ಪ್ರತಿಯೊಂದು ಸಂದರ್ಭದಲ್ಲಿ ಪತ್ರಿಕೆಗಳನ್ನು ನೀಡಿರಿ
1 ನೂರು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ವಾಚ್ಟವರ್ ರಾಜ್ಯ ಸತ್ಯದ ಪರವಾಗಿ ಕಾರ್ಯ ನಡಿಸುತ್ತಿದೆ. ಖಡ್ಗದೋಪಾದಿ ಅದು ದೇವರ ವಾಕ್ಯವನ್ನು ಕುಶಲತೆಯಿಂದ ಬಳಸಿ ಮಿಥ್ಯೆಗಳನ್ನು ಛೇದಿಸಿದೆ ಮತ್ತು ಸುಳ್ಳು ಧರ್ಮ ಭೋದನೆಗಳನ್ನು ಬಯಲು ಮಾಡಿದೆ. ಅದರ ಜೊತೆ ಪತ್ರಿಕೆಯಾದ ಎವೇಕ್ ಸಹಾ ಸತ್ಯದ ಪರವಾಗಿ ಕಾರ್ಯ ನಡಿಸುತ್ತಿದೆ. ಸೊಸೈಟಿಯ ಬೇರೆ ಪ್ರಕಾಶನಗಳಲ್ಲಿ ಕಂಡುಬರುವ ಗಹನವಾದ ಬೈಬಲ್ ಸಮಾಚಾರದಿಂದ ಅದು ನೀತಿಪರರಾದ ಜನರ ಆಸಕ್ತಿಯನ್ನು ಚೇತರಿಸಿದೆ. ಈ ಪತ್ರಿಕೆಯನ್ನು ಹೆಚ್ಚು ಜನರಿಗೆ ತಲಪಿಸುವಂತೆ ನಾವೇನು ಮಾಡಬೇಕು?
2 ಮೊದಲ ಹೆಜ್ಜೆಯು ಪತ್ರಿಕೆಗಳಲ್ಲಿರುವ ವಿಷಯಗಳ ಪರಿಚಯವೇ. ಇದಕ್ಕಾಗಿ ಪತ್ರಿಕೆಗಳು ಬಂದೊಡನೇ ನಾವದನ್ನು ಓದಬೇಕು. ಸಭೆಯವರೊಂದಿಗೆ ಆ ಲೇಖನಗಳ ಕುರಿತು ಮಾತಾಡಬೇಕು. ಇದು ನಮಗೆ ಪತ್ರಿಕೆಗಳನ್ನು ಜನರಿಗೆ ಉತ್ಸಾಹದಿಂದ ನೀಡುವಂತೆ ಮತ್ತು ಅದರ ಮಾಲ್ಯತೆಯ ವಿಷಯದಲ್ಲಿ ಖಂಡಿತಭಾವವನ್ನು ಕಾಪಾಡುವಂತೆ ಸಹಾಯ ಮಾಡುವದು.
3 ಮುಂದಿನ ಹೆಜ್ಜೆಯು ಯಾವುದೆಂದರೆ ಪತ್ರಿಕೆಗಳನ್ನು ಜನರಿಗೆ ನೀಡುವದಕ್ಕಾಗಿ ಪ್ರತಿವಾರ ಸಮಯವನ್ನು ಬದಿಗಿಡುವದೇ. ಇದನ್ನು ನಿಮ್ಮ ಚಟುವಟಿಕೆಯ ಕ್ರಮದ ವೇಳಾ ಪತ್ರದ ಭಾಗವಾಗಿ ಮಾಡಿರಿ. ಪತ್ರಿಕೆಗಳನ್ನು ನೀಡಲು ಇರುವ ಇತರ ಸಂದರ್ಭಗಳಿಗಾಗಿ ನೀವು ಎಚ್ಚರಿತರೋ?
ಜನರೊಂದಿಗೆ ಮಾತಾಡಿರಿ
4 ಮನೆಮನೆಯ ಪತ್ರಿಕಾ ಸೇವೆಯಲ್ಲಿ ಹೆಚ್ಚಿನ ಜನರು ಮನೆಯಲ್ಲಿ ಇರದ್ದನ್ನು ನೀವು ಕಾಣಬಹುದು. ಆದರೆ ಎಲ್ಲಿ ಜನರು ಸಿಗುತ್ತಾರೋ ಅಲ್ಲಿ ನಾವು ಮಾತಾಡ ಸಾಧ್ಯವಿದೆ. ದಾರಿಯಲ್ಲಿ ನಡಿಯುವ ಜನರನ್ನು ಗೋಚರಿಸಿರಿ. ಗಾಡಿಗಳಲ್ಲಿ ಕೂತಿರುವವರನ್ನು, ವಟಾರದಲ್ಲಿ ಕೆಲ್ಸಮಾಡುವವರನ್ನು, ಸಾರ್ವಜನಿಕ ವಾಹನಗಳಿಗಾಗಿ ಕಾದಿರುವವರನ್ನು ಮಾತಾಡಿಸಿರಿ. ನಿರ್ದಿಷ್ಟ ಲೇಖನಕ್ಕೆ ಸೂಚಿಸಿ, ಆಸಕ್ತಿಯ ಅಂಶವನ್ನು ತಿಳಿಸಿರಿ. ಅವರ ಆಸಕ್ತಿಯನ್ನು ಚೇತರಿಸಲು ಉತ್ತಮ ಚಿತ್ರಗಳ ಮತ್ತು ದೃಷ್ಟಾಂತಗಳ ಉಪಯೋಗ ಮಾಡಿರಿ. ಜನರೊಂದಿಗೆ ಬೆಚ್ಚಗಾಗಿ, ಸ್ನೇಹದಿಂದ, ಖಂಡಿತಭಾವದಿಂದ ಮಾತಾಡಿರಿ. ಪತ್ರಿಕೆಗಳನ್ನು ಓದಿದಾಗ ಹೆಕ್ಕಿ ತೆಗೆದ ನಿಶ್ಚಿತ ವಿಚಾರಗಳನ್ನು ಪ್ರಾಮಾಣೆಕತೆಯಿಂದ ನೀಡಿರಿ.
5 ಈ ಸಲಹೆಗಳು ವ್ಯಾಪಾರ ಕ್ಷೇತ್ರಗಳಲ್ಲಿ ಸಹಾ ಸಹಾಯಕಾರಿಯು. ವ್ಯಾಪಾರಿಗಳು ತಮ್ಮ ಗಿರಾಕಿಗಳೊಂದಿಗೆ ಮಗ್ನರಿರದ ಸಮಯದ ಸದುಪಯೋಗ ಮಾಡಿರಿ. ಕ್ರಮದ ಮನೆಮನೆ ಸೇವೆಗಿಂತ ವ್ಯಾಪಾರಿ ಕ್ಷೇತ್ರಗಳಲ್ಲಿ ಪತ್ರಿಕೆಗಳನ್ನು ಸುಲಭವಾಗಿ ಅನೇಕ ಪ್ರಚಾರಕರು ನೀಡಶಕ್ತರಾಗಿದ್ದಾರೆ.
6 ಪತ್ರಿಕಾ ಮಾರ್ಗಗಳನ್ನು ವಿಕಾಸಿಸುವದನ್ನು ನೀವು ಪ್ರಯತ್ನಿಸಿದ್ದೀರೋ? ಮನೆ ಅಥವಾ ಅಂಗಡಿಗಳಲ್ಲಿ ಪತ್ರಿಕೆ ನೀಡುವಾಗ, ನೀವು ಮುಂದಿನ ಸಂಚಿಕೆಗಳೊಂದಿಗೆ ಪುನ: ಬರಲಿಚ್ಚಿಸುವಿರೆಂದು ಅವರಿಗೆ ತಿಳಿಸಿಬಿಡಿರಿ. ಈ ವೈಯಕ್ತಿಕ ಎರ್ಪಾಡನ್ನು ಬಹಳಷ್ಟು ಜನರು ಮೆಚ್ಚುವರೆಂಬದಕ್ಕೆ ಸಂದೇಹವಿಲ್ಲ. ಪ್ರತಿ ಸಾರಿ ನೀವು ಹಿಂದಿರುಗಿ ಬಂದು ಜನರೊಂದಿಗೆ ಮಾತಾಡುವಾಗ ಅಥವಾ ಪತ್ರಿಕೆ ನೀಡುವಾಗ, ಒಂದು ಪುನರ್ಭೇಟಿಯನ್ನು ನಾವು ಲೆಕ್ಕಿಸಬಹುದೆಂದು ನೆನಪಿಡಿರಿ.
7 ಸಂಜಾವೇಳೆಯ ಸಾಕ್ಷಿ, ಸಂಬಂಧಿಕರೊಂದಿಗೆ ಮಾತಾಡುವಿಕೆ, ಪ್ರಯಾಣ ಅಥವಾ ಶಾಪಿಂಗ್ ಮುಂತಾದ ಬೇರೆ ಸಂಧಿಗಳನ್ನೂ ನೀವು ಹುಡುಕಬಹುದು. ಈ ಎಲ್ಲಾ ಸಲಹೆಗಳನ್ನು ಪಾಲಿಸುವ ಮೂಲಕ ಅನೇಕರು ನಮ್ಮ ಬೈಬಲ್ ಸಾಹಿತ್ಯದ ವಾಚಕರಾಗುವಂತೆ ಮತ್ತು ಕೊನೆಗೆ ಯೆಹೋವನ ಸ್ತುತಿಗಾರರಾಗುವಂತೆ ಶಕ್ಯವಾಗಬಹುದು.