಾರ್ಥಿಸುವಾಗ ಯೇಸು ಕ್ರಿಸ್ತ ನಮಗೋಸ್ಕರ ಮಾಡಿದ ಎಲ್ಲಾ ವಿಷಯಗಳನ್ನ ನೆನಪಿಸಿಕೊಂಡು ಈ ಪ್ರಾರ್ಥನೆನ ಯೇಸು ಕ್ರಿಸ್ತ ಹೆಸರಿನಲ್ಲಿ ಮಾಡ್ತಿದ್ದೀವಿ ಅಂತ ಹೇಳಬೇಕು. “ನನ್ನ ಮೂಲಕವೇ ಹೊರತು ಯಾರೂ ತಂದೆಯ ಬಳಿಗೆ ಬರುವುದಿಲ್ಲ” ಅಂತ ಯೇಸು ಹೇಳಿದ್ದಾನೆ.—ಯೋಹಾನ 14:6.

ಮನಬಿಚ್ಚಿ ಪ್ರಾರ್ಥಿಸಬೇಕು

“ನಿಮ್ಮ ಹೃದಯವನ್ನು ಆತನ ಮುಂದೆ ಬಿಚ್ಚಿರಿ.”—ಕೀರ್ತನೆ 62:8.

ಒಂದು ಮಗು ಹೇಗೆ ಅಪ್ಪಅಮ್ಮ ಹತ್ರ ಯಾವ ವಿಷಯನೂ ಮುಚ್ಚಿಡದೆ ಹೃದಯದಾಳದಿಂದ ಹೇಳುತ್ತೋ ಅದೇ ತರ ನಾವೂ ಯೆಹೋವನಿಗೆ ಪ್ರಾರ್ಥಿಸಬೇಕು. ಒಂದು ಪುಸ್ತಕದಿಂದ ಪ್ರಾರ್ಥನೆನ ಯಾವಾಗ್ಲೂ ಓದುತ್ತಾ ಇದ್ರೆ ಅಥವಾ ಬಾಯಿಪಾಠ ಮಾಡಿ ಅದನ್ನೇ ಪದೇಪದೇ ಹೇಳ್ತಿದ್ರೆ ದೇವರಿಗೆ ಇಷ್ಟ ಆಗಲ್ಲ. ಹಾಗಾಗಿ ನಿಮ್ಮ ಸ್ವಂತ ಮಾತಲ್ಲಿ ಹೃದಯದಾಳದಿಂದ ಮನಬಿಚ್ಚಿ ಪ್ರಾರ್ಥಿಸಿ.

ದೇವರ ಇಷ್ಟಕ್ಕೆ ತಕ್ಕಂತೆ ಸರಿಯಾದ ವಿಷಯಗಳಿಗಾಗಿ ಪ್ರಾರ್ಥಿಸಬೇಕು

‘ನಾವು ಆತನ ಇಷ್ಟಕ್ಕನುಸಾರ ಯಾವುದನ್ನೇ ಕೇಳಿಕೊಂಡರೂ ಆತನು ನಮಗೆ ಕಿವಿಗೊಡುತ್ತಾನೆ.’—1 ಯೋಹಾನ 5:14.

ದೇವರು ನಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ಳಬೇಕಂದ್ರೆ ಆತನ ಇಷ್ಟಕ್ಕನುಸಾರ ಪ್ರಾರ್ಥಿಸಬೇಕು. ದೇವರು ತನಗೆ ಏನಿಷ್ಟ ಮತ್ತು ಏನಿಷ್ಟಯಿಲ್ಲ ಅಂತ ಪವಿತ್ರ ಗ್ರಂಥವಾದ ಬೈಬಲಿನಲ್ಲಿ ತಿಳಿಸಿದ್ದಾನೆ. ಆ ವಿಷಯಗಳನ್ನ ಮನಸ್ಸಲ್ಲಿಟ್ಟು ಪ್ರಾರ್ಥಿಸಿದರೆ ದೇವರು ನಮ್ಮ ಪ್ರಾರ್ಥನೆಗಳನ್ನ ಖಂಡಿತ ಕೇಳ್ತಾನೆ.

ಯಾವ ವಿಷಯಗಳಿಗಾಗಿ ಪ್ರಾರ್ಥಿಸಬೇಕು?

ಊಟ ಮಾಡೋ ಮುಂಚೆ ಪ್ರಾರ್ಥಿಸುತ್ತಿರೋ ಒಂದು ಕುಟುಂಬ.

ಅಗತ್ಯ ಇರೋ ವಿಷಯಗಳಿಗಾಗಿ ಪ್ರಾರ್ಥಿಸಿ. ಉದಾಹರಣೆಗೆ ಮನೆ, ಊಟ, ಬಟ್ಟೆಬರೆಗಳಿಗಾಗಿ ಪ್ರಾರ್ಥಿಸಬಹುದು. ಸರಿಯಾದ ನಿರ್ಧಾರಗಳನ್ನ ಮಾಡಲು ಬೇಕಾದ ವಿವೇಕಕ್ಕಾಗಿ, ಕಷ್ಟಗಳನ್ನ ತಾಳಿಕೊಳ್ಳಲು ಬೇಕಾದ ಬಲಕ್ಕಾಗಿ ಮತ್ತು ಕೆಲವು ವಿಷಯಗಳಲ್ಲಿ ದೇವರ ಸಹಾಯಕ್ಕಾಗಿನೂ ಪ್ರಾರ್ಥಿಸಬಹುದು. ಅಷ್ಟೇ ಅಲ್ಲ ನಮ್ಮ ತಪ್ಪುಗಳನ್ನ ಕ್ಷಮಿಸುವಂತೆ ಮತ್ತು ದೇವರ ಮೇಲೆ ನಂಬಿಕೆ ಹೆಚ್ಚಿಸಲು ಸಹಾಯ ಮಾಡುವಂತೆ ಕೂಡ ಬೇಡಿಕೊಳ್ಳಬಹುದು.—ಲೂಕ 11:3, 4, 13; ಯಾಕೋಬ 1:5, 17.

ಆಸ್ಪಸ್ತ್ರೆಯಲ್ಲಿ ಮಲಗಿರೋ ಹೆಂಡತಿಯ ಜೊತೆ ಗಂಡ ಪ್ರಾರ್ಥಿಸುತ್ತಿದ್ದಾನೆ.

ಬೇರೆಯವರಿಗೋಸ್ಕರ ಪ್ರಾರ್ಥಿಸಿ. ಒಂದು ಕುಟುಂಬದಲ್ಲಿ ಮಕ್ಕಳು ಒಬ್ಬರನ್ನೊಬ್ಬರು ಪ್ರೀತಿಸೋದನ್ನ ನೋಡಿ ಅಪ್ಪಅಮ್ಮಗೆ ಖುಷಿ ಆಗುತ್ತೆ. ಅದೇ ತರ ನಾವು ಯೆಹೋವ ದೇವರ ಮಕ್ಕಳಾಗಿರೋದ್ರಿಂದ ಒಬ್ಬರಿಗೊಬ್ಬರು ಪ್ರೀತಿ ತೋರಿಸಿದ್ರೆ ಕಾಳಜಿವಹಿಸಿದ್ರೆ ದೇವರಿಗೆ ಖುಷಿ ಆಗುತ್ತೆ. ಹಾಗಾಗಿ ನಮ್ಮ ಸಂಗಾತಿ, ಮಕ್ಕಳು, ಕುಟುಂಬ ಮತ್ತು ಸ್ನೇಹಿತರಿಗಾಗಿ ಪ್ರಾರ್ಥಿಸಬೇಕು. “ಒಬ್ಬರಿಗೋಸ್ಕರ ಒಬ್ಬರು ಪ್ರಾರ್ಥಿಸಿರಿ” ಅಂತ ಪವಿತ್ರ ಗ್ರಂಥ ಹೇಳುತ್ತೆ.—ಯಾಕೋಬ 5:16.

ಸೂರ್ಯಾಸ್ತಮದ ಸಮಯದಲ್ಲಿ ಒಬ್ಬ ವ್ಯಕ್ತಿ ಮೈದಾನದಲ್ಲಿ ನಡೆಯುತ್ತಿದ್ದಾನೆ.

ಥ್ಯಾಂಕ್ಸ್‌ ಹೇಳಲು ಪ್ರಾರ್ಥಿಸಿ. ಪವಿತ್ರ ಗ್ರಂಥ ಹೇಳುತ್ತೆ, ‘ದೇವರು ನಿಮಗೆ ಆಕಾಶದಿಂದ ಮಳೆಯನ್ನೂ ಸುಗ್ಗೀಕಾಲಗಳನ್ನೂ ಅನುಗ್ರಹಿಸಿ, ಹೇರಳವಾಗಿ ಆಹಾರವನ್ನು ಕೊಟ್ಟು ನಿಮ್ಮ ಹೃದಯಗಳನ್ನು ಆನಂದದಿಂದ ತುಂಬಿಸುವ ಮೂಲಕ ಒಳ್ಳೇದನ್ನು ಮಾಡಿದನು.’ (ಅಪೊಸ್ತಲರ ಕಾರ್ಯ 14:17) ದೇವರು ನಮಗೋಸ್ಕರ ಏನೆಲ್ಲ ಮಾಡಿದ್ದಾನೆ ಅಂತ ಯೋಚಿಸುವಾಗ ಆತನಿಗೆ ಥ್ಯಾಂಕ್ಸ್‌ ಹೇಳಬೇಕು ಅನಿಸುತ್ತೆ. ಅಷ್ಟೇ ಅಲ್ಲ ಆತನಿಗೆ ಇಷ್ಟ ಆಗೋ ರೀತಿ ಜೀವಿಸೋ ಮೂಲಕನೂ ಥ್ಯಾಂಕ್ಸ್‌ ಹೇಳಬಹುದು.—ಕೊಲೊಸ್ಸೆ 3:15.

ಪಟ್ಟುಹಿಡಿದು ಪ್ರಾರ್ಥಿಸ್ತಾ ಇರಿ

ಎಷ್ಟೋ ಸಲ ನಾವು ಪ್ರಾಮಾಣಿಕವಾಗಿ ಪ್ರಾರ್ಥಿಸಿದ್ರೂ ತಕ್ಷಣ ಉತ್ತರ ಸಿಗದೇ ಇದ್ದಾಗ ಬೇಜಾರಾಗುತ್ತೆ. ಹಾಗಾದಾಗ ದೇವರಿಗೆ ನಮ್ಮ ಮೇಲೆ ಕಾಳಜಿನೇ ಇಲ್ಲ ಅನ್ಕೋಬೇಕಾ? ಖಂಡಿತ ಇಲ್ಲ! ನಮ್ಮ ಪ್ರಾರ್ಥನೆಗಳಿಗೆ ತಕ್ಷಣ ಉತ್ರ ಸಿಗದಿದ್ರೂ ಪ್ರಾರ್ಥಿಸ್ತಾ ಇರಬೇಕು ಅಂತ ತೋರಿಸೋ ಕೆಲವು ಉದಾಹರಣೆಗಳನ್ನ ನೋಡೋಣ.

ಆರಂಭದ ಲೇಖನದಲ್ಲಿ ನೋಡಿದಂಥ ಸ್ಟೀವ್‌ ಹೀಗೆ ಹೇಳ್ತಾರೆ: “ನಾನು ಒಂದು ವೇಳೆ ಪ್ರಾರ್ಥನೆ ಮಾಡೋದನ್ನ ನಿಲ್ಲಿಸಿಬಿಟ್ಟಿದ್ರೆ ಜೀವ್ನದ ಮೇಲೆ ಆಸೆನೇ ಹೋಗಿರುತ್ತಿತ್ತು ಅನ್ಸುತ್ತೆ.” ಸ್ಟೀವ್‌ ಬೈಬಲ್‌ ಓದಿದ ಮೇಲೆ ಪ್ರಾರ್ಥನೆ ಮಾಡ್ತಾ ಇರಬೇಕು ಯಾವುದೇ ಕಾರಣಕ್ಕೂ ನಿಲ್ಲಿಸಬಾರದು ಅಂತ ಕಲಿತ್ರು. ಅವರು ಹೇಳೋದು, “ಕಷ್ಟದ ಸಮಯದಲ್ಲಿ ನನ್ನ ಫ್ರೆಂಡ್ಸ್‌ ಯಾವತ್ತೂ ಕೈ ಬಿಡಲಿಲ್ಲ, ಇಂಥ ಒಳ್ಳೇ ಫ್ರೆಂಡ್ಸ್‌ ಕೊಟ್ಟು ಅವರ ಮೂಲಕ ಸಹಾಯ ಮಾಡಿದ್ದಕ್ಕಾಗಿ ದಿನಾ ಪ್ರಾರ್ಥನೇಲಿ ದೇವರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಹಿಂದೆಂದಿಗಿಂತಲೂ ಈಗ ತುಂಬ ಖುಷಿಯಾಗಿದ್ದೀನಿ.”

ಜೆನ್ನಿ ಅನ್ನೋ ಸ್ತ್ರೀಗೆ ತಾನು ದೇವರ ಹತ್ರ ಮಾತಾಡೋಕೆ ಲಾಯಕ್ಕಿಲ್ಲ ಅಂತ ಅನಿಸುತ್ತಿತ್ತು. ಆದ್ರೆ ಅವಳು ಹೇಳ್ತಾಳೆ, “ನಂಗೆ ಹಾಗೆ ಅನಿಸಿದಾಗೆಲ್ಲಾ ದಯವಿಟ್ಟು ಸಹಾಯ ಮಾಡು ಅಂತ ದೇವರ ಹತ್ರ ಪ್ರಾರ್ಥಿಸುತ್ತಿದ್ದೆ. ನಾನು ಲಾಯಕ್ಕಿಲ್ಲ ಅಂತ ನಂಗೆ ಅನಿಸಿದ್ರೂ ದೇವರು ಆ ರೀತಿ ಯೋಚಿಸಲ್ಲ ಅಂತ ಅರ್ಥಮಾಡಿಕೊಳ್ಳೋಕೆ ಪ್ರಾರ್ಥನೆ ಸಹಾಯ ಮಾಡ್ತು. ಎಷ್ಟೋ ಸಲ ಪ್ರಾರ್ಥನೆಗೆ ತಕ್ಷಣ ಉತ್ರ ಸಿಗಲ್ಲ, ಹಾಗಂತ ನಾವು ಪ್ರಾರ್ಥನೆ ಮಾಡೋದನ್ನ ನಿಲ್ಲಿಸಬಾರದು. ಪ್ರಾರ್ಥನೆ ಮಾಡೋದ್ರಿಂದ ಯೆಹೋವ ದೇವರನ್ನ ಒಬ್ಬ ತಂದೆಯಾಗಿ, ಫ್ರೆಂಡಾಗಿ ನೋಡೋಕೆ ಆಗ್ತಿದೆ. ದೇವರ ಮಾತನ್ನ ಕೇಳ್ತಾ ಇದ್ರೆ ಆತನು ನಮ್ಮ ಕೈಯನ್ನ ಯಾವತ್ತೂ ಬಿಡಲ್ಲ ಅಂತ ಮಾತು ಕೊಟ್ಟಿದ್ದಾನೆ.”

ತನ್ನ ಗಂಡ ಮತ್ತು ಮಗನ ಜೊತೆ ಇರುವ ಇಸಬೇಲ್‌.

ತನ್ನ ಮಗ ಜೆರಾರ್ಡಿಗೆ ಅಂಗವಿಕಲತೆ ಇದ್ರೂ ಅವನು ಖುಷಿಖುಷಿಯಾಗಿ ಇರೋದನ್ನ ನೋಡಿ “ದೇವರು ನನ್ನ ಪ್ರಾರ್ಥನೆಗೆ ಕೊಟ್ಟ ಅತ್ಯುತ್ತಮ ಉಡುಗೊರೆನೇ ನನ್ನ ಮಗ” ಅಂತ ಇಸಬೇಲ್‌ ಹೇಳ್ತಾಳೆ

ಇಸಬೇಲ್‌ ಅನ್ನೋ ಸ್ತ್ರೀಯ ಉದಾಹರಣೆ ನೋಡಿ. ಆಕೆ ಗರ್ಭಿಣಿ ಆಗಿದ್ದಾಗ ಹುಟ್ಟೋ ಮಗುಗೆ ಅಂಗವಿಕಲತೆ ಇರುತ್ತೆ ಅಂತ ಡಾಕ್ಟರ್‌ ಹೇಳಿದ್ರು. ಇದನ್ನ ಕೇಳಿ ಅವಳ ಎದೆ ಒಡೆದುಹೋಯ್ತು. ಕೆಲವರು ಆ ಮಗುನ ತೆಗೆಸಿಹಾಕು ಅಂತನೂ ಹೇಳಿದ್ರು. “ಇದನ್ನೆಲ್ಲ ಕೇಳಿ ನಂಗೆ ಸಾಯುವಷ್ಟು ದುಃಖ ಆಗಿತ್ತು. ಹಗಲು ರಾತ್ರಿ ದೇವರ ಹತ್ರ ಸಹಾಯಕ್ಕಾಗಿ ಪ್ರಾರ್ಥಿಸುತ್ತಿದ್ದೆ” ಅಂತ ಇಸಬೇಲ್‌ ಹೇಳ್ತಾಳೆ. ಸ್ವಲ್ಪ ದಿನಗಳಲ್ಲಿ ಆಕೆಗೆ ಒಂದು ಗಂಡು ಮಗು ಹುಟ್ಟಿತು. ಆ ಮಗುಗೆ ಜೆರಾರ್ಡ್‌ ಅಂತ ಹೆಸರಿಟ್ಟಳು. ಮಗು ಅಂಗವಿಕಲತೆಯಿಂದ ಹುಟ್ಟಿದ್ರೂ ದೇವರು ತನ್ನ ಪ್ರಾರ್ಥನೆಗೆ ಉತ್ರ ಕೊಟ್ಟಿದ್ದಾನೆ ಅಂತ ಅವಳಿಗೆ ಅನಿಸ್ತು. ಅವಳು ಹೇಳೋದು: “ನಂಗೆ ಮಗು ಹುಟ್ಟಿದ್ದಕ್ಕೆ ದೇವರಿಗೆ ಥ್ಯಾಂಕ್ಸ್‌ ಹೇಳ್ತೀನಿ. ಅವನಿಗೀಗ 14 ವರ್ಷ, ಅಂಗವಿಕಲತೆ ಇದ್ರುನೂ ಖುಷಿಖುಷಿಯಾಗಿ ಇದ್ದಾನೆ. ನನ್ನ ಪ್ರಾರ್ಥನೆಗೆ ದೇವರು ಕೊಟ್ಟ ಅತ್ಯುತ್ತಮ ಉಡುಗೊರೆನೇ ನನ್ನ ಮಗ.”

ಈ ಉದಾಹರಣೆಗಳನ್ನ ನೋಡ್ದಾಗ ಪವಿತ್ರ ಗ್ರಂಥದಲ್ಲಿ ಇರೋ ಈ ಮಾತು ನೆನಪಾಗುತ್ತೆ: “ಯೆಹೋವನೇ, ನೀನು ದೀನರ ಕೋರಿಕೆಯನ್ನು ನೆರವೇರಿಸುವವನೇ ಆಗಿದ್ದೀ; ಅವರ ಹೃದಯವನ್ನು ಧೈರ್ಯಪಡಿಸುತ್ತೀ; ಅವರ ಮೊರೆಗೆ ಕಿವಿಗೊಡುತ್ತೀ.” (ಕೀರ್ತನೆ 10:17) ಹಾಗಾಗಿ ಪ್ರಾರ್ಥಿಸ್ತಾ ಇರಿ. ದೇವರು ನಿಮ್ಮ ಪ್ರಾರ್ಥನೆಗಳನ್ನ ಖಂಡಿತ ಕೇಳ್ತಾನೆ ಅನ್ನೋ ಭರವಸೆ ನಿಮಗಿರಲಿ.

ಪವಿತ್ರ ಗ್ರಂಥದಲ್ಲಿ ಯೇಸು ಮಾಡಿದ ಹಲವಾರು ಪ್ರಾರ್ಥನೆಗಳಿವೆ. ಅದರಲ್ಲಿ ತುಂಬ ಪ್ರಸಿದ್ಧವಾಗಿರೋದು ಯೇಸು ತನ್ನ ಶಿಷ್ಯರಿಗೆ ಕಲಿಸಿದ ಪ್ರಾರ್ಥನೆ. ಆ ಪ್ರಾರ್ಥನೆಯಿಂದ ನಾವೇನು ಕಲಿಬಹುದು ಅಂತ ಮುಂದೆ ನೋಡೋಣ.

ಒಂದು ಮಾದರಿ ಪ್ರಾರ್ಥನೆ

ಯೇಸು ಹೇಳುತ್ತಿರೋ ಮಾತುಗಳನ್ನ ಕೇಳಿಸಿಕೊಳ್ಳುತ್ತಿರೋ ಜನರ ಒಂದು ದೊಡ್ಡ ಗುಂಪು.

ಒಂದ್ಸಲ ಯೇಸು ಹೇಗೆ ಪ್ರಾರ್ಥಿಸಬೇಕು ಅಂತ ತನ್ನ ಶಿಷ್ಯರಿಗೆ ಕಲಿಸಿದ. ಈ ಪ್ರಾರ್ಥನೆನ ಕರ್ತನ ಪ್ರಾರ್ಥನೆ ಅಂತ ಕರೆಯಲಾಗುತ್ತೆ. (ಮತ್ತಾಯ 6:9-13; ಲೂಕ 11:2-4ನ್ನ ಸಹ ನೋಡಿ.) ಈ ಪ್ರಾರ್ಥನೆ ಎಷ್ಟು ಪ್ರಸಿದ್ಧ ಆಗಿದೆ ಅಂದ್ರೆ ತುಂಬ ಜನ ಇದನ್ನ ಬಾಯಿಪಾಠ ಮಾಡಿ, ಒಂದು ಪದನೂ ಬಿಡದೇ ಪ್ರಾರ್ಥಿಸ್ತಾರೆ. ಯೇಸು ಈ ಪ್ರಾರ್ಥನೆನ ಜನರು ಬಾಯಿಪಾಠ ಮಾಡ್ಲಿ ಅಂತ ಹೇಳಿಕೊಟ್ಟನಾ? ಇಲ್ಲ. ಯಾಕಂದ್ರೆ ಪ್ರಾರ್ಥನೇಲಿ ಯಾವಾಗ್ಲೂ ಒಂದೇ ತರದ ಪದಗಳನ್ನ ಉಪಯೋಗಿಸಬಾರದು ಅಂತ ಸ್ವತಃ ಯೇಸುನೇ ತನ್ನ ಶಿಷ್ಯರಿಗೆ ಕಲಿಸಿದ್ದ. (ಮತ್ತಾಯ 6:7) ನಾವು ಹೇಗೆ ಪ್ರಾರ್ಥಿಸಬೇಕು ಮತ್ತು ಯಾವ ವಿಷಯಗಳಿಗಾಗಿ ಪ್ರಾರ್ಥಿಸಬೇಕು ಅಂತ ಕಲಿಸಲಿಕ್ಕಾಗಿ ಯೇಸು ಈ ಮಾದರಿ ಪ್ರಾರ್ಥನೆನ ಹೇಳಿಕೊಟ್ಟ. ಈ ಪ್ರಾರ್ಥನೆಯಿಂದ ನಾವೇನು ಕಲಿಬಹುದು ಅಂತ ನೋಡೋಣ ಬನ್ನಿ.

“ಸ್ವರ್ಗದಲ್ಲಿರುವ ನಮ್ಮ ತಂದೆಯೇ”

  • ನಾವು ಯೆಹೋವ ದೇವರಿಗೆ ಮಾತ್ರ ಪ್ರಾರ್ಥಿಸಬೇಕು.

“ನಿನ್ನ ನಾಮವು ಪವಿತ್ರೀಕರಿಸಲ್ಪಡಲಿ”

  • ದೇವರ ಹೆಸರು ಪವಿತ್ರವಾದದ್ದು. ಹಾಗಾಗಿ ದೇವರ ಹೆಸರಿಗೆ ಮಸಿ ಬಳಿಯೋ ಯಾವುದೇ ಕೆಲಸ ನಾವು ಮಾಡಬಾರದು.

“ನಿನ್ನ ರಾಜ್ಯವು ಬರಲಿ”

  • ದೇವರ ರಾಜ್ಯ ಅಂದ್ರೆ ಸ್ವರ್ಗದಲ್ಲಿರೋ ದೇವರ ಸರ್ಕಾರ. ಇದು ಬಲುಬೇಗನೆ ಇಡೀ ಭೂಮಿನ ಆಳಲಿದೆ ಮತ್ತು ಈ ಸರ್ಕಾರದ ನಾಯಕ ಯೇಸು.

“ನಿನ್ನ ಚಿತ್ತವು ಸ್ವರ್ಗದಲ್ಲಿ ನೆರವೇರುವ ಪ್ರಕಾರ ಭೂಮಿಯಲ್ಲಿಯೂ ನೆರವೇರಲಿ”

  • ಮಾನವರು ಇದೇ ಭೂಮಿ ಮೇಲೆ ಶಾಂತಿ ಮತ್ತು ಭದ್ರತೆಯಿಂದ ಶಾಶ್ವತವಾಗಿ ಜೀವಿಸಬೇಕು ಅನ್ನೋದೇ ದೇವರ ಚಿತ್ತ ಅಥವಾ ಆಸೆ.

“ನಮ್ಮ ಅನುದಿನದ ಆಹಾರವನ್ನು ಈ ಹೊತ್ತು ನಮಗೆ ದಯಪಾಲಿಸು”

  • ನಮಗೆ ಜೀವಿಸಲು ಬೇಕಾದ ಎಲ್ಲಾ ವಿಷಯವನ್ನ ದಯಪಾಲಿಸೋದು ದೇವರೇ.

“ನಮ್ಮ ಪಾಪಗಳನ್ನೂ ಕ್ಷಮಿಸು”

  • ನಾವೆಲ್ಲರೂ ತಪ್ಪು ಮಾಡ್ತೀವಿ. ಹಾಗಾಗಿ ದೇವರ ಹತ್ರ ಕ್ಷಮೆ ಕೇಳಬೇಕು.

ಈ ವಿಷಯಗಳನ್ನ ಮನಸ್ಸಲ್ಲಿಟ್ಟು ಪ್ರಾರ್ಥಿಸಿದ್ರೆ ದೇವರು ಅದನ್ನ ಖಂಡಿತ ಮೆಚ್ತಾನೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ