ಪರಭಾಷಾ ಸಾಹಿತ್ಯ ತ್ವರೆಯಾಗಿ ಬೇಕೊ?
ಸಭೆಯ ಸ್ಟಾಕ್ನಲ್ಲಿಲ್ಲದ ಒಂದು ಭಾಷೆಯ ಸಾಹಿತ್ಯ ಓದಲಿಚ್ಛಿಸುವ ಜನರನ್ನು ನಾವು ಕೆಲವೊಮ್ಮೆ ಭೇಟಿಯಾಗುತ್ತೇವೆ. ಆದರೆ ಇಂಟರ್ನೆಟ್ ಸೌಕರ್ಯ ಹಾಗೂ ಒಂದು ಪ್ರಿಂಟರ್ ಲಭ್ಯವಿರುವಲ್ಲಿ 400 ಭಾಷೆಯ ಸಾಹಿತ್ಯ ನಿಮ್ಮ ಕೈಗೆ ಸಿಗಬಲ್ಲದೆಂದು ನಿಮಗೆ ಗೊತ್ತೊ? ಹೀಗೆ ಮಾಡಿ:
• ನಮ್ಮ ಅಧಿಕೃತ ವೆಬ್ಸೈಟ್ www.watchtower.org ಹೋಗಿ.
• ‘ಹೋಮ್ ಪೇಜ್’ನ ಬಲಭಾಗದಲ್ಲಿ ಕೆಲವೊಂದು ಭಾಷೆಗಳ ಪಟ್ಟಿ ಇದೆ. ಭೂಗೋಳದ ಚಿತ್ರದ ಮೇಲೆ ಕ್ಲಿಕ್ಕಿಸಿದರೆ ಲಭ್ಯವಿರುವ ಎಲ್ಲ ಭಾಷೆಗಳ ಪಟ್ಟಿ ಸಿಗುವುದು.
• ನಿಮಗೆ ಬೇಕಾದ ಭಾಷೆಯ ಮೇಲೆ ಕ್ಲಿಕ್ಕಿಸಿ. ತೋರಿಬರುವ ಪುಟದಲ್ಲಿ ನೀವು ಪ್ರಿಂಟ್ ಮಾಡಬಹುದಾದ ಸಾಹಿತ್ಯ ಉದಾಹರಣೆಗೆ ಟ್ರ್ಯಾಕ್ಟ್, ಬ್ರೋಷರ್, ಲೇಖನಗಳು ಇರುತ್ತವೆ. ಈ ಪುಟ ನೀವು ಆಯ್ಕೆಮಾಡಿರುವ ಭಾಷೆಯಲ್ಲಿರುವುದರಿಂದ ಆ ಶೀರ್ಷಿಕೆಗಳನ್ನು ನಿಮಗೆ ಓದಲು ಆಗದಿರಬಹುದು.
• ಯಾವುದೇ ಶೀರ್ಷಿಕೆ ಮೇಲೆ ಕ್ಲಿಕ್ಕಿಸಿ. ಆ ಮಾಹಿತಿ ಸ್ಕ್ರೀನ್ ಮೇಲೆ ತೋರಿಬರುವುದು. ನಂತರ ನಿಮ್ಮ ಬ್ರೌಸರ್ನಲ್ಲಿರುವ ಪ್ರಿಂಟ್ ಫೀಚರ್ ಬಳಸಿ ಪ್ರಿಂಟ್ ಮಾಡಬಹುದು.
ನಮ್ಮ ವೆಬ್ಸೈಟ್ನಲ್ಲಿರುವ ಪ್ರಕಾಶನಗಳು ಕೆಲವು ಮಾತ್ರ. ಹೆಚ್ಚಿನ ಪ್ರಕಾಶನಗಳನ್ನು ಸಭೆಯ ಮೂಲಕ ಪಡೆದುಕೊಳ್ಳಬಹುದು. ವ್ಯಕ್ತಿಗೆ ಆಸಕ್ತಿಯಿದೆಯೆಂದು ಖಚಿತಪಡಿಸಿದ ಬಳಿಕ, ಲಿಟರೇಚರ್ ಕೌಂಟರ್ನಿಂದಲೇ ಸಾಹಿತ್ಯವನ್ನು ವಿನಂತಿಸುವುದು ಅತ್ಯುತ್ತಮ.