ನಮ್ಮ ಅಧಿಕೃತ ವೆಬ್ ಸೈಟ್—ಬೇರೆ ಭಾಷೆಯನ್ನಾಡುವ ವ್ಯಕ್ತಿಗೆ ಸಹಾಯಮಾಡಲು ಉಪಯೋಗಿಸಿ
ನಮ್ಮ ವೆಬ್ ಸೈಟ್ ತೋರಿಸಿ: ವ್ಯಕ್ತಿ ತನ್ನ ಸ್ವಂತ ಭಾಷೆಯಲ್ಲಿ ವೆಬ್ ಸೈಟ್ ನೋಡಲು “ಸೈಟ್ ಭಾಷೆ” ಪಟ್ಟಿಯನ್ನು ಹೇಗೆ ಉಪಯೋಗಿಸಬಹುದು ಎಂದು ತೋರಿಸಿ. (ಕೆಲವೊಂದು ಭಾಷೆಗಳಲ್ಲಿ ವೆಬ್ ಸೈಟ್ನ ಕೆಲವು ಭಾಗಗಳು ಮಾತ್ರ ಲಭ್ಯ.)
ವ್ಯಕ್ತಿಯ ಸ್ವಂತ ಭಾಷೆಯಲ್ಲಿ ವೆಬ್ ಪೇಜ್ ತೋರಿಸಿ: ಅವರ ಭಾಷೆಯಲ್ಲಿರುವ ನಮ್ಮ ಸಾಹಿತ್ಯದ ಒಂದು ಪುಟವನ್ನು ತೋರಿಸಿ. ಉದಾ: ಬೈಬಲ್ ಬೋಧಿಸುತ್ತದೆ ಪುಸ್ತಕ ಅಥವಾ ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರ ಕರಪತ್ರ. “ಭಾಷೆ” ಪಟ್ಟಿಯಿಂದ ಮನೆಯವನ ಭಾಷೆಯನ್ನು ಆರಿಸಿ.
ಒಂದು ಲೇಖನವನ್ನು ಆತ ಆಲಿಸಲಿ: ಆ ವ್ಯಕ್ತಿಯ ಭಾಷೆಯಲ್ಲಿ ಆಡಿಯೋ ರೆಕಾರ್ಡಿಂಗ್ ಇರುವ ಒಂದು ಲೇಖನವನ್ನು ಆಯ್ಕೆಮಾಡಿ ಆತನಿಗೆ ಕೇಳಿಸಿ. ಒಂದುವೇಳೆ ನೀವೇ ಹೊಸ ಭಾಷೆ ಕಲಿಯುತ್ತಿರುವಲ್ಲಿ, ಆ ಭಾಷೆಯ ಲೇಖನವೊಂದನ್ನು ಓದುತ್ತಿರುವಾಗ ಅದರ ಆಡಿಯೋ ರೆಕಾರ್ಡಿಂಗನ್ನು ಆಲಿಸುತ್ತಾ ಓದಿ. ಹೀಗೆ ಆ ಭಾಷೆಯಲ್ಲಿ ಬೇಗನೇ ಪ್ರವೀಣರಾಗಲು ಸಹಾಯಪಡೆಯಿರಿ.—“ಸಾಹಿತ್ಯಗಳು/ಪುಸ್ತಕಗಳು ಮತ್ತು ಕಿರುಹೊತ್ತಗೆಗಳು” ಅಥವಾ “ಸಾಹಿತ್ಯಗಳು/ಪತ್ರಿಕೆಗಳು” ನೋಡಿ.
ಕಿವಿ ಕೇಳಿಸದವರಿಗೆ ಸಾಕ್ಷಿನೀಡುವಾಗ: ನೀವು ಒಬ್ಬ ಕಿವುಡ ವ್ಯಕ್ತಿಯನ್ನು ಭೇಟಿಯಾದರೆ ಸಂಜ್ಞೆ ಭಾಷೆಯಲ್ಲಿರುವ ವಿಡಿಯೋ ರೆಕಾರ್ಡಿಂಗನ್ನು ತೋರಿಸಿ. ಉದಾ: ಯಾವುದಾದರೊಂದು ಪುಸ್ತಕ, ಕಿರುಹೊತ್ತಗೆ, ಕರಪತ್ರ ಅಥವಾ ಬೈಬಲಿನ ಒಂದು ಅಧ್ಯಾಯ.—“ಸಾಹಿತ್ಯಗಳು/ಸಂಜ್ಞೆ ಭಾಷೆ” ನೋಡಿ.
[ಪುಟ 6ರಲ್ಲಿರುವ ರೇಖಾಕೃತಿ]
(For fully formatted text, see publication)
ಪ್ರಯತ್ನಿಸಿ ನೋಡಿ
1 ನೀವು ಆಯ್ದುಕೊಂಡ ಆಡಿಯೋ ರೆಕಾರ್ಡಿಂಗ್ (ನಿಮ್ಮ ಭಾಷೆಯಲ್ಲಿ ಲಭ್ಯವಿದ್ದರೆ) ಕೇಳಿಸಿಕೊಳ್ಳಲು ▸ ಕ್ಲಿಕ್ಕಿಸಿ ಅಥವಾ ಡೌನ್ಲೋಡ್ ಮಾಡಬಯಸುವಲ್ಲಿ “ಡೌನ್ಲೋಡ್ ಆಪ್ಶನ್”ಗಳಲ್ಲಿ ಒಂದನ್ನು ಕ್ಲಿಕ್ಕಿಸಿ.
2 ಈ ಪುಟವನ್ನು ಬೇರೊಂದು ಭಾಷೆಯಲ್ಲಿ ತೋರಿಸಲು “ಭಾಷೆ” ಪಟ್ಟಿಯಿಂದ ಆ ಭಾಷೆಯನ್ನು ಆಯ್ಕೆಮಾಡಿ.
3 ಬೇರೊಂದು ಲೇಖನ ಅಥವಾ ಅಧ್ಯಾಯವನ್ನು ಓದಲು “ಮುಂದಿನ ಲೇಖನ” ಎಂಬ ಗುಂಡಿ ಒತ್ತಿ ಅಥವಾ “ಪರಿವಿಡಿ” ಪಟ್ಟಿಯಿಂದ ಬೇರೊಂದು ಲೇಖನ ಆರಿಸಿ.