ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ
ಫೆಬ್ರವರಿ 2000ದಿಂದ ಪ್ರಾರಂಭವಾಗುವ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮದ ಮುಖ್ಯ ಶೀರ್ಷಿಕೆಯು ಹೀಗಿದೆ: “ದೇವರ ಅಗಾಧವಾದ ವಿಷಯಗಳನ್ನು ಪರಿಶೋಧಿಸುವುದು.” (1 ಕೊರಿಂ. 2:10, NW) ನಾವು ಯಾವ ಅಮೂಲ್ಯ ವಿಷಯಗಳನ್ನು ಕಲಿಯಲಿಕ್ಕಿದ್ದೇವೆ?
ಜ್ಞಾನಕ್ಕಾಗಿರುವ ತಮ್ಮ ಹುಡುಕಾಟದಲ್ಲಿ, ಅನೇಕ ಜನರು ತಾವು ಕಂಡುಕೊಂಡಿರುವ ವಿಷಯಗಳಿಂದ ಚೈತನ್ಯಗೊಳಿಸಲ್ಪಟ್ಟಿಲ್ಲ. “ದೇವರ ವಾಕ್ಯವನ್ನು ಪರಿಶೋಧಿಸುವುದು ಚೈತನ್ಯವನ್ನು ತುಂಬಿಸುತ್ತದೆ,” ಎಂಬ ಶೀರ್ಷಿಕೆಯುಳ್ಳ ಭಾಗದಲ್ಲಿ ಸಂಚರಣ ಮೇಲ್ವಿಚಾರಕರು ತೋರಿಸಿಕೊಡಲಿರುವಂತೆ, ಬೈಬಲು ನಮ್ಮನ್ನು ಚೈತನ್ಯಗೊಳಿಸುತ್ತದೆ. “ನೀವು ರಾಜ್ಯ ಸಾರುವಿಕೆಯನ್ನು ಹೇಗೆ ವೀಕ್ಷಿಸುತ್ತೀರಿ?” ಎಂಬ ಪ್ರಶ್ನೆಯಲ್ಲಿ ಭೇಟಿನೀಡುವ ಭಾಷಣಕರ್ತನು ದೇವರ ಅಗಾಧ ವಿಷಯಗಳನ್ನು ಪರಿಶೋಧಿಸುವುದರ ಮತ್ತು ಸುವಾರ್ತೆಯನ್ನು ಸಾರುವುದರ ಮಧ್ಯೆಯಿರುವ ಸಂಬಂಧದ ಕಡೆಗೆ ನಿರ್ದೇಶಿಸುವನು.
ದೇವರ ವಾಕ್ಯವನ್ನು ಆಳವಾಗಿ ಅಗೆಯಲು ಹೆತ್ತವರು ತಮ್ಮ ಮಕ್ಕಳಿಗೆ ಹೇಗೆ ಸಹಾಯಮಾಡಬಹುದು? “ನಿಮ್ಮ ಮಕ್ಕಳಲ್ಲಿ ದೇವರ ವಾಕ್ಯವನ್ನು ಬೇರೂರಿಸಿರಿ,” ಎಂಬ ಭಾಗದಲ್ಲಿ ಪ್ರಾಯೋಗಿಕ ಸಲಹೆಗಳು ಒದಗಿಸಲ್ಪಡುವವು. ಕ್ರೈಸ್ತ ಯುವ ಜನರು ಸಭೆಯಲ್ಲಿರುವ ಆತ್ಮಿಕವಾಗಿ ಪ್ರೌಢ ವ್ಯಕ್ತಿಗಳ ಸಹವಾಸದಿಂದ ಹಿತಕರವಾದ ರೀತಿಯಲ್ಲಿ ಪ್ರಭಾವಿಸಲ್ಪಡುತ್ತಾರೆ. ಹಿತಕರವಾದ ಪ್ರಭಾವವು ಅವರ ಮೇಲೆ ಹೇಗೆ ಬೀರುತ್ತದೆಂಬ ಉದಾಹರಣೆಗಳು, “ವೃದ್ಧ ವ್ಯಕ್ತಿಗಳಿಂದ ಕಲಿಯುವ ಯುವಜನರು” ಎಂಬ ಭಾಗದಲ್ಲಿ ಎತ್ತಿತೋರಿಸಲ್ಪಡುವುದು.
ಯೆಹೋವನು ರಹಸ್ಯಗಳನ್ನು ಪ್ರಕಟಪಡಿಸುವಾತನಾಗಿದ್ದಾನೆ. ಹುದುಗಿರುವ ಆತ್ಮಿಕ ನಿಧಿಗಾಗಿ ನಾವು ಈ ಸಮಯದಲ್ಲಿ ಯಾಕೆ ಶ್ರದ್ಧೆಯಿಂದ ಹುಡುಕಬೇಕು? ಭೇಟಿನೀಡುತ್ತಿರುವ ಭಾಷಣಕರ್ತನು “ಯೆಹೋವನು ಅಗಾಧ ವಿಷಯಗಳನ್ನು ಪ್ರಗತಿಪರವಾಗಿ ಪ್ರಕಟಪಡಿಸುತ್ತಾನೆ” ಎಂಬ ಭಾಷಣದಲ್ಲಿ, ಯೆಹೋವನು ಪ್ರಾಚೀನ ಕಾಲದಲ್ಲಿ ಮತ್ತು ಆಧುನಿಕ ಕಾಲದಲ್ಲಿ ಏನೆಲ್ಲ ವಿಷಯಗಳನ್ನು ಪ್ರಕಟಪಡಿಸಿದ್ದಾನೆಂಬುದನ್ನು ವಿವರಿಸುವನು. “ದೇವರ ಅಗಾಧ ವಿಷಯಗಳನ್ನು ಪರಿಶೋಧಿಸು”ವುದನ್ನು ಮುಂದುವರಿಸುವ ನಮ್ಮ ದೃಢನಿಶ್ಚಯವನ್ನು ಇದು ಬಲಗೊಳಿಸುವುದು.
ಹಾಜರಾಗಲು ಈಗಲೇ ಯೋಜನೆಯನ್ನು ಮಾಡಿರಿ. ದೀಕ್ಷಾಸ್ನಾನವನ್ನು ಪಡೆದುಕೊಳ್ಳುವ ಮೂಲಕ ತಮ್ಮ ಸಮರ್ಪಣೆಯನ್ನು ಸಂಕೇತಿಸಲು ಬಯಸುವವರು, ಅಧ್ಯಕ್ಷ ಮೇಲ್ವಿಚಾರಕನಿಗೆ ಆದಷ್ಟು ಬೇಗನೇ ತಿಳಿಸಬೇಕು. ದೇವರ ವಾಕ್ಯವನ್ನು ಗಾಢವಾಗಿ ಪರಿಶೀಲಿಸಬೇಕೆಂಬ ನಮ್ಮ ಮನಃಪೂರ್ವಕ ಆಕಾಂಕ್ಷೆಯು, ನಾವು ಕೇಳಿಸಿಕೊಳ್ಳಲಿರುವ ವಿಷಯಗಳಿಂದ ಬಲಗೊಳ್ಳುವುದು. ಆದುದರಿಂದ, ಆತ್ಮಿಕ ಉಪದೇಶದ ಈ ವಿಶೇಷ ದಿನವನ್ನು ತಪ್ಪಿಸಿಕೊಳ್ಳಬೇಡಿ!