ಸೇವಾ ಕೂಟಕ್ಕೆ ತಯಾರಿಸುವ ವಿಧ
1ಫಲಕಾರಿ ಶುಶ್ರೂಷೆಗೆ ನಮ್ಮನ್ನು ಸಿದ್ಧಗೊಳಿಸಲಿಕ್ಕಾಗಿ ಸೇವಾ ಕೂಟವನ್ನು ರಚಿಸಲಾಗಿದೆ. ಈ ಕೂಟದಲ್ಲಿ ಮುಖ್ಯವಾಗಿ ರಾಜ್ಯ ಸುವಾರ್ತೆಯನ್ನು ಸಾರುವ, ಶಿಷ್ಯರನ್ನಾಗಿ ಮಾಡುವ, ಬರಲಿರುವ ದೈವಿಕ ನ್ಯಾಯತೀರ್ಪಿನ ಕುರಿತು ಪ್ರಕಟಿಸುವ ವಿಷಯಗಳನ್ನು ಚರ್ಚಿಸಲಾಗುತ್ತದೆ. (ಮತ್ತಾ. 28:19, 20; ಮಾರ್ಕ 13:10; 2ಪೇತ್ರ 3:7) ಈ ಪ್ರಾಮುಖ್ಯ ಕೂಟದಿಂದ ನಾವು ಹೆಚ್ಚು ಪ್ರಯೋಜನ ಪಡೆಯಬೇಕಾದರೆ ಉತ್ತಮವಾಗಿ ತಯಾರಿಸಬೇಕು ಮತ್ತು ಅದರಲ್ಲಿ ಭಾಗವಹಿಸಬೇಕು.
2ಭಾಷಣ: ಭಾಷಣಕ್ಕಾಗಿ ಮೂಲ ಮಾಹಿತಿಯು ಸಾಮಾನ್ಯವಾಗಿ ಭಾಷಣಕರ್ತನಿಗೆ ಕೊಡಲಾದ ನಿರ್ದೇಶನಗಳಲ್ಲಿ ಇರುತ್ತದೆ. ಕೊಟ್ಟಿರುವ ಶಾಸ್ತ್ರವಚನಗಳೂ ಸೇರಿದಂತೆ ನೀವೂ ಆ ನೇಮಿತ ಮಾಹಿತಿಯನ್ನು ಓದಿ, ಶುಶ್ರೂಷೆಯಲ್ಲಿ ಅದನ್ನು ಹೇಗೆ ಉಪಯೋಗಿಸುವುದೆಂದು ಆಲೋಚಿಸಬಹುದು.
3ಪ್ರಶ್ನೋತ್ತರ ಚರ್ಚೆ: ಈ ಭಾಗವನ್ನು ಬಹುಮಟ್ಟಿಗೆ ಕಾವಲಿನಬುರುಜು ಅಧ್ಯಯನದಂತೆ ನಡೆಸಲಾಗುತ್ತದೆ. ಅದರಲ್ಲಿ ಸಂಕ್ಷಿಪ್ತ ಪೀಠಿಕೆ ಮತ್ತು ಸಮಾಪ್ತಿ ಇರುತ್ತವೆ. ಪ್ರತಿ ಪ್ಯಾರದಲ್ಲಿ ಮುಖ್ಯ ಅಂಶಗಳಿಗೆ ಅಡಿಗೆರೆ ಹಾಕಿರಿ ಮತ್ತು ಅರ್ಥಭರಿತ ಉತ್ತರಗಳನ್ನು ನೀಡಲು ತಯಾರಿಸಿರಿ.
4ಸಭಿಕರೊಂದಿಗೆ ಚರ್ಚೆ: ಈ ಭಾಗವನ್ನು ಭಾಷಣವಾಗಿ ಮತ್ತು ಸಭಿಕರೊಂದಿಗಿನ ಚರ್ಚೆಯಾಗಿ ನಡೆಸಲಾಗುತ್ತದೆ. ನೀವು ಮುಖ್ಯ ವಿಷಯಗಳಿಗೆ ಅಡಿಗೆರೆ ಹಾಕಿ, ಕೊಡಲಾದ ಶಾಸ್ತ್ರವಚನಗಳನ್ನು ಓದಿ ಬರುವುದಾದರೆ ಪ್ರಶ್ನೆಗಳನ್ನು ಕೇಳುವಾಗ ಉತ್ತರಿಸಶಕ್ತರಾಗುವಿರಿ. ಈ ಭಾಗವನ್ನು ನಿರ್ವಹಿಸುವ ಸಹೋದರನು ಮುಖ್ಯ ವಿಷಯಗಳನ್ನು ಚರ್ಚಿಸುವಾಗ ಸಭಿಕರನ್ನು ಒಳಗೂಡಿಸಲು ಆದಷ್ಟು ಪ್ರಯತ್ನಿಸುವನು.
5ಪ್ರತ್ಯಕ್ಷಾಭಿನಯಗಳು: ಸೇವಾ ಕೂಟದ ಕೆಲವು ಭಾಗಗಳಲ್ಲಿ ಪ್ರಾಯೋಗಿಕ ಪ್ರತ್ಯಕ್ಷಾಭಿನಯಗಳೂ ಇರುತ್ತವೆ. ಚರ್ಚಿಸುವ ಮಾಹಿತಿಯನ್ನು ನಮ್ಮ ಟೆರಿಟೊರಿಯಲ್ಲಿ ಹೇಗೆ ಉಪಯೋಗಿಸಬಹುದೆಂದು ಅದರಲ್ಲಿ ತೋರಿಸಲಾಗುತ್ತದೆ. ಹಿರಿಯರು, ನುರಿತ ಪ್ರಚಾರಕರು ಅಥವಾ ಪಯನೀಯರರು ಈ ಅಭಿನಯಗಳನ್ನು ಮಾಡುವರು. ಅದನ್ನು ಹೇಗೆ ಪ್ರಸ್ತುತಪಡಿಸುವರೆಂದು ಯೋಚಿಸುವುದೇ ಈ ಭಾಗಕ್ಕಾಗಿ ನೀವು ಮಾಡುವ ತಯಾರಿ. ಒಂದು ಮಾದರಿ ಪ್ರತ್ಯಕ್ಷಾಭಿನಯವು ನೀಡಲ್ಪಡುವಾಗ, ವೈಯಕ್ತಿಕವಾಗಿ ನೀವದನ್ನು ಹೇಗೆ ಅನ್ವಯಿಸುವಿರಿ ಮತ್ತು ವಿವಿಧ ಮನೆಯವರಿಗೆ ಹೇಗೆ ಹೊಂದಿಸಿಕೊಳ್ಳುವಿರಿ ಎಂದು ಯೋಚಿಸಿರಿ. ಪ್ರತ್ಯಕ್ಷಾಭಿನಯದಲ್ಲಿ ಬಳಸಲಾಗುವ ಪ್ರಕಾಶನ ಅಥವಾ ಪತ್ರಿಕೆಗಳನ್ನು ಕೂಟಕ್ಕೆ ತರಲು ಮರೆಯದಿರಿ. ನಿಮ್ಮ ಕುಟುಂಬ ಆರಾಧನೆಯ ಸಂಜೆಯಲ್ಲಿ ಈ ಕೆಲವು ನಿರೂಪಣೆಗಳನ್ನು ಪ್ರ್ಯಾಕ್ಟಿಸ್ ಮಾಡುವುದರಿಂದಲೂ ಪ್ರಯೋಜನವಿದೆ.
6ಪ್ರತಿಯೊಂದು ಭಾಗವನ್ನು ತಯಾರಿಸುವಲ್ಲಿ ಮತ್ತು ಆ ಬಗ್ಗೆ ಕೂಟಕ್ಕೆ ಮುಂಚಿತವಾಗಿ ಯೋಚಿಸುವಲ್ಲಿ ಸೇವಾ ಕೂಟವನ್ನು ಹೆಚ್ಚು ಆನಂದಿಸಬಹುದು. ಹಾಗೆ ಮಾಡುವುದರಿಂದ ನಾವು ಪರಸ್ಪರ ಉತ್ತೇಜನವನ್ನು ವಿನಿಮಯ ಮಾಡಿಕೊಳ್ಳುತ್ತೇವೆ. (ರೋಮ. 1:11, 12) ಸೇವಾ ಕೂಟಕ್ಕೆ ತಯಾರಿಸಲು ಸಮಯ ಕೊಡುವುದಾದರೆ ನಾವು ನಮ್ಮ ಸಾರುವ ನೇಮಕವನ್ನು ಪೂರೈಸಲು ಇನ್ನೂ ಹೆಚ್ಚು ಸನ್ನದ್ಧರಾಗುವೆವು.—2 ತಿಮೊ. 3:17.
[ಅಧ್ಯಯನ ಪ್ರಶ್ನೆಗಳು]
1. ಸೇವಾ ಕೂಟದ ಉದ್ದೇಶವೇನು ಮತ್ತು ನಾವು ಹೇಗೆ ಅದರಿಂದ ಹೆಚ್ಚು ಪ್ರಯೋಜನ ಪಡೆಯಬಹುದು?
2. ಭಾಷಣಕ್ಕೆ ಕಿವಿಗೊಡಲು ನಾವು ಹೇಗೆ ತಯಾರಿಸಬಹುದು?
3. ಪ್ರಶ್ನೋತ್ತರ ಚರ್ಚೆಗೆ ನಾವು ತಯಾರಿಸುವಾಗ ಏನು ಮಾಡಬಹುದು?
4. ಸಭಿಕರೊಂದಿಗೆ ಚರ್ಚೆಗಾಗಿ ನಾವು ಹೇಗೆ ತಯಾರಿಸಬಹುದು?
5. ಪ್ರತ್ಯಕ್ಷಾಭಿನಯಗಳಿಂದ ನಾವು ಹೆಚ್ಚು ಪ್ರಯೋಜನ ಹೊಂದಬೇಕಾದರೆ ಏನು ಮಾಡತಕ್ಕದ್ದು?
6. ಸೇವಾ ಕೂಟಕ್ಕಾಗಿ ತಯಾರಿಸಲು ನಮಗಿರುವ ಕೆಲವು ಕಾರಣಗಳು ಯಾವುವು?