ಮಂಗಳವಾರ, ಸೆಪ್ಟೆಂಬರ್ 2
ಪವಿತ್ರಶಕ್ತಿ ಎಲ್ಲ ವಿಷ್ಯಗಳನ್ನ, ಅದ್ರಲ್ಲೂ ದೇವರ ಬಗ್ಗೆ ಇರೋ ಗಾಢವಾದ ವಿಷ್ಯಗಳನ್ನ ಹೇಳುತ್ತೆ.—1 ಕೊರಿಂ. 2:10.
ದೊಡ್ಡ ಸಭೆ ಅಂದ್ಮೇಲೆ ಅಲ್ಲಿ ತುಂಬ ಜನ ಪ್ರಚಾರಕರು ಇರ್ತಾರೆ. ಹಾಗಾಗಿ ನಾವು ತುಂಬ ಸಲ ಕೈ ಎತ್ತಿದ್ರೂ ನಮಗೆ ಅವಕಾಶನೇ ಸಿಗದೇ ಹೋಗಬಹುದು. ಹಾಗಂತ ಕೂಟಗಳಲ್ಲಿ ಉತ್ರ ಹೇಳೋದನ್ನ ನಿಲ್ಲಿಸಿಬಿಡಬೇಡಿ. ಪ್ರಯತ್ನ ಮಾಡ್ತಾನೇ ಇರಿ. ಕೂಟಗಳಲ್ಲಿರೋ ಎಲ್ಲಾ ಭಾಗಗಳನ್ನೂ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಒಂದಲ್ಲ ಒಂದು ಅವಕಾಶ ಖಂಡಿತ ಸಿಗುತ್ತೆ. ಕಾವಲಿನಬುರುಜು ಅಧ್ಯಯನದಲ್ಲಿ ಉತ್ರ ಹೇಳೋಕೆ ನೀವು ಏನೆಲ್ಲ ಮಾಡಬಹುದು? ಮುಖ್ಯ ವಿಷ್ಯಕ್ಕೂ ಒಂದೊಂದು ಪ್ಯಾರಾಗೂ ಏನು ಸಂಬಂಧ ಅಂತ ಯೋಚ್ನೆ ಮಾಡಿ ಉತ್ರಗಳನ್ನ ತಯಾರಿ ಮಾಡ್ಕೊಳ್ಳಿ. ಕೆಲವೊಮ್ಮೆ ಸುಲಭವಾಗಿ ಅರ್ಥ ಆಗದಿರೋ ಬೈಬಲ್ ವಿಷ್ಯಗಳು ಪ್ಯಾರದಲ್ಲಿ ಇರಬಹುದು. ಅಂಥ ಪ್ಯಾರಗಳನ್ನ ಚೆನ್ನಾಗಿ ತಯಾರಿ ಮಾಡ್ಕೊಂಡು ಬನ್ನಿ. ಆಗ ಉತ್ರ ಹೇಳೋಕೆ ಅವಕಾಶ ಸಿಕ್ಕೇ ಸಿಗುತ್ತೆ. ಕೂಟದಲ್ಲಿ ಒಂದು ಉತ್ರ ಹೇಳೋಕೂ ಅವಕಾಶ ಸಿಗಲಿಲ್ಲಾಂದ್ರೆ ಆಗೇನು ಮಾಡೋದು? ಕೂಟ ಆರಂಭ ಆಗೋ ಮುಂಚೆನೇ ಚರ್ಚೆಯನ್ನ ನಡೆಸೋ ಸಹೋದರನ ಹತ್ರ ಮಾತಾಡಿ. ಯಾವ ಪ್ಯಾರಗೆ ಉತ್ರ ತಯಾರಿ ಮಾಡ್ಕೊಂಡು ಬಂದಿದ್ದೀರ ಅಂತ ಅವ್ರಿಗೆ ಹೇಳಿ. ಆಗ ಕೂಟದಲ್ಲಿ ಉತ್ರ ಹೇಳೋಕೆ ಒಂದು ಅವಕಾಶ ಆದ್ರೂ ಸಿಕ್ಕೇ ಸಿಗುತ್ತೆ. w23.04 21-22 ¶9-10
ಬುಧವಾರ, ಸೆಪ್ಟೆಂಬರ್ 3
ಯೋಸೇಫ . . . ಯೆಹೋವನ ದೂತ ಹೇಳಿದ ಹಾಗೇ ಮಾಡಿದ. ಮರಿಯಳನ್ನ ಮದುವೆ ಆದ.—ಮತ್ತಾ. 1:24.
ಯೋಸೇಫ ಒಬ್ಬ ಒಳ್ಳೇ ಗಂಡನಾಗಿರೋಕೆ ಕಾರಣ ಏನು ಗೊತ್ತಾ? ಅವನು ಎಲ್ಲಾನೂ ಯೆಹೋವ ಹೇಳಿದ ತರಾನೇ ಮಾಡ್ತಾ ಇದ್ದ. ಮೂರು ಸಂದರ್ಭಗಳಲ್ಲಿ ಯೆಹೋವ ಅವನಿಗೆ ತನ್ನ ಕುಟುಂಬನ ಕಾಪಾಡ್ಕೊಳ್ಳೋಕೆ ಏನು ಮಾಡಬೇಕು ಅಂತ ಹೇಳಿದನು. ಅದನ್ನ ಪಾಲಿಸೋದು ಅಷ್ಟು ಸುಲಭ ಆಗಿರಲಿಲ್ಲ. ಆದ್ರೂ ಯೋಸೇಫ ಯೆಹೋವ ಹೇಳಿದ ತರಾನೇ ತಕ್ಷಣ ಮಾಡಿದ. (ಮತ್ತಾ. 1:20; 2:13-15, 19-21) ಇದ್ರಿಂದ ಅವನು ಮರಿಯನ ಕಾಪಾಡೋಕೆ ಆಯ್ತು. ಅವಳನ್ನ ಚೆನ್ನಾಗಿ ನೋಡ್ಕೊಳ್ಳೋಕೆ ಆಯ್ತು. ಇದನ್ನೆಲ್ಲ ನೋಡಿದಾಗ ಮರಿಯಗೆ ಯೋಸೇಫನ ಮೇಲೆ ಪ್ರೀತಿ ಗೌರವ ಜಾಸ್ತಿ ಆಗಿರಬೇಕಲ್ವಾ? ಗಂಡಂದಿರಿಗೆ ಯೋಸೇಫ ಒಳ್ಳೇ ಮಾದರಿ ಆಗಿದ್ದಾನೆ. ಕುಟುಂಬನ ಹೇಗೆ ನೋಡ್ಕೊಂಡ್ರೆ ಯೆಹೋವನಿಗೆ ಇಷ್ಟ ಆಗುತ್ತೆ ಅನ್ನೋದನ್ನ ಕುಟುಂಬದ ಯಜಮಾನ್ರು ತಿಳ್ಕೊಬೇಕು. ಅದನ್ನ ಪಾಲಿಸೋಕೆ ಕಷ್ಟ ಆದ್ರೂ ಅದನ್ನ ಮಾಡಬೇಕು. ಹೀಗೆ ಮಾಡಿದಾಗ ನಿಮ್ಮ ಹೆಂಡತಿಯನ್ನ ನೀವೆಷ್ಟು ಪ್ರೀತಿಸ್ತೀರಿ ಅಂತ ತೋರಿಸ್ತೀರ. ನಿಮ್ಮ ಮಧ್ಯ ಇರೋ ಪ್ರೀತಿನೂ ಜಾಸ್ತಿ ಆಗುತ್ತೆ. ವನವಾಟುನಲ್ಲಿರೋ ಒಬ್ಬ ಸಹೋದರಿ ಮದುವೆ ಆಗಿ 20 ವರ್ಷ ದಾಟಿದೆ. ಅವರು ಏನು ಹೇಳ್ತಾರೆ ಅಂದ್ರೆ “ನನ್ನ ಗಂಡ ಯೆಹೋವನಿಗೆ ಏನಿಷ್ಟ ಅನ್ನೋದನ್ನ ಮೊದ್ಲು ತಿಳ್ಕೊಂಡು ಅದನ್ನೇ ಮಾಡ್ತಾರೆ. ಇದ್ರಿಂದ ನನಗೆ ಅವ್ರ ಮೇಲಿರೋ ಗೌರವ ಜಾಸ್ತಿ ಆಗಿದೆ. ಅವರು ಮಾಡೋ ನಿರ್ಧಾರಗಳೆಲ್ಲ ಸರಿಯಾಗೇ ಇರುತ್ತೆ ಅನ್ನೋ ನಂಬಿಕೆ ಬಂದಿದೆ.” w23.05 21 ¶5
ಗುರುವಾರ, ಸೆಪ್ಟೆಂಬರ್ 4
ಒಂದು ಹೆದ್ದಾರಿ ಇರುತ್ತೆ, ಹೌದು, ಪವಿತ್ರ ದಾರಿ ಅನ್ನೋ ದಾರಿ ಇರುತ್ತೆ.—ಯೆಶಾ. 35:8
ಬಾಬೆಲ್‌ನಿಂದ ಇಸ್ರಾಯೇಲ್ ದೇಶಕ್ಕೆ ಹೋದವ್ರಲ್ಲಿ ಯಾವ ಅಶುದ್ಧನೂ ಇರಬಾರದಿತ್ತು. ಅವರು ದೇವರ ‘ಪವಿತ್ರ ಜನ್ರಾಗಿರಬೇಕಿತ್ತು.’ (ಧರ್ಮೋ. 7:6) ಇದರರ್ಥ ಅವರು ಇಸ್ರಾಯೇಲ್ ದೇಶಕ್ಕೆ ಹೋದ್ಮೇಲೆ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಯೆಹೋವನಿಗೆ ಇಷ್ಟ ಆಗೋ ತರ ನಡ್ಕೊಳ್ಳೋಕೆ ಮತ್ತೆ ಶುರು ಮಾಡಬೇಕಿತ್ತು. ಬಾಬೆಲಿನಲ್ಲಿ ಹುಟ್ಟಿಬೆಳೆದಿದ್ದ ಯೆಹೂದ್ಯರು ಅಲ್ಲಿದ್ದ ಜನ್ರ ತರಾನೇ ಯೋಚ್ನೆ ಮಾಡ್ತಾ ಇದ್ರು. ಅಷ್ಟೇ ಅಲ್ಲ, ಅವ್ರ ತರಾನೇ ನಡ್ಕೊಳ್ತಾ ಇದ್ರು. ಉದಾಹರಣೆಗೆ, ಯೆಹೂದ್ಯರು ಇಸ್ರಾಯೇಲ್‌ಗೆ ಬಂದು 69 ವರ್ಷ ಆದ್ಮೇಲೆ ಕೂಡ ಅವ್ರಿಗೆ ಹುಟ್ಟಿದ ಮಕ್ಕಳಿಗೆ ಯೆಹೂದ್ಯರ ಭಾಷೆ ಬರ್ತಾ ಇರಲಿಲ್ಲ. ಇದನ್ನ ರಾಜ್ಯಪಾಲನಾದ ನೆಹೆಮೀಯ ನೋಡಿದಾಗ ಅವನಿಗೆ ತುಂಬ ನೋವಾಯ್ತು. ಯಾಕಂದ್ರೆ ಪವಿತ್ರ ಗ್ರಂಥದ ಹೆಚ್ಚಿನ ಭಾಗ ಹೀಬ್ರು ಭಾಷೆಯಲ್ಲಿತ್ತು. (ಧರ್ಮೋ. 6:6, 7; ನೆಹೆ. 13:23, 24) ಆ ಮಕ್ಕಳಿಗೆ ಹೀಬ್ರು ಭಾಷೆನೇ ಗೊತ್ತಿಲ್ಲಾಂದ್ರೆ ಯೆಹೋವನನ್ನ ಪ್ರೀತಿಸೋಕೆ, ಆರಾಧನೆ ಮಾಡೋಕೆ ಹೇಗೆ ಆಗುತ್ತೆ ಹೇಳಿ? (ಎಜ್ರ 10:3, 44) ಹಾಗಾಗಿ ಯೆಹೂದ್ಯರು ತುಂಬ ಬದಲಾವಣೆಗಳನ್ನ ಮಾಡ್ಕೊಬೇಕಿತ್ತು. ಅವರು ಇಸ್ರಾಯೇಲ್‌ನಲ್ಲೇ ಇದ್ದಿದ್ರಿಂದ ಈ ಬದಲಾವಣೆಗಳನ್ನ ಮಾಡ್ಕೊಳ್ಳೋಕೆ ಸುಲಭ ಆಗಿತ್ತು. ಯಾಕಂದ್ರೆ ಈಗಾಗ್ಲೇ ಅಲ್ಲಿ ಜನ್ರು ಯೆಹೋವ ದೇವರ ಆರಾಧನೆಯನ್ನ ಮತ್ತೆ ಶುರು ಮಾಡಿದ್ರು.—ನೆಹೆ. 8:8, 9. w23.05 15 ¶6-7