“ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?”
1 ಈ ಪ್ರಶ್ನೆಯು ಭೂಮ್ಯಾದ್ಯಂತ ಇರುವ ಜನರ ಮನದಲ್ಲಿದೆ. ಅನೇಕ ಶತಮಾನಗಳಿಂದಲೂ ಮನುಷ್ಯರು ಹೆಚ್ಚಿನ ಸಾಧನೆಯನ್ನು ಮಾಡಿದ್ದಾರಾದರೂ, ಈಗ ಜನರ ಕಣ್ಣು ತೆರೆದಿದೆ. ಏಕೆಂದರೆ ಸಹಸ್ರಮಾನವು ಶುರುವಾಗಿರುವುದಾದರೂ, ನಮ್ಮ ಮೂಲಭೂತ ಸಮಸ್ಯೆಗಳಂತೂ ಇನ್ನೂ ಇವೆ. (ಯೋಬ 14:1; ಕೀರ್ತ. 90:10) ಮನುಷ್ಯರಿಗೆ ಶಾಂತಿಸಮಾಧಾನವು ಎಲ್ಲಿ ಸಿಗಸಾಧ್ಯವಿದೆ?
2 ನವೆಂಬರ್ ತಿಂಗಳಿನಲ್ಲಿ, ನಮ್ಮ ನೆರೆಹೊರೆಯವರಿಗೆ ಆ ಪ್ರಶ್ನೆಗೆ ಉತ್ತರ ಕೊಡಲು ನಮಗೆ ವಿಶೇಷ ಅವಕಾಶವೊಂದಿದೆ. ಅದು ಯಾವುದು? ರಾಜ್ಯ ವಾರ್ತೆ ನಂ. 36ನ್ನು ವಿತರಿಸುವುದೇ ಆಗಿದೆ. ಅದರ ಶೀರ್ಷಿಕೆಯು “ಹೊಸ ಸಹಸ್ರಮಾನ—ಅದು ನಿಮಗಾಗಿ ಯಾವ ಭವಿಷ್ಯತ್ತನ್ನು ಕಾದಿರಿಸಿದೆ?” ಎಂದಾಗಿದೆ. ನವೆಂಬರ್ 1ರಿಂದ, ಅಂದರೆ ಬುಧವಾರದಿಂದ ನಾವು ಈ ರಾಜ್ಯ ವಾರ್ತೆ ನಂ. 36ನ್ನು ಉತ್ಸಾಹದಿಂದ ವಿತರಿಸಲು ಪ್ರಾರಂಭಿಸೋಣ. ಈ ಕಾರ್ಯಾಚರಣೆಯ ಸಮಯದಲ್ಲಿ, ವಾರದ ದಿನಗಳಲ್ಲೂ ರಾಜ್ಯ ವಾರ್ತೆ ನಂ. 36ನ್ನು ಎಲ್ಲರಿಗೂ ನೀಡಲು ಪ್ರಯತ್ನಿಸೋಣ. ವಾರಾಂತ್ಯಗಳಲ್ಲಿ, ಅದನ್ನು ಆ ತಿಂಗಳಿನ ಪತ್ರಿಕೆಗಳೊಂದಿಗೆ ನೀಡೋಣ.
3 ನೀವು ಪೂರ್ಣವಾಗಿ ಪಾಲ್ಗೊಳ್ಳುವಿರೋ? ಹಿರಿಯರು, ಶುಶ್ರೂಷಾ ಸೇವಕರು ಹಾಗೂ ಪಯನೀಯರರು ಈ ಕಾರ್ಯಾಚರಣೆಯಲ್ಲಿ ನೇತೃತ್ವವನ್ನು ವಹಿಸಿಕೊಳ್ಳುವರು. ಏಕೆಂದರೆ ಅವರು ಆ ಕೆಲಸದ ಅಗ್ರಭಾಗದಲ್ಲಿದ್ದಾರೆ. ನವೆಂಬರ್ ತಿಂಗಳಿನಲ್ಲಿ ಆಕ್ಸಿಲಿಯರಿ ಪಯನೀಯರರಾಗಿ ಸೇವೆಸಲ್ಲಿಸಲು ಅನೇಕ ಪ್ರಚಾರಕರು ತಮ್ಮ ಪರಿಸ್ಥಿತಿಗಳಲ್ಲಿ ಬೇಕಾದ ಹೊಂದಾಣಿಕೆಗಳನ್ನು ಮಾಡಿಕೊಂಡಿದ್ದಾರೆ. ಮತ್ತು ಇತರರು, ಶುಶ್ರೂಷೆಯಲ್ಲಿ ಸಾಮಾನ್ಯವಾಗಿ ವ್ಯಯಿಸುವ ಸಮಯಕ್ಕಿಂತಲೂ ಹೆಚ್ಚಿನ ಸಮಯವನ್ನು ಕಳೆಯಲು ಏರ್ಪಾಡು ಮಾಡಿದ್ದಾರೆ.
4 ಸಭಾ ಪುಸ್ತಕ ಅಭ್ಯಾಸದ ನಿರ್ವಾಹಕರು, ರಾಜ್ಯ ವಾರ್ತೆ ನಂ. 36ನ್ನು ವಿತರಿಸುವುದರಲ್ಲಿ ತಮ್ಮ ಗುಂಪಿನ ಪ್ರತಿಯೊಬ್ಬರನ್ನು ಉತ್ತೇಜಿಸುತ್ತಾರೆ. ಕೆಲವು ಪ್ರಚಾರಕರು ಸಾರುವ ಕೆಲಸದಲ್ಲಿ ನಿಷ್ಕ್ರಿಯರಾಗಿರಬಹುದು. ಅಂತಹವರನ್ನು ಹಿರಿಯರು ಭೇಟಿಮಾಡತಕ್ಕದ್ದು ಹಾಗೂ ಈ ವಿಷಯದಲ್ಲಿ ಯಾವ ರೀತಿಯಲ್ಲಿ ಅವರಿಗೆ ಸಹಾಯಮಾಡಬಹುದು ಎಂಬುದನ್ನು ನೋಡತಕ್ಕದ್ದು. ಆ ತಿಂಗಳಿನಲ್ಲಿ ಇಂತಹ ವ್ಯಕ್ತಿಗಳೊಂದಿಗೆ ಒಬ್ಬ ಅನುಭವಸ್ಥ ಪ್ರಚಾರಕನು/ಳು ಸಾರುವ ಕೆಲಸದಲ್ಲಿ ಜೊತೆಗೂಡುವಂತೆ ಏರ್ಪಾಡುಗಳನ್ನು ಮಾಡಸಾಧ್ಯವಿದೆ. ರಾಜ್ಯ ವಾರ್ತೆ ನಂ. 36ನ್ನು ಇತರರಿಗೆ ಹಂಚುವಂತೆ ಈ ಪ್ರಚಾರಕರನ್ನು ಇದರಲ್ಲಿ ಒಳಗೂಡಿಸುವುದು ತಾನೇ ಮತ್ತೆ ಸಾರುವ ಕೆಲಸದಲ್ಲಿ ಮುಂದುವರಿಯುವಂತೆ ಅವರನ್ನು ಮಾಡಬಹುದು.
5 ಜ್ಞಾನ ಪುಸ್ತಕದ ಅಭ್ಯಾಸವನ್ನು ಇನ್ನೇನು ಮುಗಿಸಲಿರುವ ಬೈಬಲ್ ವಿದ್ಯಾರ್ಥಿಗಳಿಗೆ ಹಾಗೂ ಶುಶ್ರೂಷೆಯಲ್ಲಿ ಭಾಗವಹಿಸಲು ಶುರುಮಾಡಿರುವ ಅಸ್ನಾತ ಪ್ರಚಾರಕರಿಗೆ ಇದು ಸುವರ್ಣಾವಕಾಶವಾಗಿರುವುದು. ಈ ರೋಚಕ ಕೆಲಸದಲ್ಲಿ ಎಳೆಯರು ಸಹ ಭಾಗವಹಿಸಬಹುದು.
6 ಒಂದು ಸರಳ ನಿರೂಪಣೆ ಸಾಕು. ನೀವು ಹೀಗೆ ಹೇಳಬಹುದು:
◼ “ಇಲ್ಲಿರುವ [ನಗರದ ಹೆಸರು] ಪ್ರತಿಯೊಂದು ಕುಟುಂಬದವರಿಗೆ ಬಹಳ ಪ್ರಾಮುಖ್ಯವಾದ ಸಂದೇಶವನ್ನು ತಿಳಿಸಲು ನಾನು ಬಂದಿದ್ದೇನೆ. ಈ ಪ್ರತಿಯು ನಿಮಗಾಗಿದೆ. ದಯವಿಟ್ಟು ಇದನ್ನು ಓದಿರಿ.” ರಾಜ್ಯ ವಾರ್ತೆ ನಂ. 36ನ್ನು ವಿತರಿಸಲು ಹೋಗುವಾಗ, ಬ್ರೀಫ್ಕೇಸ್ ಅನ್ನು ತೆಗೆದುಕೊಂಡು ಹೋಗದಿರುವುದು ಒಳ್ಳೆಯದು.
7 ಕ್ಷೇತ್ರ ಸೇವೆಗಾಗಿ ಸುವ್ಯವಸ್ಥಿತ ಕೂಟಗಳು: ಸಾಕ್ಷಿಕಾರ್ಯದ ಏರ್ಪಾಡುಗಳು ಅನುಕೂಲಕರವೂ ಪ್ರಾಯೋಗಿಕವೂ ಆಗಿವೆಯೋ ಎಂಬುದನ್ನು ಹಿರಿಯರು ನೋಡಬೇಕು. ಪ್ರತಿಯೊಬ್ಬರು ಸಾಕ್ಷಿಕಾರ್ಯದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳಸಾಧ್ಯವಾಗುವಂತೆ, ಮನೆಯಿಂದ ಮನೆಯ ಸಾಕ್ಷಿಕಾರ್ಯದ ಟೆರಿಟೊರಿ ಹಾಗೂ ವ್ಯಾಪಾರದ ಟೆರಿಟೊರಿ ಸಾಕಷ್ಟು ಇದೆ ಎಂಬುದನ್ನು ಸೇವಾ ಮೇಲ್ವಿಚಾರಕನು ಖಚಿತಪಡಿಸಿಕೊಳ್ಳತಕ್ಕದ್ದು. ಎಲ್ಲೆಲ್ಲಿ ಸಾಧ್ಯವಿದೆಯೋ ಅಲ್ಲೆಲ್ಲ, ವಾರದ ಪ್ರತಿ ದಿನಕ್ಕಾಗಿ, ವಾರಾಂತ್ಯಗಳಿಗಾಗಿ ಹಾಗೂ ಸಂಜೆಯ ಸಮಯದಲ್ಲಿ ಸೇವೆಗಾಗಿ ಕೂಟಗಳನ್ನು ಏರ್ಪಡಿಸತಕ್ಕದ್ದು. ಶಾಲಾ ವಿದ್ಯಾರ್ಥಿಗಳು, ಶಿಫ್ಟ್ ಕೆಲಸಮಾಡುವವರು ಹಾಗೂ ಇತರರು ಸಹ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಾಗುವಂತೆ, ಸಾಯಂಕಾಲದಲ್ಲಿ ಕ್ಷೇತ್ರ ಸೇವೆಗಾಗಿ ಏರ್ಪಾಡುಗಳನ್ನು ಮಾಡಸಾಧ್ಯವಿದೆ.
8 ಮನೆಯಲ್ಲಿಲ್ಲದವರ ಕುರಿತಾಗಿ ಏನು? ಆದಷ್ಟು ಮಟ್ಟಿಗೆ ಮನೆಯಲ್ಲಿರುವವರ ಜೊತೆ ಮಾತಾಡುವುದೇ ನಮ್ಮ ಗುರಿಯಾಗಿದೆ. ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದ ಪಕ್ಷದಲ್ಲಿ, ಆ ಮನೆಯ ವಿಳಾಸವನ್ನು ಬರೆದುಕೊಂಡು, ಅದೇ ದಿನ ಬೇರೆ ಸಮಯದಲ್ಲಿ ಭೇಟಿಮಾಡಿ. ಕಾರ್ಯಾಚರಣೆಯ ಕೊನೆಯ ವಾರದೊಳಗೆ ಮನೆಯಲ್ಲಿಲ್ಲದವರು ನಿಮಗೆ ಸಿಗದಿರುವಲ್ಲಿ, ದಾರಿಹೋಕರ ಕಣ್ಣಿಗೆ ಬೀಳುವಂತಹ ಜಾಗದಲ್ಲಿ ರಾಜ್ಯ ವಾರ್ತೆ ನಂ. 36ನ್ನು ಬಿಟ್ಟು ಬರಬಾರದು. ಹಳ್ಳಿ ಪ್ರದೇಶಗಳಲ್ಲಿ ಮತ್ತು ತುಂಬ ಟೆರಿಟೊರಿಗಳಿರುವ ಸ್ಥಳಗಳಲ್ಲಿ ಸಾಕ್ಷಿಯನ್ನು ನೀಡುತ್ತಿರುವಾಗ, ಮನೆಯಲ್ಲಿಲ್ಲದವರ ಮನೆಯಲ್ಲಿ ಪ್ರಥಮ ಭೇಟಿಯಲ್ಲಿಯೇ ರಾಜ್ಯ ವಾರ್ತೆ ನಂ. 36ನ್ನು ಬಿಟ್ಟು ಬನ್ನಿರಿ ಎಂದು ನಿಮ್ಮ ಸಭೆಯ ಹಿರಿಯರು ನಿಮಗೆ ಹೇಳಬಹುದು.
9 ಕಾರ್ಯಮಗ್ನರಾಗಿರೋಣ! ಕಾರ್ಯಾಚರಣೆಯು ಮುಗಿಯುವ ಮುಂಚೆ ಟೆರಿಟೊರಿಯನ್ನು ಸಂಪೂರ್ಣವಾಗಿ ಆವರಿಸಲು ಸಭೆಗಳು ಪ್ರಯತ್ನಮಾಡತಕ್ಕದ್ದು. ನಿಮ್ಮ ಟೆರಿಟೊರಿಯು ತುಂಬ ದೊಡ್ಡದಾಗಿರುವುದಾದರೆ, ಎಲ್ಲಿ ಪ್ರಾಯೋಗಿಕವೂ ಸುರಕ್ಷಿತವೂ ಆಗಿದೆಯೋ ಅಂತಹ ಸ್ಥಳಗಳಲ್ಲಿ ಕೆಲವು ಪ್ರಚಾರಕರು ಒಂಟಿಯಾಗಿ ಸಾಕ್ಷಿಕಾರ್ಯವನ್ನು ಮಾಡಬಹುದು. ಆದಷ್ಟು ಯೋಗ್ಯ ಜನರಿಗೆ ಸುವಾರ್ತೆಯನ್ನು ಸಾರುವುದನ್ನು ಈ ಏರ್ಪಾಡು ಸುಲಭವನ್ನಾಗಿ ಮಾಡುವುದು. ಕಂಡುಕೊಳ್ಳುವ ಎಲ್ಲ ಆಸಕ್ತ ಜನರ ಕುರಿತು ಒಂದು ಸವಿವರವಾದ ರೆಕಾರ್ಡನ್ನು ಬರೆದಿಡಲು ಮರೆಯದಿರಿ.
10 ಸಭೆಗಳು ಈಗ ಪಡೆದುಕೊಳ್ಳುತ್ತಿರುವ ಪತ್ರಿಕೆಗಳಿಗಿಂತಲೂ ಇನ್ನೂ ಎಷ್ಟು ಹೆಚ್ಚಿನ ಪತ್ರಿಕೆಗಳು ಬೇಕಾಗಿವೆ ಎಂಬುದನ್ನು ಹಿರಿಯರು ಮುಂದಾಗಿಯೇ ಲೆಕ್ಕಮಾಡಿ, ಅದಕ್ಕನುಸಾರ ಆರ್ಡರ್ ಮಾಡತಕ್ಕದ್ದು. ಆದರೆ ರಾಜ್ಯ ವಾರ್ತೆ ನಂ. 36ನ್ನು ಆರ್ಡರ್ ಮಾಡುವ ಆವಶ್ಯಕತೆಯಿಲ್ಲ, ಏಕೆಂದರೆ ಪ್ರತಿಯೊಂದು ಸಭೆಗೆ ನಿರ್ದಿಷ್ಟ ಮೊತ್ತದಷ್ಟು ಪ್ರತಿಯನ್ನು ಕಳುಹಿಸಿಕೊಡಲಾಗುತ್ತದೆ. ವಿಶೇಷ, ರೆಗ್ಯುಲರ್ ಮತ್ತು ಆಕ್ಸಿಲಿಯರಿ ಪಯನೀಯರರಿಗೆ 300 ಪ್ರತಿಗಳು, ಸಭೆಯ ಇತರ ಒಬ್ಬೊಬ್ಬ ಪ್ರಚಾರಕರಿಗೂ 100 ಪ್ರತಿಗಳು. ಈ ವಿಶೇಷ ಕಾರ್ಯಾಚರಣೆಯಲ್ಲಿ ಭಾಗವಹಿಸಲು ನೀವು ಸಿದ್ಧರೂ ಕಾರ್ಯಮಗ್ನರಾಗಿರಲು ಉತ್ಸುಕರೂ ಆಗಿದ್ದೀರೋ? ಹತ್ತಿರದ ಭವಿಷ್ಯತ್ತಿನಲ್ಲಿ ದೇವರು ನಮಗಾಗಿ ಏನನ್ನು ವಾಗ್ದಾನಿಸಿದ್ದಾನೆ ಎಂಬುದನ್ನು ನಮ್ಮೆಲ್ಲ ನೆರೆಹೊರೆಯವರಿಗೆ ತಿಳಿಸುವ ಎಂತಹ ಸುಯೋಗವನ್ನು ನಾವು ಪಡೆದಿದ್ದೇವೆ!