ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • mwb20 ಸೆಪ್ಟೆಂಬರ್‌ ಪು. 8
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕ್ಯಾಮರಾ ಅಥವಾ ಇಂಟರ್ಕಾಮ್‌ ಮೂಲಕ ಸಾಕ್ಷಿ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕ್ಯಾಮರಾ ಅಥವಾ ಇಂಟರ್ಕಾಮ್‌ ಮೂಲಕ ಸಾಕ್ಷಿ
  • ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
  • ಅನುರೂಪ ಮಾಹಿತಿ
  • ಭಾವಚಿತ್ರ ಫೊಟಾಗ್ರಫಿ ಅದನ್ನು ಸರಿಯಾಗಿ ತೆಗೆಯುವ ವಿಧ
    ಎಚ್ಚರ!—1996
  • ಸೇವೆಯಲ್ಲಿ ಸಭ್ಯವಾಗಿ ವರ್ತಿಸಿ
    ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2017
  • ಮನೆಯವನು ಯೋಚಿಸಿ ತೀರ್ಮಾನಕ್ಕೆ ಬರುವಂತೆ ನೆರವಾಗಿ
    2011 ನಮ್ಮ ರಾಜ್ಯದ ಸೇವೆ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಂಭವನೀಯ ಸಂಭಾಷಣಾ ತಡೆಗಳಿಗೆ ಪ್ರತಿಕ್ರಿಯಿಸುವ ವಿಧ
    2014 ನಮ್ಮ ರಾಜ್ಯದ ಸೇವೆ
ಇನ್ನಷ್ಟು
ನಮ್ಮ ಕ್ರೈಸ್ತ ಜೀವನ ಮತ್ತು ಸೇವೆ—ಕೂಟದ ಕೈಪಿಡಿ 2020
mwb20 ಸೆಪ್ಟೆಂಬರ್‌ ಪು. 8
ಒಬ್ಬ ಸಹೋದರ ಮತ್ತು ಸಹೋದರಿ ಡೋರ್‌ಬೆಲ್‌ ಕ್ಯಾಮರಾ ಮೂಲಕ ಮನೆಯವರಿಗೆ ಮಾತಾಡುತ್ತಾ ಒಂದು ಟ್ರ್ಯಾಕ್ಟ್‌ ತೋರಿಸುತ್ತಿದ್ದಾರೆ.

ನಮ್ಮ ಕ್ರೈಸ್ತ ಜೀವನ

ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಕ್ಯಾಮರಾ ಅಥವಾ ಇಂಟರ್ಕಾಮ್‌ ಮೂಲಕ ಸಾಕ್ಷಿ

ಯಾಕೆ ಪ್ರಾಮುಖ್ಯ: ಕೆಟ್ಟತನ ಜಾಸ್ತಿ ಆಗಿರೋದ್ರಿಂದ ತುಂಬ ಜನ ತಮ್ಮ ಮನೆಗಳ ಸೆಕ್ಯುರಿಟಿಗೆ ಕ್ಯಾಮರಾ ಮತ್ತು ಇಂಟರ್ಕಾಮ್‌ಗಳಂಥ ಹೊಸ ಟೆಕ್ನಾಲಜಿಗಳನ್ನ ಬಳಸುತ್ತಿದ್ದಾರೆ. ಇದರಿಂದ ಮನೆಯವರು ಬಾಗಿಲು ತೆಗೆಯದೆ ಕ್ಯಾಮರಾ ಅಥ್ವಾ ಇಂಟರ್ಕಾಮ್‌ಗಳ ಮೂಲಕ ಒಳಗಿಂದಾನೇ ಮಾತಾಡುತ್ತಾರೆ. ಹಾಗಾಗಿ ಜನರ ಮುಖ ನೋಡದೆ ಮಾತಾಡೋಕೆ ನಮಗೆ ಕೆಲವೊಮ್ಮೆ ಕಷ್ಟ, ಭಯ ಆಗಬಹುದು. ಈ ಕೆಳಗಿನ ಹೆಜ್ಜೆಗಳನ್ನ ಪಾಲಿಸಿದ್ರೆ ಯಾವುದೇ ಭಯ ಇಲ್ಲದೆ ಮಾತಾಡೋದು ಹೇಗೆ ಅಂತ ನಾವು ಕಲಿಬಹುದು.

ಹೇಗೆ ಮಾಡಬಹುದು:

  • ಮನೆಯವರು ಕೇಳ್ತಾರೆ ಅನ್ನೋ ಭರವಸೆ ಇರಲಿ. ಬಾಗಿಲು ತೆಗಿದಿದ್ರೂ ನಮ್ಮ ಹತ್ರ ಮಾತಾಡೋಕೆ ಹೆಚ್ಚಿನವ್ರು ಇಷ್ಟಪಡ್ತಾರೆ

  • ನೀವು ಮನೆ ಬಾಗಿಲು ತಟ್ಟುವ ಅಥವಾ ಬೆಲ್‌ ರಿಂಗ್‌ ಮಾಡುವ ಮುಂಚೆನೇ ಕ್ಯಾಮರಾ ರೆಕಾರ್ಡ್‌ ಆಗುತ್ತಾ ಎಲ್ಲವನ್ನು ಮನೆಯವ್ರಿಗೆ ತೋರಿಸುತ್ತೆ. ನೀವು ಮನೆ ಹತ್ರ ಬರುತ್ತಿದ್ದ ಹಾಗೆ ಮನೆಯವರು ನಿಮ್ಮ ಹಾವ-ಭಾವ ಮತ್ತು ಮಾತುಗಳನ್ನ ಗಮನಿಸುತ್ತಾ ಇರುತ್ತಾರೆ ಅನ್ನೋದನ್ನ ಮರೀಬೇಡಿ

  • ಮನೆಯವರು ಮಾತಾಡುವಾಗ ಕ್ಯಾಮರಾ ಅಥವಾ ಇಂಟರ್ಕಾಮ್‌ ನೋಡಿ ಮಾತಾಡಿ. ಹೀಗೆ ಮಾಡಿದ್ರೆ ಮನೆಯವರ ಎದುರು ನಿಂತು ಮಾತಾಡಿದ ತರ ಇರುತ್ತೆ. ನಗುಮುಖದಿಂದ ಸ್ವಾಭಾವಿಕವಾಗಿ ಮಾತಾಡಿ. ಮನೆ ಮನೆಲಿ ಸಾರುವಾಗ ಏನು ಮಾತಾಡಬೇಕು ಅಂತ ಪ್ಲಾನ್‌ ಮಾಡಿದ್ದೀರೋ ಅದನ್ನೇ ಕ್ಯಾಮರಾದ ಎದುರು ನಿಂತು ಮಾತಾಡಿ. ಆದ್ರೆ ಮುಖ ತುಂಬ ಹತ್ರ ತಗೊಂಡು ಹೋಗಬೇಡಿ. ಒಂದು ವೇಳೆ ಮನೆಯವರು ಏನೂ ಮಾತಾಡಲಿಲ್ಲ ಅಂದ್ರೆ ನೀವು ಏನೂ ಸಂದೇಶ ಕೊಡಬೇಡಿ

  • ಸಂಭಾಷಣೆ ಮುಗಿದ ಮೇಲೂ ಮನೆಯವರು ನಿಮ್ಮನ್ನ ಗಮನಿಸುತ್ತಿರುತ್ತಾರೆ, ನಿಮ್ಮ ಮಾತು ಕೇಳಿಸಿಕೋತ್ತಿರುತ್ತಾರೆ ಅನ್ನೋದು ಮನಸ್ಸಲ್ಲಿ ಇರಲಿ

ಇದನ್ನ ಟ್ರೈ ಮಾಡಿ

ಅದೇ ಸಹೋದರ ತಮ್ಮ ನಿರೂಪಣೆಯನ್ನ ಪ್ರ್ಯಾಕ್ಟೀಸ್‌ ಮಾಡ್ತಾ ತಮ್ಮ ಫೋನ್‌ನಲ್ಲಿ ರೆಕಾರ್ಡ್‌ ಮಾಡ್ತಾ ಇದ್ದಾರೆ.

ನಿಮ್ಮ ಮೊಬೈಲ್‌ ಕ್ಯಾಮರನಾ ನೋಡಿ ಮಾತಾಡುತ್ತಾ ರೆಕಾರ್ಡ್‌ ಮಾಡಿ. ಆಮೇಲೆ ಆ ರೆಕಾರ್ಡಿಂಗಲ್ಲಿ ನಿಮ್ಮ ಹಾವ-ಭಾವ, ಮಾತು ಹೇಗಿತ್ತು ಅಂತ ಪರೀಕ್ಷಿಸಿ

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ