ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • wp21 ನಂ. 1 ಪು. 14-15
  • ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
  • ಅನುರೂಪ ಮಾಹಿತಿ
  • ಪ್ರಾರ್ಥನೆ​—⁠ಇದರಿಂದ ನಮಗೇನು ಪ್ರಯೋಜನ?
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2016
  • ಪ್ರಾರ್ಥನೆಯ ಮುಖಾಂತರ ದೇವರ ಸಮೀಪಕ್ಕೆ ಬನ್ನಿರಿ
    ಬೈಬಲ್‌ ನಿಜವಾಗಿಯೂ ಏನನ್ನು ಬೋಧಿಸುತ್ತದೆ?
  • ದೇವರು ಕೊಟ್ಟಿರುವ ಪ್ರಾರ್ಥನೆ ಎಂಬ ವರ
    ಬೈಬಲ್‌ ನಮಗೆ ಏನು ಕಲಿಸುತ್ತದೆ?
  • ಯೆಹೋವನಿಗೆ ಆಪ್ತರಾಗಲು ಪ್ರಾರ್ಥನೆ ಮಾಡಿ
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಸಾರ್ವಜನಿಕ)—2021
wp21 ನಂ. 1 ಪು. 14-15

ಪ್ರಾರ್ಥನೆ ನಮಗೆ ಹೇಗೆ ಸಹಾಯ ಮಾಡುತ್ತೆ?

ಪ್ಯಾಮೆಲಾ ಅನ್ನೋ ಸ್ತ್ರೀಗೆ ಕ್ಯಾನ್ಸರ್‌ ಇತ್ತು. ಅದಕ್ಕಾಗಿ ಡಾಕ್ಟರ್‌ ಹತ್ರ ಚಿಕಿತ್ಸೆ ಪಡ್ಕೊಂಡ್ರು. ಇದರ ಜೊತೆ ಈ ಕಷ್ಟದ ಸನ್ನಿವೇಶವನ್ನ ತಾಳಿಕೊಳ್ಳೋಕೆ ಬೇಕಾದ ಸಹಾಯಕ್ಕಾಗಿ ದೇವರ ಹತ್ರನೂ ಪ್ರಾರ್ಥಿಸುತ್ತಿದ್ರು. ಈ ಪ್ರಾರ್ಥನೆಯಿಂದ ಅವರಿಗೆ ಏನಾದ್ರು ಸಹಾಯ ಸಿಕ್ತಾ?

ಪ್ಯಾಮೆಲಾ ಹೇಳೋದು, “ಚಿಕಿತ್ಸೆಯ ಸಮಯದಲ್ಲಿ ನಂಗೆ ತುಂಬ ಹೆದರಿಕೆ ಆಗ್ತಿತ್ತು, ಏನು ಮಾಡಬೇಕು ಅಂತನೇ ಗೊತ್ತಾಗ್ತಿರಲಿಲ್ಲ. ಆದರೆ ಆ ಸಮಯದಲ್ಲಿ ಯೆಹೋವನಿಗೆ ಪ್ರಾರ್ಥಿಸಿದಾಗ ಮನಸ್ಸಿಗೆ ಸಮಾಧಾನ ಆಗ್ತಿತ್ತು ಮತ್ತು ಆ ನೋವನ್ನ ತಾಳಿಕೊಳ್ಳೋಕೆ ಬೇಕಾದ ಶಕ್ತಿ ಸಿಗ್ತಿತ್ತು. ಆ ಕಾಯಿಲೆಯ ನೋವು ಇನ್ನೂ ಹಾಗೇ ಇದ್ರೂ ಅದರ ಬಗ್ಗೆನೇ ಕೊರಗದೆ ಒಳ್ಳೇ ವಿಷಯಗಳಿಗೆ ಹೆಚ್ಚು ಗಮನ ಕೊಡೋಕೆ ಪ್ರಾರ್ಥನೆ ಸಹಾಯ ಮಾಡಿದೆ. ಈಗ ಯಾರಾದ್ರು ನನ್ನನ್ನ ಹೇಗಿದ್ದೀರಾ ಅಂತ ಕೇಳಿದ್ರೆ ‘ನಾನು ಪೂರ್ತಿಯಾಗಿ ಹುಷಾರಾಗಿಲ್ಲ, ಆದ್ರೂ ಖುಷಿಯಾಗಿದ್ದೀನಿ’ ಅಂತ ಹೇಳ್ತೀನಿ.”

ಜೀವನದಲ್ಲಿ ದೊಡ್ಡದೊಡ್ಡ ಸಮಸ್ಯೆಗಳು ಬಂದಾಗ ಮಾತ್ರ ಪ್ರಾರ್ಥಿಸಬೇಕು ಅಂತೇನಿಲ್ಲ. ಚಿಕ್ಕ-ಪುಟ್ಟ ಸಮಸ್ಯೆಗಳು ಬಂದಾಗಲೂ ನಮಗೆ ಸಹಾಯ ಬೇಕಾಗುತ್ತೆ, ಅವಾಗ್ಲೂ ಪ್ರಾರ್ಥಿಸಬಹುದು.

“ನಿನ್ನ ಚಿಂತಾಭಾರವನ್ನು ಯೆಹೋವನ ಮೇಲೆ ಹಾಕು; ಆತನು ನಿನ್ನನ್ನು ಉದ್ಧಾರಮಾಡುವನು. ನೀತಿವಂತನನ್ನು ಎಂದಿಗೂ ಕದಲಗೊಡಿಸನು” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಕೀರ್ತನೆ 55:22) ಈ ಮಾತುಗಳಿಂದ ನಮಗೆಷ್ಟು ಬಲ ಸಿಗುತ್ತೆ ಅಲ್ವಾ! ನಾವು ಸರಿಯಾದ ರೀತೀಲಿ ಪ್ರಾರ್ಥಿಸಿದ್ರೆ ಬರೋ ಸಮಸ್ಯೆಗಳನ್ನ ಎದುರಿಸಲು ದೇವರು ಸಹಾಯ ಮಾಡ್ತಾನೆ.—“ಪ್ರಾರ್ಥನೆ ಮಾಡಿದ್ರೆ ಸಿಗೋ ಪ್ರಯೋಜ್ನ” ಅನ್ನೋ ಚೌಕ ನೋಡಿ.

ಪ್ರಾರ್ಥನೆ ಮಾಡಿದ್ರೆ ಸಿಗೋ ಪ್ರಯೋಜ್ನ

ಮನಸ್ಸಿಗೆ ಶಾಂತಿ ನೆಮ್ಮದಿ ಸಿಗುತ್ತೆ

ಮೊದಲು ತನ್ನ ಕೆಲಸ ಕಳಕೊಂಡಿದ್ದ ಒಬ್ಬ ಬಿಜ಼ನಸ್‌ಮ್ಯಾನ್‌ ಈಗ ನಗ್ತಾ ಧೈರ್ಯದಿಂದ ನಡೆಯುತ್ತಿದ್ದಾನೆ.

“ಯಾಚನೆಗಳಿಂದ ನಿಮ್ಮ ಬಿನ್ನಹಗಳನ್ನು ದೇವರಿಗೆ ತಿಳಿಯಪಡಿಸಿರಿ. ಆಗ ಎಲ್ಲ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ನಿಮ್ಮ ಮಾನಸಿಕ ಶಕ್ತಿಗಳನ್ನೂ ಕ್ರಿಸ್ತ ಯೇಸುವಿನ ಮೂಲಕ ಕಾಯುವುದು” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಫಿಲಿಪ್ಪಿ 4:6, 7) ಮನಬಿಚ್ಚಿ ನಮ್ಮ ಚಿಂತೆಗಳನ್ನ ದೇವರ ಹತ್ರ ಹೇಳಿಕೊಂಡ್ರೆ ಆತನು ನಮ್ಮ ಮನಸ್ಸಿಗೆ ಶಾಂತಿ ನೆಮ್ಮದಿ ಕೊಡ್ತಾನೆ ಮತ್ತು ಒತ್ತಡದ ಸಮಯದಲ್ಲೂ ಒಳ್ಳೇ ನಿರ್ಣಯಗಳನ್ನ ಮಾಡಲು ಸಹಾಯ ಮಾಡ್ತಾನೆ.

ವಿವೇಕ ಸಿಗುತ್ತೆ

ಮೊದಲು ಒಂದು ಪುಸ್ತಕ ನೋಡಿ ಪ್ರಾರ್ಥನೆ ಓದುತ್ತಿದ್ದ ಸ್ತ್ರೀ ಈಗ ತನ್ನ ಮನೆಯಲ್ಲಿ ಬೈಬಲ್‌ ಓದುತ್ತಿದ್ದಾಳೆ.

“ನಿಮ್ಮಲ್ಲಿ ಯಾವನಿಗಾದರೂ ವಿವೇಕದ ಕೊರತೆಯಿರುವಲ್ಲಿ ಅವನು ದೇವರನ್ನು ಕೇಳಿಕೊಳ್ಳುತ್ತಾ ಇರಲಿ, ಆಗ ಅದು ಅವನಿಗೆ ಕೊಡಲ್ಪಡುವುದು; ಏಕೆಂದರೆ ದೇವರು ಎಲ್ಲರಿಗೆ ಉದಾರವಾಗಿಯೂ ಹಂಗಿಸದೆಯೂ ಕೊಡುವವನಾಗಿದ್ದಾನೆ” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಯಾಕೋಬ 1:5) ಚಿಂತೆ ಒತ್ತಡ ಇದ್ದಾಗ ನಮಗೆ ಸರಿಯಾದ ನಿರ್ಣಯ ಮಾಡೋಕಾಗಲ್ಲ. ಇಂಥ ಸಮಯದಲ್ಲಿ ಸರಿಯಾದ ನಿರ್ಣಯ ಮಾಡಲು ಬೇಕಾದ ವಿವೇಕಕ್ಕಾಗಿ ದೇವರ ಹತ್ರ ಪ್ರಾರ್ಥಿಸಬೇಕು. ಆಗ ಆತನು ಪವಿತ್ರ ಗ್ರಂಥದಲ್ಲಿರೋ ಕೆಲವು ಸಲಹೆಗಳನ್ನ ನಮ್ಮ ನೆನಪಿಗೆ ತಂದು ಸಹಾಯ ಮಾಡ್ತಾನೆ.

ಬಲ ಮತ್ತು ಸಾಂತ್ವನ ಸಿಗುತ್ತೆ

ಮೊದಲು ಆಸ್ಪತ್ರೆಯಲ್ಲಿದ್ದ ಒಂದು ದಂಪತಿ ಈಗ ಪಾರ್ಕಲ್ಲಿ ನಡೀತಿದ್ದಾರೆ. ಗಂಡ ತನ್ನ ಹೆಂಡತಿಗೆ ಕೋಲು ಹಿಡಕೊಂಡು ನಡೆಯಲು ಸಹಾಯ ಮಾಡುತ್ತಿದ್ದಾನೆ.

“ನನಗೆ ಶಕ್ತಿಯನ್ನು ಕೊಡುವಾತನ ಮೂಲಕ ನಾನು ಎಲ್ಲವನ್ನು ಮಾಡಲು ಶಕ್ತನಾಗಿದ್ದೇನೆ” ಅಂತ ಪವಿತ್ರ ಗ್ರಂಥ ಹೇಳುತ್ತೆ. (ಫಿಲಿಪ್ಪಿ 4:13) ಯೆಹೋವನು ಸರ್ವಶಕ್ತ ದೇವರು. ಹಾಗಾಗಿ ನಮಗೆ ಸಮಸ್ಯೆಗಳು ಬಂದಾಗ ಅದನ್ನ ಎದುರಿಸೋಕೆ ಅಥವಾ ತಾಳಿಕೊಳ್ಳೋಕೆ ಬೇಕಾದ ಶಕ್ತಿ ಕೊಡೋ ಸಾಮರ್ಥ್ಯ ಆತನಿಗೆ ಇದೆ. (ಯೆಶಾಯ 40:29) ಯೆಹೋವ ದೇವರು ‘ಸಕಲ ಸಾಂತ್ವನದ ದೇವರಾಗಿದ್ದಾನೆ, ನಮ್ಮ ಎಲ್ಲ ಸಂಕಟಗಳಲ್ಲಿ ನಮ್ಮನ್ನು ಸಾಂತ್ವನಗೊಳಿಸುತ್ತಾನೆ’ ಅಂತ ಸಹ ಪವಿತ್ರ ಗ್ರಂಥ ಹೇಳುತ್ತೆ.—2 ಕೊರಿಂಥ 1:3, 4.

ನೀವು ಪ್ರಾರ್ಥಿಸ್ತೀರಾ?

ಯೆಹೋವ ದೇವರು ಪ್ರಾರ್ಥನೆ ಮಾಡಲೇಬೇಕು ಅಂತ ಯಾರಿಗೂ ಒತ್ತಾಯ ಮಾಡಲ್ಲ. ಬದಲಿಗೆ ನಾವೇ ಮನಸಾರೆ ಆತನಿಗೆ ಪ್ರಾರ್ಥಿಸಬೇಕು ಅಂತ ಬಯಸ್ತಾನೆ. (ಯೆರೆಮೀಯ 29:11, 12) ದೇವರು ನಿಮ್ಮ ಪ್ರಾರ್ಥನೆಗಳನ್ನ ಕೇಳಿಸಿಕೊಳ್ತಾ ಇಲ್ಲ ಅಂತ ಯಾವತ್ತಾದ್ರು ಅನಿಸಿದ್ಯಾ? ಹಾಗೆ ಅನಿಸಿದ್ರೆ ಬೇಜಾರು ಮಾಡ್ಕೊಂಡು ಪ್ರಾರ್ಥನೆ ಮಾಡೋದನ್ನ ನಿಲ್ಲಿಸಬೇಡಿ. ಸ್ವಲ್ಪ ಮಕ್ಕಳ ಬಗ್ಗೆ ಯೋಚ್ಸಿ. ಎಷ್ಟೋ ಸಲ ಮಕ್ಕಳು ‘ನಂಗೆ ಇದೇ ಬೇಕು, ಹೀಗೇ ಆಗಬೇಕು’ ಅಂತ ಹಠ ಮಾಡ್ತಾರೆ. ಆದ್ರೆ ಅಪ್ಪ-ಅಮ್ಮ ತಕ್ಷಣ ಮಕ್ಕಳು ಹೇಳಿದ್ದನ್ನೆಲ್ಲ ಮಾಡಲ್ಲ ಅಥವಾ ಕೇಳಿದ್ದನ್ನೆಲ್ಲ ಕೊಡಿಸಲ್ಲ. ಯಾಕಂದ್ರೆ ಮಕ್ಕಳಿಗೆ ಯಾವುದು ಒಳ್ಳೇದು, ಅದನ್ನ ಯಾವಾಗ ಕೊಡಿಸಬೇಕು ಅಂತ ಅಪ್ಪಅಮ್ಮಗೆ ಚೆನ್ನಾಗಿ ಗೊತ್ತಿರುತ್ತೆ. ಒಂದಂತೂ ನಿಜ ಅಪ್ಪ-ಅಮ್ಮ ತಮ್ಮ ಮಕ್ಕಳನ್ನ ತುಂಬ ಪ್ರೀತಿಸ್ತಾರೆ ಮತ್ತು ಮಕ್ಕಳಿಗೆ ಯಾವಾಗ್ಲು ಒಳ್ಳೇದಾಗಲಿ ಅಂತನೇ ಬಯಸ್ತಾರೆ.

ಅದೇ ತರ ನಾವೆಲ್ಲರು ಯೆಹೋವ ದೇವರ ಮಕ್ಕಳಾಗಿರೋದ್ರಿಂದ ಆತನು ನಮ್ಮನ್ನ ತುಂಬ ಪ್ರೀತಿಸ್ತಾನೆ ಮತ್ತು ನಮಗೆ ಒಳ್ಳೇದಾಗಲಿ ಅಂತ ಬಯಸ್ತಾನೆ. ಇಷ್ಟರವರೆಗೆ ನಾವು ಕಲಿತ ವಿಷಯಗಳನ್ನ ಮನಸ್ಸಲ್ಲಿಟ್ಟು ಪ್ರಾರ್ಥಿಸಿದ್ರೆ ದೇವರು ಖಂಡಿತ ನಮ್ಮ ಪ್ರಾರ್ಥನೆನ ಕೇಳ್ತಾನೆ!—ಕೀರ್ತನೆ 34:15; ಮತ್ತಾಯ 7:7-11.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ