ಪ್ರಶ್ನಾ ರೇಖಾಚೌಕ
◼ ಬೆತೆಲ್ ಗೃಹಗಳು ಮತ್ತು ಬ್ರಾಂಚ್ ಸೌಕರ್ಯಗಳಿಗೆ ಭೇಟಿ ನೀಡುವಾಗ, ಯಾವ ಮಟ್ಟದ ಉಡುಪು ಮತ್ತು ಕೇಶಶೈಲಿಯನ್ನು ನಾವು ಅನುಸರಿಸಬೇಕು?
ಬೆತೆಲ್ ಸೌಕರ್ಯವನ್ನು ಸುತ್ತಿನೋಡಲು ಅಥವಾ ಬೆತೆಲ್ ಕುಟುಂಬದ ಸದಸ್ಯರನ್ನು ಭೇಟಿಮಾಡಲು ನಾವು ಬೆತೆಲನ್ನು ಸಂದರ್ಶಿಸುವಾಗ, “ನಮ್ಮ ಉಡುಪು, ಸ್ವಚ್ಛ ತೋರಿಕೆ ಮತ್ತು ವರ್ತನೆಗಳು ನಾವು ರಾಜ್ಯ ಸಭಾಗೃಹದಲ್ಲಿ ಕೂಡಿಬರುವಾಗ ಅಪೇಕ್ಷಿಸಲ್ಪಡುವುದಕ್ಕೆ ಸದೃಶವಾಗಿರಬೇಕು.” (om-KA 131) ಆದರೆ, ಬ್ರಾಂಚ್ ಆಫೀಸುಗಳನ್ನು ಸಂದರ್ಶಿಸುವಾಗ, ಕೆಲವು ಸಹೋದರ ಸಹೋದರಿಯರು ತುಂಬ ಮಾಮೂಲಾಗಿರುವ ಉಡುಪುಗಳನ್ನು ಧರಿಸುವುದನ್ನು ಗಮನಿಸಲಾಗಿದೆ. ಈ ಸೌಕರ್ಯಗಳನ್ನು ಸಂದರ್ಶಿಸುವಾಗ ಅಂತಹ ಉಡುಪನ್ನು ಧರಿಸುವುದು ಸೂಕ್ತವಾಗಿರುವುದಿಲ್ಲ. ನಮ್ಮ ತೋರಿಕೆಯು ಆದರ್ಶಪ್ರಾಯವೂ ಸುವ್ಯವಸ್ಥಿತವೂ ಸಭ್ಯವೂ ಆಗಿರತಕ್ಕದ್ದು ಮತ್ತು ಯೆಹೋವ ದೇವರ ಸೇವಕರಿಗೆ ತಕ್ಕದ್ದಾಗಿರುವ ಸಭ್ಯತೆ ಹಾಗೂ ಘನತೆಯನ್ನು ಪ್ರತಿಬಿಂಬಿಸತಕ್ಕದ್ದು.—1 ತಿಮೊ. 2:9, 10, NW.
ಬೆತೆಲ್ ಗೃಹಗಳಿಗೆ ಮತ್ತು ಬ್ರಾಂಚ್ ಸೌಕರ್ಯಗಳಿಗೆ ಭೇಟಿ ನೀಡುವಾಗ ಇದು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಏಕೆಂದರೆ ಇಲ್ಲಿ ಭೇಟಿ ನೀಡುವವರನ್ನು ಸಾಕ್ಷ್ಯೇತರರು ಗಮನಿಸುತ್ತಾರೆ. ಅಂತಹ ಪ್ರೇಕ್ಷಕರು ಏನನ್ನು ನೋಡುತ್ತಾರೊ ಅದರ ಆಧಾರದ ಮೇಲೆ ದೇವಜನರ ಹಾಗೂ ಆತನ ಸಂಸ್ಥೆಯ ಕುರಿತು ಅಭಿಪ್ರಾಯಗಳನ್ನು ಕಲ್ಪಿಸಬಹುದು. ಬೆತೆಲನ್ನು ಸಂದರ್ಶಿಸಲಿರುವ ಬೈಬಲ್ ವಿದ್ಯಾರ್ಥಿಗಳೊಂದಿಗೆ ಮತ್ತು ಇತರರೊಂದಿಗೆ ಮಾತಾಡಿ, ಯೋಗ್ಯವಾದ ಉಡುಪು ಹಾಗೂ ಕೇಶಶೈಲಿಗೆ ಗಮನವನ್ನು ಕೊಡುವ ಮಹತ್ವದ ಕುರಿತಾಗಿ ಜ್ಞಾಪಕಹುಟ್ಟಿಸುವುದು ಒಳ್ಳೇದು. ಹೀಗೆ ನೀವು ಯೋಗ್ಯವಾದ ಉಡುಪು ಮತ್ತು ಕೇಶಶೈಲಿಗೆ ಗಮನವನ್ನು ಕೊಡುತ್ತಿರುವುದಕ್ಕಾಗಿ ಬೆತೆಲ್ ಕುಟುಂಬವು ನಿಮಗೆ ಆಭಾರಿಯಾಗಿರುವುದು.
ಕ್ರೈಸ್ತ ಶುಶ್ರೂಷಕರೋಪಾದಿ, ನಮ್ಮ ತೋರಿಕೆಯು ನಿಂದೆಗೆ ಅವಕಾಶಕೊಡದಂತೆ ನಾವು ಜಾಗರೂಕರಾಗಿರಬೇಕು. (2 ಕೊರಿಂ. 6:3, 4) ಬದಲಾಗಿ, ನಾವು ಯಾವಾಗಲೂ, ನಮ್ಮ ಯೋಗ್ಯವಾದ ನಡತೆ ಮತ್ತು ತೋರಿಕೆಯಿಂದ “ನಮ್ಮ ರಕ್ಷಕನಾದ ದೇವರ ಉಪದೇಶಕ್ಕೆ ಎಲ್ಲಾ ವಿಷಯಗಳಲ್ಲಿ ಅಲಂಕಾರವಾಗಿ”ರೋಣ.—ತೀತ 2:10.