ಇದು ಯಾರಿಗೆ ಇಷ್ಟವಾಗಬಹುದು. . . ?
1. ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ನಾವು ಹೇಗೆ ಓದಬೇಕು? ಯಾಕೆ?
1 ಇಡೀ ಜಗತ್ತಿನ ಜನರನ್ನು ಮನಸ್ಸಲ್ಲಿಟ್ಟು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳನ್ನು ಸಿದ್ಧಗೊಳಿಸಲಾಗುತ್ತದೆ. ಆದ್ದರಿಂದಲೇ ಆ ಪತ್ರಿಕೆಗಳಲ್ಲಿ ಬೇರೆ ಬೇರೆ ತೆರನಾದ ಲೇಖನಗಳಿರುತ್ತದೆ. ಪ್ರತಿಯೊಂದು ಲೇಖನವನ್ನು ಓದುವಾಗ ‘ಈ ಲೇಖನ ಯಾವ ರೀತಿಯ ಜನರಿಗೆ ಇಷ್ಟವಾಗಬಹುದು?’ ಅಂತ ಯೋಚಿಸಬೇಕು. ಅಷ್ಟೇ ಅಲ್ಲ ಆ ಪತ್ರಿಕೆಯನ್ನು ಅಂಥವರಿಗೆ ಕೊಡಲೇಬೇಕು ಎನ್ನುವ ದೃಢಸಂಕಲ್ಪ ಮಾಡಿಕೊಳ್ಳಬೇಕು.
2. ನಿರ್ದಿಷ್ಟ ಗುಂಪಿನ ಜನರ ಗಮನವನ್ನು ಸೆಳೆಯುವಂಥ ಯಾವ್ಯಾವ ವಿಷಯಗಳು ನಮ್ಮ ಪತ್ರಿಕೆಗಳಲ್ಲಿ ಬಂದಿವೆ?
2 ಸಹೋದ್ಯೋಗಿಯ ಜತೆ ನೀವೊಮ್ಮೆ ಮಾತಾಡಿದ ವಿಷಯದ ಬಗ್ಗೆಯೇ ಇತ್ತೀಚಿನ ಕಾವಲಿನಬುರುಜು ಪತ್ರಿಕೆಯಲ್ಲಿ ಬಂದಿದ್ಯಾ? ಕುಟುಂಬ ಜೀವನಕ್ಕೆ ಸಂಬಂಧಿಸಿದಂತೆ ನಿಮ್ಮ ಸಂಬಂಧಿಕರೊಬ್ಬರಿಗೆ ಸಹಾಯ ನೀಡುವಂಥ ಲೇಖನ ಬಂದಿದ್ಯಾ? ನಿಮ್ಮ ಪರಿಚಯದವರು ವಿದೇಶಕ್ಕೆ ಪ್ರವಾಸ ಹೋಗಬೇಕೆಂದಿದ್ದಾರಾ? ಆ ದೇಶದ ಬಗ್ಗೆ ಎಚ್ಚರ! ಪತ್ರಿಕೆಯಲ್ಲಿ ಯಾವುದಾದರೂ ಲೇಖನ ಬಂದಿದ್ಯಾ? ನಿಮ್ಮ ಸೇವಾಕ್ಷೇತ್ರದಲ್ಲಿರುವ ಒಂದು ನಿರ್ದಿಷ್ಟ ಉದ್ದಿಮೆ ಅಥವಾ ಸ್ಥಳೀಯ ಸರ್ಕಾರೀ ಸೇವಾಸಂಸ್ಥೆಯ ಆಸಕ್ತಿ ಕೆರಳಿಸುವಂಥ ಪತ್ರಿಕೆಗಳು ಪ್ರಕಟವಾಗಿದೆಯಾ? ಉದಾ: ವೃದ್ಧರು ಎದುರಿಸುವ ತೊಡಕುಗಳ ಬಗ್ಗೆ ಮಾತಾಡುವ ಪತ್ರಿಕೆ ವೃದ್ಧಾಶ್ರಮಗಳ ಗಮನ ಸೆಳೆಯುತ್ತದೆ. ಹಾಗೇ ಅಪರಾಧದಂಥ ವಿಷಯಗಳ ಬಗ್ಗೆ ಇರುವ ಪತ್ರಿಕೆ ಕಾನೂನು ರಕ್ಷಕರ ಗಮನ ಸೆಳೆಯುತ್ತದೆ.
3. ಜನರಿಗೆ ಸೂಕ್ತವಾದ ಅಥವಾ ಆಸಕ್ತಿಕರವಾಗಿರುವಂಥ ಪತ್ರಿಕೆಯನ್ನು ನೀಡುವುದರಿಂದ ಒಳ್ಳೇ ಫಲಿತಾಂಶ ಸಿಗುತ್ತೆ ಅಂತ ತೋರಿಸುವ ಅನುಭವವೊಂದನ್ನು ಹೇಳಿ.
3 ಫಲಶ್ರುತಿ: ತಮಿಳುನಾಡಿನ ಒಂದು ಸಭೆಯ ಸೇವಾಕ್ಷೇತ್ರದಲ್ಲಿ ಕೆಲವೆಡೆ ಎಚ್ಚರ! ಪತ್ರಿಕೆಯ ಕುರಿತಂತೆ ಸಮಸ್ಯೆಯಾಗಿತ್ತು. ಆ ಪ್ರದೇಶಗಳಲ್ಲಿ “ನಿಮ್ಮ ಮಕ್ಕಳು ಜವಾಬ್ದಾರಿಯುತ ವ್ಯಕ್ತಿಗಳಾಗುವರೋ?” ಎಂಬ ಶೀರ್ಷಿಕೆಯುಳ್ಳ 2011ರ ಅಕ್ಟೋಬರ್-ಡಿಸೆಂಬರ್ ಎಚ್ಚರ! ಪತ್ರಿಕೆಯನ್ನು ಪರಿಚಯಿಸಲು ಆ ಸಭೆ ನಿರ್ಧರಿಸಿತು. ಹಲವಾರು ಕುಟುಂಬಗಳಿಗೆ ಪ್ರಚಾರಕರು ಭೇಟಿ ನೀಡಿ “ಮಕ್ಕಳನ್ನು ಬೆಳೆಸೋದರ ಬಗ್ಗೆ ಇರೋ ಎಚ್ಚರ! ಪತ್ರಿಕೆಯನ್ನು ವಿತರಿಸುತ್ತಾ ಇದ್ದೀವಿ. ಇದೊಂದು ವಿಶೇಷ ಸಂಚಿಕೆ” ಎಂದು ಹೇಳಿದರು. ಮೊದಲ ದಿನದಂದೇ 200 ಪ್ರತಿಗಳನ್ನು ವಿತರಿಸಿದರು. 2 ತಿಂಗಳ ಅವಧಿಯಲ್ಲಿ ಅವರು ಆ ಸೇವಾಕ್ಷೇತ್ರದಲ್ಲಿ 6 ವರ್ಷಗಳಿಂದ ಸುವಾರ್ತೆ ಸಾರದಿದ್ದ ಅನೇಕ ಪ್ರದೇಶಗಳಿಗೆ ಭೇಟಿ ನೀಡಿದರು ಮತ್ತು 600ಕ್ಕೂ ಅಧಿಕ ಪತ್ರಿಕೆಗಳನ್ನು ವಿತರಿಸಿದರು.
4. ಹೆಚ್ಚೆಚ್ಚು ಜನರಿಗೆ ಪತ್ರಿಕೆಗಳನ್ನು ನೀಡಬೇಕು. ಯಾಕೆ?
4 ನಮ್ಮ ಪತ್ರಿಕೆಗಳು ಲೋಕಘಟನೆಗಳ ಹಿಂದಿರುವ ಕಾರಣಗಳನ್ನು ಯಥಾವತ್ತಾಗಿ ತಿಳಿಸುತ್ತವೆ ಹಾಗೂ ಬೈಬಲ್ ಮತ್ತು ದೇವರ ರಾಜ್ಯದ ಬಗ್ಗೆ ಜನರಿಗೆ ತಿಳಿಸುತ್ತವೆ. ಭೂಮಿಯಲ್ಲಿ “ರಕ್ಷಣೆಯನ್ನು ಪ್ರಕಟಿಸು”ವ ಏಕೈಕ ಪತ್ರಿಕೆಗಳಿವು. (ಯೆಶಾ. 52:7) ಆದ್ದರಿಂದ ಈ ಪತ್ರಿಕೆಗಳನ್ನು ಹೆಚ್ಚೆಚ್ಚು ಜನರಿಗೆ ನೀಡಬೇಕು. ಇದನ್ನು ಸಾಧಿಸಬೇಕಾದರೆ ಪತ್ರಿಕೆಗಳನ್ನು ಓದುವಾಗಲೇ ‘ಇದು ಯಾರಿಗೆ ಇಷ್ಟವಾಗಬಹುದು?’ ಅಂತ ಯೋಚಿಸಬೇಕು.