ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 3/08 ಪು. 7
  • ಪ್ರಶ್ನಾ ಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ಚೌಕ
  • 2008 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಪ್ರಶ್ನಾ ರೇಖಾಚೌಕ
    1998 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ಪೆಟ್ಟಿಗೆ
    1990 ನಮ್ಮ ರಾಜ್ಯದ ಸೇವೆ
  • ಪ್ರಶ್ನಾ ರೇಖಾಚೌಕ
    2002 ನಮ್ಮ ರಾಜ್ಯದ ಸೇವೆ
  • ನಮ್ಮ ಬಟ್ಟೆ ಮತ್ತು ಹೊರತೋರಿಕೆ ಯಾಕೆ ಮುಖ್ಯ?
    ಎಂದೆಂದೂ ಖುಷಿಯಾಗಿ ಬಾಳೋಣ!—ಹೇಗೆಂದು ದೇವರಿಂದ ಕಲಿಯೋಣ
ಇನ್ನಷ್ಟು
2008 ನಮ್ಮ ರಾಜ್ಯದ ಸೇವೆ
km 3/08 ಪು. 7

ಪ್ರಶ್ನಾ ಚೌಕ

◼ ಯೆಹೋವನ ಸೇವೆಗಾಗಿ ಉಪಯೋಗಿಸಲಾಗುವ ಕಟ್ಟಡ-ಸೌಕರ್ಯಗಳನ್ನು ಸಂದರ್ಶಿಸುವಾಗ ಯಾವ ರೀತಿಯ ಉಡುಪುಗಳನ್ನು ಧರಿಸಿಕೊಳ್ಳುವುದು ಯೋಗ್ಯವಾಗಿರುವುದು?

ಜಗತ್ತಿನಾದ್ಯಂತವಿರುವ ರಾಜ್ಯ ಸಭಾಗೃಹಗಳು, ಸಮ್ಮೇಳನ ಸಭಾಂಗಣಗಳು, ಬೆತೆಲ್‌ ಗೃಹಗಳು ಮತ್ತು ಬ್ರಾಂಚ್‌ ಸೌಕರ್ಯಗಳು ಯೆಹೋವನ ಸೇವೆಗಾಗಿ ಸಮರ್ಪಿಸಲ್ಪಟ್ಟ ಸ್ಥಳಗಳಾಗಿವೆ. ಸರಳವಾದ, ಸ್ವಚ್ಛವಾದ ಮತ್ತು ಒಪ್ಪಓರಣದಿಂದಿರುವ ಆ ಭವ್ಯಸ್ಥಳಗಳು ಘನತೆಯಿಂದ ಕೂಡಿರುತ್ತವೆ. ಇವು ಸಾಮಾನ್ಯವಾಗಿ ನಾವು ಸೈತಾನನ ವ್ಯವಸ್ಥೆಯಲ್ಲಿ ನೋಡುವುದಕ್ಕಿಂತಲೂ ತುಂಬಾ ಭಿನ್ನರೀತಿಯದ್ದಾಗಿವೆ. ಯೆಹೋವನ ಸೇವೆಗಾಗಿ ಉಪಯೋಗಿಸಲಾಗುತ್ತಿರುವ ಇಂಥ ಸ್ಥಳಗಳಿಗೆ ಭೇಟಿ ನೀಡುವವರು ಸಹ ತಾವು ಯೆಹೋವನಿಗೆ ಸೇರಿದವರಾಗಿದ್ದು ಆತನ ಚಿತ್ತವನ್ನು ಮಾಡುವವರು ಎಂಬುದನ್ನು ತೋರಿಸಿಕೊಡಬೇಕು.

ಕ್ರೈಸ್ತರಾದ ನಾವು, ಯೋಗ್ಯ ಹಾಗೂ ಅಚ್ಚುಕಟ್ಟಾದ ಉಡುಪು ಮತ್ತು ಕೇಶಾಲಂಕಾರವನ್ನೂ ಸೇರಿಸಿ ಎಲ್ಲಾ ಸಂಗತಿಗಳಲ್ಲಿ “ದೇವರ ಸೇವಕರೆಂದು ನಮ್ಮನ್ನು ಸಮ್ಮತರಾಗ ಮಾಡಿಕೊಳ್ಳುತ್ತೇವೆ.” (2 ಕೊರಿಂ. 6:3, 4) ಮಾತ್ರವಲ್ಲ, ನಾವು ಸಭ್ಯ ನಡವಳಿಕೆಯನ್ನೂ ಕಾಪಾಡಿಕೊಳ್ಳಬೇಕಾಗಿದೆ. ಆದುದರಿಂದ, ಎಲ್ಲಾ ಸಮಯಗಳಲ್ಲೂ ನಮ್ಮ ಉಡುಪು ಮತ್ತು ಕೇಶಾಲಂಕಾರವು ಯೆಹೋವ ದೇವರ ಸೇವಕರಿಗೆ ಯೋಗ್ಯವಾಗಿರುವ ಗಣ್ಯತೆಯನ್ನೂ ಗೌರವವನ್ನೂ ಪ್ರತಿಫಲಿಸುವಂತಿರಬೇಕು. ಮುಖ್ಯ ಕಾರ್ಯಾಲಯ ಮತ್ತು ಲೋಕದ ನಾನಾ ಭಾಗದಲ್ಲಿರುವ ಬ್ರಾಂಚ್‌ ಸೌಕರ್ಯಗಳನ್ನು ಸಂದರ್ಶಿಸುವಾಗಲಂತೂ ಇದು ತುಂಬಾ ಪ್ರಾಮುಖ್ಯ.

ಯೆಹೋವನ ಚಿತ್ತವನ್ನು ಮಾಡಲು ಸಂಘಟಿತರು ಪುಸ್ತಕವು ಯೋಗ್ಯ ಉಡುಪು ಮತ್ತು ಕೇಶಾಲಂಕಾರದ ಪ್ರಮುಖತೆಯನ್ನು ಚರ್ಚಿಸುವಾಗ, ನಾವು ಕ್ಷೇತ್ರಸೇವೆಯಲ್ಲಿ ತೊಡಗುವ ಹಾಗೂ ಕ್ರೈಸ್ತ ಕೂಟಗಳಿಗೆ ಹಾಜರಾಗುವ ಸಂದರ್ಭಗಳಲ್ಲಿ ಶಾರೀರಿಕವಾಗಿ ಶುದ್ಧರಾಗಿದ್ದು ಸಭ್ಯ ಉಡುಪುಗಳನ್ನು ಧರಿಸಿ ಉತ್ತಮ ಕೇಶಾಲಂಕಾರ ಹೊಂದಿರಬೇಕೆಂದು ತಿಳಿಸುತ್ತದೆ. ಅನಂತರ ಅದು ಪುಟ 138, ಪ್ಯಾರ 3ರಲ್ಲಿ ತಿಳಿಸುವುದು: “ಬೆತೆಲ್‌ ಅಂದರೆ ‘ದೇವರ ಮನೆ’ ಎಂಬುದು ನೆನಪಿರಲಿ. ಆದುದರಿಂದ ನಮ್ಮ ಉಡುಪು, ಶೃಂಗಾರ ಮತ್ತು ನಡತೆಯು, ನಾವು ರಾಜ್ಯ ಸಭಾಗೃಹದಲ್ಲಿ ಆರಾಧನೆಗಾಗಿ ಕೂಟಗಳಿಗೆ ಹೋಗುವಾಗ ನಮ್ಮಿಂದ ಏನು ಅಪೇಕ್ಷಿಸಲ್ಪಡುತ್ತದೊ ಅದಕ್ಕೆ ಅನುಗುಣವಾಗಿರಬೇಕು.” ಈ ಉಚ್ಚ ಮಟ್ಟವನ್ನು ಸ್ಥಳೀಯ ಮತ್ತು ದೂರದ ರಾಜ್ಯ ಪ್ರಚಾರಕರು ಬೆತೆಲನ್ನು ಸಂದರ್ಶಿಸುವಾಗ ಪಾಲಿಸತಕ್ಕದ್ದು. ಈ ಮೂಲಕ ಸಂದರ್ಶಕರು ಯೋಗ್ಯವಾದ ಗಣ್ಯತೆ ಮತ್ತು ಗೌರವವನ್ನು ತೋರಿಸುತ್ತಾರೆ.​—⁠ಕೀರ್ತ. 29:⁠2.

ನಮ್ಮ ಉಡುಪು ‘ದೇವಭಕ್ತರಾಗಿರುವವರಿಗೆ’ ಯೋಗ್ಯವಾಗಿರತಕ್ಕದ್ದು. (1 ತಿಮೊ. 2:10) ನಮ್ಮ ಯೋಗ್ಯ ಉಡುಪು ಮತ್ತು ಕೇಶಾಲಂಕಾರವು ಯೆಹೋವನ ಆರಾಧನೆಯ ಕುರಿತು ಇತರರಿಗಿರುವ ಅಭಿಪ್ರಾಯದ ಮೇಲೆ ಒಳ್ಳೆಯ ಪರಿಣಾಮ ಬಿರುತ್ತದೆ. ಹಾಗಿದ್ದರೂ, ಯೆಹೋವನ ಸೇವೆಗೆ ಉಪಯೋಗಿಸಲಾಗುವ ಸ್ಥಳಗಳನ್ನು ಸಂದರ್ಶಿಸುವ ಕೆಲವು ಸಹೋದರ ಸಹೋದರಿಯರು ತುಂಬಾ ಮಾಮೂಲಾಗಿರುವ, ಅಚ್ಚುಕಟ್ಟಿಲ್ಲದ ಅಥವಾ ಮೈತೋರಿಸುವ ಬಟ್ಟೆಗಳನ್ನು ಹಾಕಿಕೊಂಡು ಬರುವುದನ್ನು ಗಮನಿಸಲಾಗಿದೆ. ಅಂಥ ವಸ್ತ್ರಗಳು ಕ್ರೈಸ್ತರಿಗೆ ಯಾವುದೇ ಸಮಯದಲ್ಲಿಯೂ ಒಪ್ಪುವುದಿಲ್ಲ. ನಮ್ಮ ಕ್ರೈಸ್ತ ಜೀವನದ ಇತರ ಎಲ್ಲಾ ವಿಷಯಗಳಂತೆ ಈ ವಿಷಯದಲ್ಲೂ ದೇವರಿಗೆ ಘನತೆ ತರುವಂಥ ಉಚ್ಚ ಮಟ್ಟಗಳನ್ನು ಕಾಪಾಡಿಕೊಳ್ಳಲು ನಾವು ಬಯಸುತ್ತೇವೆ.​—⁠ರೋಮಾ. 12:2; 1 ಕೊರಿಂ. 10:31.

ಆದುದರಿಂದ, ಪೂರ್ವಯೋಜಿತವಾಗಿಯೋ ರಜಾದಿನಗಳಲ್ಲಿ ಪ್ರಯಾಣಿಸುವಾಗಲೋ ಮುಖ್ಯ ಕಾರ್ಯಾಲಯ ಅಥವಾ ಬೇರೆ ಯಾವುದೇ ಬ್ರಾಂಚ್‌ ಸೌಕರ್ಯವನ್ನು ಸಂದರ್ಶಿಸುವಾಗ ಹೀಗೆ ಕೇಳಿಕೊಳ್ಳಿ: ‘ನನ್ನ ಉಡುಪು ಮತ್ತು ಕೇಶಾಲಂಕಾರವು ನಾನು ಸಂದರ್ಶಿಸಲಿರುವ ಸ್ಥಳದ ಗಾಂಭೀರ್ಯ, ಶುದ್ಧತೆ ಮತ್ತು ಘನತೆಯನ್ನು ಪ್ರತಿಬಿಂಬಿಸುತ್ತದೋ? ಅದು ನಾನು ಆರಾಧಿಸುತ್ತಿರುವ ದೇವರ ಬಗ್ಗೆ ಏನನ್ನು ಸೂಚಿಸುತ್ತದೆ? ನನ್ನ ತೋರಿಕೆಯು ಇತರರನ್ನು ಗೊಂದಲಕ್ಕೀಡುಮಾಡುತ್ತದೋ ಅಥವಾ ಅವರ ಮನಸ್ಸನ್ನು ನೋಯಿಸುತ್ತದೋ?’ ನಮ್ಮ ಉಡುಪು ಮತ್ತು ಕೇಶಾಲಂಕಾರದ ಮೂಲಕ ಸದಾ ‘ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿರೋಣ’!​—⁠ತೀತ 2:⁠10.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ