2000ಕ್ಕಾಗಿ ದೇವಪ್ರಭುತ್ವ ಶುಶ್ರೂಷಾ ಶಾಲಾ ಶೆಡ್ಯೂಲ್
ಸೂಚನೆಗಳು
2000ದಲ್ಲಿ, ದೇವಪ್ರಭುತ್ವ ಶುಶ್ರೂಷಾ ಶಾಲೆಯನ್ನು ನಡಿಸುವಾಗ ಈ ಕೆಳಗಿನ ಏರ್ಪಾಡುಗಳನ್ನು ಅನುಸರಿಸಲಾಗುವುದು.
ಪಠ್ಯಪುಸ್ತಕಗಳು: ದ ನ್ಯೂ ವರ್ಲ್ಡ್ ಟ್ರಾನ್ಸ್ಲೇಶನ್ ಆಫ್ ದ ಹೋಲಿ ಸ್ಕ್ರಿಪ್ಚರ್ಸ್ [bi12], ಕಾವಲಿನಬುರುಜು [w-KA], ನಿತ್ಯಜೀವಕ್ಕೆ ನಡೆಸುವ ಜ್ಞಾನ [kl], ಮತ್ತು “ಚರ್ಚೆಗಾಗಿ ಬೈಬಲ್ ವಿಷಯಗಳು” [td] ಎಂಬವುಗಳು ನೇಮಕಗಳಿಗೆ ಆಧಾರವಾಗಿರುವವು.
ಶಾಲೆಯು ಸಂಗೀತ, ಪ್ರಾರ್ಥನೆ, ಮತ್ತು ಸ್ವಾಗತದ ಹೇಳಿಕೆಗಳೊಂದಿಗೆ ಸರಿಯಾದ ಸಮಯಕ್ಕೆ ಆರಂಭಿಸಬೇಕು. ಸ್ಥಳಿಕ ಭಾಷೆಗಳಲ್ಲಿ ಕೂಟಗಳನ್ನು ನಡೆಸುವ ಸಭೆಗಳು, ಸ್ಥಳಿಕ ಭಾಷೆಯಲ್ಲಿರುವ ಸಂಗೀತಪುಸ್ತಕ/ಬ್ರೋಷರನ್ನು ಉಪಯೋಗಿಸುವಂತೆ ನಾವು ಉತ್ತೇಜಿಸುತ್ತೇವೆ. ಸಂಗೀತ ನಂಬ್ರಗಳು ಕನ್ನಡ ಸಂಗೀತ ಬ್ರೋಷರಿನಿಂದ ತೆಗೆಯಲ್ಪಟ್ಟಿವೆ. ಕಾರ್ಯಕ್ರಮದಲ್ಲಿ ಏನಿದೆ ಎಂಬುದರ ಪೂರ್ವವೀಕ್ಷಣೆಯನ್ನು ಕೊಡುವ ಅಗತ್ಯವಿಲ್ಲ. ಶಾಲಾ ಮೇಲ್ವಿಚಾರಕನು ಪ್ರತಿಯೊಂದು ಭಾಗವನ್ನು ಪರಿಚಯಿಸಿದಂತೆ, ಅವನು ಭಾಷಣದ ವಿಷಯವನ್ನು ತಿಳಿಸುವನು. ಈ ಕೆಳಗಿನ ಸೂಚನೆಯಂತೆ ಮುಂದುವರಿಸಿರಿ:
ನೇಮಕ ನಂಬ್ರ 1: 15 ನಿಮಿಷಗಳು. ಇದು ಒಬ್ಬ ಹಿರಿಯನಿಂದ ಅಥವಾ ಒಬ್ಬ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು, ಮತ್ತು ಇದು ಕಾವಲಿನಬುರುಜು ಪತ್ರಿಕೆ ಅಥವಾ ನಿತ್ಯಜೀವಕ್ಕೆ ನಡೆಸುವ ಜ್ಞಾನ ಪುಸ್ತಕದ ಮೇಲೆ ಆಧಾರಿಸಿರುವುದು. ಕಾವಲಿನಬುರುಜು ಪತ್ರಿಕೆಯ ಮೇಲೆ ಆಧಾರಿಸಿರುವಾಗ, ಈ ನೇಮಕವು ಯಾವುದೇ ಮೌಖಿಕ ಪುನರ್ವಿಮರ್ಶೆಯಿಲ್ಲದೆ, 15 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡತಕ್ಕದ್ದು; ಜ್ಞಾನ ಪುಸ್ತಕದ ಮೇಲೆ ಆಧಾರಿಸಿರುವಾಗ, ಅದು 10ರಿಂದ 12 ನಿಮಿಷದ ಉಪದೇಶ ಭಾಷಣವಾಗಿ ಕೊಡಲ್ಪಡಬೇಕು; ಇದನ್ನು ಹಿಂಬಾಲಿಸಿ, ಆ ಪ್ರಕಾಶನದಲ್ಲಿ ಕೊಡಲ್ಪಟ್ಟಿರುವ ಮುದ್ರಿತ ಪ್ರಶ್ನೆಗಳನ್ನು ಉಪಯೋಗಿಸಿ, 3ರಿಂದ 5 ನಿಮಿಷದ ಮೌಖಿಕ ಪುನರ್ವಿಮರ್ಶೆಯನ್ನು ಮಾಡತಕ್ಕದ್ದು. ಇದರ ಉದ್ದೇಶವು ಕೇವಲ ವಿಷಯವನ್ನು ಆವರಿಸುವುದಲ್ಲ, ಬದಲಾಗಿ ಚರ್ಚಿಸಲ್ಪಡುತ್ತಿರುವ ಮಾಹಿತಿಯ ಪ್ರಾಯೋಗಿಕ ಮೌಲ್ಯದ ಮೇಲೆ ಗಮನವನ್ನು ಕೇಂದ್ರೀಕರಿಸಿ, ಸಭೆಗೆ ಅತ್ಯಂತ ಸಹಾಯಕಾರಿಯಾಗಿ ಇರುವ ವಿಷಯವನ್ನು ಎತ್ತಿಹೇಳುವುದೇ ಆಗಿರಬೇಕು. ಕೊಡಲ್ಪಟ್ಟ ಮುಖ್ಯ ವಿಷಯವು ಉಪಯೋಗಿಸಲ್ಪಡತಕ್ಕದ್ದು.
ಈ ಭಾಷಣಕ್ಕೆ ನೇಮಿತರಾದ ಸಹೋದರರು, ಸಮಯದ ಪರಿಮಿತಿಯೊಳಗೆ ಅದನ್ನು ಮುಗಿಸಲು ಜಾಗ್ರತೆ ವಹಿಸಬೇಕು. ಅಗತ್ಯವಿರುವಲ್ಲಿ ಅಥವಾ ಭಾಷಣಕರ್ತನಿಂದ ಕೇಳಿಕೊಳ್ಳಲ್ಪಡುವಲ್ಲಿ ಖಾಸಗಿ ಸಲಹೆಯನ್ನು ನೀಡಬಹುದು.
ಬೈಬಲ್ ವಾಚನದಿಂದ ಮುಖ್ಯಾಂಶಗಳು: 6 ನಿಮಿಷಗಳು. ಇದು ಸ್ಥಳಿಕ ಅಗತ್ಯಗಳಿಗೆ ವಿಷಯವನ್ನು ಪರಿಣಾಮಕಾರಿಯಾಗಿ ಅನ್ವಯಿಸುವ ಒಬ್ಬ ಹಿರಿಯನಿಂದ ಅಥವಾ ಶುಶ್ರೂಷಾ ಸೇವಕನಿಂದ ನಿರ್ವಹಿಸಲ್ಪಡಬೇಕು. ಒಂದು ಮುಖ್ಯವಿಷಯದ ಅಗತ್ಯವು ಇದಕ್ಕಿರುವುದಿಲ್ಲ. ಇದು ನೇಮಿತ ವಾಚನದ ಕೇವಲ ಸಾರಾಂಶವಾಗಿರಬಾರದು. ನೇಮಿತ ಅಧ್ಯಾಯಗಳ 30ರಿಂದ 60 ಸೆಕೆಂಡಿನ ಸಂಪೂರ್ಣ ಪುನರ್ವಿಮರ್ಶೆಯು ಒಳಗೂಡಿಸಲ್ಪಡಬಹುದು. ಹಾಗಿದ್ದರೂ, ಈ ಮಾಹಿತಿಯು ನಮಗೆ ಏಕೆ ಮತ್ತು ಹೇಗೆ ಅಮೂಲ್ಯವಾದದ್ದಾಗಿದೆ ಎಂಬುದನ್ನು ಸಭಿಕರು ಗಣ್ಯಮಾಡುವಂತೆ ಸಹಾಯ ಮಾಡುವುದೇ ಇದರ ಮೂಲ ಉದ್ದೇಶವಾಗಿದೆ. ತದನಂತರ ಶಾಲಾ ಮೇಲ್ವಿಚಾರಕನು ವಿದ್ಯಾರ್ಥಿಗಳನ್ನು ಅವರ ವಿವಿಧ ಕ್ಲಾಸ್ರೂಮ್ಗಳಿಗೆ ಕಳುಹಿಸುವನು.
ನೇಮಕ ನಂಬ್ರ 2: 5 ನಿಮಿಷಗಳು. ಇದು ಒಬ್ಬ ಸಹೋದರನಿಂದ ಕೊಡಲ್ಪಡುವ, ನೇಮಿತ ವಿಷಯದ ಬೈಬಲ್ ವಾಚನವಾಗಿದೆ. ಇದು ಮುಖ್ಯ ಶಾಲೆಯಲ್ಲಿ ಹಾಗೂ ಇತರ ಗುಂಪುಗಳಲ್ಲಿ ಅನ್ವಯಿಸುವುದು. ಈ ವಾಚನ ನೇಮಕಗಳು, ವಿದ್ಯಾರ್ಥಿಯು ಆರಂಭದ ಹಾಗೂ ಸಮಾಪ್ತಿಯ ಹೇಳಿಕೆಗಳಲ್ಲಿ ಸಂಕ್ಷಿಪ್ತ ವಿವರಣಾತ್ಮಕ ಮಾಹಿತಿಯನ್ನು ಕೊಡಸಾಧ್ಯವಾಗುವಂತೆ ಸಾಮಾನ್ಯವಾಗಿ ಸಾಕಷ್ಟು ಚಿಕ್ಕದಾಗಿರುತ್ತವೆ. ಐತಿಹಾಸಿಕ ಹಿನ್ನೆಲೆ, ಪ್ರವಾದನಾತ್ಮಕ ಅಥವಾ ತಾತ್ವಿಕ ಅರ್ಥವಿವರಣೆ, ಮತ್ತು ಮೂಲತತ್ವಗಳ ಅನ್ವಯವು ಒಳಗೂಡಿಸಲ್ಪಡಬಹುದು. ಎಲ್ಲ ನೇಮಿತ ವಚನಗಳನ್ನು ನಿಲ್ಲಿಸದೇ ಓದಬೇಕು. ಓದಲ್ಪಡಬೇಕಾಗಿರುವ ವಚನಗಳು ಕ್ರಮಾನುಗತವಾಗಿ ಇಲ್ಲದಿರುವಲ್ಲಿ, ಓದುವಿಕೆಯು ಯಾವ ವಚನದಿಂದ ಮುಂದುವರಿಯುತ್ತದೋ ಆ ವಚನವನ್ನು ವಿದ್ಯಾರ್ಥಿಯು ಉಲ್ಲೇಖಿಸಬಹುದೆಂಬುದು ನಿಶ್ಚಯ.
ನೇಮಕ ನಂಬ್ರ 3: 5 ನಿಮಿಷಗಳು. ಇದು ಸಹೋದರಿಯೊಬ್ಬಳಿಗೆ ನೇಮಿಸಲ್ಪಡುವುದು. ಈ ಭಾಷಣಕ್ಕಾಗಿರುವ ವಿಷಯವು, ಚರ್ಚೆಗಾಗಿ ಬೈಬಲ್ ವಿಷಯಗಳು ಎಂಬುದರ ಮೇಲೆ ಆಧಾರಿಸಿರುವುದು. ಸನ್ನಿವೇಶವು (ಸೆಟಿಂಗ್) ಅನೌಪಚಾರಿಕ ಸಾಕ್ಷಿಕಾರ್ಯ, ಪುನರ್ಭೇಟಿ, ಅಥವಾ ಮನೆ ಬೈಬಲ್ ಅಭ್ಯಾಸವಾಗಿರಬಹುದು. ಭಾಗವಹಿಸುವವರು ಕುಳಿತುಕೊಂಡಿರಬಹುದು ಅಥವಾ ನಿಂತುಕೊಂಡಿರಬಹುದು. ವಿದ್ಯಾರ್ಥಿನಿಯು ತನಗೆ ನೇಮಕವಾದ ವಿಷಯವನ್ನು ಹೇಗೆ ವಿಕಸಿಸುತ್ತಾಳೆ ಮತ್ತು ಶಾಸ್ತ್ರವಚನಗಳನ್ನು ವಿವೇಚಿಸಿ ತಿಳಿದುಕೊಳ್ಳಲು ಮನೆಯಾಕೆಗೆ ಹೇಗೆ ಸಹಾಯಮಾಡುತ್ತಾಳೆ ಎಂಬ ವಿಷಯದಲ್ಲೇ ಶಾಲಾ ಮೇಲ್ವಿಚಾರಕನು ವಿಶೇಷವಾಗಿ ಆಸಕ್ತಿಯುಳ್ಳವನಾಗಿರುವನು. ಈ ಭಾಗದ ನೇಮಕವನ್ನು ಪಡೆದಿರುವ ವಿದ್ಯಾರ್ಥಿನಿಗೆ ಓದುವುದು ಗೊತ್ತಿರಬೇಕು. ಒಬ್ಬ ಸಹಾಯಕಿಯನ್ನು ಶಾಲಾ ಮೇಲ್ವಿಚಾರಕನು ನೇಮಿಸುತ್ತಾನೆ, ಆದರೆ ನಾವು ಇನ್ನೊಬ್ಬ ಸಹಾಯಕಿಯನ್ನು ಉಪಯೋಗಿಸಬಹುದು. ಮುಖ್ಯ ಪರಿಗಣನೆಯು ಸನ್ನಿವೇಶಕ್ಕಲ್ಲ, ಬದಲಾಗಿ ವಿಷಯದ ಪರಿಣಾಮಕಾರಿಯಾದ ಉಪಯೋಗಕ್ಕೆ ಕೊಡಲ್ಪಡತಕ್ಕದ್ದು.
ನೇಮಕ ನಂಬ್ರ 4: 5 ನಿಮಿಷಗಳು. ಈ ನೇಮಕಕ್ಕೆ ವಿಷಯವು ಹೆಚ್ಚಿನಾಂಶ ಬೈಬಲಿನ ವ್ಯಕ್ತಿಯ ಮೇಲೆ ಅಥವಾ “ಚರ್ಚೆಗಾಗಿ ಬೈಬಲ್ ವಿಷಯಗಳು” ಎಂಬುದರ ಮೇಲೆ ಆಧಾರಿಸಿರುವುದು. ಈ ನೇಮಕವು ಕಾವಲಿನಬುರುಜು ಪತ್ರಿಕೆಯ ಮೇಲಾಧಾರಿತವಾಗಿರುವಾಗ ವಿದ್ಯಾರ್ಥಿಯು ನೇಮಿತ ಭಾಗವನ್ನು ಮತ್ತು ಪ್ರಕಾಶನದಲ್ಲಿರುವ ಶಾಸ್ತ್ರೀಯ ಉಲ್ಲೇಖಗಳನ್ನು ಅಭ್ಯಾಸಿಸಿ, ಬೈಬಲಿನ ವ್ಯಕ್ತಿಯ ಕುರಿತು ಸ್ಪಷ್ಟವಾದ ಚಿತ್ರಣವನ್ನು ಪಡೆದುಕೊಳ್ಳತಕ್ಕದ್ದು ಮತ್ತು ಅವನ ಅಥವಾ ಅವಳ ಉದಾಹರಣೆಯಿಂದ ಏನನ್ನು ಕಲಿತುಕೊಳ್ಳಸಾಧ್ಯವಿದೆ ಎಂಬುದನ್ನು ಮಾತ್ರವಲ್ಲ, ಅವನ ವ್ಯಕ್ತಿತ್ವ, ಗುಣಲಕ್ಷಣ ಮತ್ತು ಮನೋಭಾವದಿಂದ ಕಲಿತುಕೊಳ್ಳಸಾಧ್ಯವಿರುವ ವಿಷಯಗಳನ್ನೂ ಎತ್ತಿತೋರಿಸುವನು. ನಂಬಿಕೆಯ ಕೃತ್ಯಗಳು, ಧೈರ್ಯ, ದೀನತೆ ಮತ್ತು ನಿಸ್ವಾರ್ಥತೆ, ಅನುಸರಿಸಲು ಉತ್ತಮ ಉದಾಹರಣೆಗಳನ್ನು ನೀಡುತ್ತವೆ; ಅಪನಂಬಿಗಸ್ತ ಕೃತ್ಯಗಳು ಮತ್ತು ಅನಪೇಕ್ಷಣೀಯ ಗುಣಲಕ್ಷಣಗಳಂತಹ ತಪ್ಪಾದ ಮಾರ್ಗಕ್ರಮದಿಂದ ಕ್ರೈಸ್ತರು ದೂರವಿರಬೇಕೆನ್ನುವ ಬಲವಾದ ಎಚ್ಚರಿಕೆಗಳನ್ನು ನೀಡುತ್ತವೆ. ಈ ಭಾಗವು “ಚರ್ಚೆಗಾಗಿ ಬೈಬಲ್ ವಿಷಯಗಳು” ಎಂಬುದರ ಮೇಲೆ ಆಧಾರಿಸಲ್ಪಟ್ಟಿರುವಾಗ, ನೇಮಿತ ಶೀರ್ಷಿಕೆಯು ಉಪಯೋಗಿಸಲ್ಪಡತಕ್ಕದ್ದು ಮತ್ತು ವಿದ್ಯಾರ್ಥಿಯು ಶಾಸ್ತ್ರವಚನಗಳ ಪ್ರಾಯೋಗಿಕ ಅನ್ವಯಮಾಡಿಕೊಳ್ಳಲು ಪ್ರಯತ್ನಿಸಬೇಕು. ನೇಮಕ ನಂಬ್ರ 4ನ್ನು ಒಬ್ಬ ಸಹೋದರ ಅಥವಾ ಸಹೋದರಿಗೆ ನೇಮಿಸಬಹುದು. ಒಬ್ಬ ಸಹೋದರನು ನೇಮಿಸಲ್ಪಡುವಾಗ, ಅದು ಯಾವಾಗಲೂ ಒಂದು ಭಾಷಣವಾಗಿರಬೇಕು. ಒಬ್ಬ ಸಹೋದರಿಗೆ ಅದನ್ನು ನೇಮಿಸುವಾಗ, ಅದು ನೇಮಕ ನಂಬ್ರ 3ಕ್ಕೆ ರೇಖಿಸಲ್ಪಟ್ಟಂತೆಯೇ ಸಾದರಪಡಿಸಲ್ಪಡತಕ್ಕದ್ದು. ಇದಕ್ಕೆ ಕೂಡಿಸಿ, ನೇಮಕ ನಂಬ್ರ 4ರ ಶೀರ್ಷಿಕೆಯನ್ನು # ಎಂಬ ಗುರುತು ಹಿಂಬಾಲಿಸಿದರೆ, ಆಗ ಅದು ಒಬ್ಬ ಸಹೋದರನು ನೇಮಿಸಲ್ಪಡುವನು.
*ಹೆಚ್ಚಿನ ಬೈಬಲ್ ವಾಚನದ ಶೆಡ್ಯೂಲ್: ಇದು ಪ್ರತಿ ವಾರಕ್ಕಾಗಿ ಸಂಗೀತ ಸಂಖ್ಯೆಯ ತರುವಾಯ ಆವರಣ ಚಿಹ್ನೆಗಳಲ್ಲಿ ಕೊಡಲ್ಪಟ್ಟಿದೆ. ಈ ಶೆಡ್ಯೂಲನ್ನು ಅನುಸರಿಸಿ, ವಾರಕ್ಕೆ ಸುಮಾರು ಹತ್ತು ಪುಟಗಳನ್ನು ಓದುವ ಮೂಲಕ, ಇಡೀ ಬೈಬಲನ್ನು ಮೂರು ವರ್ಷಗಳಲ್ಲಿ ಓದಿ ಮುಗಿಸಸಾಧ್ಯವಿದೆ. ಶಾಲಾ ಕಾರ್ಯಕ್ರಮದ ಯಾವ ಭಾಗಗಳೂ ಇಲ್ಲವೆ ಲಿಖಿತ ಪುನರ್ವಿಮರ್ಶೆಯು ಈ ಹೆಚ್ಚಿನ ವಾಚನದ ಶೆಡ್ಯೂಲ್ನ ಮೇಲೆ ಆಧಾರಿಸಿರುವುದಿಲ್ಲ.
ಸೂಚನೆ: ಸಲಹೆ, ಕಾಲನಿಯಮನ, ಲಿಖಿತ ಪುನರ್ವಿಮರ್ಶೆಗಳು, ಮತ್ತು ನೇಮಕಗಳನ್ನು ತಯಾರಿಸುವುದರ ಕುರಿತಾದ ಹೆಚ್ಚಿನ ಮಾಹಿತಿ ಮತ್ತು ಉಪದೇಶಕ್ಕಾಗಿ, ಅಕ್ಟೋಬರ್ 1996ರ ನಮ್ಮ ರಾಜ್ಯದ ಸೇವೆಯ ಪುಟ 3ನ್ನು ದಯವಿಟ್ಟು ನೋಡಿರಿ.
ಶೆಡ್ಯೂಲ್
ಜನ. 3 ಬೈಬಲ್ ವಾಚನ: ಧರ್ಮೋಪದೇಶಕಾಂಡ 4-6
ಗೀತ ನಂಬ್ರ 22 [*ಯೆರೆಮೀಯ 49-52]
ನಂ. 1: ಯೆಹೋವನ ಆಶೀರ್ವಾದಗಳನ್ನು ಮಾನ್ಯಮಾಡಿರಿ (w-KA98 1/1 ಪು. 22-4)
ನಂ. 2: ಧರ್ಮೋಪದೇಶಕಾಂಡ 6:4-19
ನಂ. 3: td 1ಎ ದೇವರು ಪೂರ್ವಜರ ಆರಾಧನೆಗೆ ಏಕೆ ಸಮ್ಮತಿನೀಡುವುದಿಲ್ಲ
ನಂ. 4: ಮೋಶೆ ಮತ್ತು ಆರೋನರು—ಶೀರ್ಷಿಕೆ: #ಸಾಮಾನ್ಯವಾಗಿರುವುದಕ್ಕಿಂತಲೂ ಹೆಚ್ಚಿನ ಬಲವನ್ನು ಯೆಹೋವನು ನೀಡುತ್ತಾನೆ. (w-KA96 1/15 ಪು. 24-5)
ಜನ. 10 ಬೈಬಲ್ ವಾಚನ: ಧರ್ಮೋಪದೇಶಕಾಂಡ 7-10
ಗೀತ ನಂಬ್ರ 6 [*ಪ್ರಲಾಪಗಳು 1-5]
ನಂ.1: ಸತ್ಯ ದೇವರನ್ನು ಘನತೆಗೇರಿಸಿರಿ (w-KA98 1/1 ಪು. 30-1)
ನಂ. 2: ಧರ್ಮೋಪದೇಶಕಾಂಡ 8:1-18
ನಂ. 3: td 1ಬಿ ಮಾನವರನ್ನು ಗೌರವಿಸಬಹುದು, ಆದರೆ ದೇವರೊಬ್ಬನನ್ನೇ ಆರಾಧಿಸಬೇಕು
ನಂ. 4: ನಿಮ್ಮ ಮಗುವಿನಲ್ಲಿ ಸತ್ಯವನ್ನು ನಾಟಿಸಿರಿ (w-KA96 5/15 ಪು. 8-9)
ಜನ. 17 ಬೈಬಲ್ ವಾಚನ: ಧರ್ಮೋಪದೇಶಕಾಂಡ 11-14
ಗೀತ ನಂಬ್ರ 21 [*ಯೆಹೆಜ್ಕೇಲ 1-9]
ನಂ. 1: ನಮ್ಮ ಪ್ರಿಯರಿಗಾಗಿ ಮುಂದಾಗಿಯೇ ಯಾಕೆ ಯೋಜನೆಯನ್ನು ಮಾಡಬೇಕು (w-KA98 1/15 ಪು. 19-22)
ನಂ. 2: ಧರ್ಮೋಪದೇಶಕಾಂಡ 11:1-12
ನಂ. 3: td 2ಎ ಅರ್ಮಗೆದೋನ್—ದುಷ್ಕೃತ್ಯವನ್ನು ಕೊನೆಗೊಳಿಸುವ ಯುದ್ಧ
ನಂ. 4: ಯೋನ—ಶೀರ್ಷಿಕೆ: #ಯೆಹೋವನ ಕರುಣೆಯು ಮಹತ್ತರವಾಗಿದೆ (w-KA96 5/15 ಪು. 24-8)
ಜನ. 24 ಬೈಬಲ್ ವಾಚನ: ಧರ್ಮೋಪದೇಶಕಾಂಡ 15-19
ಗೀತ ನಂಬ್ರ 18 [*ಯೆಹೆಜ್ಕೇಲ 10-16]
ನಂ. 1: ರೂಪಾಂತರಗೊಳಿಸುವ ಮತ್ತು ಐಕ್ಯಗೊಳಿಸುವ ಸತ್ಯದ ಶಕ್ತಿ (w-KA98 1/15 ಪು. 29-31)
ನಂ. 2: ಧರ್ಮೋಪದೇಶಕಾಂಡ 19:11-21.
ನಂ. 3: td 2ಬಿ ಅರ್ಮಗೆದೋನ್ ದೇವರಿಂದ ನಡೆಸಲ್ಪಡುವ ಪ್ರೀತಿಯ ಕ್ರಿಯೆಯಾಗಿರುವುದಕ್ಕೆ ಕಾರಣ
ನಂ. 4: #ನಂಬಿಗಸ್ತ ಸಹಕಾರವು ಫಲಿತಾಂಶಗಳನ್ನು ಉತ್ಪಾದಿಸುತ್ತದೆ (w-KA96 6/15 ಪು. 28-30)
ಜನ. 31 ಬೈಬಲ್ ವಾಚನ: ಧರ್ಮೋಪದೇಶಕಾಂಡ 20-23
ಗೀತ ನಂಬ್ರ 1 [*ಯೆಹೆಜ್ಕೇಲ 17-21]
ನಂ. 1: ಶ್ಲಾಘನೆ ಮತ್ತು ಮುಖಸ್ತುತಿಯ ಶಾಸ್ತ್ರೀಯ ದೃಷ್ಟಿಕೋನ (w-KA98 2/1 ಪು. 29-31)
ನಂ. 2: ಧರ್ಮೋಪದೇಶಕಾಂಡ 20:10-20
ನಂ. 3: td 3ಎ ದೀಕ್ಷಾಸ್ನಾನ—ಒಂದು ಕ್ರಿಸ್ತೀಯ ಆವಶ್ಯಕತೆ
ನಂ. 4: ಎಪಫ್ರೊದೀತ—ಶೀರ್ಷಿಕೆ: #ನಿರ್ಭೀತರಾಗಿರಿ ಮತ್ತು ದೇವರ ಸೇವಕರಿಗೆ ಪ್ರೀತಿಯನ್ನು ತೋರಿಸಿರಿ (w-KA96 8/15 ಪು. 27-30)
ಫೆಬ್ರ. 7 ಬೈಬಲ್ ವಾಚನ: ಧರ್ಮೋಪದೇಶಕಾಂಡ 24-27
ಗೀತ ನಂಬ್ರ 29 [*ಯೆಹೆಜ್ಕೇಲ 22-27]
ನಂ. 1: ನಿಜವಾದ ಆಶಾವಾದಕ್ಕಾಗಿರುವ ಆಧಾರ (w-KA98 2/1 ಪು. 4-6)
ನಂ. 2: ಧರ್ಮೋಪದೇಶಕಾಂಡ 25:5-16
ನಂ. 3: td 3ಬಿ ದೀಕ್ಷಾಸ್ನಾನವು ಪಾಪಗಳನ್ನು ತೊಳೆಯುವುದಿಲ್ಲ
ನಂ. 4: ಪೇತ್ರ—ಶೀರ್ಷಿಕೆ: #ಧೈರ್ಯವಂತ ಸಾಕ್ಷಿಕಾರ್ಯದ ಪರಿಣಾಮಗಳು (w-KA96 9/15 ಪು. 8-9)
ಫೆಬ್ರ. 14 ಬೈಬಲ್ ವಾಚನ: ಧರ್ಮೋಪದೇಶಕಾಂಡ 28-30
ಗೀತ ನಂಬ್ರ 5 [*ಯೆಹೆಜ್ಕೇಲ 28-33]
ನಂ. 1: ಕೃತಜ್ಞತೆಯ ಮನೋಭಾವವನ್ನು ವಿಕಸಿಸಿಕೊಳ್ಳಿರಿ (w-KA98 2/15 ಪು. 4-7)
ನಂ. 2: ಧರ್ಮೋಪದೇಶಕಾಂಡ 28:1-14
ನಂ. 3: td 4ಎ ಬೈಬಲು ದೈವಪ್ರೇರಿತ ವಾಕ್ಯವಾಗಿದೆ
ನಂ. 4: ಲುದ್ಯ—ಶೀರ್ಷಿಕೆ: ಆದರಾತಿಥ್ಯವು ಆಶೀರ್ವಾದಗಳನ್ನು ತರುತ್ತದೆ (w-KA96 9/15 ಪು. 26-8)
ಫೆಬ್ರ. 21 ಬೈಬಲ್ ವಾಚನ: ಧರ್ಮೋಪದೇಶಕಾಂಡ 31-34
ಗೀತ ನಂಬ್ರ 21 [*ಯೆಹೆಜ್ಕೇಲ 34-39]
ನಂ. 1: ಇವು ಕೊನೆಯ ದಿವಸಗಳು! (kl ಅಧ್ಯಾಯ 11)
ನಂ. 2: ಧರ್ಮೋಪದೇಶಕಾಂಡ 32:35-43
ನಂ. 3: td 4ಸಿ ಬೈಬಲು—ನಮ್ಮ ದಿನಗಳಿಗೆ ಒಂದು ವ್ಯಾವಹಾರಿಕ ಮಾರ್ಗದರ್ಶಿ
ನಂ. 4: ಅಪೊಲ್ಲೋಸ—ಶೀರ್ಷಿಕೆ: #ಒಬ್ಬ ಆತ್ಮಿಕ ವ್ಯಕ್ತಿಯಾಗಿರಿ (w-KA96 10/1 ಪು. 20-3)
ಫೆಬ್ರ. 28 ಬೈಬಲ್ ವಾಚನ: ಯೆಹೋಶುವ 1-5
ಗೀತ ನಂಬ್ರ 4 [*ಯೆಹೆಜ್ಕೇಲ 40-45]
ನಂ. 1: ದುಷ್ಟಾತ್ಮ ಸೈನ್ಯಗಳನ್ನು ಪ್ರತಿಭಟಿಸಿರಿ (kl ಅಧ್ಯಾಯ 12)
ನಂ. 2: ಯೆಹೋಶುವ 2:8-16
ನಂ. 3: td 4ಎಫ್ ಬೈಬಲು—ಎಲ್ಲಾ ಜನರಿಗಾಗಿರುವ ಪುಸ್ತಕ
ನಂ. 4: ದಾನಿಯೇಲ—ಶೀರ್ಷಿಕೆ: #ದೃಢತೆಯಿಂದ ದೇವರ ಸೇವೆಮಾಡಿರಿ (w-KA96 11/15 ಪು. 8-9)
ಮಾರ್ಚ್ 6: ಬೈಬಲ್ ವಾಚನ: ಯೆಹೋಶುವ 6-9
ಗೀತ ನಂಬ್ರ 19 [*ಯೆಹೆಜ್ಕೇಲ 46-ದಾನಿಯೇಲ 2]
ನಂ. 1: ಹೆತ್ತವರೇ—ನಿಮ್ಮ ಮಕ್ಕಳನ್ನು ಕಾಪಾಡಿರಿ! (w-KA98 2/15 ಪು. 8-11)
ನಂ. 2: ಯೆಹೋಶುವ 7:1, 10-19
ನಂ. 3: td 5ಎ ರಕ್ತಪೂರಣಗಳು ರಕ್ತದ ಪವಿತ್ರತೆಯನ್ನು ಕೆಡಿಸುತ್ತವೆ
ನಂ. 4: ಅಕ್ವಿಲ ಮತ್ತು ಪ್ರಿಸ್ಕಿಲ್ಲ—ಶೀರ್ಷಿಕೆ: #ಹುರುಪಿನಿಂದ ಸಾರಿರಿ ಮತ್ತು ಅತಿಥಿಸತ್ಕಾರವನ್ನು ತೋರಿಸಿರಿ (w-KA96 12/15 ಪು. 22-4)
ಮಾರ್ಚ್ 13 ಬೈಬಲ್ ವಾಚನ: ಯೆಹೋಶುವ 10-13
ಗೀತ ನಂಬ್ರ 21 [*ದಾನಿಯೇಲ 3-7]
ನಂ. 1: ದಿವ್ಯಶಕ್ತಿಯ ಕುರಿತು ಬೈಬಲು ಹೇಳುವ ವಿಷಯ (w-KA98 2/15 ಪು. 23-7)
ನಂ. 2: ಯೆಹೋಶುವ 11:6-15
ನಂ. 3: td 5ಬಿ ಯಾವ ಬೆಲೆಯನ್ನು ತೆತ್ತಾದರೂ ಜೀವವನ್ನು ಉಳಿಸಬೇಕೋ?
ನಂ. 4: ಎಲೀಯೆಜರ್—ಶೀರ್ಷಿಕೆ: #ಯೆಹೋವನಲ್ಲಿ ಭರವಸೆಯಿಡಿರಿ ಮತ್ತು ನಿಮ್ಮಿಂದ ಸಾಧ್ಯವಾದುದೆಲ್ಲವನ್ನು ಮಾಡಿರಿ (w-KA97 1/1 ಪು. 30-1)
ಮಾರ್ಚ್ 20 ಬೈಬಲ್ ವಾಚನ: ಯೆಹೋಶುವ 14-17
ಗೀತ ನಂಬ್ರ 16 [*ದಾನಿಯೇಲ 8-ಹೋಶೇಯ 2]
ನಂ. 1: “ನಮ್ಮಂಥ ಅನಿಸಿಕೆಗಳುಳ್ಳ” ನಂಬಿಗಸ್ತ ಪುರುಷರು (w-KA98 3/1 ಪು. 26-9)
ನಂ. 2: ಯೆಹೋಶುವ 15:1-12
ನಂ. 3: td 6ಎ ಅನ್ಯ ಜನಾಂಗಗಳ ಕಾಲವು ಯಾವಾಗ ಮುಕ್ತಾಯಗೊಂಡಿತು?
ನಂ. 4: ಹನೋಕ—ಶೀರ್ಷಿಕೆ: #ದೇವರಿಗೆ ಭಯಪಡುವವರೂ ನಿರ್ದೋಷಿಗಳೂ ಆಗಿರಿ (w-KA97 1/15 ಪು. 29-31)
ಮಾರ್ಚ್ 27 ಬೈಬಲ್ ವಾಚನ: ಯೆಹೋಶುವ 18-20
ಗೀತ ನಂಬ್ರ 17 [*ಹೋಶೇಯ 3-14]
ನಂ. 1: ಭೂಮಿಯಲ್ಲಿನ ಯೇಸುವಿನ ಕಡೇ ದಿವಸಗಳನ್ನು ಪುನರನುಭವಿಸುವುದು (w-KA98 3/15 ಪು. 3-9)
ನಂ. 2: ಯೆಹೋಶುವ 18:1-10
ನಂ. 3: td 7ಎ ಕ್ರೈಸ್ತ ಚರ್ಚು ಏನಾಗಿದೆ?
ನಂ. 4: ಏಹೂದ—ಶೀರ್ಷಿಕೆ: #ಧೈರ್ಯವಂತರೂ ಬಲವುಳ್ಳವರೂ ಆಗಿರಿ (w-KA97 3/15 ಪು. 29-31)
ಏಪ್ರಿಲ್ 3 ಬೈಬಲ್ ವಾಚನ: ಯೆಹೋಶುವ 21-24
ನಂ. 1: ದೈವಭಕ್ತಿಯ ಜೀವನವನ್ನು ನಡೆಸುವುದು ಸಂತೋಷವನ್ನು ತರುವ ಕಾರಣ (kl ಅಧ್ಯಾ. 13)
ನಂ. 2: ಯೆಹೋಶುವ 21:43-22:8
ನಂ. 3: td 7ಡಿ ಪೇತ್ರನು “ಬಂಡೆ”ಯಾಗಿದ್ದಾನೋ?
ನಂ. 4: ಅಮ್ರಾಮ್ ಮತ್ತು ಯೋಕೆಬೆದ್—ಶೀರ್ಷಿಕೆ: ಮಕ್ಕಳ ತರಬೇತಿನಿಂದ ಬರುವ ಪ್ರತಿಫಲಗಳು (w-KA97 5/1 ಪು. 30-1)
ಏಪ್ರಿಲ್ 10 ಬೈಬಲ್ ವಾಚನ: ನ್ಯಾಯಸ್ಥಾಪಕರು 1-4
ನಂ. 1: ನೀವು ಯಾರ ಅಧಿಕಾರವನ್ನು ಒಪ್ಪಿಕೊಳ್ಳಬೇಕು? (kl ಅಧ್ಯಾಯ 14)
ನಂ. 2: ನ್ಯಾಯಸ್ಥಾಪಕರು 3:1-11
ನಂ. 3: td 9ಎ ಸಾಬೀತಾದ ವಿಜ್ಞಾನವು ಬೈಬಲಿನ ಸೃಷ್ಟಿ ದಾಖಲೆಯನ್ನು ಬೆಂಬಲಿಸುತ್ತದೆ
ನಂ. 4: ಎಪಫ್ರ—ಶೀರ್ಷಿಕೆ: #ನಿಮ್ಮ ಸಹೋದರರಿಗಾಗಿ ಪ್ರಾರ್ಥಿಸಿರಿ ಮತ್ತು ಅವರಿಗಾಗಿ ಪರಿಶ್ರಮಪಡಿರಿ (w-KA97 5/15 ಪು. 30-1)
ಏಪ್ರಿಲ್ 17 ಬೈಬಲ್ ವಾಚನ: ನ್ಯಾಯಸ್ಥಾಪಕರು 5-7
ಗೀತ ನಂಬ್ರ 18 [*ಮೀಕ 6-ಚೆಫನ್ಯ 1]
ನಂ. 1: ಎಪ್ಪತ್ತು ಮಂದಿ ಶಿಷ್ಯರಿಗೆ ಯೇಸು ನೀಡಿದ ಉಪದೇಶಗಳಿಂದ ಕಲಿತುಕೊಳ್ಳಿರಿ (w-KA98 3/1 ಪು. 30-1)
ನಂ. 2: ನ್ಯಾಯಸ್ಥಾಪಕರು 5:24-31
ನಂ. 3: td 9ಬಿ ಪ್ರತಿಯೊಂದು ಸೃಷ್ಟಿ ದಿನವು 24 ತಾಸುಗಳ ದಿನವಾಗಿತ್ತೊ?
ನಂ. 4: ಅಬೀಗೈಲ್—ಶೀರ್ಷಿಕೆ: ಯೆಹೋವನನ್ನು ಗೌರವಿಸುವ ಗುಣಗಳನ್ನು ತೋರಿಸಿರಿ (w-KA97 7/1 ಪು. 14-5)
ಏಪ್ರಿಲ್ 24 ಲಿಖಿತ ಪುನರ್ವಿಮರ್ಶೆ. ಧರ್ಮೋಪದೇಶಕಾಂಡ 4ರಿಂದ ನ್ಯಾಯಸ್ಥಾಪಕರು 7ರ ವರೆಗೆ
ಗೀತ ನಂಬ್ರ 21 [*ಚೆಫನ್ಯ 2-ಜೆಕರ್ಯ 7]
ಮೇ 1: ಬೈಬಲ್ ವಾಚನ: ನ್ಯಾಯಸ್ಥಾಪಕರು 8-10
ಗೀತ ನಂಬ್ರ 16 [*ಜೆಕರ್ಯ 8-ಮಲಾಕಿಯ 4]
ನಂ. 1: ಇತರರ ವೈಯಕ್ತಿಕ ಘನತೆಯನ್ನು ಗೌರವಿಸಿರಿ (w-KA98 4/1 ಪು. 28-31)
ನಂ. 2: ನ್ಯಾಯಸ್ಥಾಪಕರು 9:7-21
ನಂ. 3: td 10ಎ ಯೇಸು ಕ್ರೂಜೆಯ ಮೇಲೆ ಸತ್ತನೊ?
ನಂ. 4: ತೆರ್ತ್ಯ—ಶೀರ್ಷಿಕೆ: #ನಾಯಕತ್ವ ವಹಿಸುವವರಿಗೆ ನಿಷ್ಠಾವಂತರಾಗಿರಿ (w-KA97 7/15 ಪು. 29-31)
ಮೇ 8: ಬೈಬಲ್ ವಾಚನ: ನ್ಯಾಯಸ್ಥಾಪಕರು 11-14
ಗೀತ ನಂಬ್ರ 10 [*ಮತ್ತಾಯ 1-8]
ನಂ. 1: ಬಾರ್ನಬ, “ಸಾಂತ್ವನದ ಪುತ್ರ” (w-KA98 4/15 ಪು. 20-3)
ನಂ. 2: ನ್ಯಾಯಸ್ಥಾಪಕರು 13:2-10, 24
ನಂ. 3: td 10ಬಿ ಕ್ರೈಸ್ತರು ಕ್ರೂಜೆಯನ್ನು ಆರಾಧಿಸಬೇಕೋ?
ನಂ. 4: ಕುಟುಂಬ ಸದಸ್ಯರನ್ನು ಎಂದೂ ಬಿಟ್ಟುಕೊಡಬೇಡಿರಿ (w-KA97 9/1 ಪು. 30-1)
ಮೇ 15: ಬೈಬಲ್ ವಾಚನ: ನ್ಯಾಯಸ್ಥಾಪಕರು 15-18
ಗೀತ ನಂಬ್ರ 3 [*ಮತ್ತಾಯ 9-14]
ನಂ. 1: ಸೈನ್ಯಗಳಿಲ್ಲದೆಯೇ ಲೋಕ ಭದ್ರತೆ (w-KA98 4/15 ಪು. 28-30)
ನಂ. 2: ನ್ಯಾಯಸ್ಥಾಪಕರು 17:1-13
ನಂ. 3: td 11ಎ ಮರಣದ ಕಾರಣವೇನು?
ನಂ. 4: ಅರಿಸ್ತಾರ್ಕ—ಶೀರ್ಷಿಕೆ: #ದೇವರ ಸಂಸ್ಥೆಗೆ ನಿಷ್ಠಾವಂತರಾಗಿ ಉಳಿಯಿರಿ (w-KA97 9/15 ಪು. 29-31)
ಮೇ 22: ಬೈಬಲ್ ವಾಚನ: ನ್ಯಾಯಸ್ಥಾಪಕರು 19-21
ಗೀತ ನಂಬ್ರ 21 [*ಮತ್ತಾಯ 15-21]
ನಂ. 1: ದೇವರನ್ನು ಗೌರವಿಸುವ ಒಂದು ಕುಟುಂಬವನ್ನು ಕಟ್ಟುವುದು (kl ಅಧ್ಯಾಯ 15)
ನಂ. 2: ನ್ಯಾಯಸ್ಥಾಪಕರು 19:11-21
ನಂ. 3: td 11ಬಿ ಮೃತರು ನಿಮಗೆ ಹಾನಿಯನ್ನುಂಟುಮಾಡಬಲ್ಲರೋ?
ನಂ. 4: ಎಲೀಷ—ಶೀರ್ಷಿಕೆ: #ದೇವರಿಗೆ ಮನಃಪೂರ್ವಕವಾದ ಸೇವೆಯನ್ನು ಸಲ್ಲಿಸಿರಿ (w-KA97 11/1 ಪು. 30-1)
ಮೇ 29: ಬೈಬಲ್ ವಾಚನ: ರೂತಳು 1-4
ಗೀತ ನಂಬ್ರ 25 [*ಮತ್ತಾಯ 22-26]
ನಂ. 1: ನೀವು ದೇವರ ಸಮೀಪಕ್ಕೆ ಬರಬಲ್ಲ ವಿಧ (kl ಅಧ್ಯಾಯ 16)
ನಂ. 2: ರೂತಳು 3:1-13
ನಂ. 3: td 11ಸಿ ಜನರು ತಮ್ಮ ಮೃತ ಸಂಬಂಧಿಕರೊಂದಿಗೆ ಮಾತಾಡಸಾಧ್ಯವೊ?
ನಂ. 4: ಒನೇಸಿಫೋರ—ಶೀರ್ಷಿಕೆ: #ಸಂಕಷ್ಟದಲ್ಲಿರುವವರಿಗೆ ಸಾಂತ್ವನ ನೀಡುತ್ತಾ ಇರಿ (w-KA97 11/15 ಪು. 29-31)
ಜೂನ್ 5: ಬೈಬಲ್ ವಾಚನ: 1 ಸಮುವೇಲ 1-3
ಗೀತ ನಂಬ್ರ 21 [*ಮತ್ತಾಯ 27-ಮಾರ್ಕ 4]
ನಂ.1: ದೇವಜನರ ಮಧ್ಯೆ ಭದ್ರತೆಯನ್ನು ಕಂಡುಕೊಳ್ಳಿರಿ (kl ಅಧ್ಯಾಯ 17)
ನಂ. 2: 1 ಸಮುವೇಲ 1:9-20
ನಂ. 3: td 14ಎ ಪಿಶಾಚನು ಒಬ್ಬ ನೈಜ ವ್ಯಕ್ತಿಯಾಗಿದ್ದಾನೋ?
ನಂ. 4: ಮರಿಯಳು—“ಉತ್ತಮ ಭಾಗವನ್ನು” ಆರಿಸಿಕೊಳ್ಳುತ್ತಾಳೆ (w-KA99 9/1 ಪು. 30-1)
ಜೂನ್ 12: ಬೈಬಲ್ ವಾಚನ: 1 ಸಮುವೇಲ 4-7
ಗೀತ ನಂಬ್ರ 11 [*ಮಾರ್ಕ 5-9]
ನಂ. 1: ಯೆಹೋವನು ಯಾರು? (w-KA98 5/1 ಪು. 5-7)
ನಂ. 2: 1 ಸಮುವೇಲ 4:9-18
ನಂ. 3: td 14ಬಿ ಪಿಶಾಚನು—ಈ ಲೋಕದ ಅದೃಶ್ಯ ಅಧಿಪತಿ
ನಂ. 4: #ಲೌಕಿಕ ವಿವೇಕವು ನಿಮ್ಮ ಆಲೋಚನೆಯನ್ನು ಪ್ರಭಾವಿಸುವಂತೆ ಬಿಡಬೇಡಿರಿ (w-KA96 7/15 ಪು. 26-9)
ಜೂನ್ 19: ಬೈಬಲ್ ವಾಚನ: 1 ಸಮುವೇಲ 8-11
ಗೀತ ನಂಬ್ರ 6 [*ಮಾರ್ಕ 10-14]
ನಂ. 1: ಸಮಗ್ರತೆಯು ಬಹುಮಾನಿಸಲ್ಪಡುತ್ತದೆ (w-KA98 5/1 ಪು. 30-1)
ನಂ. 2: 1 ಸಮುವೇಲ 8:4-20
ನಂ. 3: td 14ಡಿ ದೊಬ್ಬಲ್ಪಟ್ಟ ದೇವದೂತರ ಕುರಿತು ಬೈಬಲು ಹೇಳುವ ವಿಷಯ
ನಂ. 4: ಬೇಲ್ಶಚ್ಚರ—ಶೀರ್ಷಿಕೆ: #ಯೆಹೋವನ ಮನನೋಯಿಸುವುದರ ವಿರುದ್ಧ ಜಾಗರೂಕರಾಗಿರಿ (w-KA98 9/15 ಪು. 8-9)
ಜೂನ್ 26: ಬೈಬಲ್ ವಾಚನ: 1 ಸಮುವೇಲ 12-14
ನಂ. 1: ಐಶ್ವರ್ಯವು ನಿಮ್ಮನ್ನು ಸಂತೋಷಗೊಳಿಸಬಲ್ಲದೊ? (w-KA98 5/15 ಪು. 4-6)
ನಂ. 2: 1 ಸಮುವೇಲ 14:1-14
ನಂ. 3: td 17ಎ ಭೂಮಿ—ಪರದೈಸವಾಗಿರುವ ಉದ್ದೇಶದಿಂದ ಸೃಷ್ಟಿಸಲ್ಪಟ್ಟಿತು
ನಂ. 4: ಫಿಲೆಮೋನ ಮತ್ತು ಓನೇಸಿಮ—ಶೀರ್ಷಿಕೆ: ನಾವು ಕ್ರೈಸ್ತ ಸಹೋದರತ್ವದಲ್ಲಿ ಐಕ್ಯರಾಗಿದ್ದೇವೆ (w-KA98 1/15 ಪು. 29-31)
ಜುಲೈ 3: ಬೈಬಲ್ ವಾಚನ: 1 ಸಮುವೇಲ 15-17
ಗೀತ ನಂಬ್ರ 16 [*ಲೂಕ 4-8]
ನಂ. 1: ಯೂನೀಕೆ ಮತ್ತು ಲೋವಿ—ಆದರ್ಶಪ್ರಾಯ ಶಿಕ್ಷಕಿಯರು (w-KA98 5/15 ಪು. 7-9)
ನಂ. 2: 1 ಸಮುವೇಲ 16:4-13
ನಂ. 3: td 17ಬಿ ಭೂಮಿಯ ಮೇಲಿನ ಜೀವನವು ಎಂದಿಗೂ ಅಂತ್ಯಗೊಳ್ಳುವುದಿಲ್ಲ
ನಂ. 4: #ಸುವಾರ್ತೆಯು ಸಾರಲ್ಪಡಲೇಬೇಕು (w-KA97 3/1 ಪು. 30-1)
ಜುಲೈ 10: ಬೈಬಲ್ ವಾಚನ: 1 ಸಮುವೇಲ 18-20
ಗೀತ ನಂಬ್ರ 28 [*ಲೂಕ 9-12]
ನಂ. 1: ಮನವೊಪ್ಪಿಸುವ ಕಲೆಯಿಂದ ಹೃದಯಗಳನ್ನು ತಲಪುವುದು (w-KA98 5/15 ಪು. 21-3)
ನಂ. 2: 1 ಸಮುವೇಲ 19:1-13
ನಂ. 3: td 19ಎ ಸುಳ್ಳು ಪ್ರವಾದಿಗಳನ್ನು ನೀವು ಗುರುತಿಸಬಲ್ಲಿರೊ?
ನಂ. 4: ತುಖಿಕ—ಶೀರ್ಷಿಕೆ: #ಭರವಸಾರ್ಹ ಮತ್ತು ವಿಶ್ವಾಸಯೋಗ್ಯ ಕ್ರೈಸ್ತರಾಗಿರಿ (w-KA98 7/15 ಪು. 7-8)
ಜುಲೈ 17: ಬೈಬಲ್ ವಾಚನ: 1 ಸಮುವೇಲ 21-24
ಗೀತ ನಂಬ್ರ 4 [*ಲೂಕ 13-19]
ನಂ. 1: ನಿಮ್ಮ ಕುಟುಂಬ ಜವಾಬ್ದಾರಿಗೆ ಹೆಗಲುಕೊಡಿರಿ (w-KA98 6/1 ಪು. 20-3)
ನಂ. 2: 1 ಸಮುವೇಲ 24:2-15
ನಂ. 3: td 22ಎ ಆತ್ಮಿಕ ವಾಸಿಮಾಡುವಿಕೆಯು ಎಷ್ಟು ಪ್ರಾಮುಖ್ಯವಾಗಿದೆ?
ನಂ. 4: ನಿಮ್ಮ ಮಕ್ಕಳಿಗಾಗಿ ಸಮಯವನ್ನು ಬದಿಗಿಡಿರಿ (w-KA98 11/1 ಪು. 30-1)
ಜುಲೈ 24: ಬೈಬಲ್ ವಾಚನ: 1 ಸಮುವೇಲ 25-27
ಗೀತ ನಂಬ್ರ 17 [*ಲೂಕ 20-24]
ನಂ. 1: ನಿಜ ನ್ಯಾಯ—ಯಾವಾಗ ಮತ್ತು ಹೇಗೆ? (w-KA98 6/15 ಪು. 26-9)
ನಂ. 2: 1 ಸಮುವೇಲ 25:23-33
ನಂ. 3: td 22ಬಿ ದೇವರ ರಾಜ್ಯ—ಶಾಶ್ವತ ದೈಹಿಕ ರೋಗ ಪರಿಹಾರವನ್ನು ತರುವ ಮಾಧ್ಯಮ
ನಂ. 4: #ಮೇಲಾಧಿಕಾರಿಗಳು ಗೌರವಿಸಲ್ಪಡಬೇಕು (w-KA98 11/15 ಪು. 8-9)
ಜುಲೈ 31: ಬೈಬಲ್ ವಾಚನ: 1 ಸಮುವೇಲ 28-31
ಗೀತ ನಂಬ್ರ 21 [*ಯೋಹಾನ 1-6]
ನಂ. 1: ದೇವರನ್ನು ಸದಾಕಾಲ ಸೇವಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಿರಿ (kl ಅಧ್ಯಾಯ 18)
ನಂ. 2: 1 ಸಮುವೇಲ 31:1-13
ನಂ. 3: td 22ಸಿ ಆಧುನಿಕ ದಿನದ ಭಕ್ತಿಚಿಕಿತ್ಸೆಯು ದೇವರಿಂದ ಬಂದದ್ದಲ್ಲ
ನಂ. 4: ತೀತ—ಶೀರ್ಷಿಕೆ: #“ಆ ಪ್ರಕಾರದ ಪುರುಷರನ್ನು ಪ್ರಿಯರೆಂದು ಭಾವಿಸುತ್ತಿರಬೇಕು.” (w-KA98 11/15 ಪು. 29-31)
ಆಗಸ್ಟ್ 7: ಬೈಬಲ್ ವಾಚನ: 2 ಸಮುವೇಲ 1-4
ಗೀತ ನಂಬ್ರ 16 [*ಯೋಹಾನ 7-11]
ನಂ. 1: ದೇವರ ಜ್ಞಾನವು ಭೂಮಿಯನ್ನು ತುಂಬಿಕೊಳ್ಳುವಾಗ (kl ಅಧ್ಯಾಯ 19)
ನಂ. 2: 2 ಸಮುವೇಲ 2:1-11
ನಂ. 3: td 22ಡಿ ವಿವಿಧ ಭಾಷೆಗಳಲ್ಲಿ ಮಾತಾಡುವುದು ದೇವರ ಅನುಗ್ರಹದ ಸ್ಪಷ್ಟ ರುಜುವಾತಾಗಿದೆಯೋ?
ನಂ. 4: ಯೋಸೇಫ—ಶೀರ್ಷಿಕೆ: ಮುಕ್ತವಾಗಿ ಒಬ್ಬರಿಗೊಬ್ಬರು ತಪ್ಪುಗಳನ್ನು ಕ್ಷಮಿಸುತ್ತಾ ಇರಿ (w-KA99 1/1 ಪು. 30-1)
ಆಗಸ್ಟ್ 14: ಬೈಬಲ್ ವಾಚನ: 2 ಸಮುವೇಲ 5-8
ಗೀತ ನಂಬ್ರ 22 [*ಯೋಹಾನ 12-18]
ನಂ. 1: “ಪರಿಶ್ರಮಪಟ್ಟು ಹೆಣಗಾಡಿರಿ” (w-KA98 6/15 ಪು. 30-1)
ನಂ. 2: 2 ಸಮುವೇಲ 7:4-16
ನಂ. 3: td 23ಬಿ ಯಾರು ಸ್ವರ್ಗಕ್ಕೆ ಹೋಗುವರು?
ನಂ. 4: ಸೀಲ—ಶೀರ್ಷಿಕೆ: #ಪ್ರೋತ್ಸಾಹನೆಯ ಮೂಲವಾಗಿರಿ (w-KA99 2/15 ಪು. 26-29)
ಆಗಸ್ಟ್ 21: ಬೈಬಲ್ ವಾಚನ: 2 ಸಮುವೇಲ 9-12
ಗೀತ ನಂಬ್ರ 4 [*ಯೋಹಾನ 19- ಅ. ಕೃತ್ಯಗಳು 4]
ನಂ. 1: ಒಳ್ಳೆಯ ನೆರೆಯವರಾಗಿರಿ (w-KA98 7/1 ಪು. 30-1)
ನಂ. 2: 2 ಸಮುವೇಲ 11:2-15
ನಂ. 3: td 24ಬಿ ನರಕವು ಯಾತನೆಯ ಸ್ಥಳವಲ್ಲ
ನಂ. 4: #ದೀನರಾಗಿರಿ—ಪ್ರತಿಷ್ಠೆಯ ಸ್ಥಾನಮಾನಗಳನ್ನು ಆಶಿಸಬೇಡಿ (w-KA99 3/1 ಪು. 30-1)
ಆಗಸ್ಟ್ 28 ಲಿಖಿತ ಪುನರ್ವಿಮರ್ಶೆ. ನ್ಯಾಯಸ್ಥಾಪಕರು 8ರಿಂದ ಹಿಡಿದು 2 ಸಮುವೇಲ 12ರ ವರೆಗೆ
ಗೀತ ನಂಬ್ರ 9 [*ಅ. ಕೃತ್ಯಗಳು 5-10]
ಸೆಪ್ಟೆಂ. 4 ಬೈಬಲ್ ವಾಚನ: 2 ಸಮುವೇಲ 13-15
ಗೀತ ನಂಬ್ರ 27 [*ಅ. ಕೃತ್ಯಗಳು 11-16]
ನಂಬ್ರ 1: ನಿಮ್ಮ ಮಕ್ಕಳಿಗೆ ಜೀವಿತದಲ್ಲಿ ಒಂದು ಒಳ್ಳೆಯ ಆರಂಭವನ್ನು ಕೊಡಿರಿ (w-KA98 7/15 ಪು. 4-6)
ನಂ. 2: 2 ಸಮುವೇಲ 13:20-33
ನಂ. 3: td 24ಸಿ ಪೂರ್ಣ ನಿರ್ಮೂಲನಕ್ಕೆ ಬೆಂಕಿಯು ಸಾಂಕೇತಿಕವಾಗಿದೆ
ನಂ. 4: ನಿಮ್ಮ ಭಾರವನ್ನು ಯೆಹೋವನ ಮೇಲೆ ಹಾಕಿರಿ (w-KA99 5/1 ಪು. 30-1)
ಸೆಪ್ಟೆಂ. 11 ಬೈಬಲ್ ವಾಚನ: 2 ಸಮುವೇಲ 16-18
ಗೀತ ನಂಬ್ರ 18 [*ಅ. ಕೃತ್ಯಗಳು 17-22]
ನಂ. 1: ಶವಸಂಸ್ಕಾರದ ಕುರಿತಾದ ಕ್ರಿಸ್ತೀಯ ನೋಟ (w-KA98 7/15 ಪು. 20-4)
ನಂ. 2: 2 ಸಮುವೇಲ 16:5-14
ನಂ. 3: td 24ಇ ಐಶ್ವರ್ಯವಂತನು ಮತ್ತು ಲಾಜರನ ದಾಖಲೆಯು ನಿತ್ಯ ಯಾತನೆಯ ರುಜುವಾತಲ್ಲ
ನಂ. 4: #ನಿಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಡಿರಿ (w-KA99 6/1 ಪು. 28-31)
ಸೆಪ್ಟೆಂ. 18 ಬೈಬಲ್ ವಾಚನ: 2 ಸಮುವೇಲ 19-21
ಗೀತ ನಂಬ್ರ 4 [*ಅ. ಕೃತ್ಯಗಳು 23- ರೋಮಾಪುರ 1]
ನಂ. 1: ನೀವು ನಿಮ್ಮ ಮನಸ್ಸಾಕ್ಷಿಯನ್ನು ನಂಬಸಾಧ್ಯವಿದೆಯೊ? (w-KA98 9/1 ಪು. 4-7)
ನಂ. 2: 2 ಸಮುವೇಲ 20:1, 2, 14-22
ನಂ. 3: td 25ಬಿ ಆಚರಣೆಗಳ ಕುರಿತು ಕ್ರಿಸ್ತೀಯ ನೋಟ
ನಂ. 4: ಪೌಲ—ಶೀರ್ಷಿಕೆ: ಸತ್ಯದ ವಿರೋಧಿಗಳು ಬದಲಾಗಬಲ್ಲರು (w-KA99 6/15 ಪು. 29-31)
ಸೆಪ್ಟೆಂ. 25 ಬೈಬಲ್ ವಾಚನ: 2 ಸಮುವೇಲ 22-24
ಗೀತ ನಂಬ್ರ 16 [*ರೋಮಾಪುರ 2-9]
ನಂ. 1: ಸಮಾನಸ್ಥರ ಒತ್ತಡ—ಅದು ನಿಮಗೆ ಪ್ರಯೋಜನಕರವೋ? (w-KA99 8/1 22-25)
ನಂ. 2: 2 ಸಮುವೇಲ 23:8-17
ನಂ. 3: td 26ಎ ವಿಗ್ರಹಗಳ ಉಪಯೋಗವು ದೇವರನ್ನು ಅಗೌರವಿಸುತ್ತದೆ
ನಂ. 4: #ನಿಜ ವಿವೇಕವನ್ನು ಹುಡುಕುತ್ತಾ ಇರಿ (w-KA99 7/1 ಪು. 30-1)
ಅಕ್ಟೋ. 2 ಬೈಬಲ್ ವಾಚನ: 1 ಅರಸುಗಳು 1-2
ಗೀತ ನಂಬ್ರ 23 [*ರೋಮಾಪುರ 10- 1 ಕೊರಿಂಥ 3]
ನಂ. 1: ಕೋಪವು ನಿಮ್ಮನ್ನು ಮುಗ್ಗರಿಸದಂತೆ ಎಚ್ಚರವಹಿಸಿರಿ (w-KA99 8/15 ಪು. 8, 9)
ನಂ. 2: 1 ಅರಸುಗಳು 2:1-11
ನಂ. 3: td 26ಬಿ ವಿಗ್ರಹಾರಾಧನೆಯ ಪರಿಣಾಮಗಳು
ನಂ. 4: ಫಿಲಿಪ್ಪ—ಶೀರ್ಷಿಕೆ: #“ಎಲ್ಲ ರೀತಿಯ ಜನರಿಗೆ” ಸಾಕ್ಷಿನೀಡಿರಿ (w-KA99 7/15 ಪು. 24-5)
ಅಕ್ಟೋ. 9 ಬೈಬಲ್ ವಾಚನ: 1 ಅರಸುಗಳು 3-6
ಗೀತ ನಂಬ್ರ 7 [*1 ಕೊರಿಂಥ 4-13]
ನಂ. 1: ಪ್ರಮುಖ ವಿಷಯಗಳಿಗೆ ಪ್ರಥಮ ಸ್ಥಾನಕೊಡಿರಿ (w-KA98 9/1 ಪು. 19-21)
ನಂ. 2: 1 ಅರಸುಗಳು 4:21-34
ನಂ. 3: td 26ಸಿ ಯೆಹೋವನೊಬ್ಬನನ್ನೇ ಆರಾಧಿಸಬೇಕು
ನಂ. 4: td 27ಎ #ಮಧ್ಯನಂಬಿಕೆಯ ಮಾರ್ಗವು ದೇವರ ಮಾರ್ಗವಲ್ಲ
ಅಕ್ಟೋ. 16 ಬೈಬಲ್ ವಾಚನ: 1 ಅರಸುಗಳು 7-8
ಗೀತ ನಂಬ್ರ 9 [*1 ಕೊರಿಂಥ 14-2 ಕೊರಿಂಥ 7]
ನಂ. 1: ಪ್ರತಿಷ್ಠಿತರ ಮುಂದೆ ಸಾಕ್ಷಿನೀಡುವುದು (w-KA98 9/1 ಪು. 30-1)
ನಂ. 2: 1 ಅರಸುಗಳು 7:1-14
ನಂ. 3: td 27ಬಿ ಎಲ್ಲ ಧರ್ಮಗಳು ಒಳ್ಳೆಯವುಗಳೊ?
ನಂ. 4: td 29ಎ #ಕ್ರೈಸ್ತರು ದೇವರ ವೈಯಕ್ತಿಕ ಹೆಸರನ್ನು ಉಪಯೋಗಿಸಬೇಕು
ಅಕ್ಟೋ. 23 ಬೈಬಲ್ ವಾಚನ: 1 ಅರಸುಗಳು 9-11
ಗೀತ ನಂಬ್ರ 6 [*2 ಕೊರಿಂಥ 8-ಗಲಾತ್ಯ 4]
ನಂ. 1: ವಧೂದಕ್ಷಿಣೆಯ ಕುರಿತು ಕ್ರಿಸ್ತೀಯ ನೋಟ (w-KA98 9/15 ಪು. 24-7)
ನಂ. 2: 1 ಅರಸುಗಳು 11:1-13
ನಂ. 3: td 29ಸಿ ದೇವರ ಅಸ್ತಿತ್ವದ ಕುರಿತು ನಿಜತ್ವಗಳು
ನಂ. 4: td 29ಡಿ #ದೇವರ ಗುಣಲಕ್ಷಣಗಳನ್ನು ಗುರುತಿಸುವುದು
ಅಕ್ಟೋ. 30 ಬೈಬಲ್ ವಾಚನ: 1 ಅರಸುಗಳು 12-14
ಗೀತ ನಂಬ್ರ 12 [*ಗಲಾತ್ಯ 5-ಫಿಲಿಪ್ಪಿ 2]
ನಂ. 1: ದೇವರು ನಿಮಗೆ ನೈಜವಾಗಿದ್ದಾನೊ? (w-KA98 9/15 ಪು. 21-3)
ನಂ. 2: 1 ಅರಸುಗಳು 13:1-10
ನಂ. 3: td 29ಎಫ್ ಎಲ್ಲರೂ ಒಂದೇ ದೇವರನ್ನು ಸೇವಿಸುವುದಿಲ್ಲ
ನಂ. 4: td 30ಎ #ಯೆಹೋವನ ಸಾಕ್ಷಿಗಳು ಒಂದು ಹೊಸ ಧರ್ಮವಾಗಿದ್ದಾರೋ?
ನವೆಂ. 6 ಬೈಬಲ್ ವಾಚನ: 1 ಅರಸುಗಳು 15-17
ಗೀತ ನಂಬ್ರ 4 [*ಫಿಲಿಪ್ಪಿ 3-1 ಥೆಸಲೊನೀಕ 5]
ನಂ. 1: ಆತ್ಮಿಕ ಪ್ರಗತಿಯನ್ನು ಮಾಡುತ್ತಾ ಇರಿ! (w-KA98 10/1 ಪು. 28-31)
ನಂ. 2: 1 ಅರಸುಗಳು 15:9-24
ನಂ. 3: td 31ಬಿ ಯೇಸು ಕ್ರಿಸ್ತನು—ದೇವರ ಮಗನೂ ನೇಮಿತ ಅರಸನೂ ಆಗಿದ್ದಾನೆ
ನಂ. 4: td 31ಡಿ ರಕ್ಷಣೆಗೆ ಯೇಸುಕ್ರಿಸ್ತನಲ್ಲಿ ನಂಬಿಕೆಯು ಆವಶ್ಯಕವಾಗಿರುವುದೇಕೆ?
ನವೆಂ. 13 ಬೈಬಲ್ ವಾಚನ: 1 ಅರಸುಗಳು 18-20
ಗೀತ ನಂಬ್ರ 13 [*1 ಥೆಸಲೊನೀಕ 1-2 ತಿಮೊಥೆಯ 3]
ನಂ. 1: ಶಾಂತಚಿತ್ತರಾಗಿ ಸಮಸ್ಯೆಗಳನ್ನು ಬಗೆಹರಿಸುವುದು (w-KA98 11/1 ಪು. 4-7)
ನಂ. 2: 1 ಅರಸುಗಳು 20:1, 13-22
ನಂ. 3: td 31ಡಿ ರಕ್ಷಣೆಯನ್ನು ಪಡೆಯಲು ಯೇಸುವಿನಲ್ಲಿ ವಿಶ್ವಾಸವಿಡುವುದಷ್ಟೇ ಸಾಕೋ?
ನಂ. 4: td 33ಬಿ#ದೇವರ ರಾಜ್ಯವು ತರಲಿರುವ ಆಶೀರ್ವಾದಗಳು
ನವೆಂ. 20 ಬೈಬಲ್ ವಾಚನ: 1 ಅರಸುಗಳು 21-22
ಗೀತ ನಂಬ್ರ 2 [*2 ತಿಮೊಥೆಯ 4-ಇಬ್ರಿಯ 7]
ನಂ. 1: “ಸ್ವರ್ಗಧಾನ್ಯ”ದಿಂದ ಪ್ರಯೋಜನಪಡೆದುಕೊಳ್ಳುವುದು (w-KA99 8/15 ಪು. 25-28)
ನಂ. 2: 1 ಅರಸುಗಳು 22:29-40
ನಂ. 3: td 33ಸಿ ಕ್ರಿಸ್ತನ ಶತ್ರುಗಳಿನ್ನೂ ಕ್ರಿಯಾಶೀಲರಾಗಿರುವಾಗ ರಾಜ್ಯದಾಳ್ವಿಕೆಯು ಆರಂಭಿಸುತ್ತದೆ
ನಂ. 4: td 33ಇ ದೇವರ ರಾಜ್ಯವು ಮಾನವರ ಪ್ರಯತ್ನಗಳಿಂದ ಬರುವುದಿಲ್ಲ
ನವೆಂ. 27 ಬೈಬಲ್ ವಾಚನ: 2 ಅರಸುಗಳು 1-3
ಗೀತ ನಂಬ್ರ 6 [*ಇಬ್ರಿಯ 8-ಯಾಕೋಬ 2]
ನಂ. 1: ಮದುವೆಯಾಗಲು ಮಾಡಿಕೊಳ್ಳುವ ನಿಶ್ಚಿತಾರ್ಥವನ್ನು ಕ್ರೈಸ್ತರು ಹೇಗೆ ದೃಷ್ಟಿಸಬೇಕು? (w-KA99 8/15 ಪು. 30, 31)
ನಂ. 2: 2 ಅರಸುಗಳು 2:15-25
ನಂ. 3: td 34ಎ “ಲೋಕದ ಅಂತ್ಯ” ಎನ್ನುವುದರ ಅರ್ಥ
ನಂ. 4: td 34ಬಿ #ಕಡೇ ದಿನಗಳ ಸೂಚನೆಗಳಿಗೆ ಆತ್ಮಿಕವಾಗಿ ಎಚ್ಚೆತ್ತವರಾಗಿರಿ
ಡಿಸೆಂ. 4 ಬೈಬಲ್ ವಾಚನ: 2 ಅರಸುಗಳು 4-6
ಗೀತ ನಂಬ್ರ 2 [*ಯಾಕೋಬ 3-2 ಪೇತ್ರ 3]
ನಂ. 1: ಧರ್ಮಾಧಿಕಾರ ವ್ಯಾಪಾರದ ವಿಷಯದಲ್ಲಿ ಎಚ್ಚರಿಕೆ (w-KA98 11/15 ಪು. 28)
ನಂ. 2: 2 ಅರಸುಗಳು 5:20-27
ನಂ. 3: td 36ಬಿ ನಿತ್ಯ ಜೀವವು ಕೇವಲ ಒಂದು ಸ್ವಪ್ನವಲ್ಲ
ನಂ. 4: td 36ಡಿ ಯಾರು ಪರಲೋಕಕ್ಕೆ ಹೋಗುವರು?
ಡಿಸೆಂ. 11 ಬೈಬಲ್ ವಾಚನ: 2 ಅರಸುಗಳು 7-9
ಗೀತ ನಂಬ್ರ 14 [*1 ಯೋಹಾನ 1-ಪ್ರಕಟನೆ 1]
ನಂ. 1: ಸಾಲಕೊಡುವಾಗ ಅಥವಾ ಸಾಲವನ್ನು ತೆಗೆದುಕೊಳ್ಳುವಾಗ ಅನುಸರಿಸಬೇಕಾಗಿರುವ ಬೈಬಲ್ ಮೂಲತತ್ವಗಳು (w-KA98 11/15 ಪು. 24-7)
ನಂ. 2: 2 ಅರಸುಗಳು 7:1, 2, 6, 7, 16-20
ನಂ. 3: td 36ಇ ಅಸಂಖ್ಯಾತ ಜನರು ಭೂಮಿಯ ಮೇಲಿನ ನಿತ್ಯ ಜೀವವನ್ನು ಪಡೆಯುವರು
ನಂ. 4: td 38ಬಿ #ವಿವಾಹ ಬಂಧವು ಗೌರವಯುತವಾಗಿರಬೇಕು
ಡಿಸೆಂ. 18 ಬೈಬಲ್ ವಾಚನ: 2 ಅರಸುಗಳು 10-12
ಗೀತ ನಂಬ್ರ 17 [*ಪ್ರಕಟನೆ 2-12]
ನಂ. 1: ಯೇಸುವಿನ ಜನನದ ನೈಜ ಇತಿಹಾಸ (w-KA98 12/15 ಪು. 5-9)
ನಂ. 2: 2 ಅರಸುಗಳು 11:1-3, 9-16
ನಂ. 3: td 38ಸಿ ತಲೆತನದ ತತ್ವವನ್ನು ಕ್ರೈಸ್ತರು ಗೌರವಿಸಲೇಬೇಕು
ನಂ. 4: td 38ಡಿ ಮಕ್ಕಳೆಡೆಗೆ ಕ್ರೈಸ್ತ ಹೆತ್ತವರ ಜವಾಬ್ದಾರಿಕೆ
ಡಿಸೆಂ. 25 ಲಿಖಿತ ಪುನರ್ವಿಮರ್ಶೆ. 2 ಸಮುವೇಲ 13ರಿಂದ 2ಅರಸುಗಳು 12ರ ವರೆಗೆ
ಗೀತ ನಂಬ್ರ 9 [*ಪ್ರಕಟನೆ 13-22]