ಹೊಸ ಸರ್ಕಿಟ್ ಸಮ್ಮೇಳನದ ಕಾರ್ಯಕ್ರಮ
ಯೆಹೋವನೊಂದಿಗೆ ನಡೆಯುವುದರಿಂದ ಈಗ ನೀವು ಯಾವ ಪ್ರಾಯೋಗಿಕ ಪ್ರಯೋಜನಗಳನ್ನು ಪಡೆದುಕೊಳ್ಳುತ್ತೀರಿ? ನಿಮ್ಮ ಜೀವಿತದಲ್ಲಿ ಪ್ರಥಮ ಸ್ಥಾನದಲ್ಲಿರುವ ರಾಜ್ಯಾಭಿರುಚಿಗಳನ್ನು ದೇವಪ್ರಭುತ್ವವಲ್ಲದ ಕೆಲಸಗಳು ಆಕ್ರಮಿಸುವಂತೆ ಬಿಡುವ ಪ್ರಲೋಭನೆಯನ್ನು ನೀವು ಹೇಗೆ ಪ್ರತಿರೋಧಿಸಬಲ್ಲಿರಿ? (ಮತ್ತಾ. 6:33) ತಪ್ಪನ್ನು ಸರಿಯೆಂದು ತೋರಿಸುವ ಈ ಲೋಕದಲ್ಲಿ, ಸರಿ ಮತ್ತು ತಪ್ಪನ್ನು ವಿವೇಚಿಸಲು ನಿಮಗೆ ಕಷ್ಟವಾಗುತ್ತದೋ? (ಇಬ್ರಿ. 5:14) ಜನವರಿ 2000ದಲ್ಲಿ ಆರಂಭವಾಗುವ, “ದೇವರ ಮಾರ್ಗಗಳಲ್ಲಿ ನಡೆಯುವ ಮೂಲಕ ಈಗ ಪ್ರಯೋಜನವನ್ನು ಪಡೆದುಕೊಳ್ಳಿರಿ” ಎಂಬ ಸರ್ಕಿಟ್ ಸಮ್ಮೇಳನದಲ್ಲಿ ಈ ವಿಷಯಗಳು ಚರ್ಚಿಸಲ್ಪಡುವುವು.—ಕೀರ್ತ. 128:1.
ಈ ಸರ್ಕಿಟ್ ಸಮ್ಮೇಳನದಲ್ಲಿ ಶನಿವಾರದಂದು ಒಂದು ಹೊಸ ವಿಷಯವು ಪ್ರಸ್ತುತಪಡಿಸಲ್ಪಡುವುದು. ಅದು ಒಂದು ಮಾದರಿ ಸೇವಾ ಕೂಟವಾಗಿರುವುದು. ಏನು ಯೋಜಿಸಲ್ಪಟ್ಟಿದೆ ಎಂಬುದನ್ನು ನಿಮ್ಮ ಸರ್ಕಿಟ್ ಮೇಲ್ವಿಚಾರಕನು ಎಲ್ಲ ಸಭೆಗಳಿಗೆ ತಿಳಿಸುವನು. ಈ ರೀತಿಯಲ್ಲಿ ಎಲ್ಲರೂ ತಯಾರಾಗಿ ಬಂದು, ಕಾರ್ಯಕ್ರಮವನ್ನು ಸಂಪೂರ್ಣವಾಗಿ ಆನಂದಿಸಸಾಧ್ಯವಿದೆ.
“ಪಯನೀಯರರೇ—ನೀವು ಹೇಗೆ ನಡೆಯುತ್ತೀರಿ ಎಂಬುದರ ಬಗ್ಗೆ ಗಮನವಿಡಿರಿ” ಎಂಬ ಶೀರ್ಷಿಕೆಯುಳ್ಳ ಭಾಗವು, ಪಯನೀಯರ್ ಶುಶ್ರೂಷೆಗೆ ಸಮಯವನ್ನು ಖರೀದಿಸುವ ಸಲುವಾಗಿ, ನಾವು ಹೇಗೆ ವಿವೇಕ ಮತ್ತು ವಿವೇಚನಾಶಕ್ತಿಯನ್ನು ಉಪಯೋಗಿಸಬೇಕು ಎಂಬುದನ್ನು ತೋರಿಸುವುದು. (ಎಫೆ. 5:15-17) “ಬಾಹ್ಯ ರೀತಿಯಲ್ಲಿ ಸರಿಯೆಂದು ತೋರುವ ಮಾರ್ಗಗಳ ಕುರಿತಾಗಿ ಎಚ್ಚರಿಕೆಯಿಂದಿರಿ” ಎಂಬ ಭಾಷಣವು, ಜೀವಿತದ ಪ್ರತಿಯೊಂದು ಕ್ಷೇತ್ರದಲ್ಲೂ ದೇವರಿಗೆ ಯಾವುದು ಸ್ವೀಕಾರಯೋಗ್ಯವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ವಿಧವನ್ನು ಕಲಿಸುವುದು. “ನೆರವೇರಿಸಲ್ಪಟ್ಟ ಪ್ರವಾದನೆಯು ನಮ್ಮನ್ನು ಪ್ರಭಾವಿಸುವ ವಿಧ” ಎಂಬ ಭಾಷಣವು, ನಮ್ಮ ಹೃದಮನಗಳಲ್ಲಿ ದೇವರ ವಾಕ್ಯಕ್ಕಾಗಿ ಪ್ರೀತಿಯನ್ನು ಹುಟ್ಟಿಸಲು ಸಹಾಯಮಾಡುವುದು. “ದೇವರ ಮಾರ್ಗಗಳು—ಎಷ್ಟು ಪ್ರಯೋಜನಕರ!” ಎಂಬ ಸಾರ್ವಜನಿಕ ಭಾಷಣವು, ಯೆಹೋವನ ನೀತಿಯುಕ್ತ ಆವಶ್ಯಕತೆಗಳೊಂದಿಗೆ ಸರಿಸಮವಾಗಿ ಹೆಜ್ಜೆ ಹಾಕುತ್ತಾ ನಡೆಯುವುದರಿಂದ ಈಗ ಸಿಗುವಂತಹ ಪ್ರಾಯೋಗಿಕ ಪ್ರಯೋಜನಗಳನ್ನು ಒತ್ತಿಹೇಳುವುದು.
ದೇವರ ಸಮರ್ಪಿತ ಸೇವಕರಲ್ಲಿ ಒಬ್ಬರೋಪಾದಿ ಆತನ ಮಾರ್ಗಗಳಲ್ಲಿ ನಡೆಯಲು ನೀವು ಬಯಸುತ್ತೀರಿ ಎಂಬುದನ್ನು ನೀರಿನ ದೀಕ್ಷಾಸ್ನಾನದ ಮೂಲಕ ಎಲ್ಲರ ಸಮಕ್ಷಮದಲ್ಲಿ ತೋರಿಸುವುದು ನಿಮ್ಮ ಇಚ್ಛೆಯಾಗಿದೆಯೋ? ಹಾಗಿರುವಲ್ಲಿ, ಅಗತ್ಯವಿರುವ ಏರ್ಪಾಡುಗಳನ್ನು ಮಾಡಸಾಧ್ಯವಾಗುವಂತೆ ಅಧ್ಯಕ್ಷ ಮೇಲ್ವಿಚಾರಕನೊಂದಿಗೆ ಮಾತಾಡಿರಿ.
ಈ ಸಮಯೋಚಿತವಾದ ಸರ್ಕಿಟ್ ಸಮ್ಮೇಳನವನ್ನು ತಪ್ಪಿಸಿಕೊಳ್ಳದಂತೆ ದೃಢಸಂಕಲ್ಪಮಾಡಿರಿ. ಎರಡು ದಿನಗಳ ಇಡೀ ಕಾರ್ಯಕ್ರಮಕ್ಕೆ ಉಪಸ್ಥಿತರಿರಿ, ಏಕೆಂದರೆ, “ಯೆಹೋವನಲ್ಲಿ ಭಯಭಕ್ತಿಯುಳ್ಳವನಾಗಿ ಆತನ ಮಾರ್ಗಗಳಲ್ಲಿ ನಡೆಯುವವನು ಧನ್ಯನು.”—ಕೀರ್ತ. 128:1.