ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ-ಸೆಪ್ಟೆಂ.
“ನಮ್ಮ ದಿನಗಳಲ್ಲಿ ಭೂಕಂಪಗಳು ಅತ್ಯಧಿಕ ವಿನಾಶವನ್ನು ಉಂಟುಮಾಡಿವೆ ಮತ್ತು ಲಕ್ಷಾಂತರ ಮಂದಿ ತಮ್ಮ ಜೀವಗಳನ್ನು ಕಳೆದುಕೊಂಡಿದ್ದಾರೆ. ಪಾರಾಗಿ ಉಳಿಯುವವರು ಅನೇಕವೇಳೆ ನಿರ್ಗತಿಕರಾಗಿ, ಚೇತರಿಸಿಕೊಳ್ಳಲು ಯಾವ ಮಾರ್ಗವೂ ಇಲ್ಲದೆ ಬಿಡಲ್ಪಡುತ್ತಾರೆ. ಎಚ್ಚರ! ಪತ್ರಿಕೆಯ ಈ ಸಂಚಿಕೆಯು, ಭೂಕಂಪಕ್ಕೆ ಒಳಗಾದವರು ಅದರ ನಂತರದ ಪರಿಣಾಮಗಳನ್ನು ಹೇಗೆ ನಿಭಾಯಿಸಲು ಶಕ್ತರಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಭೂಕಂಪಗಳು ಹೇಗೆ ಅತಿ ಪ್ರಾಮುಖ್ಯವಾದ ಒಂದು ಬೈಬಲ್ ಪ್ರವಾದನೆಯಲ್ಲಿ ತೋರಿಬರುತ್ತವೆ ಎಂಬುದನ್ನು ಸಹ ಇದು ವಿವರಿಸುತ್ತದೆ.”
ಕಾವಲಿನಬುರುಜು ಸೆಪ್ಟೆಂ.15
“‘ಸಂತರು’ ವಿಶೇಷ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಅವರ ಮುಖಾಂತರ ಪ್ರಾರ್ಥಿಸುವುದು ಪ್ರಯೋಜನದಾಯಕವಾಗಿದೆ ಎಂದು ಲಕ್ಷಾಂತರ ಮಂದಿ ನಂಬುತ್ತಾರೆ. ನಿಮ್ಮ ಅಭಿಪ್ರಾಯವೇನು? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಯೇಸು ಕ್ರಿಸ್ತನು ಏನು ಹೇಳಿದನೆಂಬುದನ್ನು ಗಮನಿಸಿರಿ. [ಯೋಹಾನ 14:6ನ್ನು ಓದಿರಿ.] ಇದು ‘ಸಂತರ’ ಮುಖಾಂತರ ಪ್ರಾರ್ಥಿಸುವ ವಿಷಯದಲ್ಲಿ ಕೆಲವರು ಅಚ್ಚರಿಗೊಳ್ಳುವಂತೆ ಮಾಡುತ್ತದೆ. ಕಾವಲಿನಬುರುಜು ಪತ್ರಿಕೆಯ ಈ ಸಂಚಿಕೆಯು ಆ ಮುಖ್ಯ ವಿಷಯವನ್ನು ಚರ್ಚಿಸುತ್ತದೆ.”
ಎಚ್ಚರ! ಜುಲೈ-ಸೆಪ್ಟೆಂ.
“ನಿಮ್ಮ ಆರೋಗ್ಯದ ವಿಷಯದಲ್ಲಿ ನಿಮಗೆ ಆಸಕ್ತಿಯಿದೆ ಎಂಬ ಖಾತ್ರಿ ನನಗಿದೆ. ಹೌದಲ್ಲವೆ? ಬಹುಶಃ ನಿಮ್ಮನ್ನು ಅಥವಾ ನಿಮಗೆ ಗೊತ್ತಿರುವ ಯಾರಾದರೊಬ್ಬರನ್ನು ಅಧಿಕ ರಕ್ತದೊತ್ತಡವು ಬಾಧಿಸುತ್ತಿರಬಹುದು. [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು 15ನೆಯ ಪುಟದಲ್ಲಿರುವ ಲೇಖನವನ್ನು ತೋರಿಸಿರಿ.] ಆದರೆ ಸೃಷ್ಟಿಕರ್ತನು ಏನನ್ನು ವಾಗ್ದಾನಿಸಿದ್ದಾನೆ ಎಂಬುದನ್ನು ಗಮನಿಸಿರಿ. [ಯೆಶಾಯ 33:24ನ್ನು ಓದಿ.] ನೀವು ಈ ಲೇಖನವನ್ನು ಬೋಧಪ್ರದವೂ ಅತಿ ಪ್ರಾಯೋಗಿಕವೂ ಆಗಿರುವುದಾಗಿ ಕಂಡುಕೊಳ್ಳುವಿರಿ ಎಂಬ ಭರವಸೆ ನನಗಿದೆ.”
ಕಾವಲಿನಬುರುಜು ಅಕ್ಟೋ.1
“ನಮ್ಮ ಸುತ್ತಲೂ ನಾವು ನೋಡುವ ತೊಂದರೆಗಳು—ಯುದ್ಧಗಳು, ದುಷ್ಕೃತ್ಯ ಮತ್ತು ಭಯೋತ್ಪಾದಕ ಕೃತ್ಯಗಳು—ಎಂದಾದರೂ ಕೊನೆಗೊಳ್ಳುವವೋ ಎಂದು ಅನೇಕರು ಕುತೂಹಲಪಟ್ಟಿದ್ದಾರೆ. ನೀವೇನು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಆದರೆ ಬೈಬಲು ಈ ಸಾಂತ್ವನದಾಯಕ ಆಶ್ವಾಸನೆಯನ್ನು ಕೊಡುತ್ತದೆ. [ಕೀರ್ತನೆ 37:10, 11ನ್ನು ಓದಿರಿ.] ದುಷ್ಟತನಕ್ಕೆ ಹಾಗೂ ಅದು ಉಂಟುಮಾಡುವ ಕಷ್ಟಾನುಭವಕ್ಕೆ ದೇವರು ಇನ್ನೂ ಏಕೆ ಅಂತ್ಯವನ್ನು ತಂದಿಲ್ಲ ಎಂಬುದನ್ನು ಈ ಪತ್ರಿಕೆಯು ವಿವರಿಸುತ್ತದೆ.”