ಪತ್ರಿಕೆಗಳ ಕುರಿತಾಗಿ ಏನು ಹೇಳಬೇಕು?
ಎಚ್ಚರ! ಜುಲೈ - ಸೆಪ್ಟೆಂ.
“ಜೀವನದಲ್ಲಿ ಒಂದು ದುರಂತವನ್ನು ಅನುಭವಿಸುವಾಗ, ಕೆಲವರು ದೇವರ ಮೇಲೆ ಕೋಪಿಸಿಕೊಳ್ಳುತ್ತಾರೆ. ನಿಮಗೆ ಎಂದಾದರು ಆ ಅನಿಸಿಕೆಯಾಗಿದೆಯೋ ಅಥವಾ ಅಂಥ ಅನಿಸಿಕೆಯಾದ ಯಾರಾದರೊಬ್ಬರ ಪರಿಚಯ ನಿಮಗಿದೆಯೋ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಅಂಥ ಅನಿಸಿಕೆಯು ದೇವರ ಪ್ರೀತಿ ಮತ್ತು ವಿವೇಕವನ್ನು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. [ಯಾಕೋಬ 1:13, 17ನ್ನು ಓದಿರಿ.] ದೇವರು ಏಕೆ ದುಷ್ಟತನವನ್ನು ಅನುಮತಿಸಿದ್ದಾನೆ ಎಂಬುದನ್ನು ಎಚ್ಚರ! ಪತ್ರಿಕೆಯ ಈ ಲೇಖನವು ವಿವರಿಸುತ್ತದೆ.
ಕಾವಲಿನಬುರುಜು ಸೆಪ್ಟಂ.15
“ತುಂಬ ಪ್ರಸಿದ್ಧವಾಗಿರುವ ಪ್ರಾರ್ಥನೆಯ ಭಾಗವಾಗಿರುವಂಥ ಈ ಮಾತುಗಳನ್ನು ನೀವು ಕೇಳಿಸಿಕೊಂಡಿರಬಹುದು, ಅಥವಾ ನಿಮ್ಮ ಸ್ವಂತ ಪ್ರಾರ್ಥನೆಗಳಲ್ಲಿ ಈ ಮಾತುಗಳನ್ನು ನೀವು ಉಪಯೋಗಿಸಿರಬಹುದು. [ಮತ್ತಾಯ 6:10ನ್ನು ಓದಿರಿ.] ದೇವರ ಚಿತ್ತವು ಭೂಮಿಯಲ್ಲಿ ಪೂರ್ಣ ರೀತಿಯಲ್ಲಿ ನೆರವೇರುವಾಗ, ಜೀವನವು ಹೇಗಿರುತ್ತದೆಂದು ನೀವು ನೆನಸುತ್ತೀರಿ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈಗಷ್ಟೇ ನಾವು ಓದಿರುವ ಭಾಗವನ್ನು ಸೇರಿಸಿ, ಸುಪ್ರಸಿದ್ಧವಾದ ಕರ್ತನ ಪ್ರಾರ್ಥನೆಯ ಪ್ರತಿಯೊಂದು ಭಾಗದಲ್ಲಿ ಅಡಕವಾಗಿರುವ ಅರ್ಥವನ್ನು ಈ ಪತ್ರಿಕೆಯು ಪರಿಶೀಲಿಸುತ್ತದೆ.”
ಎಚ್ಚರ! ಜುಲೈ - ಸೆಪ್ಟೆಂ.
“ಅತ್ಯುತ್ತಮ ವೈದಕೀಯ ಸಂಶೋಧನೆಯ ಹೊರತಾಗಿಯೂ, ಸಾಂಕ್ರಾಮಿಕ ರೋಗಗಳು ಕೋಟಿಗಟ್ಟಲೆ ಜನರ ಆರೋಗ್ಯವನ್ನು ಬೆದರಿಸುತ್ತಿವೆ. ಮಾನವಕುಲದ ಆರೋಗ್ಯದಲ್ಲಿ ದೇವರು ಆಸಕ್ತಿ ವಹಿಸುತ್ತಾನೆಂದು ನೀವು ಆಲೋಚಿಸುತ್ತೀರಾ? [ಪ್ರತಿಕ್ರಿಯೆಗಾಗಿ ಅನುಮತಿಸಿರಿ. ಅನಂತರ, ಯೆಶಾಯ 25:8ನ್ನು ಓದಿರಿ.] ದೇವರ ಕಾಳಜಿಯ ಕುರಿತು ಮತ್ತು ರೋಗವನ್ನು ಅಂತ್ಯಗೊಳಿಸುತ್ತೇನೆಂಬ ಆತನ ಆಶ್ವಾಸನೆಯ ಕುರಿತು ಪುರಾವೆಯನ್ನು, ಹಾಗೂ ರೋಗದ ಹರಡುವಿಕೆಗೆ ಕಾರಣವಾಗಿರುವ ಬರಗಾಲ, ಬಡತನ, ಮತ್ತು ಯುದ್ಧ ಮುಂತಾದ ಅಂಶಗಳ ಕುರಿತು ಈ ಪತ್ರಿಕೆ ವಿವರಿಸುತ್ತದೆ.”
ಕಾವಲಿನಬುರುಜು ಅಕ್ಟೋ.1
“ದುಷ್ಕೃತ್ಯ, ಹಿಂಸಾಚಾರ, ಮತ್ತು ಯುದ್ಧದ ಅಂತ್ಯವನ್ನು ಕಾಣಲು ನಾವು ಏಕೆ ಅಶಕ್ತರಾಗಿದ್ದೇವೆ ಎಂದು ನೀವೆಂದಾದರೂ ಆಲೋಚಿಸಿದ್ದೀರೋ? ಈ ಮಾತುಗಳ ನೆರವೇರಿಕೆಯನ್ನು ನಾವೆಂದಾದರೂ ನೋಡುವೆವು ಎಂದು ನೀವು ನೆನಸುತ್ತೀರೋ? [ಕೀರ್ತನೆ 37:11ನ್ನು ಓದಿ, ಮತ್ತು ಪ್ರತಿಕ್ರಿಯೆಗಾಗಿ ಅನುಮತಿಸಿರಿ.] ಈ ಪತ್ರಿಕೆಯು, ಮಾನವಕುಲಕ್ಕಾಗಿರುವ ದೇವರ ಮೂಲ ಉದ್ದೇಶದೊಂದಿಗೆ ಈ ವಾಗ್ದಾನವು ಹೇಗೆ ಸಂಬಂಧಿಸಿದೆ ಮತ್ತು ನಾವೂ ಇದರಲ್ಲಿ ಹೇಗೆ ಪಾಲುಗಾರರಾಗಸಾಧ್ಯವಿದೆ ಎಂಬುದರ ಕುರಿತಾದ ಉತ್ತಮ ಮಾಹಿತಿಯನ್ನು ನೀಡುತ್ತದೆ.”