ನಮ್ಮ ಅಧಿಕೃತ ವೆಬ್ ಸೈಟ್—ಕ್ಷೇತ್ರ ಸೇವೆಯಲ್ಲಿ ಉಪಯೋಗಿಸಿ
ವೆಬ್ ಸೈಟ್ ಕಡೆಗೆ ಜನರನ್ನು ನಿರ್ದೇಶಿಸಿ: ಕೆಲವರು ನಮ್ಮೊಂದಿಗೆ ಮಾತಾಡಲು, ಸಾಹಿತ್ಯಗಳನ್ನು ತೆಗೆದುಕೊಳ್ಳಲು ಇಷ್ಟಪಡುವುದಿಲ್ಲ. ಆದರೆ ಯೆಹೋವನ ಸಾಕ್ಷಿಗಳ ಬಗ್ಗೆ jw.org ಮೂಲಕ ತಿಳಿದುಕೊಳ್ಳಲು ಅಭ್ಯಂತರವಿರಲಿಕ್ಕಿಲ್ಲ. ಹಾಗಾಗಿ ಪ್ರತಿಯೊಂದು ಸೂಕ್ತ ಸಂದರ್ಭದಲ್ಲಿ ವೆಬ್ ಸೈಟನ್ನು ಪರಿಚಯಿಸಲು ಮರೆಯದಿರಿ.
ಪ್ರಶ್ನೆಗಳನ್ನು ಉತ್ತರಿಸಿ: ಕೆಲವೊಮ್ಮೆ ಮನೆಯವರು, ಆಸಕ್ತರು ಇಲ್ಲವೆ ಪರಿಚಯಸ್ಥರು ಯೆಹೋವನ ಸಾಕ್ಷಿಗಳ ಬಗ್ಗೆ ಅಥವಾ ನಮ್ಮ ನಂಬಿಕೆಗಳ ಬಗ್ಗೆ ಪ್ರಶ್ನೆಗಳನ್ನು ಕೇಳಬಹುದು. ಆಗ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರನ್ನು ಬಳಸಿ ಅವರ ಪ್ರಶ್ನೆಗಳಿಗೆ ಅಲ್ಲೇ ಉತ್ತರ ತೋರಿಸಿ. ವಚನಗಳನ್ನು ಬೈಬಲ್ನಿಂದಲೇ ನೇರವಾಗಿ ಓದುವುದು ಉತ್ತಮ. ಒಂದುವೇಳೆ ನಿಮ್ಮ ಬಳಿ ಇಂಟರನೆಟ್ ಸೌಲಭ್ಯವಿಲ್ಲದಿದ್ದರೆ, jw.org ವೆಬ್ ಸೈಟಲ್ಲಿ ಉತ್ತರಗಳನ್ನು ಕಂಡುಕೊಳ್ಳುವುದು ಹೇಗೆಂದು ಆ ವ್ಯಕ್ತಿಗೆ ವಿವರಿಸಿ.—“ಬೈಬಲ್ ಬೋಧನೆಗಳು/ಉತ್ತರಿಸಲಾದ ಬೈಬಲ್ ಪ್ರಶ್ನೆಗಳು” ಅಥವಾ “ನಮ್ಮ ಕುರಿತು/ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು” ನೋಡಿ.
ನಿಮಗೆ ಪರಿಚಯವಿರುವವರಿಗೆ ಒಂದು ಲೇಖನ ಅಥವಾ ಸಾಹಿತ್ಯವನ್ನು ಕಳುಹಿಸಿ: ಡೌನ್ಲೋಡ್ ಮಾಡಿದ PDF ಅಥವಾ EPUB ಸಾಹಿತ್ಯವನ್ನು ಇ-ಮೇಲ್ ಮೂಲಕ ಕಳುಹಿಸಿ. ಅಥವಾ ಒಂದು ಸಾಹಿತ್ಯದ ಆಡಿಯೋ ರೆಕಾರ್ಡಿಂಗನ್ನು ಸಿ.ಡಿ. ಮಾಡಿಕೊಡಿ. ಪ್ರತಿ ಬಾರಿ ಅಸ್ನಾತ ವ್ಯಕ್ತಿಯೊಬ್ಬರಿಗೆ ಎಲೆಕ್ಟ್ರಾನಿಕ್ ಮಾಧ್ಯಮದ ಸಂಪೂರ್ಣ ಪುಸ್ತಕ, ಬ್ರೋಷರ್ ಇಲ್ಲವೆ ಪತ್ರಿಕೆಯನ್ನು ಕೊಟ್ಟರೆ ಅದನ್ನು ಆ ತಿಂಗಳ ನಿಮ್ಮ ವರದಿಯಲ್ಲಿ ಹಾಕಬಹುದು. ಸಾಹಿತ್ಯವನ್ನು ಅನಾಮಧೇಯವಾಗಿ ಇ-ಮೇಲ್ ಮಾಡಬಾರದು ಮತ್ತು ಒಮ್ಮೆಗೇ ಅನೇಕ ಜನರಿಗೆ ಸಾಹಿತ್ಯವನ್ನು ಕಳುಹಿಸಬಾರದು. ಬೇರೆ ವೆಬ್ ಸೈಟ್ಗಳಿಗೂ ಅಪ್ಲೋಡ್ ಮಾಡಬಾರದು.—“ಸಾಹಿತ್ಯಗಳು” ನೋಡಿ.
ಯೆಹೋವನ ಸಾಕ್ಷಿಗಳ ತಾಜಾ ಸುದ್ದಿ ತೋರಿಸಿ: ಇದು ಬೈಬಲ್ ವಿದ್ಯಾರ್ಥಿಗಳು ಹಾಗೂ ನಾವು ಭೇಟಿಯಾಗುವ ಇತರರು ನಮ್ಮ ಲೋಕವ್ಯಾಪಕ ಕೆಲಸಕ್ಕೂ ಕ್ರೈಸ್ತ ಐಕ್ಯತೆಗೂ ಗಣ್ಯತೆಯನ್ನು ಬೆಳೆಸಿಕೊಳ್ಳಲು ಸಹಾಯ ಮಾಡುತ್ತದೆ. (ಕೀರ್ತ. 133:1)—“ಸುದ್ದಿಗಳು” ನೋಡಿ.
[ಪುಟ 5ರಲ್ಲಿರುವ ರೇಖಾಕೃತಿ]
(For fully formatted text, see publication)
ಪ್ರಯತ್ನಿಸಿ ನೋಡಿ
[ಪುಟ 5ರಲ್ಲಿರುವ ಚಿತ್ರ]
1 “ಸಾಹಿತ್ಯಗಳು” ಎಂಬ ಶೀರ್ಷಿಕೆಯ ಕೆಳಗೆ ನೀವು ಡೌನ್ಲೋಡ್ ಮಾಡಲು ಬಯಸುವ ಸಾಹಿತ್ಯ ಅಥವಾ ಅದರ ಆಡಿಯೋ ರೆಕಾರ್ಡಿಂಗ್ ಯಾವ ರೂಪದಲ್ಲಿ ಬೇಕೆಂಬುದನ್ನು ಕ್ಲಿಕ್ಕಿಸಿ.
2 ಲಭ್ಯವಿರುವ ಲೇಖನಗಳ ಪಟ್ಟಿಯನ್ನು ನೋಡಲು MP3 ಗುಂಡಿಯನ್ನು ಕ್ಲಿಕ್ಕಿಸಿ. ಡೌನ್ಲೋಡ್ ಮಾಡಲು ಲೇಖನದ ಶೀರ್ಷಿಕೆಯ ಮೇಲೆ ಅಥವಾ ಆನ್ಲೈನ್ನಲ್ಲಿ ಆಲಿಸಲು ▸ ಕ್ಲಿಕ್ಕಿಸಿ.
3 ಇತರ ಭಾಷೆಯ ಸಾಹಿತ್ಯವನ್ನು ಡೌನ್ಲೋಡ್ ಮಾಡಬೇಕಾದರೆ ಭಾಷಾ ಪಟ್ಟಿಯಲ್ಲಿ ಆ ಭಾಷೆಯನ್ನು ಆಯ್ಕೆಮಾಡಿ.