ಜನರ ವಿಶೇಷ ಅಭಿರುಚಿಗಳಿಗೆ ಇಷ್ಟವಾಗುವ ಲೇಖನಗಳನ್ನು ಆಯ್ದುತೆಗೆಯಿರಿ
1 ಬಿಲ್ಲುಗಾರರು ತಮ್ಮ ಬಾಣಗಳಿಂದ ಜಾಗರೂಕವಾದ ಗುರಿಯನ್ನಿಡುವಂತೆ, ಅನೇಕ ಸಭಾ ಪ್ರಚಾರಕರು ಮತ್ತು ಪಯನೀಯರರು ತಮ್ಮ ಟೆರಿಟೊರಿಯಲ್ಲಿರುವ ಜನರ ನಿರ್ದಿಷ್ಟ ಅಭಿರುಚಿಗಳಿಗೆ ಇಷ್ಟವಾಗುವಂತಹ, ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಂದ ಆಯ್ದುತೆಗೆದ ಲೇಖನಗಳನ್ನು ಉಪಯೋಗಿಸುತ್ತಾ, ಅತ್ಯುತ್ಕೃಷ್ಟವಾದ ಯಶಸ್ಸನ್ನು ಅನುಭವಿಸುತ್ತಿದ್ದಾರೆ. ಆ ಪತ್ರಿಕೆಗಳ ನಿರ್ದಿಷ್ಟ ಲೇಖನಗಳನ್ನು ಯಾರು ಓದಲು ಬಯಸಬಹುದೆಂದು ನಿರ್ಧರಿಸಿ, ನಮ್ಮ ಪತ್ರಿಕೆಗಳಿಗೆ ಚಂದಾ ಮಾಡುವಂತೆ ನಿರ್ದಿಷ್ಟ ವ್ಯಕ್ತಿಗಳಿಗೆ ಉತ್ತೇಜನ ನೀಡಲು ಅಂತಹ ಲೇಖನಗಳನ್ನು ಅವರು ಉಪಯೋಗಿಸುತ್ತಾರೆ. ಅವರು ಇದನ್ನು ಹೇಗೆ ಮಾಡುತ್ತಾರೆ?
2 ಪ್ರಥಮವಾಗಿ ಅವರು ಪ್ರತಿಯೊಂದು ಸಂಚಿಕೆಯನ್ನು ಮೊದಲಿನಿಂದ ಕೊನೆಯ ವರೆಗೆ ಓದುತ್ತಾರೆ. ತದನಂತರ ಪ್ರತಿಯೊಂದು ಲೇಖನವು ಯಾವ ರೀತಿಯ ವ್ಯಕ್ತಿಗೆ ಇಷ್ಟವಾಗುತ್ತದೆ? ಎಂದು ಅವರು ಸ್ವತಃ ಪ್ರಶ್ನಿಸಿಕೊಳ್ಳುತ್ತಾರೆ. ತರುವಾಯ, ಆ ಲೇಖನವನ್ನು ಓದುವುದರಲ್ಲಿ ಆಸಕ್ತರಾಗಿರಬಹುದಾದ ವ್ಯಕ್ತಿಗಳನ್ನು ಸಂದರ್ಶಿಸುವ ಪ್ರಯತ್ನವು ಮಾಡಲ್ಪಡುತ್ತದೆ. ಅವರ ಅಭಿರುಚಿಗಳನ್ನು ಕೆರಳಿಸಲು, ಯಾವ ವಿಷಯವಾಗಿ ಮಾತಾಡುತ್ತಿದ್ದೇವೊ ಆ ಲೇಖನವನ್ನು ತೋರಿಸಿದ ಬಳಿಕ, ಚಂದಾ ಮಾಡುವಂತೆ ಕೇಳಿಕೊಳ್ಳಲಾಗುತ್ತದೆ. ತಮ್ಮ ಟೆರಿಟೊರಿಯಲ್ಲಿ ಪ್ರತ್ಯೇಕವಾದೊಂದು ಸಂಚಿಕೆಯು ವ್ಯಾಪಕವಾಗಿ ಸ್ವೀಕರಿಸಲ್ಪಡುವುದೆಂದು ಅವರು ಎದುರುನೋಡುವಾಗ, ಹೆಚ್ಚಿನ ಸಂಗ್ರಹವನ್ನು ಆರ್ಡರ್ ಮಾಡುತ್ತಾರೆ.
3 ನಮ್ಮ ಪತ್ರಿಕೆಗಳು ಬಹಳವಾಗಿ ಗೌರವಿಸಲ್ಪಡುತ್ತವೆ: ನೈಜೀರಿಯದಲ್ಲಿ ಅತ್ಯಂತ ವ್ಯಾಪಕವಾಗಿ ಓದಲ್ಪಡುವ ಒಂದು ಅಂತಾರಾಷ್ಟ್ರೀಯ ಪತ್ರಿಕೆಗಾಗಿ ಕೆಲಸಮಾಡುತ್ತಿರುವ ನಮ್ಮ ಚಂದಾದಾರರಲ್ಲಿ ಒಬ್ಬರು, ಎಚ್ಚರ! ಪತ್ರಿಕೆಯ ಕುರಿತು ಹೀಗೆ ಹೇಳಿದರು: “ಸಾರ್ವಜನಿಕರಿಗಾಗಿ ಲೋಕದ ಅತ್ಯುತ್ತಮ ಪತ್ರಿಕೆಯನ್ನು ತಯಾರಿಸಿದುದಕ್ಕಾಗಿ ಅಭಿನಂದನೆಗಳು.” ನಮ್ಮ ಪತ್ರಿಕೆಗಳನ್ನು ಅತ್ಯಾಸಕ್ತಿಯಿಂದ ಓದುವವರೊಬ್ಬರು ಗಮನಿಸಿದ್ದು: “ಬೆಲೆಕಟ್ಟಲಾಗದಂತಹ ವಿವೇಕದ ಎಂತಹ ಅದ್ಭುತಕರ ರತ್ನಗಳು! ನನಗೆ ಹಿಡಿಸುವ ಯಾವುದೇ ವಿಷಯವು, ಈ [ಪತ್ರಿಕೆಗಳ] ಪುಟಗಳಲ್ಲಿ ಎಲ್ಲಿಯಾದರೂ ಚರ್ಚಿಸಲ್ಪಟ್ಟಿರುವುದನ್ನು ನಾನು ಕಂಡುಕೊಳ್ಳಬಲ್ಲೆ.”
4 ಈ ಪತ್ರಿಕೆಗಳು ಬೈಬಲನ್ನು ಒಳಗೊಂಡು, ಲೋಕದ ಘಟನೆಗಳು, ಕುಟುಂಬದ ಚಿಂತೆಗಳು, ಸಾಮಾಜಿಕ ಸಮಸ್ಯೆಗಳು, ಇತಿಹಾಸ, ವಿಜ್ಞಾನ, ಪ್ರಾಣಿ ಮತ್ತು ಸಸ್ಯಜೀವ, ಮುಂತಾದ ವ್ಯಾಪಕವಾದ ವಿಷಯಗಳನ್ನು ಆವರಿಸುತ್ತವೆ. ವಿಷಯವು ತನ್ನ ಅಗತ್ಯಗಳು, ಪರಿಸ್ಥಿತಿಗಳು, ಇಲ್ಲವೆ ವೃತ್ತಿಗೆ ಸಂಬಂಧಿಸಿರುವಾಗ, ಅದನ್ನು ಓದುವ ಒಲವು ಒಬ್ಬ ವ್ಯಕ್ತಿಗೆ ಖಂಡಿತವಾಗಿಯೂ ಇರುತ್ತದೆ. ತಮ್ಮದೇ ಆದ ಇಚ್ಛೆಗಳು ಮತ್ತು ಸಮಸ್ಯೆಗಳಿರುವ ಅನೇಕ ವ್ಯಕ್ತಿಗಳೊಂದಿಗೆ ಮಾತಾಡುವುದರಿಂದ, ನಾವು ಸಂಧಿಸುವ ಜನರಿಗೆ ನಿರ್ದಿಷ್ಟವಾಗಿ ಇಷ್ಟವಾಗುವ ಲೇಖನಗಳನ್ನು ಆಯ್ದುತೆಗೆಯುವುದು ಬಹಳ ಪರಿಣಾಮಕಾರಿಯಾಗಿದೆ.
5 ಇಬ್ಬರು ಸಾಕ್ಷಿಗಳು ವಾರ್ತಾಪತ್ರಿಕೆಯ ಒಬ್ಬ ಅಂಕಣಕಾರನಿಗೆ, 1996, ಸೆಪ್ಟೆಂಬರ್ 8ರ ಅವೇಕ್! ಸಂಚಿಕೆಯನ್ನು ನೀಡಿದಾಗ ಏನು ಸಂಭವಿಸಿತೆಂಬುದನ್ನು ಗಮನಿಸಿರಿ. ಅವನು ಬರೆಯುವುದು: “ನನಗೆ ಆಸಕ್ತಿಯಿಲ್ಲವೆಂದು ಹೇಳುವ ಮೊದಲೇ, ಅವರಲ್ಲಿ ಒಬ್ಬರು ಹೇಳಿದ್ದು: ‘ಅಮೆರಿಕದ ಆದಿವಾಸಿಗಳ ಕುರಿತಾದ ಒಂದು ಲೇಖನ ಇದರಲ್ಲಿದೆ. ಆ ವಿಷಯದ ಕುರಿತು ನೀವು ಬಹಳಷ್ಟು ಬರೆಯುತ್ತಿದ್ದೀರೆಂದು ನಮಗೆ ಗೊತ್ತು.’” ಅವನು ಪತ್ರಿಕೆಯನ್ನು ತೆಗೆದುಕೊಂಡು, ಬೆಳಗ್ಗಿನ ಉಪಾಹಾರದ ಸಮಯದಲ್ಲಿ ಆದಿವಾಸಿಗಳ ಕುರಿತಾದ ವಿಷಯವನ್ನು ಓದಿ, “ಅದು ಅತ್ಯುತ್ಕೃಷ್ಟವಾಗಿತ್ತು” ಮತ್ತು “ಸಂಪೂರ್ಣವಾಗಿ ಯಥಾರ್ಥವಾಗಿತ್ತು” ಎಂದು ತರುವಾಯ ಒಪ್ಪಿಕೊಂಡನು.
6 ನಿಮ್ಮ ಟೆರಿಟೊರಿಯಲ್ಲಿರುವ ಜನರಿಗೆ ಯಾವುದು ಆಸಕ್ತಿಕರವಾಗಿದೆ? ನಿಮ್ಮ ಟೆರಿಟೊರಿಯಲ್ಲಿರುವ ಅಂಗಡಿಗಾರರು ಮತ್ತು ವೃತ್ತಿಪರ ಜನರಿಗೆ, ಇಲ್ಲವೆ ನಿಮ್ಮ ನೆರೆಯವರಿಗೆ, ಜೊತೆಕೆಲಸಗಾರರಿಗೆ, ಮತ್ತು ಸಹಪಾಠಿಗಳಿಗೆ ಇಷ್ಟವಾಗಬಹುದಾದ ಯಾವ ವಿಷಯವನ್ನು ನೀವು ಇತ್ತೀಚಿನ ತಿಂಗಳುಗಳ ಪತ್ರಿಕೆಗಳಲ್ಲಿ ನೋಡಿದ್ದೀರಿ? ಯಾವ ವಿಷಯವು ವಕೀಲರು, ಶಿಕ್ಷಕರು, ಪ್ರೊಫೆಸರರು, ಮತ್ತು ಪ್ರಾಂಶುಪಾಲರು, ಕುಟುಂಬ ಹಾಗೂ ಶಾಲಾ ಸಲಹೆಗಾರರು, ಯುವ ಜನರ ಸಲಹೆಗಾರರು, ಸಮಾಜ ಸೇವಕರು, ಮತ್ತು ವೈದ್ಯರು ಹಾಗೂ ನರ್ಸುಗಳಿಗೆ ವಿಶೇಷವಾದ ಆಸಕ್ತಿಯದ್ದಾಗಿರುವುದು? ಪ್ರತಿಯೊಂದು ಸಂಚಿಕೆಯನ್ನು ನೀವು ಪರಿಶೀಲಿಸಿ ನೋಡಿದಂತೆ, ನೀವು ಸಾರುವ ಜನರನ್ನು ಮನಸ್ಸಿನಲ್ಲಿಟ್ಟುಕೊಳ್ಳುವುದು, ಸತ್ಯದ ವಾಕ್ಯವನ್ನು ಹಬ್ಬಿಸುವ ಅತ್ಯುತ್ಕೃಷ್ಟ ವಿಧಾನಗಳನ್ನು ನಿಮಗೆ ನೀಡುವುದು.
7 ನಿರ್ದಿಷ್ಟವಾದೊಂದು ಕಾವಲಿನಬುರುಜು ಇಲ್ಲವೆ ಎಚ್ಚರ! ಪತ್ರಿಕೆಯ ಲೇಖನದಲ್ಲಿ ವಿಶೇಷವಾದ ಆಸಕ್ತಿಯನ್ನು ತೋರಿಸುವ ಮತ್ತು ಆ ಪತ್ರಿಕೆಯನ್ನು ಸ್ವೀಕರಿಸುವ ಒಬ್ಬ ವ್ಯಕ್ತಿಯನ್ನು ಕಂಡುಕೊಳ್ಳುವಾಗ, ನೀವು ಹೀಗೆ ಹೇಳಬಹುದು: “ನಿಮಗೆ ಇಷ್ಟವಾಗಬಹುದೆಂದು ನನಗನಿಸುವ ಲೇಖನವು ಮುಂದಿನ ಸಂಚಿಕೆಯಲ್ಲಿ ಇರುವುದಾದರೆ, ನಿಮಗೊಂದು ಪ್ರತಿಯನ್ನು ತಂದುಕೊಡಲು ನಾನು ಸಂತೋಷಿಸುವೆ.” ಇತ್ತೀಚಿನ ಪತ್ರಿಕೆಗಳೊಂದಿಗೆ ಪುನಃ ಪುನಃ ಭೇಟಿಮಾಡುತ್ತಾ, ನೀವು ಆ ವ್ಯಕ್ತಿಯನ್ನು ನಿಮ್ಮ ಪತ್ರಿಕಾ ಪಥದಲ್ಲಿ ಸೇರಿಸಲು ಶಕ್ತರಾಗಿರಬಹುದು. ಅದು, ನಮ್ಮ ಪತ್ರಿಕೆಗಳಲ್ಲಿ ಕಂಡುಬರುವ ನಿರ್ದಿಷ್ಟ ಲೇಖನಗಳಲ್ಲಿ ವಿಶೇಷವಾಗಿ ಆಸಕ್ತರಾಗಿರಬಹುದಾದ ವ್ಯಕ್ತಿಗಳನ್ನು ಪುನಃ ಸಂದರ್ಶಿಸಲಿಕ್ಕಾಗಿರುವ ಆಮಂತ್ರಣವನ್ನು ಪಡೆದುಕೊಳ್ಳುವುದರಲ್ಲಿ ಏನನ್ನು ಮಾಡಲಾಗಿದೆಯೊ ಅದಕ್ಕೆ ಸಮಾನವಾಗಿದೆ.
8 ಆತ್ಮಿಕ ಉದ್ದೇಶವುಳ್ಳವರಾಗಿರಿ: ಕೆಲವು ವರ್ಷಗಳ ಹಿಂದೆ, ಊದ್ಯೋಗಾವಲಂಬಿಯಾದ ಒಬ್ಬ ಮನುಷ್ಯನು, ತನಗೆ ಇಷ್ಟವಾದ ವಿಷಯದ ಕುರಿತಾದ ಎಚ್ಚರ! ಪತ್ರಿಕೆಯನ್ನು ಪಡೆದುಕೊಂಡನು. ಆದರೂ, ಈ ಧಾರ್ಮಿಕ ಮನುಷ್ಯನು ಜೊತೆಯಲ್ಲಿದ್ದ ಕಾವಲಿನಬುರುಜು ಸಂಚಿಕೆಯನ್ನೂ ಓದಿದನು. ಅದರಲ್ಲಿ ಅವನು ಜೀವನದುದ್ದಕ್ಕೂ ನಂಬಿದ್ದ ತ್ರಯೈಕ್ಯವನ್ನು ಪರಿಶೀಲಿಸುವಂತೆ ಅವನನ್ನು ಪ್ರೇರಿಸಿದ ಒಂದು ಲೇಖನವಿತ್ತು. ಆರು ತಿಂಗಳುಗಳ ತರುವಾಯ ಅವನು ದೀಕ್ಷಾಸ್ನಾನಪಡೆದುಕೊಂಡನು! ಆದಕಾರಣ, ನಮ್ಮ ಪತ್ರಿಕೆಗಳ ವಾಚಕರನ್ನು ಆತ್ಮಿಕ ಚರ್ಚೆಗಳಲ್ಲಿ ತೊಡಗಿಸಲು ಹಿಂಜರಿಯಬೇಡಿ. ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ? ಎಂಬ ಬ್ರೋಷರನ್ನು ನೀವು ಪರಿಚಯಿಸಿ, ಪ್ರತಿ ಬಾರಿ ಹೊಸ ಪತ್ರಿಕೆಗಳೊಂದಿಗೆ ಹಿಂದಿರುಗಿದಾಗ, ಒಂದು ಪಾಠವನ್ನು ಚರ್ಚಿಸಲು ಕೆಲವೊಂದು ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುವಿರೆಂದು ಹೇಳಿರಿ.
9 ನಿಮ್ಮ ಪುನರ್ಭೇಟಿಗಳಲ್ಲಿ ಮತ್ತು ವ್ಯಾಪಾರಿ ಪರಿಚಯಸ್ಥರಲ್ಲಿ ಯಾರು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳಿಗೆ ಚಂದಾಮಾಡಲು ಇಷ್ಟಪಡಬಹುದೆಂದು ಜಾಗರೂಕವಾಗಿ ನಿರ್ಧರಿಸಿರಿ. ತರುವಾಯ ಅವರನ್ನು ಭೇಟಿಮಾಡಲು ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಮಾಡಿರಿ. ಈ ಅಮೂಲ್ಯವಾದ ಪತ್ರಿಕೆಗಳೊಂದಿಗೆ ನಿಮ್ಮಿಂದ ಸಾಧ್ಯವಾದಷ್ಟು ಹೆಚ್ಚು ಜನರನ್ನು ಸಂಪರ್ಕಿಸಿರಿ. ಅವರು ಆಸಕ್ತಿ ತೋರಿಸುವುದಾದರೂ, ಚಂದಾಮಾಡದಿದ್ದರೆ, ಅವರಿಗೆ ವಿಶೇಷವಾಗಿ ಇಷ್ಟವಾಗಬಹುದೆಂದು ನಿಮಗೆ ಅನಿಸುವ ಒಂದು ಲೇಖನವನ್ನು ಪ್ರತಿ ಬಾರಿ ತೋರಿಸುತ್ತಾ, ಪ್ರಚಲಿತ ಪತ್ರಿಕೆಗಳನ್ನು ಕ್ರಮವಾಗಿ ಅವರಲ್ಲಿಗೆ ತೆಗೆದುಕೊಂಡುಹೋಗಿ. ಹೆಚ್ಚಿನ ಜನರು ನಮ್ಮ ಪತ್ರಿಕೆಗಳನ್ನು ಓದುವಂತೆ ಸಹಾಯ ಮಾಡಲು ನೀವು ಪ್ರಯಾಸಪಟ್ಟಂತೆ, ನೀವು “ನಿಮ್ಮ ಆಹಾರವನ್ನು ನೀರಿನ ಮೇಲೆ ಚೆಲ್ಲು”ತ್ತಿದ್ದೀರಿ ಎಂಬುದನ್ನು ಎಂದಿಗೂ ಮರೆಯದಿರಿ. ಸಕಾಲದಲ್ಲಿ, ನೀವು ಭಾವಿ ಜೊತೆ ಶಿಷ್ಯರನ್ನು ಕಂಡುಕೊಳ್ಳುವುದರಲ್ಲಿ ಯಶಸ್ಸನ್ನು ಪಡೆಯಬಹುದು.—ಪ್ರಸಂ. 11:1, 6.