ಕೂಟಗಳನ್ನು ಪ್ರಯೋಜನಕರವಾಗಿ ಮಾಡುವದರಲ್ಲಿ ನಿಮ್ಮ ಪಾಲು
1 ಯೆಹೋವನ ಒಳ್ಳೇ ಪರಿಚಯ ಮಾಡಿಸಲು ಕೂಟಗಳು ನಮಗೆ ಸಹಾಯ ಮಾಡುತ್ತವೆ. ಆತನ ನಿಯಮ ಮತ್ತು ತತ್ವಗಳನ್ನು ತಿಳುಕೊಳ್ಳಲು ಅವು ನೆರವಾಗಿ, ಅದಕ್ಕನುಸಾರ ಜೀವನ ನಡಿಸುವಂತೆ ಪ್ರೋತ್ಸಾಹಿಸುತ್ತವೆ. ದೇವರ ಹೊಸ ಲೋಕದಲ್ಲಿ ನಿತ್ಯಜೀವ ಪಡೆಯುವ ನಮ್ಮ ಗುರಿಮುಟ್ಟಲು ಅವು ನೆರವಾಗುತ್ತವೆ. ಕೂಟಗಳನ್ನು ಪ್ರಯೋಜನಕರವಾಗಿ ಮಾಡುವದರಲ್ಲಿ ನಾವು : ನಮ್ಮ ಪಾಲನ್ನು ಮಾಡುವಲ್ಲಿ, ಕೂಟಗಳಲ್ಲಿ ನಾವು ಕಳೆಯುವ ತಾಸುಗಳು ನಮಗೆ ಅತ್ಯಂತ ಲಾಭಕರವಾಗಬಲ್ಲವು.
2 ಕೂಟಗಳನ್ನು ಪ್ರಯೋಜನಕರವಾಗಿ ಮಾಡುವ ಮೂರು ಕೀಲಿಕೈ—ತಯಾರಿಸುವಿಕೆ, ಭಾಗವಹಿಸುವಿಕೆ ಮತ್ತು ವ್ಯಾವಹಾರ್ಯ ಅನ್ವಯಿಸುವಿಕೆ ಆಗಿವೆ. ಇವು ಒಂದಕ್ಕೊಂದು ಸಂಬಂಧಿಸಿವೆ. ಒಳ್ಳೇ ತಯಾರಿಯು, ಭಾಗವಹಿಸುವಿಕೆಯನ್ನು ಸುಲಭವೂ ಆನಂದಕರವೂ ಆಗಿ ಮಾಡುತ್ತದೆ. ಸಂತೋಷದ, ಉತ್ಸಾಹಭರಿತ ನಂಬಿಕೆಯ ಉತ್ತರಗಳು ಆಲೈಸುವವರಿಗೆ ಉತ್ತೇಜನ ಮತ್ತು ಪ್ರಚೋದನೆಯನ್ನು ಕೊಡುತ್ತವೆ. (ಎಫೆ. 4:29) ಕೂಟಗಳಲ್ಲಿ ನೀಡಲಾದ ವಿಷಯಗಳು ಎಲ್ಲರಿಗೆ ಅರ್ಥವಾಗುವುದಾದರೆ ಮತ್ತು ಅವನ್ನು ತಮ್ಮ ಸ್ವಂತ ಜೀವನದಲ್ಲಿ ಮತ್ತು ಇತರರನ್ನು ಶಿಷ್ಯರಾಗಿ ಮಾಡುವದರಲ್ಲಿ ಹೇಗೆ ವ್ಯಾವಹಾರ್ಯವಾಗಿ ಪ್ರಯೋಗಿಸಬಹುದೆಂದು ತಿಳಿಯುವುದಾದರೆ, ಅವರದನ್ನು ಕಾರ್ಯರೂಪಕ್ಕೆ ಹಾಕುವ ಹೆಚ್ಚು ಸಂಭಾವ್ಯತೆ ಇದೆ.
ಕಾವಲಿನಬುರುಜು ಮತ್ತು ಸಭಾಪುಸ್ತಕಭ್ಯಾಸಗಳು
3 ಕಾವಲಿನಬುರುಜು ಅಭ್ಯಾಸ ಮತ್ತು ಸಭಾಪುಸ್ತಕಭ್ಯಾಸಗಳು ಅತ್ಯಂತ ಮಹತ್ವದ ಕೂಟಗಳು ಯಾಕೆಂದರೆ ಅವುಗಳ ಮೂಲಕ “ನಂಬಿಗಸ್ತನೂ ವಿವೇಕಿಯೂ ಆದ ಆಳು” ನಂಬಿಕೆಯ ಮನೆವಾರ್ತೆಯನ್ನು ಉಣಿಸುತ್ತಿದ್ದಾನೆ. ಅಲ್ಲಿ ಅಭ್ಯಸಿಸಲಾಗುವ ಸಮಾಚಾರವನ್ನು ಅಧ್ಯಯನ ಮಾಡಲು ನೀವು ಸಮಯವನ್ನು ಬದಿಗಿರಿಸುತ್ತೀರೋ? ಕೂಟಗಳಲ್ಲಿ ಉತ್ತರಕೊಡಲು ನೀವು ತಯಾರಿದ್ದೀರೋ? ಈ ವಿಷಯದಲ್ಲಿ ನೀವು ಮುಖ್ಯ ಪಾತ್ರವಹಿಸುವಿರೆಂಬದು ನಿಸ್ಸಂಶಯ.
4 ಕಾವಲಿನಬುರುಜು ಅಭ್ಯಾಸದ ಮತ್ತು ಸಭಾ ಪುಸ್ತಕಭ್ಯಾಸದ ಸಮಾಚಾರವನ್ನು ನೀವು ಜಾಗ್ರತೆಯಿಂದ ಅಭ್ಯಾಸ ಮಾಡಿದ್ದಲ್ಲಿ, ಕೊಡುವುದರಲ್ಲಿರುವ ಮಹಾ ಸಂತೋಷದಲ್ಲಿ ಪಾಲಿಗರಾಗಲು ಸಿದ್ಧರಿರುವಿರಿ. (ಅಪೋ. 20:35) ಮುಖ್ಯ ಶಬ್ದಗಳಿಗೆ ಅಡಿಗೆರೆ ಹಾಕುವುದು ಅನೇಕರಿಗೆ ಸಹಾಯಕಾರಿ ಕಂಡಿದೆ. ಉದ್ಧರಿಸಲ್ಪಡದ ವಚನಗಳನ್ನು ತೆರೆದು ಓದುವದರಿಂದ ಮತ್ತು ಅನ್ವಯಿಸುವುದರಿಂದ, ನಿಮ್ಮ ಉತ್ತರಗಳಿಗಿರುವ ಶಾಸ್ತ್ರೀಯ ಆಧಾರದ ತಿಳುವಳಿಕೆಯನ್ನು ನೀವು ಹೊಂದುವಿರಿ. ನೀವೀಗ ನಿಮ್ಮ ಸ್ವಂತ ಮಾತಿನಲ್ಲಿ ಉತ್ತರಕೊಡುತ್ತೀರೋ, ಅಥವಾ ಉತ್ತರಗಳನ್ನು ಓದಿಯೇ ಹೇಳಬೇಕೋ? ದೇವಪ್ರಭುತ್ವ ಅಧ್ಯಯನದ ಮುಖ್ಯ ಹೇತುವು ಏನಂದರೆ ಸಮಾಚಾರವನ್ನು ನಮ್ಮದಾಗಿ ಮಾಡಿ, ಹೃದಯ ಗಣ್ಯತೆ ಮತ್ತು ತಿಳುವಳಿಕೆಯಿಂದ ಅದರ ಮೇಲೆ ಕ್ರಿಯೆನಡಿಸುವುದೇ.—ಜ್ಞಾನೋ. 2:5; 4:7, 8.
ದೇವಪ್ರಭುತ್ವ ಶುಶ್ರೂಷೆ ಶಾಲೆ ಮತ್ತು ಸೇವಾಕೂಟ
5 ಶಾಲೆಯಲ್ಲಿ ನಿಮ್ಮ ವಿದ್ಯಾರ್ಥಿ ಭಾಷಣಗಳನ್ನು ಯೆಹೋವನಿಂದ ಬಂದ ನೇಮಕಗಳಾಗಿ ನೋಡುತ್ತೀರೋ ಮತ್ತು ನೀವದನ್ನು ತಯಾರಿಸುವ ವಿಧದಲ್ಲಿ ಅದು ಪ್ರತಿಬಿಂಬಿಸುತ್ತದೋ? ಸಮಾಚಾರವು ನಿಮಗೆ ತಿಳಿದಿದೆಯೋ ಮತ್ತು ಅದನ್ನು ಅಪ್ಪೀಲಾಗುವಂತೆ ನೀಡಬಲ್ಲಿರೋ ಎಂದು ಖಾತ್ರಿ ಮಾಡಿಕೊಳ್ಳಿ. ನಿಮಗೆ ಒಂದು ವಿಶಿಷ್ಟ ನೇಮಕವು ಇರದಿದ್ದರೂ ಕೂಡ, ನೇಮಿತ ಬೈಬಲ್ ಅಧ್ಯಾಯಗಳನ್ನು ಮತ್ತು ಇತರ ಸಮಾಚಾರವನ್ನು ಓದುವ ಮೂಲಕ ಪ್ರತಿವಾರ ಅಧ್ಯಯನ ಮಾಡಿರಿ. ಸೇವಾಕೂಟಕ್ಕೂ ಇದೇ ರೀತಿ ಅಭ್ಯಾಸ ಮಾಡಬೇಕು. ಇದು ಸಮಯಕ್ಕೆ ಮುಂಚಿತವಾಗಿ ಮಾಡಲ್ಪಟ್ಟಲ್ಲಿ, ಕೂಟದ ವೇಳೆ ನೀಡಲ್ಪಡುವ ವಿಚಾರದ ಮೇಲೆ ಕ್ರಿಯಾಶೀಲರಾಗಿ ನೀವು ಯೋಚಿಸಬಲ್ಲಿರಿ, ಅಲ್ಲಿ ಮೊತ್ತಮೊದಲಾಗಿ ಸಮಾಚಾರವನ್ನು ಪರಿಚಯಿಸಿಕೊಳ್ಳಲು ಒದ್ದಾಡುಏಕೆ ಇರಲಾರದು.
6 ಸೇವಾಕೂಟದ ದೃಶ್ಯಗಳು ಮತ್ತು ವಿದ್ಯಾರ್ಥಿ ಭಾಷಣದ ಹಿನ್ನೆಲೆಗಳು ವಾಸ್ತವಿಕವೂ, ಎಲ್ಲರೂ ಸಂಬಂಧ ಕಲ್ಪಿಸಿಕೊಳ್ಳಬಲ್ಲ ಸ್ಥಳಿಕ ಪರಿಸ್ಥಿತಿಗಳನ್ನು ಪ್ರತಿಬಿಂಬಿಸುವುಗಳೂ ಆಗಿರಬೇಕು. ನಿಮ್ಮ ಭಾಗವನ್ನು ಚೆನ್ನಾಗಿ ರಿಹರ್ಸ್ ಮಾಡಿರಿ. ಅದಲ್ಲದೆ, ನಿಮ್ಮ ಉಡುಪು ಇತರರಿಗೆ ಒಳ್ಳೆಯ ಮಾದರಿಯಾಗಿರುವಂತೆ ಯಥಾಯೋಗ್ಯ ಬಟ್ಟೆ ಧರಿಸಿರಿ.
7 ಚೆನ್ನಾಗಿ ತಯಾರಿಸಿದ ಭಾಗವನ್ನು ಉತ್ಸಾಹದಿಂದ ನೀಡುವ ಗುರಿಯಿಡಿರಿ. ಹೆತ್ತವರೇ, ನಿಮ್ಮ ಮಕ್ಕಳು ತಯಾರಿಸುವಂತೆ ಮತ್ತು ಸಂದರ್ಭ ದೊರೆತಾಗ ತಮ್ಮ ಸ್ವಂತ ಮಾತುಗಳಲ್ಲಿ ಉತ್ತರಿಸುವಂತೆ ಸಹಾಯ ಕೊಡಿರಿ. ನಿಶ್ಚಯವಾಗಿ, ಎಲ್ಲರೂ ಸಮಯಕ್ಕೆ ಸರಿಯಾಗಿ ಬಂದು, ಅದರಲ್ಲಿ ಭಾಗವಹಿಸುವುದನ್ನು ತಮ್ಮ ವೈಯಕ್ತಿಕ ಗಮನವಾಗಿ ಮಾಡಿದ್ದಲ್ಲಿ, ನಮ್ಮ ಕೂಟಗಳು ಮಹತ್ತಾದ ಪ್ರೇರಕ ಸಮಾಚಾರದಿಂದ ಕೂಡಿದ್ದಾಗಿ ಸಭಿಕರ ಲಕ್ಷ್ಯವನ್ನು ಸೆಳೆದು ಹಿಡಿಯುವದು. ಈ ವಿಷಯದಲ್ಲಿ, ನಿಮ್ಮೊಂದಿಗೆ ಕೂಡಿಬರುವವರ “ಭಕ್ತಿವೃದ್ಧಿಗಾಗಿ” ನೀವು ನಿಮ್ಮ ಪಾಲನ್ನು ಮಾಡುವಿರೋ?—1ಕೊರಿ. 14:26.