ಪ್ರಶ್ನಾ ಪೆಟ್ಟಿಗೆ
● ಬ್ರೂಕ್‌ಲಿನ್ ಬೆತೆಲ್, ವಾಚ್‌ಟವರ್ ಫಾರ್ಮ್ ಮತ್ತು ಲೋಕದಲ್ಲೆಲ್ಲೂ ಇರುವ ಎಲ್ಲಾ ಬ್ರಾಂಚ್ ಸೌಕರ್ಯಗಳನ್ನು ಸಂದರ್ಶಿಸುವಾಗ ನಮ್ಮ ಉಡುಪು ಮತ್ತು ನೀಟುತನಕ್ಕೆ ನಾವು ವಿಶೇಷ ಗಮನವನ್ನು ಏಕೆ ಕೊಡಬೇಕು?
ಕ್ರೈಸ್ತರು ಯೋಗ್ಯ ಸಭ್ಯಾಚಾರವನ್ನು ಕಾಪಾಡಿಕೊಳ್ಳುವಂತೆ ನಿರೀಕ್ಷಿಸಲಾಗುತ್ತದೆ. ನಮ್ಮ ಉಡುಪು ಮತ್ತು ನೀಟುತನವು ಯೆಹೋವ ದೇವರ ಸೇವಕರಿಗೆ ಒಪ್ಪುವ ಸಭ್ಯತೆ ಮತ್ತು ಗಾಂಭೀರ್ಯವನ್ನು ಪ್ರತಿಬಿಂಬಿಸಬೇಕು. ಇದು ವಿಶೇಷವಾಗಿ ಬ್ರೂಕ್‌ಲಿನ್ ಬೆತೆಲ್, ವಾಚ್‌ಟವರ್ ಫಾರ್ಮ್ ಮತ್ತು ಭೂಸುತ್ತಲಿರುವ ಸೊಸೈಟಿಯ ಬ್ರಾಂಚ್ ಆಫೀಸುಗಳನ್ನು ಮತ್ತು ಸೌಕರ್ಯಗಳನ್ನು ಸಂದರ್ಶಿಸುವಾಗ ಸತ್ಯವಾಗಿದೆ. ಯೋಗ್ಯ ಉಡುಪು ಮತ್ತು ನೀಟುತನದ ಮಹತ್ವವನ್ನು ಚರ್ಚಿಸುವಲ್ಲಿ, ಆರ್ಗನೈಸ್ಡ್ ಟು ಎಕಾಂಪ್ಲಿಶ್ ಅವರ್ ಮಿನಿಷ್ಟ್ರಿ ಪುಸ್ತಕವು, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವಾಗ ಮತ್ತು ಸಭಾಕೂಟಗಳಿಗೆ ಹಾಜರಾಗುವಾಗ ಶಾರೀರಿಕ ಶುದ್ಧತೆ, ಸಭ್ಯ ಉಡುಪು ಮತ್ತು ನೀಟುತನದ ಅಗತ್ಯವನ್ನು ತಿಳಿಸುತ್ತದೆ. ಅನಂತರ, 131ನೇ ಪುಟ 2ನೇ ಪಾರಾದಲ್ಲಿ, ಅದು ಹೇಳುವದು: “ಬ್ರೂಕ್‌ಲಿನ್ ಬೆತೆಲ್ ಮನೆಯನ್ನು ಮತ್ತು ಸೊಸೈಟಿಯ ಯಾವುದೇ ಬ್ರಾಂಚ್ ಆಫೀಸನ್ನು ಸಂದರ್ಶಿಸುವಾಗಲೂ ಇದೇ ನಿಯಮ ಅನ್ವಯಿಸುತ್ತದೆ. ಬೆತೆಲ್ ಎಂಬ ಹೆಸರಿನ ಅರ್ಥ ‘ದೇವರ ಮನೆ’ ಎಂಬದನ್ನು ನೆನಪಿಡಿರಿ. ಆದ್ದರಿಂದ, ನಮ್ಮ ಉಡುಪು, ನೀಟುತನ ಮತ್ತು ನಡತೆಯು ರಾಜ್ಯ ಸಭಾಗೃಹದಲ್ಲಿ ಆರಾಧನೆಗಾಗಿ ಕೂಟಗಳಿಗೆ ಹಾಜರಾಗುವಾಗ ಹೇಗೋ ಹಾಗಿರುವಂತೆ ನಿರೀಕ್ಷಿಸಲಾಗುತ್ತದೆ.”
“ನಾವು ದೇವದೂತರಿಗೂ ಮನುಷ್ಯರಿಗೂ ಅಂತೂ ಜಗತ್ತಿಗೆಲ್ಲಾ ನೋಟ” ವಾಗಿದ್ದೇವೆಂದು ಅಪೊಸ್ತಲ ಪೌಲನು ಹೇಳಿದ್ದಾನೆ. (1 ಕೊರಿ. 4:9) ಆದ್ದರಿಂದ ನಮ್ಮ ಉಡುಪು ಮತ್ತು ನೀಟುತನವು ಯೆಹೋವನ ಸತ್ಯಾರಾಧನೆಯ ಅವರ ನೋಟದ ಮೇಲೆ ಸಕಾರಾತ್ಮಕ ಪ್ರಭಾವವನ್ನು ಹಾಕಬೇಕು. ಆದರೂ, ಕೆಲವು ಸಹೋದರ ಮತ್ತು ಸಹೋದರಿಯರು ಸೊಸೈಟಿಯ ಬ್ರಾಂಚ್ ಆಫೀಸುಗಳನ್ನು ಹಾಜರಾಗುವಾಗ ಅತ್ಯಂತ ಅಕ್ರಮವಾದ ಉಡುಪನ್ನು ಧರಿಸುವದು ಗಮನಕ್ಕೆ ಬಂದಿದೆ. ಬ್ರಾಂಚ್ ಸೌಕರ್ಯಗಳನ್ನು ಸಂದರ್ಶಿಸುವಾಗ ಅಂಥಹ ಉಡುಪು ಯೋಗ್ಯವಾದುದಲ್ಲ. ಈ ವಿಷಯದಲ್ಲಿ, ನಮ್ಮ ಕ್ರೈಸ್ತ ಜೀವಿತದ ಬೇರೆಲ್ಲಾ ವಿಭಾಗಗಳಂತೆಯೇ, ಎಲ್ಲವನ್ನು ದೇವರ ಘನಕ್ಕಾಗಿ ಮಾಡುವ ಮೂಲಕ ಲೋಕದಿಂದ ದೇವಜನರನ್ನು ಪ್ರತ್ಯೇಕಿಸುವ ಅದೇ ಉಚ್ಛ ಮಟ್ಟವನ್ನಿಡಲು ನಾವು ಬಯಸುತ್ತೇವೆ. (ರೋಮಾ. 12:2; 1 ಕೊರಿ. 10:31) ಬ್ರೂಕ್‌ಲಿನ್ ಬೆತೆಲನ್ನು ಅಥವಾ ಸೊಸೈಟಿಯ ಯಾವುದೇ ಬ್ರಾಂಚ್ ಆಫೀಸನ್ನು ಮೊತ್ತಮೊದಲಾಗಿ ಹಾಜರಾಗಬಹುದಾದ ನಮ್ಮ ಬೈಬಲ್ ವಿದ್ಯಾರ್ಥಿಗಳಿಗೆ ಯಾ ಇತರರಿಗೆ ಇದನ್ನು ತಿಳಿಸುವದು ಒಳ್ಳೆಯದು.
ಹೀಗೆ, ಸೊಸೈಟಿಯ ಸೌಕರ್ಯಗಳನ್ನು ಸಂದರ್ಶಿಸುವಾಗ ನಿಮ್ಮನ್ನು ಕೇಳಿಕೊಳ್ಳಿರಿ: ‘ನನ್ನ ಉಡುಪು ಮತ್ತು ನೀಟುತನವು ಸಭ್ಯವಾಗಿದೆಯೋ?’ (ಮೀಕ 6:8) ನಾನು ಆರಾಧಿಸುವ ದೇವರನ್ನು ಅದು ಒಳ್ಳೇದಾಗಿ ಪ್ರತಿಬಿಂಬಿಸುತ್ತದೋ? ನನ್ನ ತೋರಿಕೆಯಿಂದ ಇತರರಿಗೆ ಅಪಕರ್ಶಣೆಯಾಗುವದೋ, ವಿಘ್ನವಾಗುವದೋ? ಮೊದಲಬಾರಿ ಹಾಜರಾಗಬಹುದಾದ ಇತರರಿಗೆ ನಾನು ಯೋಗ್ಯ ಮಾದರಿ ಇಡುತ್ತೇನೋ?’ ನಾವು ಯಾವಾಗಲೂ, ನಮ್ಮ ಉಡುಪು ಮತ್ತು ನೀಟುತನದಿಂದ, “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರು” ವಂತಾಗಲಿ.—ತೀತ 2:10.