ನೀವು ಕರಪತ್ರಗಳನ್ನು ಉಪಯೋಗಿಸುತ್ತಿದ್ದೀರೊ?
ಒಂದು ದಿನ 11 ವರುಷದ ಒಬ್ಬ ಹುಡುಗನಿಗೆ, ನರಕ ಎಂಬ ವಿಷಯದ ಕುರಿತಾದ ಸಾರ್ವಜನಿಕ ಭಾಷಣವನ್ನು ಪ್ರಚಾರಮಾಡುವ ಒಂದು ಕರಪತ್ರವು ಸಿಕ್ಕಿತು. ಅವನು ಸಮಯಾನಂತರ ವಿವರಿಸಿದ್ದು: “ಆ ಕರಪತ್ರವು ನನ್ನ ಆಸಕ್ತಿಯನ್ನು ಕೆರಳಿಸಿತು, ಏಕೆಂದರೆ ನಾನು ಯಾವಾಗಲೂ ತಪ್ಪಾದ ಕೆಲಸಗಳನ್ನು ಮಾಡುತ್ತಿದ್ದ ಕಾರಣ, ಸತ್ತ ನಂತರ ಉರಿಯುವ ನರಕಕ್ಕೆ ಹೋಗುತ್ತೇನೆಂಬ ಭಯ ನನ್ನನ್ನು ಕಾಡಿಸುತ್ತಿತ್ತು.” ಅವನು ಆ ಭಾಷಣಕ್ಕೆ ಹಾಜರಾದನು ಮತ್ತು ಬೈಬಲ್ ಅಧ್ಯಯನಗಳ ಹಲವು ಸೆಷನ್ಗಳ ನಂತರ ಅಂದರೆ, ಸುಮಾರು ಒಂದು ವರುಷದ ಬಳಿಕ ಅವನು ದೀಕ್ಷಾಸ್ನಾನವನ್ನು ಪಡೆದುಕೊಂಡನು. ಈ ರೀತಿಯಲ್ಲಿ, ಕಾರ್ಲ್ ಕ್ಲೈನ್ರವರ ಕ್ರೈಸ್ತ ಶುಶ್ರೂಷೆಯು ಆರಂಭಗೊಂಡಿತು. ಇವರು ನಂತರ ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿ ಅನೇಕ ವರುಷಗಳ ವರೆಗೆ ಸೇವೆಸಲ್ಲಿಸಿದರು. ಇದೆಲ್ಲವು ಒಂದು ಕರಪತ್ರದಿಂದ ಆರಂಭಗೊಂಡಿತು.
ಇಂದು ಸಹ ಕರಪತ್ರಗಳು, ಸಾಕ್ಷಿನೀಡುವುದರಲ್ಲಿ ಒಂದು ಪ್ರಭಾವಕಾರಿ ಸಾಧನವಾಗಿ ಮುಂದುವರಿಯುತ್ತಿವೆ. ಒಬ್ಬ ವ್ಯಕ್ತಿಗೆ ಕರಪತ್ರವನ್ನು ನೀಡುವುದು, ತಮ್ಮನ್ನು ಪರಿಚಯಪಡಿಸಲು ಮತ್ತು ಸಂಭಾಷಣೆಯನ್ನು ಆರಂಭಿಸಲು ಒಂದು ಉತ್ತಮ ವಿಧಾನವಾಗಿದೆ ಎಂದು ಅನೇಕ ಪ್ರಚಾರಕರು ಕಂಡುಕೊಂಡಿದ್ದಾರೆ. ಮನೆಮನೆಯ ಸೇವೆಯಲ್ಲಿ ತಮ್ಮ ಚಿಕ್ಕ ಮಕ್ಕಳನ್ನು ಕರಪತ್ರವನ್ನು ನೀಡುವಂತೆ ಮಾಡುವ ಮೂಲಕ ಹೆತ್ತವರು ಮಕ್ಕಳನ್ನೂ ಶುಶ್ರೂಷೆಯಲ್ಲಿ ಒಳಗೂಡಿಸಬಲ್ಲರು. ಪತ್ರ ಬರೆಯುವ ಮೂಲಕ ಸಾಕ್ಷಿನೀಡುವ ಪ್ರಚಾರಕರು, ಒಂದು ಕರಪತ್ರವನ್ನು ಪತ್ರದೊಂದಿಗಿಡುವ ಮೂಲಕ ಕೂಟಗಳನ್ನು ಪರಿಚಯಪಡಿಸಸಾಧ್ಯವಿದೆ. ಬೈಬಲ್ ವಿದ್ಯಾರ್ಥಿಗಳನ್ನು ಮತ್ತು ಇತರ ಆಸಕ್ತ ಜನರನ್ನು ನಮ್ಮ ಕೂಟಗಳಿಗೆ ಆಮಂತ್ರಿಸಲು ಕರಪತ್ರಗಳನ್ನು ನೀಡುವುದೇ ಒಂದು ಸುಲಭವಾದ ವಿಧಾನವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ.
ನಿಮ್ಮ ಶುಶ್ರೂಷೆಯಲ್ಲಿ ನೀವು ಕರಪತ್ರಗಳ ಉತ್ತಮ ಉಪಯೋಗವನ್ನು ಮಾಡುತ್ತಿದ್ದೀರೊ?