ನಮ್ಮ ಕ್ರೈಸ್ತ ಜೀವನ
‘ಎರಡು ಚಿಕ್ಕ ನಾಣ್ಯಗಳ’ ಮೌಲ್ಯ
ವಿಧವೆ ಹಾಕಿದ ಕಾಣಿಕೆಯ ಬೆಲೆ ಎಷ್ಟು ಕಮ್ಮಿ ಇತ್ತಂದ್ರೆ ಒಂದು ಹೊತ್ತಿನ ಊಟಕ್ಕೂ ಅದು ಸಾಕಾಗ್ತಿರಲಿಲ್ಲ. (ಲೂಕ 21:4 ರ ಬಗ್ಗೆ ಅಧ್ಯಯನ ಬೈಬಲಿನಲ್ಲಿರುವ ಮಾಹಿತಿ ನೋಡಿ) ಆದ್ರೆ ಅವಳು ಕೊಟ್ಟ ಈ ಕಾಣಿಕೆಯಿಂದ ಆಕೆಗೆ ಯೆಹೋವನ ಮೇಲೆ ಎಷ್ಟು ಪ್ರೀತಿ ಇದೆ, ಯೆಹೋವನು ಮಾಡಿರೋ ಎಲ್ಲಾ ಏರ್ಪಾಡುಗಳ ಮೇಲೆ ಎಷ್ಟು ಗಣ್ಯತೆ ಇದೆ ಅನ್ನೋದು ಗೊತ್ತಾಗ್ತಿತ್ತು. ಹಾಗಾಗಿ ಅವಳು ಹಾಕಿದ ನಾಣ್ಯಗಳ ಮೌಲ್ಯ ಕಮ್ಮಿ ಇದ್ರೂ ಯೆಹೋವನ ಕಣ್ಣಿಗೆ ಅದು ಅಮೂಲ್ಯವಾಗಿತ್ತು.—ಮಾರ್ಕ 12:43.
‘ಉದಾರ ಹಸ್ತದಿಂದ ಯೆಹೋವನಿಗೋಸ್ಕರ ಕಾಣಿಕೆಯನ್ನರ್ಪಿಸಿ’ ಅನ್ನೋ ವಿಡಿಯೋ ನೋಡಿ. ನಂತ್ರ ಈ ಪ್ರಶ್ನೆಗಳಿಗೆ ಉತ್ರ ಕೊಡಿ:
ನಮ್ಮ ಕಾಣಿಕೆಗಳನ್ನ ಯಾವೆಲ್ಲ ಕೆಲಸಗಳಿಗೆ ಉಪಯೋಗಿಸಲಾಗುತ್ತೆ?
ನಾವು ಹಾಕೋ ಚಿಕ್ಕ-ಪುಟ್ಟ ಕಾಣಿಕೆಗಳೂ ಅಮೂಲ್ಯವಾಗಿವೆ ಹೇಗೆ?
ಕಾಣಿಕೆಗಳನ್ನು ಹಾಕುವುದರ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಎಲ್ಲಿ ಸಿಗುತ್ತೆ?—“ಹೆಚ್ಚಿನ ಮಾಹಿತಿ” ಅನ್ನೋ ಚೌಕ ನೋಡಿ