ನಮ್ಮ ಜೀವರಕ್ಷಣೆಯ ಶುಶ್ರೂಷೆಯಲ್ಲಿ ಸಫಲರಾಗಿ ಭಾಗವಹಿಸುವುದು
1 ಅಪೊಸ್ತಲ ಪೌಲನು “ಕೆಲವರನ್ನು ರಕ್ಷಿಸಬೇಕೆಂದು” ಸುಸಮಾಚಾರದ ತನ್ನ ನೀಡುವಿಕೆಯನ್ನು ಹೊಂದಿಸಿಕೊಂಡನು. (1 ಕೊರಿಂಥ 9:19-23) ಅದೇ ರೀತಿಯಲ್ಲಿ, ಮನೆಯವನ ಅಭಿರುಚಿಗಳನ್ನು ಅರಿತುಕೊಳ್ಳಲು ನಾವು ಎಚ್ಚರವಾಗಿದ್ದರೆ ಮತ್ತು ನಮ್ಮ ಚರ್ಚೆಯನ್ನು ಅವನ ಅಗತ್ಯತೆಗಳಿಗೆ ಹೊಂದಿಸಲು ಸಿದ್ಧರಿದ್ದರೆ, ನಮ್ಮ ಶುಶ್ರೂಷೆಯಲ್ಲಿ ನಾವು ಹೆಚ್ಚು ಸಫಲರಾಗುವೆವು. ಇದು ಕಾವಲಿನಬುರುಜು ಮತ್ತು ಎಚ್ಚರ! ದ ಚಂದಾಗಳನ್ನು ನೀಡುವಾಗ ಕಠಿನವಾಗಿರಬಾರದು.
2 ನಿಮ್ಮನ್ನು ಪರಿಚಯಿಸಿಕೊಂಡ ಅನಂತರ, ನಿಮ್ಮ ಸ್ವಂತ ಮಾತುಗಳಲ್ಲಿ ಈ ರೀತಿ ಹೇಳುವ ಮೂಲಕ ನೀವು ಆರಂಭಿಸಬಹುದು:
▪ “ನಮ್ಮ ಕಾಲದ ಸಮಸ್ಯೆಗಳಿಗೆ ಕಾರ್ಯಸಾಧ್ಯ ಪರಿಹಾರಗಳನ್ನು ಒದಗಿಸುವುದರಲ್ಲಿ ಲೋಕ ಸರಕಾರಗಳ ವ್ಯಕ್ತವಾಗಿರುವ ಅಸಾಮರ್ಥ್ಯದಿಂದ ಅನೇಕ ಜನರು ನಿರಾಶರಾಗಿದ್ದಾರೆ. ತಮ್ಮ ಸಮಸ್ಯೆಗಳಿಗೆ ಕೂಡ ಕೆಲವರು ಸರಕಾರಗಳನ್ನು ದೂಷಿಸುತ್ತಾರೆ. ನಮ್ಮೆಲ್ಲರ ಆವಶ್ಯಕತೆಗಳನ್ನು ಸಾಕಾಗುವಷ್ಟರ ಮಟ್ಟಿಗೆ ಪರಾಮರಿಸಲು ಶಕ್ತವಾಗಿರುವ ಒಂದು ಸರಕಾರವಿರಬಹುದೆಂದು ನೀವು ಯೋಚಿಸುತ್ತೀರೊ? [ಪ್ರತಿವರ್ತಿಸಲು ಬಿಡಿರಿ.] ನಾವು ಎದುರಿಸುತ್ತಿರುವ ಸಮಸ್ಯೆಗಳನ್ನೆಲ್ಲಾ ಖಂಡಿತವಾಗಿ ನಿರ್ಮೂಲ ಮಾಡಲಿರುವ ಒಂದು ಸರಕಾರದ ವಿಶ್ವಾಸಾರ್ಹ ವಾಗ್ದಾನವು ನಮಗಿದೆಯೆಂದು ನಿಮಗೆ ಗೊತ್ತಿದೆಯೊ?” ಮನೆಯವನ ಉತ್ತರವನ್ನು ಎಚ್ಚರದಿಂದ ಆಲಿಸಿರಿ. ಅವನು ಏನು ಹೇಳುತ್ತಾನೊ ಅದನ್ನು ಆಧಾರಿಸಿ, ಹಲವಾರು ಭಿನ್ನವಾದ ನಿರೂಪಣೆಗಳಲ್ಲಿ ಒಂದರ ಮೇಲೆ ವಿಸ್ತರಿಸಲು ಸಿದ್ಧರಾಗಿರ್ರಿ.
3 ಮನೆಯವನು ಒಬ್ಬ ಕ್ರೈಸ್ತನಾಗಿದ್ದಾನೆಂದು ಹೇಳಿಕೊಳ್ಳುವ ಸೂಚನೆ ಇರುವದಾದರೆ, ಅವನು “ನಮ್ಮ ತಂದೆ,” ಯಾ ಕರ್ತನ ಪ್ರಾರ್ಥನೆಯನ್ನು ಪ್ರಾರ್ಥಿಸುತ್ತಾನೊ ಎಂದು ನಾವು ಕೇಳಬಹುದು. ಅವನು ಅಹುದೆನ್ನುವದಾದರೆ, ಆದರ್ಶ ಪ್ರಾರ್ಥನೆಯಲ್ಲಿ, “ನಿನ್ನ ರಾಜ್ಯವು ಬರಲಿ. ನಿನ್ನ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ,” ಎಂಬ ವಿಷಯದ ತನಕ ನಾವು ಅದನ್ನು ಉಚ್ಚರಿಸಬಹುದು. (ಮತ್ತಾಯ 6:9, 10) ಯಾವತ್ತಾದರೂ ಒಂದು ದಿನ ಯೆಹೋವನ ಚಿತ್ತವು ಭೂಮಿಯ ಮೇಲೆ ನೆರವೇರಲಿದೆ ಎಂಬುದನ್ನು ಇದು ಸಿದ್ಧಪಡಿಸುತ್ತದೆ. ಕಾವಲಿನಬುರುಜು ಯಾ ಎಚ್ಚರ! ದಿಂದ ಒಂದು ಸೂಕ್ತವಾದ ಲೇಖನವನ್ನು ಉಲ್ಲೇಖಿಸಬಹುದು ಮತ್ತು ಒಂದು ಚಂದಾವನ್ನು ನೀಡಬಹುದು. ನೀಡುವಿಕೆಯನ್ನು ಮನೆಯವನು ನಿರಾಕರಿಸುವದಾದರೆ, ದ ಗವರ್ನ್ಮೆಂಟ್ ದ್ಯಾಟ್ ವಿಲ್ ಬ್ರಿಂಗ್ ಪ್ಯಾರಡೈಸ್ ಪುಟ 3 ರಂಥ, ಅದೇ ವಿಚಾರವನ್ನು ಹಿಂಬಾಲಿಸುವ ಒಂದು ಬ್ರೋಷರನ್ನು ತೋರಿಸಬಹುದು.
4 ಮನೆಯವನು ಒಬ್ಬ ಹಿಂದು ಆಗಿದ್ದರೆ, ದಾನಿಯೇಲ 2:44ನ್ನು ಹೋಲಿಸಿ ಅದನ್ನು ಪ್ರಚಲಿತ ಪತ್ರಿಕೆಗಳಲ್ಲಿ ಒಂದರಲ್ಲಿನ ಒಂದು ವಿಷಯದೊಂದಿಗೆ ಕೂಡಿಸಬಹುದು. ಮತ್ತೊಮ್ಮೆ, ಚಂದಾವು ನಿರಾಕರಿಸಲ್ಪಟ್ಟಲ್ಲಿ, ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಎಂಬ ಬ್ರೋಷರಿನ ಪುಟ 8ಕ್ಕೆ ಆಮೇಲೆ ತಿರುಗಿಸಿರಿ. ಪ್ಯಾರಗ್ರಾಫ್ 4 ರಲ್ಲಿ ಸೂಚಿಸಿರುವ ಒಂದು ಸಾಮಾನ್ಯ ನಂಬಿಕೆಗೆ ಗಮನ ಸೆಳೆಯಿರಿ, ಆ ಮೇಲೆ ಯೆಹೋವ ದೇವರು ನಮ್ಮ ಸಮಸ್ಯೆಗಳನ್ನು ಬಹಳ ಬೇಗನೆ ಪರಿಹರಿಸಲು ಹೇಗೆ ಕಾರ್ಯ ತೆಗೆದುಕೊಳ್ಳಲಿದ್ದಾನೆಂದು ತೋರಿಸಿರಿ. ಈ ಬ್ರೋಷರನ್ನು ಎರಡು ಪತ್ರಿಕೆಗಳೊಂದಿಗೆ ನೀಡಬಹುದು.
5 ಮನೆಯವನು ತನ್ನ ಜೀವನದಲ್ಲಿ ತೃಪ್ತನಾಗಿ ಕಂಡುಬಂದರೆ, ನೀವು ಈ ಪ್ರಶ್ನೆಯನ್ನು ಎಬ್ಬಿಸಬಹುದು:
▪ “ಸರಕಾರದ ಭವಿಷ್ಯದ ಕುರಿತು ಬೈಬಲ್ ಏನು ಹೇಳುತ್ತದೊ ಅದನ್ನು ನಾವೇಕೆ ಗಂಭೀರವಾಗಿ ಪರಿಗಣಿಸಬೇಕು?” ಅನಂತರ ನಾವು ರೀಸನಿಂಗ್ ಪುಸ್ತಕದ 154 ಮತ್ತು 155 ಪುಟಗಳಲ್ಲಿರುವ ಮಾಹಿತಿಯನ್ನು ಉಪಯೋಗಿಸಿ, ಕೊಡಲಾದ ಎಂಟು ಕಾರಣಗಳಲ್ಲಿ ಒಂದು ಯಾ ಹಲವನ್ನು ಸಂಕ್ಷಿಪ್ತವಾಗಿ ಉಲ್ಲೀಖಿಸಬಹುದು. ನಿಮ್ಮಲ್ಲಿರುವ ಪತ್ರಿಕೆಗಳಲ್ಲಿ ಒಂದರಲ್ಲಿನ ಒಂದು ಸೂಕ್ತವಾದ ವಿಷಯದ ಜೊತೆಗೆ ಈ ಯೋಚನೆಯನ್ನು ಜೋಡಿಸಿರಿ. ಮನೆಯವನು ಒಂದು ಚಂದಾವನ್ನು ಸ್ವೀಕರಿಸದಿದ್ದರೆ, ಸಂಭಾಷಣೆಯನ್ನು ಮುಂದುವರಿಸಲು ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಯನ್ನು ಉಪಯೋಗಿಸಿ.
6 ಇನ್ನೊಂದು ಸಂದರ್ಶನಕ್ಕಾಗಿ ನೀವು ಮನೆಯವನ ಹಸಿವನ್ನು ಕೆರಳಿಸದಿದ್ದರೆ ನಿಮ್ಮ ಪ್ರಥಮ ಭೇಟಿಯು ಸಂಪೂರ್ಣವಾಗಿ ಸಫಲವಾಗಿರುವದಿಲ್ಲ. ಆದುದರಿಂದ, ಒಂದು ಆಸಕ್ತಿಭರಿತ ಪ್ರಶ್ನೆಯನ್ನು ಕೇಳಲು ನಿಶ್ಚಯಿಸಿ ಮತ್ತು ನೀವು ಹಿಂದಿರುಗಿದಾಗ ಅದನ್ನು ಉತ್ತರಿಸಲು ಮಾತು ಕೊಡಿರಿ.
7 ಮೇಲಿನ ವಿಷಯದಿಂದ, ನಿಮಗೆ ಹೇಳಲು ನಿರಾಳವಾಗಿರುವುದನ್ನು ಆರಿಸಿರಿ. ನಿಮ್ಮ ಟೆರಿಟೊರಿಗೆ ಸರಿಹೋಲುವಂತೆ ಈ ಸಲಹೆಗಳ ಹೊಂದಾಣಿಕೆ ಮಾಡಿಕೊಳ್ಳಿರಿ. ಮನೆಯವನ ಅಗತ್ಯಗಳಿಗೆ ನಿಮ್ಮ ಚರ್ಚೆಯನ್ನು ಬೇಗನೆ ಹೊಂದಿಸಿಕೊಳ್ಳಲು ನೀವು ಉಪಯೋಗಿಸಲಿರುವ ಬ್ರೋಷರ್ಗಳು, ಕಿರುಹೊತ್ತಗೆಗಳು, ಮತ್ತು ಪತ್ರಿಕೆಯ ಲೇಖನಗಳೊಂದಿಗೆ ಪರಿಚಯ ಮಾಡಿಕೊಳ್ಳಿರಿ. ನಾವೆಲ್ಲರೂ ನಮ್ಮ ನಿರೂಪಣೆಗಳನ್ನು ಶ್ರದ್ಧಾಪೂರ್ವಕವಾಗಿ “ಸುಸಮಾಚಾರಕ್ಕೋಸ್ಕರ” ತಯಾರಿಸಿ ಮತ್ತು ಹೀಗೆ ಈ ಜೀವರಕ್ಷಣೆಯ ಶುಶ್ರೂಷೆಯಲ್ಲಿ ಸಫಲರಾಗಿ ಪಾಲಿಗರಾಗೋಣ.—1 ಕೊರಿಂಥ 9:23.