ಅಕ್ಟೋಬರ್ಗಾಗಿ ಸೇವಾ ಕೂಟಗಳು
ಅಕ್ಟೋಬರ್ 4ರಿಂದ ಆರಂಭವಾಗುವ ವಾರ
ಸಂಗೀತ 164 (19)
10 ನಿ: ಸ್ಥಳಿಕ ತಿಳಿಸುವಿಕೆಗಳು. ನಮ್ಮ ರಾಜ್ಯದ ಸೇವೆಯಿಂದ ಆಯ್ದ ಪ್ರಕಟನೆಗಳು.
17 ನಿ: “ಮಕ್ಕಳು—‘ಯೆಹೋವನಿಂದ ಬಂದ ಸ್ವಾಸ್ತ್ಯ.’” ಒಬ್ಬ ಹಿರಿಯನಿಂದ ಪ್ರಶ್ನೋತ್ತರಗಳು. ಅವನು ಒಬ್ಬ ಕುಟುಂಬದ ತಲೆಯಾಗಿರುವಲ್ಲಿ ಒಳ್ಳೇದು. ಕ್ರಮದ ಕುಟುಂಬ ಅಭ್ಯಾಸವು, ವೇಗಗತಿಯಲ್ಲಿ ಬದಲಾಗುತ್ತಿರುವ ವಾತಾವರಣದಿಂದ ಮಕ್ಕಳನ್ನು ಸಂರಕ್ಷಿಸುವ ಮಾಧ್ಯಮವಾಗಿದೆಯೆಂಬುದನ್ನು ವಿವರಿಸುತ್ತಾ, ಅದರ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ. ಈ ವರೆಗೂ ತಮ್ಮ ಸ್ವಂತ ಕುಟುಂಬ ಅಭ್ಯಾಸಗಳನ್ನು ಆರಂಭಿಸಿರದ ಕುಟುಂಬಗಳ ಪ್ರತಿಶತವನ್ನು ತಿಳಿಸಿರಿ. ಅಷ್ಟೇ ಅಲ್ಲ, ಅಭ್ಯಾಸಕ್ಕಾಗಿ ಕ್ರಮವಾಗಿ ಸಮಯವನ್ನು ಬದಿಗಿರಿಸುವ ಹೆತ್ತವರ ಜವಾಬ್ದಾರಿಗಳ ಪ್ರಾಮುಖ್ಯತೆಯನ್ನು ಒತ್ತಿಹೇಳಿರಿ.
18 ನಿ: ಪತ್ರಿಕಾ ಪ್ರಜ್ಞೆಯುಳ್ಳವರಾಗಿರಿ! ಕಳೆದ ತಿಂಗಳು ಸಭೆಯು ಒಟ್ಟಿಗೆ ಎಷ್ಟು ಪತ್ರಿಕೆಗಳನ್ನು ನೀಡಿತು ಎಂಬುದನ್ನು ತಿಳಿಸಿರಿ. ನಾವು ಸೊಸೈಟಿಯಿಂದ ಪಡೆದ ಪತ್ರಿಕೆಗಳ ಸಂಖ್ಯೆಗೆ ಇದನ್ನು ಹೋಲಿಸುವಾಗ ಎಷ್ಟು ವ್ಯತ್ಯಾಸವಿದೆ? ತೀರ ದೊಡ್ಡ ವ್ಯತ್ಯಾಸವಿರುವಲ್ಲಿ ಏನನ್ನು ಮಾಡುವ ಆವಶ್ಯಕತೆಯಿದೆ? ಈ ಕೆಳಗಿನ ವಿಷಯಗಳ ಮೇಲೆ ಸಭಿಕರು ಹೇಳಿಕೆಯನ್ನು ನೀಡುವಂತೆ ಆಮಂತ್ರಿಸಿರಿ: (1) ಪ್ರತಿ ಪ್ರಚಾರಕನು ಸಾಕಾಗುವಷ್ಟು ಆದರೂ ಬಳಕೆಗೆ ತಕ್ಕಷ್ಟು ಸರಬರಾಯಿಯನ್ನು ಆರ್ಡರ್ ಮಾಡತಕ್ಕದ್ದು. (2) ಪ್ರತಿ ಶನಿವಾರವನ್ನು ಪತ್ರಿಕಾ ದಿನವಾಗಿ ವೀಕ್ಷಿಸಿರಿ. (3) ಪ್ರತಿ ತಿಂಗಳು ಪತ್ರಿಕಾ ಚಟುವಟಿಕೆಯಲ್ಲಿ ಭಾಗವಹಿಸಲು ಸಾಧ್ಯವಾಗುವಂತೆ ನಿಮ್ಮ ವೈಯಕ್ತಿಕ ಸೇವಾ ಶೆಡ್ಯೂಲನ್ನು ಏರ್ಪಡಿಸಿರಿ. (4) ಸಂಭಾಷಣೆಗಳನ್ನು ಆರಂಭಿಸುವುದಕ್ಕೆ ಪತ್ರಿಕೆಗಳನ್ನು ಉಪಯೋಗಿಸುತ್ತಾ, ಅನೌಪಚಾರಿಕ ಸಾಕ್ಷಿಕಾರ್ಯದಲ್ಲಿ ಹೆಚ್ಚೆಚ್ಚು ಭಾಗವಹಿಸಲು ಯೋಜಿಸಿರಿ. (5) ವ್ಯಾಪಾರಿಗಳು ಮತ್ತು ವೃತ್ತಿಪರ ಜನರು ಬಹುಶಃ ಹೆಚ್ಚು ಇಷ್ಟಪಡುವ ವಿಶೇಷವಾದ ಲೇಖನಗಳನ್ನು ನಿಮ್ಮೊಂದಿಗೆ ಕೊಂಡೊಯ್ಯಿರಿ. (6) ಕೊಡಿಕೆಗಳ ಸ್ಪಷ್ಟವಾದ ದಾಖಲೆಯನ್ನು ಇಡಿರಿ ಮತ್ತು ಒಂದು ಪತ್ರಿಕಾ ಮಾರ್ಗವನ್ನು ಸ್ಥಾಪಿಸಿ, ಇತ್ತೀಚಿನ ಸಂಚಿಕೆಗಳನ್ನು ಕೊಡಲು ಕ್ರಮವಾಗಿ ಹಿಂದಿರುಗಿ ಹೋಗಿರಿ. (7) ಪತ್ರಿಕೆಗಳ ಯಾವುದೇ ಹಳೆಯ ಪ್ರತಿಗಳು ಜಮಾ ಆಗದಂತೆ ಅವುಗಳ ಒಳ್ಳೆಯ ಉಪಯೋಗವನ್ನು ಮಾಡಿರಿ. ಸದ್ಯದ ಪತ್ರಿಕೆಗಳನ್ನು ತೋರಿಸಿರಿ ಮತ್ತು ಆಸಕ್ತಿಯನ್ನು ಕೆರಳಿಸಬಹುದಾದ ಲೇಖನಗಳನ್ನು ಸೂಚಿಸಿರಿ. ಒಬ್ಬ ವಯಸ್ಕನು ಮತ್ತು ಒಬ್ಬ ಎಳೆಯನು ಪ್ರತ್ಯೇಕವಾಗಿ ಒಂದು ಸಂಕ್ಷಿಪ್ತ ಪತ್ರಿಕಾ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಲಿ.—ನಮ್ಮ ರಾಜ್ಯದ ಸೇವೆಯ ಜನವರಿ 1996ರ ಪುರವಣಿಯನ್ನು ನೋಡಿರಿ.
ಸಂಗೀತ 105 (17) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 11ರಿಂದ ಆರಂಭವಾಗುವ ವಾರ
ಸಂಗೀತ 194 (20)
10 ನಿ: ಸ್ಥಳಿಕ ತಿಳಿಸುವಿಕೆಗಳು. ಅಕೌಂಟ್ಸ್ ವರದಿ.
15 ನಿ: ಸ್ಥಳಿಕ ಅಗತ್ಯಗಳು.
20 ನಿ: “ಕೂಟಗಳಿಂದ ನೀವು ಹೆಚ್ಚು ಆನಂದವನ್ನು ಪಡೆದುಕೊಳ್ಳುವ ವಿಧ.” ಪ್ರಶ್ನೋತ್ತರಗಳು. ಕೂಟಗಳಲ್ಲಿ ಪರಸ್ಪರರಿಗಾಗಿ ನಾವು ಪರಿಗಣನೆ ಮತ್ತು ಉತ್ತೇಜನವನ್ನು ಹೇಗೆ ನೀಡಬಲ್ಲೆವೆಂಬುದನ್ನು ತೋರಿಸುವ ಕೆಲವು ಉದಾಹರಣೆಗಳನ್ನು ಉಲ್ಲೇಖಿಸಿರಿ. ಸಭಿಕರು ತಮ್ಮ ಸ್ವಂತ ಅನುಭವಗಳಿಂದ ಉದಾಹರಣೆಗಳನ್ನು ತಿಳಿಸುವಂತೆ ಆಮಂತ್ರಿಸಿರಿ.
ಸಂಗೀತ 152 (6) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 18ರಿಂದ ಆರಂಭವಾಗುವ ವಾರ
ಸಂಗೀತ 196 (9)
15 ನಿ: ಸ್ಥಳಿಕ ತಿಳಿಸುವಿಕೆಗಳು ಮತ್ತು ಕ್ಷೇತ್ರ ಸೇವಾ ಅನುಭವಗಳು. “ಹೊಸ ವಿಶೇಷ ಸಮ್ಮೇಳನ ದಿನದ ಕಾರ್ಯಕ್ರಮ”ವನ್ನು ಪುನರ್ವಿಮರ್ಶಿಸಿರಿ.
15 ನಿ: “ನಿಮ್ಮ ವಾಸಸ್ಥಾನವನ್ನು ಬದಲಾಯಿಸುತ್ತಿದ್ದೀರೊ?” ಸೆಕ್ರಿಟರಿಯಿಂದ ಉತ್ತೇಜನದಾಯಕ ಭಾಷಣ. ಪ್ರಚಾರಕರು ಇನ್ನೊಂದು ಸಭೆಗೆ ಸ್ಥಳಾಂತರಿಸಬೇಕಾಗುವಾಗ, ಅವರು ತಮ್ಮ ಹೊಸ ಪರಿಸರದಲ್ಲಿ ಯಾವುದೇ ಆತ್ಮಿಕ ಹಿಮ್ಮೆಟ್ಟುವಿಕೆಗಳನ್ನು ತಪ್ಪಿಸಿಕೊಳ್ಳಲು ಸಾಧ್ಯವಾಗುವಂತೆ ಉತ್ತಮವಾಗಿ ನೆಲೆಗೊಳಿಸಲ್ಪಡುವುದು ಮಹತ್ವವುಳ್ಳದ್ದಾಗಿರುತ್ತದೆ. ಇಂತಹ ಯೋಜನೆಗಳ ಬಗ್ಗೆ ಹಿರಿಯರಿಗೆ ತಿಳಿಯಪಡಿಸಿ, ಹೊಸ ಸಭೆಯನ್ನು ಸಂಪರ್ಕಿಸಲಿಕ್ಕಾಗಿ ಅವರ ಸಹಾಯವನ್ನು ವಿನಂತಿಸುವ ಅಗತ್ಯವನ್ನು ಒತ್ತಿಹೇಳಿರಿ.
15 ನಿ: “ಅಪೇಕ್ಷಿಸು ಬ್ರೋಷರಿನಿಂದ ಅಭ್ಯಾಸಗಳನ್ನು ಆರಂಭಿಸುವುದು.” ಪ್ರಶ್ನೋತ್ತರಗಳ ಪರಿಗಣನೆ.
ಸಂಗೀತ 142 (17) ಮತ್ತು ಸಮಾಪ್ತಿಯ ಪ್ರಾರ್ಥನೆ.
ಅಕ್ಟೋಬರ್ 25ರಿಂದ ಆರಂಭವಾಗುವ ವಾರ
ಸಂಗೀತ 179 (2)
15 ನಿ: ಸ್ಥಳಿಕ ತಿಳಿಸುವಿಕೆಗಳು. ನವೆಂಬರ್ ತಿಂಗಳಿನಲ್ಲಿ ಅಪೇಕ್ಷಿಸು ಬ್ರೋಷರ್ ಅಥವಾ ಜ್ಞಾನ ಪುಸ್ತಕವನ್ನು ನೀಡಲು ತಯಾರಾಗಿರುವಂತೆ ಎಲ್ಲರಿಗೆ ಸಹಾಯಮಾಡಿರಿ. “ದೇವರು ನಮ್ಮ ಪ್ರಾರ್ಥನೆಗಳನ್ನು ಉತ್ತರಿಸುತ್ತಾನೋ?” ಎಂಬ ಪ್ರಶ್ನೆಯ ಮೇಲೆ ಕೇಂದ್ರೀಕರಿಸುವ ನಿರೂಪಣೆಯೊಂದನ್ನು ತಯಾರಿಸುವುದು ಹೇಗೆಂಬುದನ್ನು ವಿವರಿಸಿರಿ. ಬ್ರೋಷರ್ನ ಪಾಠ 7ರಲ್ಲಿರುವ ಅಂಶಗಳನ್ನು ಅಥವಾ ಪುಸ್ತಕದ 16ನೆಯ ಅಧ್ಯಾಯದಲ್ಲಿರುವ 12-14ನೆಯ ಪ್ಯಾರಗ್ರಾಫ್ಗಳಲ್ಲಿರುವ ವಿಷಯಗಳನ್ನು ಉಪಯೋಗಿಸಿರಿ. ಒಂದು ಶಾಸ್ತ್ರವಚನವನ್ನು ಒಳಗೊಂಡಿರುವ ಒಂದು ಸರಳ ನಿರೂಪಣೆಯನ್ನು ಪ್ರತ್ಯಕ್ಷಾಭಿನಯಿಸಿರಿ.
15 ನಿ: ಬೈಬಲ್ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳುವುದು. ಆಸಕ್ತ ವ್ಯಕ್ತಿಯೊಬ್ಬನು ಕೇಳಿರುವ ಬೈಬಲ್ ಪ್ರಶ್ನೆಯೊಂದನ್ನು ಉತ್ತರಿಸಲು ಬಯಸುವ ಪ್ರಚಾರಕನೊಬ್ಬನು ಒಬ್ಬ ಶುಶ್ರೂಷಾ ಸೇವಕನನ್ನು ಭೇಟಿಯಾಗುತ್ತಾನೆ. ಉತ್ತರವನ್ನು ಕೊಡುವ ಬದಲು, ಅದನ್ನು ಕಂಡುಕೊಳ್ಳುವುದು ಹೇಗೆ ಎಂಬುದನ್ನು ಶುಶ್ರೂಷಾ ಸೇವಕನು ವಿವರಿಸುತ್ತಾನೆ. ಮೊದಲು, ಅವನು ಸ್ಕೂಲ್ ಗೈಡ್ಬುಕ್, ಅಭ್ಯಾಸ 7ರ ಪ್ಯಾರಗ್ರಾಫ್ಗಳು 8-9ರಲ್ಲಿ ಕಂಡುಬರುವ ಸೂಚನೆಗಳನ್ನು ಪುನರ್ವಿಮರ್ಶಿಸುತ್ತಾನೆ. ಅನಂತರ, ಸ್ಥಳಿಕ ಟೆರಿಟೊರಿಯಲ್ಲಿ ಸಾಮಾನ್ಯವಾಗಿ ಎಬ್ಬಿಸಲ್ಪಡುವ ಪ್ರಶ್ನೆಯೊಂದರ ಮೇಲೆ ಅವರು ಒಟ್ಟಿಗೆ ಸಂಶೋಧನೆಯನ್ನು ಮಾಡುತ್ತಾರೆ. ಈ ವಿಷಯದ ಕುರಿತು ತಿಳಿಸುವ ನಿರ್ದಿಷ್ಟ ರೆಫರೆನ್ಸ್ಗಳನ್ನು ಅವರು ತೆರೆದುನೋಡುತ್ತಾರೆ ಮತ್ತು ಬೈಬಲಿನ ಉತ್ತರಕ್ಕೆ ಮೂಲ ಕಾರಣವನ್ನು ಸ್ಪಷ್ಟೀಕರಿಸುವಂತಹ ಮನಗಾಣಿಸುವ ಅಂಶಗಳನ್ನು ಕಂಡುಕೊಳ್ಳುತ್ತಾರೆ. ಬೈಬಲ್ ಪ್ರಶ್ನೆಗಳನ್ನು ಸಂಶೋಧಿಸಲು ಇದೇ ರೀತಿಯ ಪ್ರತಿಫಲದಾಯಕ ಅಧ್ಯಯನವನ್ನು ಮಾಡುವಂತೆ ಸಭಿಕರನ್ನು ಉತ್ತೇಜಿಸಿರಿ.
15 ನಿ: ನಾವು ಇಡಬಹುದಾದ ಗುರಿಗಳು. ಭಾಷಣ ಮತ್ತು ಸಭಿಕರೊಂದಿಗೆ ಚರ್ಚೆ. ಮಾರ್ಚ್ 15, 1997ರ ಕಾವಲಿನಬುರುಜು ಪತ್ರಿಕೆಯ ಪುಟ 11ರ ರೇಖಾಚೌಕದಲ್ಲಿ ನಮೂದಿಸಲ್ಪಟ್ಟಿರುವ ಪ್ರಾಯೋಗಿಕ ಗುರಿಗಳನ್ನು ಪುನರ್ವಿಮರ್ಶಿಸಿರಿ. ಆಕ್ಸಿಲಿಯರಿ ಅಥವಾ ರೆಗ್ಯುಲರ್ ಪಯನೀಯರ್ ಸೇವೆಯಲ್ಲಿ ಭಾಗವಹಿಸಲು ಉತ್ತೇಜನವನ್ನೂ ಕೊಡಿರಿ. ಇಂತಹ ಗುರಿಗಳನ್ನು ತಲಪುವುದರಿಂದ ನಾವು ವೈಯಕ್ತಿಕವಾಗಿ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಹುದೆಂಬುದನ್ನು ವಿವರಿಸಿರಿ. ಸಭಿಕರು ಕೆಲವು ದೇವಪ್ರಭುತ್ವ ಗುರಿಗಳನ್ನು ತಲಪಲು ಶಕ್ತರಾದಾಗ ಅನುಭವಿಸಿದ ಸಂತೋಷವನ್ನು ತಿಳಿಸಲು ಅವರನ್ನು ಆಮಂತ್ರಿಸಿರಿ.
ಸಂಗೀತ 151 (18) ಮತ್ತು ಸಮಾಪ್ತಿಯ ಪ್ರಾರ್ಥನೆ.