ಬ್ರೋಷರುಗಳೊಂದಿಗೆ ರಾಜ್ಯ ಸುವಾರ್ತೆಯನ್ನು ಘೋಷಿಸಿರಿ
1 ಸತ್ಯವನ್ನು ತಿಳಿಯುವುದು ಮತ್ತು ಸುವಾರ್ತೆಯನ್ನು ಹುರುಪಿನಿಂದ ಘೋಷಿಸುತ್ತಿರುವವರ ನಡುವೆ ಇರುವುದು ಎಂಥ ಒಂದು ಹರ್ಷದ ಸಂಗತಿಯಾಗಿದೆ! ದೇವರ ಸಂಸ್ಥೆಯ ಹೊರಗಿರುವ ಜನರಿಗೆ ರಾಜ್ಯ ಸುವಾರ್ತೆಯನ್ನು ಆಲಿಸುವ ವಿಪರೀತ ಆವಶ್ಯಕತೆಯಿದೆ. ರಾಜ್ಯದ ಕುರಿತಾದ ಸತ್ಯವು, ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?, ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ! ಮತ್ತು “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ಎಂಬ ಬ್ರೋಷರುಗಳಲ್ಲಿ, ಬಹಳ ಸರಳತೆಯೊಂದಿಗೆ ವಿವರಿಸಲ್ಪಟ್ಟಿದೆ. ಅವು ದೇವರ ರಾಜ್ಯದ ಕೆಳಗೆ ಭೂಮಿಯ ಮೇಲಿನ ಜೀವಿತವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುತ್ತವೆ, ಮತ್ತು ಅವು ಓದುಗನನ್ನು ದೇವರ ವಾಕ್ಯದಲ್ಲಿ ವಿವರಿಸಲ್ಪಟ್ಟಿರುವ ರಾಜ್ಯ ನಿಜತ್ವಗಳಿಗೆ ಮಾರ್ಗದರ್ಶಿಸುತ್ತವೆ. ನಿಶ್ಚಯವಾಗಿಯೂ, ಆಸಕ್ತಿಯುಳ್ಳ ವ್ಯಕ್ತಿಯೊಂದಿಗೆ ಒಂದು ಬ್ರೋಷರನ್ನು ನೀಡುವುದು ನಮ್ಮ ಕೆಲಸದ ಕೇವಲ ಪ್ರಾರಂಭವಾಗಿದೆ. (1 ಕೊರಿಂ. 9:23) ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದಲ್ಲಿನ ಒಂದು ಅಭ್ಯಾಸವನ್ನು ನೀಡುವ ಉದ್ದೇಶದಿಂದ ನಾವೆಲ್ಲರೂ ಎಲ್ಲ ಕೊಡಿಕೆಗಳನ್ನು ತಡವಿಲ್ಲದೆ ಅನುಸರಿಸಿಕೊಂಡು ಹೋಗೋಣ. ಇದನ್ನು ನಾವು ಆಗಸ್ಟ್ ತಿಂಗಳಿನಲ್ಲಿ ಹೇಗೆ ಪೂರೈಸಬಲ್ಲೆವು?
2 “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?” ಎಂಬ ಬ್ರೋಷರನ್ನು ನೀಡುವಾಗ, ನೀವು ಇದನ್ನು ಹೇಳಲು ಪ್ರಯತ್ನಿಸಬಹುದು:
◼ “ನಾನು ಮಾತಾಡಿರುವವರಲ್ಲಿ ಅಧಿಕಾಂಶ ಜನರು, ಇಂದು ಲೋಕದಲ್ಲಿ ದೊಡ್ಡ ಸಮಸ್ಯೆಗಳಿವೆ ಎಂದು ಗ್ರಹಿಸುತ್ತಾರೆ ಮತ್ತು ಅವು ಪರಿಹರಿಸಲ್ಪಡುವುದನ್ನು ಕಾಣಲು ತಾವು ಬಯಸುತ್ತೇವೆಂದು ಹೇಳುತ್ತಾರೆ. [ನಿರುದ್ಯೋಗ, ಏರುತ್ತಿರುವ ಪಾತಕ, ಅಥವಾ ಅಮಲೌಷಧದ ದುರುಪಯೋಗದಂಥ ಸ್ಥಳಿಕ ಸಮಸ್ಯೆಗಳನ್ನು ಉಲ್ಲೇಖಿಸಿರಿ.] ಈ ವಿಷಯಗಳು ನಮಗೆ ಮತ್ತು ನಮ್ಮ ಪ್ರೀತಿಪಾತ್ರರಿಗೆ ಭವಿಷ್ಯತ್ತಿನ ಕುರಿತಾಗಿ ಬಹಳ ಅಭದ್ರ ಭಾವನೆಯನ್ನು ಉಂಟುಮಾಡುತ್ತವೆ. ಈ ಸಮಸ್ಯೆಗಳಲ್ಲಿ ಯಾವುದೇ ಸಮಸ್ಯೆಯಿರದಿರುವ ಒಂದು ಸಮಯವು ಎಂದಾದರೂ ಇರುವುದೆಂಬುದಾಗಿ ನೀವು ಎಣಿಸುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಬೈಬಲಿನ ಭಾಗಗಳನ್ನು ಓದಲಿಕ್ಕೆ ನಿಮಗೆ ಅವಕಾಶವಿದ್ದಿರಬಹುದು. ನಿಮಗೆ ಇದ್ದಲ್ಲಿ, ಅದು ಭವಿಷ್ಯತ್ತಿಗಾಗಿ ಯಾವ ವಾಗ್ದಾನಗಳನ್ನು ಮಾಡುತ್ತದೆ ಎಂಬುದರ ಕುರಿತಾಗಿ ನೀವು ಓದಿದಿರೋ?” ನಮ್ಮ ಸಮಸ್ಯೆಗಳು ಬ್ರೋಷರಿನಲ್ಲಿರುವ 19 ಮತ್ತು 20ನೆಯ ಪುಟಗಳಿಗೆ ತಿರುಗಿಸಿರಿ, ಮತ್ತು ಹೊಸ ಲೋಕದ ಕುರಿತಾಗಿ ಉದ್ಧರಿಸಲ್ಪಟ್ಟ, ಯೆಶಾಯ 33:24; 35:5, 6, 7 ಮತ್ತು ಕೀರ್ತನೆ 46:9 ಅಥವಾ 72:16ರಂಥ ಕೆಲವೊಂದು ಉತ್ತೇಜನದಾಯಕ ಶಾಸ್ತ್ರವಚನಗಳನ್ನು ಓದಿಹೇಳಿರಿ. ಬ್ರೋಷರನ್ನು ನೀಡಿರಿ.
3 “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?” ಎಂಬ ಬ್ರೋಷರ್ ನೀಡಲ್ಪಟ್ಟಿರುವುದಾದರೆ, ಪುನರ್ಭೇಟಿಯಲ್ಲಿ ಹೀಗೆ ಹೇಳುವ ಮೂಲಕ ನೀವು ಚರ್ಚೆಯನ್ನು ಪ್ರಾರಂಭಿಸಸಾಧ್ಯವಿದೆ:
◼ “ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಉತ್ತಮವಾದೊಂದು ಲೋಕವನ್ನು ಸ್ಥಾಪಿಸಲು ದೇವರು ಮಾಡಿರುವ ವಾಗ್ದಾನಗಳ ಕುರಿತಾಗಿ ಹಿಂದೆ ನಾವು ಚರ್ಚಿಸಿದೆವು. ನಾನು ನಿಮ್ಮಲ್ಲಿ ಬಿಟ್ಟುಹೋದ ಬ್ರೋಷರ್, ನಾವು ಬೈಬಲನ್ನು ನಂಬಸಾಧ್ಯವೋ ಮತ್ತು ಉತ್ತಮವಾದ ಪರಿಸ್ಥಿತಿಗಳು ನಮ್ಮ ದಿನದಲ್ಲಿ ಬರುತ್ತಿವೆಯೆಂದು ನಮಗೆ ಹೇಗೆ ತಿಳಿದಿದೆ ಎಂಬುದನ್ನು ಚರ್ಚಿಸುತ್ತದೆ. ಉದಾಹರಣೆಗಾಗಿ, ಸಾವಿರಾರು ವರ್ಷಗಳ ಹಿಂದೆ, ನಮ್ಮ ದಿನದಲ್ಲಿ ಪರಿಸ್ಥಿತಿಗಳು ಹೇಗಿರುವವು ಎಂಬುದನ್ನು ಬೈಬಲ್ ನಿಷ್ಕೃಷ್ಟವಾಗಿ ಮುಂತಿಳಿಸಿತು ಮತ್ತು ಈ ಕೆಟ್ಟ ಪರಿಸ್ಥಿತಿಗಳು ಒಂದು ಲೋಕ ಬದಲಾವಣೆಯು ಆಸನ್ನವಾಗಿದೆ ಎಂಬ ಸೂಚನೆಯ ಭಾಗವಾಗಿರುವುದೆಂಬುದನ್ನು ತಿಳಿಸಿತು ಎಂಬುದಾಗಿ ಇದು ತೋರಿಸುತ್ತದೆ.” ನಮ್ಮ ಸಮಸ್ಯೆಗಳು ಬ್ರೋಷರನ್ನು 12ನೇ ಪುಟಕ್ಕೆ ತೆರೆದು, ‘ಸೂಚನೆ’ ಎಂಬ ಶೀರ್ಷಿಕೆಯ ಕೆಳಗಿರುವ ಮೊದಲನೆಯ ಪ್ಯಾರಗ್ರಾಫ್ ಅನ್ನು ಓದಿರಿ. ಅನಂತರ ಹೀಗೆ ಹೇಳಿರಿ: “ಅಂಥ ಪರಿಸ್ಥಿತಿಗಳನ್ನು ಇಂದು ನಾವು ನೋಡುವುದಿಲ್ಲವೋ? ಅವು ಏನನ್ನು ಮುನ್ಸೂಚಿಸುತ್ತವೆಂಬುದು ನಿಮಗೆ ತಿಳಿದಿದೆಯೋ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. 2 ಪೇತ್ರ 3:9, 13ನ್ನು ಓದಿರಿ. ಒಂದು ಮನೆ ಬೈಬಲ್ ಅಭ್ಯಾಸದ ಮುಖಾಂತರ ಹೆಚ್ಚಿನ ವಿಷಯವನ್ನು ಕಲಿಯಲು ಪ್ರೋತ್ಸಾಹಿಸಿರಿ.
4 “ಭೂಮಿಯಲ್ಲಿ ಸದಾಜೀವನವನ್ನು ಆನಂದಿಸಿರಿ!” ಎಂಬ ಬ್ರೋಷರ್, ಬಹಳ ಸಂಕ್ಷಿಪ್ತವಾದೊಂದು ನಿರೂಪಣೆಯೊಂದಿಗೆ ನೀಡಲ್ಪಡಬಹುದು. ಅದರ ಮುಖಪುಟವನ್ನು ತೋರಿಸುತ್ತಿರುವಂತೆ, ನೀವು ಹೀಗೆ ಹೇಳಬಹುದು:
◼ “ಒಂದು ಮನಮುಟ್ಟುವ ಸಂದೇಶವನ್ನು ಒಳಗೊಂಡಿರುವ ಯಾವುದೋ ಒಂದು ವಿಷಯವನ್ನು ನಿಮಗೆ ತೋರಿಸಲು ನಾನು ಇಚ್ಛಿಸುತ್ತೇನೆ.” ಭೂಮಿಯಲ್ಲಿ ಸದಾಜೀವನ ಬ್ರೋಷರನ್ನು ತೆರೆದು, ಪೀಠಿಕೆಯ ಮೊದಲನೆಯ ಪ್ಯಾರಗ್ರಾಫ್ ಅನ್ನು ಓದಿರಿ. ಅನಂತರ ಹೀಗೆ ಮುಂದುವರಿಸಿರಿ: “ಅದು ಈ ಪ್ರಶ್ನೆಯನ್ನೂ ಉತ್ತರಿಸುತ್ತದೆ [ಚಿತ್ರ ನಂಬ್ರ 8ರ ಮೇಲಿರುವ ಶೀರ್ಷಿಕೆಗೆ ತಿರುಗಿಸಿರಿ]: ‘ಮನುಷ್ಯನು ಸಾಯುವುದೇಕೆ?’ ಈ ಬ್ರೋಷರಿನಲ್ಲಿರುವ ಚಿತ್ರಗಳನ್ನು ಅಭ್ಯಾಸಿಸಿ, ಉದ್ಧರಣೆಗಳನ್ನು ಓದುವುದು ಆಸಕ್ತಿಕರವಾದದ್ದಾಗಿವೆ ಎಂಬುದನ್ನು ನೀವು ಕಂಡುಕೊಳ್ಳುವಿರಿ. ನೀವು ಅದನ್ನು ಮಾಡಲು ಬಯಸುವುದಾದರೆ, ಈ ಪ್ರತಿಯನ್ನು ನೀವು ಪಡೆದುಕೊಳ್ಳಬಹುದು.” ಬ್ರೋಷರ್ ಸ್ವೀಕರಿಸಲ್ಪಡುವಲ್ಲಿ, “ಅಂಥ ಪರಿಸ್ಥಿತಿಗಳಲ್ಲಿ ಜೀವಿಸಲು ಏನು ಮಾಡಬೇಕೆಂದು ನೀವೆಣಿಸುತ್ತೀರಿ?” ಎಂಬಂಥ ಪ್ರಶ್ನೆಯನ್ನು ಮನೆಯವನಿಗೆ ಹಾಕಿರಿ, ಮತ್ತು ಆ ಪ್ರಶ್ನೆಯನ್ನು ಉತ್ತರಿಸಲು ನೀವು ಹಿಂದಿರುಗುವಿರೆಂದು ಹೇಳಿರಿ.
5 “ಭೂಮಿಯಲ್ಲಿ ಸದಾಜೀವನ” ಬ್ರೋಷರಿನ ನೀಡುವಿಕೆಯ ಮೇಲೆ ಒಂದು ಪುನರ್ಭೇಟಿಯನ್ನು ಮಾಡುವಾಗ ನೀವು ಏನನ್ನು ಹೇಳುವಿರಿ? ಈ ಸಮೀಪಿಸುವಿಕೆಯನ್ನು ನೀವು ಪ್ರಯತ್ನಿಸಸಾಧ್ಯವಿದೆ:
◼ ಭೂಮಿಯಲ್ಲಿ ಸದಾಜೀವನ ಬ್ರೋಷರಿನಲ್ಲಿರುವ ಚಿತ್ರ ನಂಬ್ರ 49ನ್ನು ತೋರಿಸಿ, “ಇದು ಒಂದು ಮನೋಹರವಾದ ಚಿತ್ರವಾಗಿದೆ ಅಲ್ಲವೋ?” ಎಂದು ಕೇಳಿರಿ. “[ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅದು ನಾನು ಕಳೆದ ಭೇಟಿಯಲ್ಲಿ ನಿಮ್ಮಲ್ಲಿ ಬಿಟ್ಟುಹೋದ ಬ್ರೋಷರಿನಲ್ಲಿ ಇದೆ. ಮುಂದಿನ ಪುಟದಲ್ಲಿರುವ ಪ್ರಶ್ನೆಯನ್ನು ನಾನು ನಿಮಗೆ ಕೇಳಲು ಇಚ್ಛಿಸುತ್ತೇನೆ.” ಚಿತ್ರ ನಂಬ್ರ 50ಕ್ಕೆ ತಿರುಗಿಸಿರಿ ಮತ್ತು ಪ್ರಶ್ನೆಯನ್ನು ಓದಿರಿ: “‘ಆ ಸುಂದರವಾದ ಪರದೈಸದಲ್ಲಿ ನೀವು ಸದಾಕಾಲ ಜೀವಿಸಬಯಸುವಿರೋ?’ [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅದು ನಿಮ್ಮ ಅಭಿಲಾಷೆಯಾಗಿರುವಲ್ಲಿ, ನೀವು ಏನು ಮಾಡಬೇಕೆಂದು ಅದು ಹೇಳುವುದನ್ನು ಗಮನಿಸಿರಿ: ‘ಹಾಗಾದರೆ ದೇವರೇನನ್ನುತ್ತಾನೋ ಆ ಕುರಿತು ಹೆಚ್ಚನ್ನು ಕಲಿಯಿರಿ.’ [ಯೋಹಾನ 17:3ನ್ನು ಓದಿರಿ.] ನಾನು ನಿಮ್ಮೊಂದಿಗೆ ಉಚಿತವಾಗಿ ಬೈಬಲನ್ನು ಅಭ್ಯಾಸಿಸಲು ಸಂತೋಷಿಸುವೆ. ಅದನ್ನು ನೀವು ಇಚ್ಛಿಸುವಿರೋ?” ಹಿಂದಿರುಗಿಹೋಗಲು ಒಂದು ನಿಶ್ಚಿತ ಭೇಟಿ ನಿಶ್ಚಯವನ್ನು ಮಾಡಿರಿ.
6 “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ಎಂಬ ಬ್ರೋಷರನ್ನು ನೀಡುತ್ತಿರುವಾಗ, ಇಡೀ ಮುಖಪುಟ ಚಿತ್ರವನ್ನು ತೋರಿಸಿ, ಹೀಗೆ ಕೇಳುವ ಮೂಲಕ ನೀವು ಪ್ರಾರಂಭಿಸಬಹುದು:
◼ “ಇಡೀ ಭೂಮಿ ಈ ರೀತಿ ಕಾಣುವಂತೆ ಮಾಡಲಿಕ್ಕೆ ಏನು ಆವಶ್ಯಕವಾಗಿದೆ ಎಂದು ನೀವು ಎಣಿಸುತ್ತೀರಿ?” ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಚಿತ್ರದ ಕುರಿತಾಗಿ ಪುಟ 3ರಲ್ಲಿ ಹೇಳಲ್ಪಟ್ಟಿರುವ ಕೆಲವು ವೈಶಿಷ್ಟ್ಯಗಳನ್ನು ಬಣ್ಣಿಸಿರಿ. ಅನಂತರ ಹೀಗೆ ಹೇಳಿರಿ: “ಈ ರೀತಿಯ ಒಂದು ಲೋಕವನ್ನು ಮಾಡುವುದು ಅಸಾಧ್ಯ ಎಂದು ಅನೇಕ ಜನರು ಭಾವಿಸುತ್ತಾರೆ. ಆದರೆ ಅದನ್ನು ಪೂರೈಸಲಿಕ್ಕೆ ದೇವರಿಗೆ ಅಸಾಧ್ಯವಾಗಿರುವುದಿಲ್ಲ. [ಪ್ಯಾರಗ್ರಾಫ್ 43ರಲ್ಲಿರುವ ಅಂಶಗಳನ್ನು ಹಂಚಿಕೊಳ್ಳಿರಿ; ಅನಂತರ ಯೆಶಾಯ 9:6, 7ನ್ನು ಓದಿರಿ.] ಎಲ್ಲಿ ಸಕಲ ಜನಾಂಗಗಳಿಂದ ಬರುವ ಜನರು ಒಂದು ಅದ್ಭುತಕರವಾದ ಪ್ರಮೋದವನವನ್ನು ಆನಂದಿಸುವರೋ, ಆ ಒಂದು ಹೊಸ ಲೋಕವನ್ನು ತರುವುದರ ಕುರಿತಾಗಿ ದೇವರು ವಾಗ್ದಾನಿಸಿದ್ದಾನೆ. ನೀವು ಈ ಬ್ರೋಷರನ್ನು ಓದುವಂತೆ ನಾನು ಇಚ್ಛಿಸುತ್ತೇನೆ. ದೇವರ ರಚಿಸುವಿಕೆಯ ಒಂದು ಆಶ್ಚರ್ಯಕರವಾದ ಭವಿಷ್ಯತ್ತನ್ನು ನೀವು ಮತ್ತು ನಿಮ್ಮ ಕುಟುಂಬವು ಹೇಗೆ ಆನಂದಿಸಸಾಧ್ಯವಿದೆ ಎಂಬುದನ್ನು ಅದು ತೋರಿಸುವುದು.”
7 ಪುನರ್ಭೇಟಿಯಲ್ಲಿ, ಬೈಬಲಿನ ಕುರಿತಾಗಿ ಹೆಚ್ಚಿನ ವಿಷಯವನ್ನು ಕಲಿಯುವ ಅಗತ್ಯವು ಏಕೆ ಇದೆ ಎಂಬುದನ್ನು ವಿವರಿಸಲು “ಇಗೋ!” ಬ್ರೋಷರನ್ನು ನೀವು ಉಪಯೋಗಿಸಸಾಧ್ಯವಿದೆ. ಪ್ರಾಯಶಃ ಮುಖಪುಟವನ್ನು ಪುನಃ ತೋರಿಸಿ, ಹೀಗೆ ಹೇಳಿರಿ:
◼ “ಈ ಚಿತ್ರವನ್ನು ನಾನು ನಿಮಗೆ ಮೊದಲು ತೋರಿಸಿದಾಗ, ಅಂಥ ಒಂದು ಅದ್ಭುತಕರವಾದ ಲೋಕದಲ್ಲಿ ಜೀವಿಸಲು ಸಂತೋಷಪಡುವೆವು ಎಂಬುದನ್ನು ನಾವು ಸಮ್ಮತಿಸಿದ್ದೆವು. ಇದನ್ನು ಸಾಧ್ಯವನ್ನಾಗಿ ಮಾಡಲಿಕ್ಕಾಗಿ, ನಾವೆಲ್ಲರೂ ಮಾಡಬೇಕಾಗಿರುವ ಯಾವುದೋ ವಿಷಯವಿದೆ.” “ಇಗೋ!” ಬ್ರೋಷರನ್ನು ಪ್ಯಾರಗ್ರಾಫ್ 52ಕ್ಕೆ ತೆರೆಯಿರಿ; ಪ್ಯಾರಗ್ರಾಫ್ ಅನ್ನು ಮತ್ತು ಯೋಹಾನ 17:3ರಲ್ಲಿರುವ ಶಾಸ್ತ್ರವಚನವನ್ನು ಓದಿರಿ. ಯೋಗ್ಯವಾದ ಬೈಬಲ್ ಶಿಕ್ಷಣವೊಂದರ ಕುರಿತಾದ ಮಾಹಿತಿಯನ್ನು ಪ್ಯಾರಗ್ರಾಫ್ 53ರಲ್ಲಿರುವ ದೃಷ್ಟಾಂತಕ್ಕೆ ಸಂಬಂಧಿಸಿರಿ, ಮತ್ತು ಅನಂತರ ಯೆಹೋವನ ಸಾಕ್ಷಿಗಳು ಅಂಥ ಬೋಧನೆಯನ್ನು ಉಚಿತವಾಗಿ ಮನೆಯಲ್ಲಿ ನೀಡುತ್ತಾರೆಂಬುದನ್ನು ವಿವರಿಸಿರಿ. ಜ್ಞಾನ ಪುಸ್ತಕವನ್ನು ಉಪಯೋಗಿಸುತ್ತಾ, ನಮ್ಮ ಅಭ್ಯಾಸ ವಿಧಾನವನ್ನು ಪ್ರದರ್ಶಿಸಲು ಸಿದ್ಧರಾಗಿರಿ.
8 ಇತರ ಬ್ರೋಷರುಗಳನ್ನು ನೀವು ಉಪಯೋಗಿಸುತ್ತಿರುವುದಾದರೆ, ಮಾದರಿಗಳಂತೆ ಮೇಲೆ ಕೊಡಲ್ಪಟ್ಟಿರುವ ಸಲಹೆಗಳನ್ನು ಉಪಯೋಗಿಸುತ್ತಾ, ನೀವು ನಿಮ್ಮ ಸ್ವಂತ ನಿರೂಪಣೆಗಳನ್ನು ತಯಾರಿಸಸಾಧ್ಯವಿದೆ. ಆಸಕ್ತಿಯು ತೋರಿಸಲ್ಪಡುವಲ್ಲೆಲ್ಲಾ, ಪುನರ್ಭೇಟಿಯಲ್ಲಿ ಫಲದಾಯಕವಾದೊಂದು ಚರ್ಚೆಯನ್ನು ನೀವು ಪಡೆಯಸಾಧ್ಯವಿರುವಂತೆ, ಮನೆಯವನ ಹೆಸರು ಮತ್ತು ವಿಳಾಸ, ಹಾಗೂ ಚರ್ಚಿಸಲ್ಪಟ್ಟ ವಿಷಯವನ್ನು ಬರೆದಿಟ್ಟುಕೊಳ್ಳಲಿಕ್ಕೆ ಖಚಿತಮಾಡಿಕೊಳ್ಳಿರಿ. ಚೆನ್ನಾಗಿ ತಯಾರಿಸಿರಿ ಮತ್ತು ರಾಜ್ಯ ಸುವಾರ್ತೆಯನ್ನು ನೀವು ಘೋಷಿಸಿದಂತೆ ಯೆಹೋವನ ಆಶೀರ್ವಾದವನ್ನು ಕೋರಿರಿ.