ಆಸಕ್ತರಿಗೆ ಸಹಾಯ ನೀಡಲು ಆನಂದದಿಂದ ಹಿಂದಿರುಗಿರಿ
1 ಮನೆಯಿಂದ ಮನೆಯ ಕೆಲಸದಲ್ಲಿ ಭಾಗವಹಿಸುವವರೆಲ್ಲರೂ ಆಸಕ್ತಿವುಳ್ಳ ಜನರಿಗೆ ಸಹಾಯ ಮಾಡಲು ಬಯಸುತ್ತಾರೆ. ಇಂಥ ಸಹಾಯವನ್ನು ನೀಡುವ ಮೂಲಕ, ನಾವು ಆಳವಾದ ಸಂತೋಷ ಮತ್ತು ತೃಪ್ತಿಯನ್ನು ಅನುಭವಿಸುತ್ತೇವೆ. (ಹೋಲಿಸಿರಿ ಕೀರ್ತನೆ 126:5, 6.) ನಾವು ತಯಾರಾಗಿರುವದನ್ನು ಇದು ಅಗತ್ಯಗೊಳಿಸುತ್ತದೆ.
2 ತಯಾರಿಯು ಮನೆಯಿಂದ ಮನೆಯ ನಮ್ಮ ರೆಕಾರ್ಡಿನಲ್ಲಿ ವಿವರವಾದ ಮಾಹಿತಿಯನ್ನು ಇಡುವದರೊಂದಿಗೆ ಆರಂಭಿಸುತ್ತದೆ. ಇದರಲ್ಲಿ ಕಾವಲಿನಬುರುಜು ಯಾ ಎಚ್ಚರ! ದ ಯಾವ ಸಂಚಿಕೆಯನ್ನು ಮನೆಯವನೊಂದಿಗೆ ನೀವು ಬಿಟ್ಟಿದ್ದೀರಿ ಮತ್ತು ಅವನು ಒಂದು ಚಂದಾವನ್ನು ಪಡೆದಿದ್ದಾನೊ ಇಲ್ಲವೊ ಎಂಬುದು ಒಳಗೂಡಿರುತ್ತದೆ. ಪ್ರಥಮ ಭೇಟಿಯಲ್ಲಿ ಚರ್ಚಿಸಿದ ವಿಷಯವನ್ನು ಮತ್ತು ಮನೆಯವನ ಪ್ರತಿಕ್ರಿಯೆಯನ್ನು ಟಿಪ್ಪಣಿ ಮಾಡಿಕೊಳ್ಳಿರಿ. ನೀವು ಹಿಂದಿರುಗಿದಾಗ, ಸಂಭಾಷಣೆಯನ್ನು ಹೇಗೆ ನೀವು ಪ್ರಾರಂಭಿಸಬೇಕೆಂದು ಬಯಸುತ್ತೀರೊ ಅದನ್ನೂ ಕೂಡ ನೀವು ಬರೆದಿಡಲು ಬಯಸಬಹುದು.
3 ಉದಾಹರಣೆಗೆ, ನೀವು ಪ್ರಥಮವಾಗಿ ಕರ್ತನ ಪ್ರಾರ್ಥನೆಯನ್ನು ಸೂಚಿಸಿ ಅನಂತರ “ಗವರ್ನ್ಮೆಂಟ್” ಬ್ರೋಷರನ್ನು ನೀಡಿರುವಲ್ಲಿ, ಈ ರೀತಿಯಲ್ಲಿ ನೀವು ಸಂಕ್ಷಿಪ್ತವಾಗಿ ಹೇಳಬಹುದು:
▪ “ನನ್ನ ಹಿಂದಿನ ಸಂದರ್ಶನದಲ್ಲಿ, ನಾವು ದೇವರ ಚಿತ್ತವು ಹೇಗೆ ಭೂಮಿಯ ಮೇಲೆ ನೆರವೇರಲಿದೆ ಮತ್ತು ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಶಾಂತಿಯು ವಾಸ್ತವವಾಗಲಿದೆ ಎಂಬುದನ್ನು ಚರ್ಚಿಸಿದ್ದೆವು. ನಾನು ಬಿಟ್ಟಂಥ ಬ್ರೋಷರ್ನಲ್ಲಿ, ಮಾನವಕುಲಕ್ಕೆ ದೇವರ ರಾಜ್ಯವು ತರಲಿರುವ ಬೇರೆ ಆಶೀರ್ವಾದಗಳ ಬಗ್ಗೆ ಪುಟ 29 ರಲ್ಲಿ ಏನು ಹೇಳುತ್ತದೆಂದು ದಯವಿಟ್ಟು ಗಮನಿಸಿ.”
4 ವ್ಯಕ್ತಿಯು ಹಿಂದು ಆಗಿದ್ದರೆ, ಈ ರೀತಿ ಯಾವುದಾದರೂ ಸಂಗತಿ ಹೇಳಿರಿ:
▪ “ನಾನು ಮುಂಚೆ ಭೇಟಿಯಾದಾಗ, ದಾನಿಯೇಲ 2:44 ರಲ್ಲಿಯ ಪ್ರವಾದನೆ ಮತ್ತು ಅದು ಯಾವಾಗ ನೆರವೇರಲಿದೆ ಎಂಬುದನ್ನು ನಾವು ಚರ್ಚಿಸಿದೆವು.” ಶಾಸ್ತ್ರವಚನವನ್ನು ಮತ್ತೊಮ್ಮೆ ಓದಿ ಮತ್ತು ನಮ್ಮ ಸಮಸ್ಯೆಗಳು—ಅವುಗಳನ್ನು ಬಗೆಹರಿಸಲು ನಮಗೆ ಯಾರು ಸಹಾಯ ಮಾಡುವರು? ಬ್ರೋಷರಿನ ಪುಟಗಳು 12 ರಿಂದ 17ರ ವರೆಗೆ ಉಲ್ಲೇಖಿಸುತ್ತಾ, ನಿಮ್ಮ ಪ್ರಥಮ ನಿರೂಪಣೆಯನ್ನು ಎಲ್ಲಿ ನಿಲ್ಲಿಸಿದ್ದೀರೊ ಅಲ್ಲಿಂದ ಪ್ರಾರಂಭಿಸಿರಿ. ಈ ಬದಲಾವಣೆ ಯಾವಾಗ ಬರುವದೆಂಬ ಕಾಲ ಸಮಯದ ಕುರಿತು ಬೈಬಲ್ ಸಂದೇಹಕ್ಕೆ ಯಾವ ಆಸ್ಪದವನ್ನು ಕೊಡುವದಿಲ್ಲವೆಂಬ ನಿಜತ್ವಕ್ಕೆ ಮನೆಯವನ ಗಮನವನ್ನು ಸೆಳೆಯಿರಿ. ಪ್ರಾಯೋಗಿಕವಾದಲ್ಲಿ, ಅವನ ಬ್ರೋಷರನ್ನು ತರಲು ಮತ್ತು ವಿಷಯವನ್ನು ಜೊತೆಯಾಗಿ ಪರಿಗಣಿಸಲು ಅವನನ್ನು ಆಮಂತ್ರಿಸಿರಿ.
5 ಮನೆಯವನು ಪ್ರಾಪಂಚಿಕವಾಗಿ ಯಾ ಬೇರೆ ರೀತಿಯಲ್ಲಿ ತೃಪ್ತನಾಗಿದ್ದಾನೆಂದು ಕಂಡುಬಂದರೆ, ಅವನಲ್ಲಿ ಬಿಟ್ಟಂಥ ಪತ್ರಿಕೆಯಲ್ಲಿರುವ ಒಂದು ಹೇಳಿಕೆ ಯಾ ಉತ್ತೇಜಕವಾಗಿರುವ ಚಿತ್ರವೊಂದರ ಮೇಲೆ ಅವನ ಹೇಳಿಕೆಗಳನ್ನು ನೀವು ಕೇಳಬಹುದು. ಅಥವಾ ಅವನು ಒಂದು ಕಿರುಹೊತ್ತಗೆಯನ್ನು ಮಾತ್ರ ಸ್ವೀಕರಿಸಿದ್ದರೆ, ಶಾಂತಿಭರಿತ ಹೊಸ ಲೋಕದಲ್ಲಿ ಜೀವನ ಎಂಬ ಕಿರುಹೊತ್ತಗೆಗೆ ಮತ್ತೆ ನೀವು ತಿರುಗಿಸಿ ಪುಟಗಳು 3 ಮತ್ತು 4 ರಲ್ಲಿ ಹೇಳಿರುವದನ್ನು ಓದಬಹುದು. ಮನೆಯವನು ಒಂದು ಸುಂದರ ಭೂಪರದೈಸದಲ್ಲಿ ಜೀವಿಸಲು ಬಯಸುತ್ತಾನೋ ಎಂದು ಅವನನ್ನು ಕೇಳಿರಿ. ಪುಟ 6 ರಲ್ಲಿರುವ ‘ಅದು ನಿಮಗೆ ಹೇಗೆ ಸಾಧ್ಯ’ ಎಂಬ ಉಪಶೀರ್ಷಿಕೆಯ ಕೆಳಗಿರುವ ಸಮಾಚಾರವನ್ನು ಅವನೊಂದಿಗೆ ಚರ್ಚಿಸಿರಿ.
6 ಕಾವಲಿನಬುರುಜು ಯಾ ಎಚ್ಚರ! ದಲ್ಲಿ ನೀವು ಚರ್ಚಿಸಿರಬಹುದಾದ ಒಂದು ಲೇಖನದೊಂದಿಗೆ ಇದೇ ರೀತಿಯ ಮೂಲಭೂತ ವಿಧಾನವನ್ನು ಉಪಯೋಗಿಸಬಲ್ಲಿರಿ. ನಿಮ್ಮ ಪ್ರಥಮ ಭೇಟಿಯಲ್ಲಿ ಅತ್ಯುಜ್ಜಲ್ವಗೊಳಿಸಿದ ಲೇಖನವನ್ನು ತೋರಿಸಿರಿ ಮತ್ತು ಅನಂತರ ಅದೇ ಲೇಖನದಲ್ಲಿ ಯಾ ನಿಮ್ಮಲ್ಲಿರುವ ಇನ್ನೊಂದು ಸಂಚಿಕೆಯಲ್ಲಿರುವ ಇನ್ನೊಂದು ಆಸಕ್ತಿಯುಳ್ಳ ಅಂಶವನ್ನು ತಿಳಿಸಿರಿ. ಸಾಧ್ಯವಾದಲ್ಲಿ, ಒಂದು ಶಾಸ್ತ್ರವಚನವನ್ನು ಸೇರಿ ಓದಿರಿ ಮತ್ತು ಮನೆಯವನ ಹೇಳಿಕೆಗಳಿಗಾಗಿ ಕೇಳಿರಿ.
7 ಬಹುಶಃ ಮನೆಯವನಿಗೆ, ನೀವು ಪ್ರಥಮ ಬಾರಿ ಅವನನ್ನು ಭೇಟಿಯಾದಾಗ ಒಂದು ಚಂದಾವನ್ನು ಪಡೆಯಲು ಮನಸ್ಸಿರದೆ ಇದ್ದಿರಬಹುದು, ಆದರೆ ನೀವು ಪುನಃ ಭೇಟಿಯಾಗುವಾಗ ಪತ್ರಿಕೆಗಳಲ್ಲಿ ಒಂದರ ಮುಂದಿನ ಸಂಚಿಕೆ ನಿಮ್ಮಲ್ಲಿ ಇರುವದಾದರೆ, ಕಾಣಿಸಿಕೊಂಡಂಥ ಆಸಕ್ತಿವುಳ್ಳ ಹೊಸ ಲೇಖನಗಳನ್ನು ತೋರಿಸಲು ಮತ್ತು ಒಂದು ಚಂದಾವನ್ನು ನೀಡಲು ಇದೊಂದು ಉತ್ತಮ ಅವಕಾಶವಾಗಿರಬಹುದು.
8 ಒಂದು ಬೈಬಲ್ ಅಭ್ಯಾಸವನ್ನು ಆರಂಭಿಸುವ ಗುರಿಯನ್ನು ನಿಮ್ಮ ಮನಸ್ಸಿನಲ್ಲಿಡಿರಿ. ಸಾಮಾನ್ಯವಾಗಿ ಆಸಕ್ತಿಯನ್ನು ಆ ಮಟ್ಟಕ್ಕೆ ವಿಕಾಸಿಸಲು ಇದು ಹಲವಾರು ಭೇಟಿಗಳನ್ನು ತೆಗೆದುಕೊಳ್ಳುತ್ತದೆ. ಸಾಧ್ಯವಾದಷ್ಟು ಬೇಗನೆ ಹಿಂದಿರುಗುವ ಮೂಲಕ ಮನೆಯವನ ಮೇಲಿರುವ ನಿಮ್ಮ ವೈಯಕ್ತಿಕ ಚಿಂತೆಯನ್ನು ತೋರಿಸಿರಿ.
9 ನಾವು ಘೋಷಿಸುವ ಸುಸಮಾಚಾರವು ಬಹಳಷ್ಟು ಆನಂದವನ್ನು ಉಂಟುಮಾಡುತ್ತದೆ. (ಲೂಕ 2:10) ಆಸಕ್ತಿವುಳ್ಳ ಜನರು ನಮ್ಮ ಪ್ರಯತ್ನಗಳಿಗೆ ಪ್ರತಿಕ್ರಿಯಿಸುವಾಗ, ಇದು ನಿಶ್ಚಯವಾಗಿಯೂ ಹರ್ಷಿಸಲು ಒಂದು ಕಾರಣವಾಗಿದೆ. (ಫಿಲಿಪ್ಪಿ 4:1) ಕ್ಷೇತ್ರದಲ್ಲಿ ನಾವು ಕಾಣುವ ಆಸಕ್ತರಿಗೆ ಸಹಾಯ ಮಾಡಲು ಹಿಂದಿರುಗುವ ಮೂಲಕ ಇಂತಹ ಆನಂದವನ್ನು ಕೊಯ್ಯೋಣ.