ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಕಾವಲಿನಬುರುಜು ಸೆಪ್ಟೆಂ.1
“ನಾವು ಅನೇಕಭಾರಿ ದೇವರಿಗೆ ಪ್ರಾರ್ಥಿಸುತ್ತೇವೆ. ಆದರೆ ನಮ್ಮ ಪ್ರಾರ್ಥನೆಗಳು ದೇವರಿಗೆ ಅಂಗೀಕಾರಾರ್ಹವಾಗಿವೆ ಎಂಬುದನ್ನು ನಾವು ಖಚಿತಪಡಿಸಿಕೊಳ್ಳುವುದು ಹೇಗೆಂದು ನೀವೆಂದಾದರೂ ಆಲೋಚಿಸಿದ್ದುಂಟೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ನಂತರ ಕೀರ್ತನೆ 141:2ನ್ನು ಓದಿ. ಪುಟ 22ರಲ್ಲಿರುವ ಲೇಖನವನ್ನು ತೋರಿಸಿರಿ.] ಪ್ರಾರ್ಥನೆಯ ಮೂಲಕ ದೇವರನ್ನು ಸಮೀಪಿಸುವುದು ಹೇಗೆಂದು ಈ ಲೇಖನವು ವಿವರಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ನೀವು ಇಂದಿನ ಲೋಕದಲ್ಲಿ ಜಯಶಾಲಿಗಳಾಗಬೇಕಾದರೆ ಹಿಂಸಾತ್ಮಕ ಪ್ರವೃತ್ತಿಯುಳ್ಳವರಾಗಿರಬೇಕೆಂದು ಕೆಲವರು ನಂಬುತ್ತಾರೆ. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯೇಸು ಯಾವ ಸಲಹೆಯನ್ನು ಕೊಟ್ಟನು ಎಂಬುದನ್ನು ಗಮನಿಸಿ. [ಮತ್ತಾಯ 5:5, 9ನ್ನು ಓದಿ.] ನೀವಿದನ್ನು ಒಪ್ಪುತ್ತೀರೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಸಮಾಧಾನಚಿತ್ತರಾಗಿರುವುದರಿಂದ ಸಿಗುವ ಮೂರು ಪ್ರಯೋಜನಗಳನ್ನು ಈ ಪತ್ರಿಕೆಯು ಎತ್ತಿತೋರಿಸುತ್ತದೆ.” ಪುಟ 28 ರಿಂದ ಆರಂಭವಾಗುವ ಲೇಖನವನ್ನು ತೋರಿಸಿರಿ.
ಕಾವಲಿನಬುರುಜು ಅಕ್ಟೋ.1
“ಅನೇಕ ವಿವಾಹಿತ ದಂಪತಿಗಳಿಗೆ ಸಹಾಯಮಾಡಿರುವ ಒಂದು ವಚನವನ್ನು ನಾನು ನಿಮಗೋಸ್ಕರ ಓದಲು ಬಯಸುತ್ತೇನೆ. [ಎಫೆಸ 5:33ನ್ನು ಓದಿ.] ಕುಟುಂಬದ ಬಂಧಗಳನ್ನು ಉತ್ತಮಗೊಳಿಸಲು ಈ ಸಲಹೆಯನ್ನು ನಾವು ಹೇಗೆ ಅನ್ವಯಿಸಬಹುದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ ಮತ್ತು ನಂತರ ಪುಟ 7 ರಲ್ಲಿರುವ ಲೇಖನಕ್ಕೆ ತಿರುಗಿಸಿ.] ಈ ಲೇಖನವು ಪ್ರಯೋಜನದಾಯಕವೆಂದು ರುಜುಮಾಡಲ್ಪಟ್ಟ ಕೆಲವು ಪ್ರಾಯೋಗಿಕ ಸಲಹೆಗಳನ್ನು ಕೊಡುತ್ತದೆ.”
ಎಚ್ಚರ! ಅಕ್ಟೋ. - ಡಿಸೆಂ.
“ದೇವರಿದ್ದಾನೆಂದು ನಂಬುವುದು ವೈಜ್ಞಾನಿಕವಾಗಿ ಸರಿಯೋ ಎಂದು ಅನೇಕರು ಆಶ್ಚರ್ಯಪಡುತ್ತಾರೆ. ಇದರ ಬಗ್ಗೆ ನೀವೇನು ನೆನೆಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ನಂತರ ಇಬ್ರಿಯ 3:4ನ್ನು ಓದಿ.] ಎಚ್ಚರ!ದ ಈ ವಿಶೇಷ ಸಂಚಿಕೆಯು, ಯಾವ ರುಜುವಾತು ಕೆಲವು ವಿಜ್ಞಾನಿಗಳು ಸೃಷ್ಟಿಕರ್ತನಲ್ಲಿ ನಂಬಿಕೆಯನ್ನಿಡುವಂತೆ ಮಾಡಿದೆ ಎಂಬುದನ್ನು ಪರಿಶೀಲಿಸುತ್ತದೆ.”