ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಂಭವನೀಯ ಸಂಭಾಷಣಾ ತಡೆಗಳಿಗೆ ಪ್ರತಿಕ್ರಿಯಿಸುವ ವಿಧ
ಏಕೆ ಪ್ರಾಮುಖ್ಯ: ಊಹಿಸಿ, ಒಂದು ಭೀಕರ ನೈಸರ್ಗಿಕ ವಿಪತ್ತು ಸದ್ಯದಲ್ಲೇ ಸಂಭವಿಸಲಿದೆ. ಜನರು ಎಚ್ಚೆತ್ತುಕೊಂಡು ಸುರಕ್ಷಾ ತಾಣಗಳಿಗೆ ಹೋಗದಿದ್ದರೆ ಖಂಡಿತ ಸಾವನ್ನಪ್ಪುತ್ತಾರೆ ಎಂದು ನಿಮಗೆ ತಿಳಿದುಬಂದಿದೆ. ಇದನ್ನು ನೀವು ನಿಮ್ಮ ನೆರೆಯವನಿಗೆ ತಿಳಿಸಲು ಹೋದಾಗ ಆತನು ನಿಮ್ಮ ಮಾತನ್ನು ತಡೆದು, ತನಗೆ ಪುರುಸೊತ್ತಿಲ್ಲವೆಂದು ಹೇಳುತ್ತಾನೆ. ಆಗ ನೀವು ಆಗಿದ್ದಾಗಲಿ ಎಂದು ಸುಮ್ಮನೆ ಮನೆಗೆ ಬಂದು ಬಿಡುತ್ತೀರೋ? ಖಂಡಿತ ಇಲ್ಲ. ಆತನಿಗೆ ದುರಂತದ ಭೀಕರತೆಯನ್ನು ಮನಗಾಣಿಸುವ ನಿಮ್ಮ ಪ್ರಯತ್ನವನ್ನು ಮುಂದುವರಿಸುತ್ತೀರಿ. ಇದೇ ರೀತಿ, ನಮ್ಮ ಸೇವಾಕ್ಷೇತ್ರದಲ್ಲೂ ಅನೇಕರು ನಾವು ಹೇಳುವ ಜೀವರಕ್ಷಕ ಸಂದೇಶದ ಮೌಲ್ಯವನ್ನರಿಯದೆ ಅದಕ್ಕೆ ಕಿವಿಗೊಡದಿರಬಹುದು. ಕಾರಣ, ನಾವು ಭೇಟಿ ಮಾಡುವ ಸಮಯದಲ್ಲಿ ಜನರು ತಮ್ಮ ಕೆಲಸದಲ್ಲಿ ಮುಳುಗಿ ಹೋಗಿರಬಹುದು (ಮತ್ತಾ. 24:37-39) ಅಥವಾ ಸುಳ್ಳು ವದಂತಿಗಳಿಂದಾಗಿ ನಮ್ಮ ಬಗ್ಗೆ ತಪ್ಪಭಿಪ್ರಾಯವಿರಬಹುದು. (ಮತ್ತಾ. 11:18, 19) ಕೆಟ್ಟ ಫಲಗಳನ್ನು ತರುವ ಸುಳ್ಳು ಧರ್ಮಗಳಿಗೂ, ನಮಗೂ ಯಾವುದೇ ವ್ಯತ್ಯಾಸವಿಲ್ಲ ಎಂದು ನೆನಸಬಹುದು. (2 ಪೇತ್ರ 2:1, 2) ಹಾಗಾಗಿ, ಮನೆಯವನು ಯಾವುದೇ ರೀತಿಯಲ್ಲಿ ವಿರೋಧಿಸದೆ, ಕೇವಲ ಆಸಕ್ತಿ ತೋರಿಸದ ಸಂದರ್ಭದಲ್ಲಿ ನಾವು ನಮ್ಮ ಸಂಭಾಷಣೆಯನ್ನು ಕೂಡಲೇ ನಿಲ್ಲಿಸುವ ಅಗತ್ಯವಿಲ್ಲ.
ಈ ತಿಂಗಳು ಇದನ್ನು ಮಾಡಲು ಪ್ರಯತ್ನಿಸಿ:
ಸಂಭವನೀಯ ಸಂಭಾಷಣಾ ತಡೆಗಳನ್ನು ಎದುರಿಸಿ, ಅಲ್ಲಿಂದ ಹೊರಟಾಗ ಇನ್ನೂ ಉತ್ತಮ ರೀತಿಯಲ್ಲಿ ಅದನ್ನು ಹೇಗೆ ಜಯಿಸಬಹುದಿತ್ತೆಂದು ನಿಮ್ಮ ಜೊತೆ ಸೇವೆ ಮಾಡುತ್ತಿರುವವರೊಂದಿಗೆ ಚರ್ಚಿಸಿ.