ದೇವರ ವಾಕ್ಯವನ್ನು ಶಿಫಾರಸು ಮಾಡುವುದು
1 ಬೈಬಲು ಹಳೇಕಾಲದ್ದು, ಅವಾಸ್ತವಿಕ ಎಂದು ಇಂದು ಅನೇಕರು ವೀಕ್ಷಿಸುತ್ತಾರೆ. ಆದರೂ, ದೇವರ ವಾಕ್ಯಕ್ಕೆ ಜೀವಿತಗಳನ್ನು ಬದಲಾಯಿಸುವ ಶಕ್ತಿಯಿದೆ. (ಇಬ್ರಿ. 4:12) ಇದು, ವಿವಿಧ ಜನರ ಯೋಚನೆ, ನಡವಳಿಕೆ ಮತ್ತು ಸುಧಾರಿಸಿದ ಮನೋಭಾವನೆಗಳಲ್ಲಿ ತೋರಿಬಂದಿದೆ. (ಎಫೆ. 4:24) ಬೈಬಲಿನ ಸೂಚನೆಯನ್ನು ಅನ್ವಯಿಸುವಿಕೆಯು ಒಂದು ಸಂತೋಷದ ಕುಟುಂಬ ಪರಿಸರಕ್ಕೆ ನೆರವಾಗುತ್ತದೆ. ಅದು ನೆರೆಕರೆಯ ಸಂಬಂಧಗಳನ್ನು, ಜಾತಿ, ಬಣ್ಣ ಮತ್ತು ಸಾಮಾಜಿಕ ನಿಲುವು ಏನೇ ಇರಲಿ, ಪ್ರವರ್ಧಿಸುತ್ತದೆ.—ಲೂಕ 10:29-37.
2 ದೇವರ ವಾಕ್ಯದೊಂದಿಗೆ ನಮ್ಮ ವೈಯಕ್ತಿಕ ಅನುಭವವು, ಬೈಬಲಿನ ನಿಜ ಮೂಲ್ಯತೆಯನ್ನು ತಮಗಾಗಿ ಸಂಶೋಧಿಸುವಂತೆ ಇತರರನ್ನು ಉತ್ತೇಜಿಸಲು ಪ್ರೇರಿಸಬೇಕು. ಇದನ್ನು ಮಾಡುವ ಒಂದು ಅತ್ಯುತ್ತಮ ಮಾರ್ಗವು ನಮ್ಮ ಹೊಸ ಸಂಭಾಷಣೆಯ ವಿಷಯವಾದ “ಬೈಬಲನ್ನೇಕೆ ಓದಬೇಕು?” ಇದರಲ್ಲಿ ಒದಗಿಸಲಾಗಿದೆ. ನಾವೀ ವಿಷಯವನ್ನು ದಶಂಬರದಲ್ಲಿ ನಮ್ಮ ನೀಡುವಿಕೆಯಾದ ನ್ಯೂವರ್ಲ್ಡ್ ಟ್ರಾನ್ಸ್ಲೇಶನ್ ಮತ್ತು ಟ್ರಿನಿಟಿ ಅಥವಾ “ಲುಕ್!” ಬ್ರೊಷೂರ್ನೊಂದಿಗೆ ಹೇಗೆ ಉಪಯೋಗಿಸುವೆವು?
ಸಂಭಾಷಣೆಯ ವಿಷಯವನ್ನು ಉಪಯೋಗಿಸುವುದು
3 ಒಂದು ಚಿಕ್ಕ ಪೀಠಿಕೆಯ ನಂತರ ಹೀಗನ್ನಿರಿ: “ಎಷ್ಟೋ ಸಮಸ್ಯೆ ಮತ್ತು ಒತ್ತಡಗಳು ಇಂದು ಕುಟುಂಬಗಳನ್ನು ಕಾಡುತ್ತಿರಲಾಗಿ, ವ್ಯಾವಹಾರಿಕ ಸಹಾಯದ ಒಂದೇ ಮೂಲದ ಕಡೆಗೆ ಗಮನ ಸೆಳೆಯಲು ನಾವು ಬಂದಿರುತ್ತೇವೆ. ಹಿಂದೆ ಜನರು ಮಾರ್ಗದರ್ಶನೆಗಾಗಿ ಹೆಚ್ಚಾಗಿ ಬೈಬಲಿನೆಡೆಗೆ ತೆರಳಿದ್ದರು, ಆದರೆ ಕಾಲ ಬದಲಾಗಿದೆ, ಅಲ್ಲವೇ? ಇಂದಿನ ಸಮಸ್ಯೆಗಳಾದ ಮಾದಕೌಷಧಿಯ ದುರುಪಯೋಗ, ದುಷ್ಕಾರ್ಯ, ಒಡೆದ ಕುಟುಂಬಗಳು ಮುಂತಾದವುಗಳನ್ನು ಬೈಬಲು ಪರಿಹರಿಸಬಲ್ಲದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗಾಗಿ ವೇಳೆಕೊಡಿ.] 2 ತಿಮೊಥಿ 3:16 ರಲ್ಲಿ ಅದೇನು ಹೇಳುತ್ತದೆಂದು ನೋಡಿರಿ. [ಓದಿ.] ಆ ರೀತಿಯ ಉಪಯುಕ್ತ ಪ್ರಭಾವವನ್ನು ಬೈಬಲು ಹಾಕಬಲ್ಲದೆಂದು ನೀವು ನೆನಸುತ್ತೀರೋ? [ಪ್ರತಿಕ್ರಿಯೆಗೆ ವೇಳೆಕೊಡಿ.] ಸಮಸ್ಯೆಗಳನ್ನು ಎದುರಿಸುವಾಗ ಅಥವಾ ಜೀವಿತದಲ್ಲಿ ನಿರ್ಣಯಗಳನ್ನು ಮಾಡುವಾಗ ಹೆಚ್ಚಿನ ಜನರಿಗೆ ಮಾರ್ಗದರ್ಶನೆ ಬೇಕು ಮತ್ತು ಅದನ್ನು ಅವರು ಬಯಸುತ್ತಾರೆ. ದೇವರ ವಾಕ್ಯವನ್ನು ಪಾಲಿಸುವುದರಿಂದ ನಾವೆಲ್ಲಿಗೆ ನಡಿಸಲ್ಪಡುತ್ತೇವೆಂಬದನ್ನು ಗಮನಿಸಿರಿ. [ಯೋಹಾನ 17:3 ಓದಿ.] ವ್ಯಕ್ತಿಪರ ಕಷ್ಟಗಳನ್ನು ಪರಿಹರಿಸಲು ಮತ್ತು ಭವಿಷ್ಯತ್ತಿಗಾಗಿ ನಿಜ ನಿರೀಕ್ಷೆಯನ್ನು ನೀಡಲು ಬೈಬಲು ಸ್ಪಷ್ಟ ಮಾರ್ಗದರ್ಶನೆ ಕೊಡುತ್ತದೆ.” ದೇವರ ವಾಕ್ಯದ ತಿಳುವಳಿಕೆಯನ್ನು ಪಡೆಯಲು ವ್ಯಕ್ತಿಯು ನಿಜಾಸಕ್ತಿ ತೋರಿಸಿದರೆ, ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಅಥವಾ ಬ್ರೊಷೂರ್ ಒಂದರ ನಿಜ ಮೂಲ್ಯತೆಯನ್ನು ಪ್ರದರ್ಶಿಸಿ ತೋರಿಸಿರಿ.
4 ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ತೋರಿಸುವಾಗ, ಬೈಬಲಿನ ವೈಯಕ್ತಿಕ ಪ್ರತಿಯು ಮನೆಯವನಲ್ಲಿದೆಯೇ ಮತ್ತು ಅವನದನ್ನು ಸುಲಭವಾಗಿ ಓದಬಲ್ಲನೋ ಎಂದು ಕೇಳಿ. ಅವನ ಉತ್ತರವನ್ನು ಆಧರಿಸಿ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಬೈಬಲಿನ ಕೆಲವು ಸಹಾಯಕಾರಿ ವೈಶಿಷ್ಟ್ಯಗಳು—ಅದರ ಆಧುನಿಕ ಭಾಷೆ ಮತ್ತು ದೈವಿಕ ನಾಮದ ಪುನ:ಸ್ಥಾಪನೆ ಮುಂತಾದವನ್ನು ತಿಳಿಸಿರಿ. ರೀಸನಿಂಗ್ ಪುಸ್ತಕದ 276-80 ಪುಟದಿಂದ ಒಂದರೆಡು ವಿಷಯಗಳನ್ನು ಬಳಸುವುದೂ ನಿಮಗೆ ಸಹಾಯಕರವಾಗಿ ಕಾಣಬಹುದು. ಆಸಕ್ತಿ ತೋರಿಸಿದವರಿಗೆ ವ್ಯಕ್ತಿಪರ ಮನೆ ಬೈಬಲ್ ಅಧ್ಯಯನ ನೀಡಿರಿ.
5 ಟ್ರಿನಿಟಿ ಬ್ರೊಷೂರ್ನೆಡೆ ಗಮನ ಸೆಳೆಯುವಾಗ ಹೀಗನ್ನಬಹುದು: “ಅನೇಕ ಪ್ರಾಮಾಣಿಕ ಜನರಿಗೆ ತ್ರಯೈಕ್ಯದಲ್ಲಿ ನಂಬಿಕೆಯಿಡಲು ಕಲಿಸಲ್ಪಟ್ಟಿದೆ ಆದರೆ ಅದರ ಕಲ್ಪನೆಯನ್ನು ಗ್ರಹಿಸಲು ಅವರಿಗೆ ಅತಿ ಕಷ್ಟವಾಗುತ್ತದೆ. ಈ ಬ್ರೊಷೂರ್ ತ್ರಯೈಕ್ಯವನ್ನು, ಐತಿಹಾಸಿಕ ದೃಷ್ಟಿಕೋನದಿಂದ ಮತ್ತು ಬೈಬಲಿನ ಹೇಳಿಕೆಗಳ ಆಧಾರದಿಂದ ಸವಿವರವಾಗಿ ಪರೀಕ್ಷಿಸುತ್ತದೆ. ನೀವದನ್ನು ಓದಲು ಬಯಸುತ್ತೀರೋ?” “ಲುಕ್!” ಬ್ರೊಷೂರ್ ಉಪಯೋಗಿಸುವಾಗ ಅದರ ಅಕರ್ಷಕ ಆವರಣವನ್ನಾಗಲಿ ಅಥವಾ ಪುಟ 15 ರ “ಕೆಟ್ಟ ವಿಷಯಗಳು—ದೇವರವನ್ನು ಅನುಮತಿಸುವದೇಕೆ?” ಶೀರ್ಷಿಕೆಯನ್ನಾಗಲಿ ತೋರಿಸಿ ಮನೆಯವನ ಆಸಕ್ತಿಯನ್ನು ಸೆಳೆಯಬಹುದು.
6 ಜನರು ಬೈಬಲನ್ನು ಓದುವರೇ ಪ್ರೋತ್ಸಾಹಿಸಲು ದಶಂಬರದಲ್ಲಿ ಎಚ್ಚರವಾಗಿರ್ರಿ. ಆಸಕ್ತಿ ವ್ಯಕ್ತಪಡಿಸುವವರನ್ನು ತಡವಿಲ್ಲದೆ ಪುನಃಸಂದರ್ಶನೆ ಮಾಡಿರಿ. ದೇವರ ವಾಕ್ಯದ ಶಕಿಗ್ತಾಗಿ ನಿಜ ಗಣ್ಯತೆಯನ್ನು ಅವರು ಬೆಳೆಸಿಕೊಳ್ಳಲು ಸಹಾಯ ಮಾಡಿರಿ. ಅದರ ತತ್ವಗಳನ್ನು ಅವರ ಜೀವಿತದಲ್ಲಿ ಅನ್ವಯಿಸುವ ಮೂಲಕ ಅವರು ಈಗಲೂ ಮತ್ತು ಬರಲಿರುವ ಜೀವಿತದಲ್ಲೂ ಬಾಳುವ ಪ್ರಯೋಜನಗಳನ್ನು ಗಳಿಸುವರು.—1 ತಿಮೊ. 4:8.