ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ನವೆಂಬರ್‌ ಪು. 32
  • ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
  • ಅನುರೂಪ ಮಾಹಿತಿ
  • ‘ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2018
  • ‘ಎರಡು ಚಿಕ್ಕ ನಾಣ್ಯಗಳ’ ಮೌಲ್ಯ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಯೆಹೋವನ ಸಾಕ್ಷಿಗಳು ತಮ್ಮ ಕೆಲಸಕ್ಕೆ ಹಣವನ್ನು ಎಲ್ಲಿಂದ ಪಡೆಯುತ್ತಾರೆ?
    ಯೆಹೋವನ ಸಾಕ್ಷಿಗಳ ಕುರಿತು ಜನರು ಕೇಳುವ ಪ್ರಶ್ನೆಗಳು
  • ನೀವು ತೋರಿಸಿರೋ ಪ್ರೀತಿಗೆ ಯೆಹೋವ ದೇವರಿಗೆ ಥ್ಯಾಂಕ್ಸ್‌
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2021
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ನವೆಂಬರ್‌ ಪು. 32
donate.jw.org

ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು?

ಒಮ್ಮೆ ಯೇಸು ಹೀಗೆ ಹೇಳಿದನು: “ತೆಗೆದುಕೊಳ್ಳುವುದಕ್ಕಿಂತಲೂ ಕೊಡುವುದರಲ್ಲಿ ಹೆಚ್ಚಿನ ಸಂತೋಷವಿದೆ.” (ಅ. ಕಾ. 20:35) ಇದು ಮುಖ್ಯವಾಗಿ ಯೆಹೋವನಿಗೆ ನಾವು ಉಡುಗೊರೆ ಕೊಡುವ ವಿಷಯಕ್ಕೆ ಅನ್ವಯಿಸುತ್ತದೆ. ಯಾಕೆ? ಯೆಹೋವನು ನಮಗೆ ಅನೇಕ ಉಡುಗೊರೆಗಳನ್ನು ಕೊಟ್ಟಿದ್ದಾನೆ. ಅದರಿಂದ ನಮಗೆ ತುಂಬ ಸಂತೋಷ ಆಗಿದೆ. ಆದರೆ ನಾವು ಯೆಹೋವನಿಗೆ ಉಡುಗೊರೆ ಕೊಡುವುದರಿಂದ ಇನ್ನೂ ಹೆಚ್ಚು ಸಂತೋಷ ಆಗುತ್ತದೆ. ಯೆಹೋವನಿಗೆ ನಾವು ಯಾವ ಉಡುಗೊರೆ ಕೊಡಬಹುದು? ಜ್ಞಾನೋಕ್ತಿ 3:9 “ನಿನ್ನ ಆದಾಯದಿಂದ . . . ಯೆಹೋವನನ್ನು ಸನ್ಮಾನಿಸು” ಎಂದು ಹೇಳುತ್ತದೆ. ಅಂದರೆ ನಮ್ಮ ಸಮಯ, ಶಕ್ತಿ, ಪ್ರತಿಭೆ ಮತ್ತು ಆಸ್ತಿ-ಪಾಸ್ತಿಗಳಿಂದ ನಾವು ಯೆಹೋವನನ್ನು ಸನ್ಮಾನಿಸಬಹುದು. ಸತ್ಯಾರಾಧನೆಗಾಗಿ ಇಂಥ ವಿಷಯಗಳನ್ನು ನಾವು ಬಳಸಿದರೆ ಯೆಹೋವನಿಗೆ ಉಡುಗೊರೆ ಕೊಟ್ಟಂತೆ ಆಗುತ್ತದೆ. ಇದರಿಂದ ನಮಗೆ ತುಂಬ ಸಂತೋಷ ಆಗುತ್ತದೆ.

ಯೆಹೋವನಿಗೆ ಉಡುಗೊರೆ ಕೊಡುವ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ಕಾಣಿಕೆ ಕೊಡಲು ನಾವು ಏನು ಮಾಡಬೇಕು? ಕಾಣಿಕೆಯಾಗಿ ‘ಏನನ್ನಾದರೂ ತೆಗೆದಿಡಿ’ ಎಂದು ಅಪೊಸ್ತಲ ಪೌಲನು ಕೊರಿಂಥದವರಿಗೆ ಹೇಳಿದನು. (1 ಕೊರಿಂ. 16:2) ನೀವಿರುವ ಸ್ಥಳದಲ್ಲಿ ಕಾಣಿಕೆಯನ್ನು ಯಾವ ವಿಧಗಳಲ್ಲಿ ಕೊಡಬಹುದೆಂಬ ಹೆಚ್ಚಿನ ಮಾಹಿತಿ ನಿಮಗೆ ಬೇಕಾ? ಹಾಗಾದರೆ ಕೆಳಗಿರುವ ಚೌಕ ನೋಡಿ.

ಆನ್‌ಲೈನ್‌ನಲ್ಲಿ ಕಾಣಿಕೆ ಕೊಡುವ ವ್ಯವಸ್ಥೆ ಎಲ್ಲ ದೇಶಗಳಲ್ಲಿ ಇಲ್ಲ. ಆದರೆ ಬೇರೆ ಯಾವ ವಿಧಾನಗಳ ಮೂಲಕ ಕಾಣಿಕೆ ಕೊಡಬಹುದು ಎಂಬ ಮಾಹಿತಿ ಕಾಣಿಕೆ ಬಗ್ಗೆ ಇರುವ ವೆಬ್‌ ಪೇಜಲ್ಲಿ ಸಿಗುತ್ತದೆ. ಕೆಲವು ದೇಶಗಳಲ್ಲಿ, ಈ ವೆಬ್‌ ಪೇಜಲ್ಲಿ ಕಾಣಿಕೆ ಬಗ್ಗೆ ಸಾಮಾನ್ಯವಾಗಿ ಬರುವ ಪ್ರಶ್ನೆಗಳಿಗೆ ಉತ್ತರ ಇದೆ.

ಆನ್‌ಲೈನ್‌ನಲ್ಲಿ ಕಾಣಿಕೆ ಕಳುಹಿಸಲು ಸುಲಭ ವಿಧಾನ

ಹುಡುಕುವುದು ಸುಲಭ

  • ವೆಬ್‌ ಬ್ರೌಸರ್‌

    donate.jw.org ಎಂದು ವೆಬ್‌ ಬ್ರೌಸರ್‌ನಲ್ಲಿ ಟೈಪ್‌ ಮಾಡಿ

  • JW ಲೈಬ್ರರಿ

    JW ಲೈಬ್ರರಿ ಆ್ಯಪ್‌ನ ಮುಖಪುಟದಲ್ಲಿ “ಕಾಣಿಕೆಗಳು” ಎಂಬ ಲಿಂಕ್‌ ಒತ್ತಿ

ಕಳುಹಿಸುವುದು ಸುಲಭ

ಒಂದೇ ಸಲ ಕಾಣಿಕೆ ಕೊಡಿ ಅಥವಾ ಕ್ರಮವಾಗಿ ಕಾಣಿಕೆ ಹೋಗುವಂತೆ ಮಾಡಿ

  • ಲೋಕವ್ಯಾಪಕ ಕೆಲಸಕ್ಕೆ

  • ನಿಮ್ಮ ಸಭೆಗೆ

  • ಪ್ರಾದೇಶಿಕ ಅಧಿವೇಶನಕ್ಕೆ

  • ಸರ್ಕಿಟ್‌ ಸಮ್ಮೇಳನಕ್ಕೆ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ