ನಿಮ್ಮ ಶುಶ್ರೂಷೆಯಲ್ಲಿ ವಿವಿಧ ಬ್ರೋಷರ್ಗಳನ್ನು ಉಪಯೋಗಿಸಿರಿ
1 ಜನರು ಇಂದು ವಿವಿಧ ವಿಷಯಗಳಲ್ಲಿ ಆಸಕ್ತರಾಗಿದ್ದಾರೆ. ಜುಲೈ ತಿಂಗಳಿನಲ್ಲಿ ನೀವು ಕ್ಷೇತ್ರ ಸೇವೆಯಲ್ಲಿ ತೊಡಗಿದಂತೆ, ಟೆರಿಟೊರಿಯಲ್ಲಿರುವ ಜನರನ್ನು ಆಕರ್ಷಿಸುವ ನಿರ್ದಿಷ್ಟವಾದೊಂದು ಬ್ರೋಷರನ್ನು ಉಪಯೋಗಿಸುತ್ತಾ, ನಿಮ್ಮಲ್ಲಿ ಹಲವಾರು ವಿಭಿನ್ನ ಬ್ರೋಷರುಗಳನ್ನು ನೀವು ಇಟ್ಟುಕೊಳ್ಳಸಾಧ್ಯವಿದೆ. ಈ ನಿರೂಪಣೆಗಳಲ್ಲಿ ಒಂದನ್ನು ಉಪಯೋಗಿಸಿನೋಡಲು ಬಹುಶಃ ನೀವು ಬಯಸುವಿರಿ:
2 “ನಮ್ಮ ಸಮಸ್ಯೆಗಳು—ಅವನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು?” ಎಂಬ ಬ್ರೋಷರನ್ನು ನೀಡುವಾಗ, ನೀವು ಹೀಗೆ ಕೇಳಸಾಧ್ಯವಿದೆ:
◼ “ಸಮಸ್ಯೆಗಳೇ ಇರದಿದ್ದಲ್ಲಿ ಲೋಕವು ಹೇಗೆ ಇರುವುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಮ್ಮ ಎಲ್ಲ ಸಮಸ್ಯೆಗಳು ಬಗೆಹರಿಸಲ್ಪಡುವುವು ಎಂದು ನಾವು ವಾಸ್ತವವಾಗಿ ನಿರೀಕ್ಷಿಸಸಾಧ್ಯವಿರುವ ಏಕೈಕ ಮಾರ್ಗವು, ದೇವರು ಈ ಭೂಮಿಯ ಆಳಿಕ್ವೆಯನ್ನು ವಹಿಸಿಕೊಳ್ಳುವುದು ಆಗಿದೆ. [ಪುಟ 20ಕ್ಕೆ ತಿರುಗಿಸಿರಿ ಮತ್ತು ಕೀರ್ತನೆ 37:10 ಹಾಗೂ ಕೀರ್ತನೆ 46:9ನ್ನು ಉಲ್ಲೇಖಿಸುವ ಮೊದಲನೆಯ ಪ್ಯಾರಗ್ರಾಫನ್ನು ಓದಿರಿ.] ಆ ರೀತಿಯ ಲೋಕದಲ್ಲಿ ಜೀವಿಸಲು ನೀವು ಬಯಸುವುದಾದರೆ, ಈ ಬ್ರೋಷರನ್ನು ನೀವು ಓದಬೇಕು.” ನೀಡಿಕೆಯನ್ನು ಮಾಡಿರಿ.
3 “ನೀವು ಪ್ರೀತಿಸುವ ಯಾರಾದರೊಬ್ಬರು ಸಾಯುವಾಗ” ಎಂಬ ಬ್ರೋಷರನ್ನು ಈ ವಿಧದಲ್ಲಿ ಪ್ರದರ್ಶಿಸಬಹುದು:
◼ “ನಮ್ಮಲ್ಲಿ ಯಾರೂ ಮರಣದಲ್ಲಿ ಒಬ್ಬ ಪ್ರಿಯ ವ್ಯಕ್ತಿಯನ್ನು ಕಳೆದುಕೊಳ್ಳದೆ ಇರುವ ದಿನವು ಎಂದಾದರೂ ಬರುವುದೆಂದು ನೀವು ನೆನಸುತ್ತೀರೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸುಂದರವಾಗಿ ಬರೆಯಲ್ಪಟ್ಟ ಈ ಬ್ರೋಷರ್, ಅಂತಹ ಒಂದು ದಿನ ಹತ್ತಿರದ ಭವಿಷ್ಯತ್ತಿನಲ್ಲಿ ಬರುತ್ತಿದೆ ಎಂಬ ಬೈಬಲಿನ ಖಂಡಿತವಾದ ವಾಗ್ದಾನದಿಂದ ಲಕ್ಷಾಂತರ ಜನರನ್ನು ಸಂತೈಸಿದೆ. [ಪುಟ 5ಕ್ಕೆ ತಿರುಗಿಸಿರಿ ಮತ್ತು 1 ಕೊರಿಂಥ 15:21, 22ನ್ನು ಸೇರಿಸಿ ಐದನೆಯ ಪ್ಯಾರಗ್ರಾಫನ್ನು ಓದಿರಿ. ಅನಂತರ ಪುಟ 30 ರಲ್ಲಿರುವ ದೃಷ್ಟಾಂತಕ್ಕೆ ತಿರುಗಿಸಿರಿ.] ಸತ್ತುಹೋದ ನಮ್ಮ ಪ್ರಿಯ ಜನರನ್ನು ಪುನರುತ್ಥಾನದಲ್ಲಿ ಪುನಃ ಸ್ವಾಗತಿಸುವಾಗ, ನಾವು ಅನುಭವಿಸಬಹುದಾದ ಆನಂದವನ್ನು ಚಿತ್ರಕಾರನು ಇಲ್ಲಿ ಸೆರೆಹಿಡಿದಿದ್ದಾನೆ. ಆದರೆ ಆ ಸಂತೋಷಕರ ದೃಶ್ಯವು ಎಲ್ಲಿ ಸಂಭವಿಸುವುದು? ಆ ಪ್ರಶ್ನೆಗೆ ಬೈಬಲಿನ ಉತ್ತರವನ್ನು ಈ ಬ್ರೋಷರ್ ನಿಮಗೆ ತೋರಿಸುವುದು.” ಬ್ರೋಷರನ್ನು ಸ್ವೀಕರಿಸುವುದಾದರೆ, “ನಾನು ಅನಂತರ ಹಿಂದಿರುಗಲು ಮತ್ತು ಈ ವಿಷಯದ ಕುರಿತು ಇನ್ನೂ ಚರ್ಚಿಸಲು ಬಯಸುತ್ತೇನೆ,” ಎಂದು ನೀವು ಕೂಡಿಸಬಹುದು.
4 ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕೆ ನೇರವಾದ ಈ ಪ್ರಸ್ತಾವನೆಯನ್ನು ಬಳಸುತ್ತಾ, ನೀವು “ಇಗೋ! ಎಲ್ಲವನ್ನು ಹೊಸದು ಮಾಡುತ್ತೇನೆ” ಎಂಬ ಬ್ರೋಷರನ್ನು ಪ್ರದರ್ಶಿಸಬಹುದು:
◼ “ಬೈಬಲಿನ ಕುರಿತು ನೀವು ಕೇಳಿರಬಹುದಾದರೂ ಅದರ ಕುರಿತು ಹೆಚ್ಚನ್ನು ಕಲಿಯುವ ಅವಕಾಶ ನಿಮಗೆ ಇದ್ದಿರಲಿಕ್ಕಿಲ್ಲ. ಬೈಬಲಿನ ಕುರಿತು ಅತಿ ಸಾಮಾನ್ಯವಾಗಿ ಕೇಳಲ್ಪಡುವ ಪ್ರಶ್ನೆಗಳಲ್ಲಿ ಕೆಲವನ್ನು ಈ ಪ್ರಕಾಶನವು ಪಟ್ಟಿಮಾಡುತ್ತದೆ. [ಪುಟ 30ರ ಕಡೆಗೆ ಗಮನ ಸೆಳೆಯಿರಿ.] ಈ ಕೊನೆಯ ಪ್ರಶ್ನೆಯು ಅನೇಕರ ಆಸಕ್ತಿಯನ್ನು ಕೆರಳಿಸಿದೆ: ‘ಪ್ರಮೋದವನದಲ್ಲಿ ನಿತ್ಯಜೀವಕ್ಕಾಗಿ ನೀವು ಹೇಗೆ ತಯಾರಿಸಬಹುದು?’” ಪುಟಗಳು 29-30 ರಲ್ಲಿರುವ ಪ್ಯಾರಗ್ರಾಫ್ಗಳು 57-8ನ್ನು ನೀವು ಚರ್ಚಿಸಿ ಪ್ರಕಟನೆ 21:3, 4ನ್ನು ಓದಿದರೆ, ಒಂದು ಬೈಬಲ್ ಅಧ್ಯಯನವನ್ನು ಆರಂಭಿಸಲಿಕ್ಕಾಗಿ ಆಧಾರವನ್ನು ಸ್ಥಾಪಿಸುವಿರಿ. ಬ್ರೋಷರನ್ನು ನೀಡುವ ಮತ್ತು ಇತರ ಪ್ರಶ್ನೆಗಳಲ್ಲಿ ಕೆಲವನ್ನು ಚರ್ಚಿಸಲು ನಿಮಗೆ ಸಾಧ್ಯವಾಗುವ ಪುನರ್ಭೇಟಿಯೊಂದನ್ನು ಏರ್ಪಡಿಸುವ ಮೂಲಕ ಮುಕ್ತಾಯಗೊಳಿಸಿರಿ.
5 “ನಿತ್ಯಕ್ಕೂ ಬಾಳುವ ದೈವಿಕ ನಾಮ” (ಇಂಗ್ಲಿಷ್) ಎಂಬ ಬ್ರೋಷರಿನೊಂದಿಗೆ ಸರಳವಾದ ಈ ನಿರೂಪಣೆಯನ್ನು ಉಪಯೋಗಿಸಿ ನೋಡಲು ನೀವು ಬಯಸಬಹುದು:
◼ “ನಾನು ಬೈಬಲಿನಿಂದ ಕಲಿತ ಪ್ರಥಮ ವಿಷಯಗಳಲ್ಲಿ ಒಂದು, ದೇವರ ನಾಮವಾಗಿತ್ತು. ಅದು ಏನೆಂದು ನಿಮಗೆ ಗೊತ್ತೊ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ನಾನು ನಿಮಗೆ ತೋರಿಸುತ್ತೇನೆ. ಅದು ಇಲ್ಲಿ ಬೈಬಲಿನಲ್ಲಿ ಕೀರ್ತನೆ 83:18 ರಲ್ಲಿ ಇದೆ. [ಓದಿರಿ.] ಯೆಹೋವ ಎಂಬ ದೇವರ ನಾಮವು ಅನೇಕ ವಿಭಿನ್ನ ಭಾಷೆಗಳಲ್ಲಿ ಹೇಗೆ ಕಂಡುಬರುತ್ತದೆ ಎಂಬುದನ್ನು ಈ ಬ್ರೋಷರ್ ತೋರಿಸುತ್ತದೆ. [ಪುಟ 8 ರಲ್ಲಿರುವ ರೇಖಾಚೌಕವನ್ನು ತೋರಿಸಿರಿ.] ಯೆಹೋವ ಮತ್ತು ಆತನ ಉದ್ದೇಶಗಳ ಕುರಿತು ಹೆಚ್ಚನ್ನು ಕಲಿಯಲು ನೀವು ಬಯಸುವುದಾದರೆ, ಈ ಬ್ರೋಷರನ್ನು ನೀವು ಓದಬೇಕು.” ಬ್ರೋಷರನ್ನು ಮನೆಯವನಿಗೆ ಕೊಡಿರಿ.
6 ಉಪಯೋಗಿಸಲು ಉತ್ತಮ ಬ್ರೋಷರ್ಗಳ ಇಂತಹ ವಿವಿಧತೆಯೊಂದಿಗೆ, ‘ದೀನರಿಗೆ ಶುಭವರ್ತಮಾನವನ್ನು ಸಾರಲು’ ನಾವು ಖಂಡಿತವಾಗಿಯೂ ಸುಸಜ್ಜಿತರಾಗಿದ್ದೇವೆ.—ಯೆಶಾ. 61:1.