ಕ್ರೈಸ್ತ ಜೀವನ
ನೀವು ತೋರಿಸಿರೋ ಪ್ರೀತಿಗೆ ಯೆಹೋವ ದೇವರಿಗೆ ಥ್ಯಾಂಕ್ಸ್
ಕಷ್ಟದಲ್ಲಿದ್ದರೂ ಥೆಸಲೊನೀಕ ಸಭೆಯವರು ಬೇರೆ ಸಹೋದರರಿಗೆ ಪ್ರೀತಿ ತೋರಿಸಿದ್ರು. (2ಥೆಸ 1:3, 4) ಇದೇ ರೀತಿಯ ಪ್ರೀತಿಯನ್ನ ಲೋಕದ ಎಲ್ಲಾ ಕಡೆ ಇರೋ ಯೆಹೋವನ ಆರಾಧಕರು ತೋರಿಸ್ತಿದ್ದಾರೆ. ನೀವು ಪ್ರೀತಿಯಿಂದ ಕೊಟ್ಟಿರೋ ಕಾಣಿಕೆಗಳಿಂದ ಬೇರೆ ಸಹೋದರ ಸಹೋದರಿಯರಿಗೆ ಸಹಾಯ ಆಗಿದೆ. ಅದ್ರ ಬಗ್ಗೆ jw.orgನಲ್ಲಿ ಬರೋ “ನೀವು ಕೊಡೋ ಕಾಣಿಕೆಗಳಿಂದ ಆಗುವ ಪ್ರಯೋಜನಗಳು” ಅನ್ನೋ ಸರಣಿ ಲೇಖನಗಳಲ್ಲಿ ಇದೆ. ನೀವು ಉದಾರವಾಗಿ ಕೊಟ್ಟ ಕಾಣಿಕೆಗಳಿಗೆ ತುಂಬ ಧನ್ಯವಾದ!
‘ನಿಮಗೋಸ್ಕರ ಯಾವಾಗ್ಲೂ ದೇವರಿಗೆ ಧನ್ಯವಾದ ಹೇಳ್ತೀವಿ’ ಅನ್ನೋ ವಿಡಿಯೋ ನೋಡಿ. ನಂತರ ಈ ಪ್ರಶ್ನೆಗಳಿಗೆ ಉತ್ತರ ಕೊಡಿ:
• ನಾವು ಕೊಡೋ ಕಾಣಿಕೆಗಳಿಂದ ಹೇಗೆಲ್ಲಾ ಸಹಾಯ ಆಗ್ತಿದೆ?
• ಕಷ್ಟದಲ್ಲಿರೋ ಸಹೋದರ ಸಹೋದರಿಯರಿಗೆ ನಾವು ಹೇಗೆ ಸಹಾಯ ಮಾಡಬಹುದು?—jw.orgನಲ್ಲಿ “ಸಮೃದ್ಧಿ ಕೊರತೆಯನ್ನ ನೀಗಿಸಿತು” ಅನ್ನೋ ಲೇಖನವನ್ನೂ ನೋಡಿ