ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • km 5/98 ಪು. 6
  • ಪ್ರಶ್ನಾ ರೇಖಾಚೌಕ

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಪ್ರಶ್ನಾ ರೇಖಾಚೌಕ
  • 1998 ನಮ್ಮ ರಾಜ್ಯದ ಸೇವೆ
  • ಅನುರೂಪ ಮಾಹಿತಿ
  • ಸೇವೆಯಲ್ಲಿ ನಿಪುಣರಾಗಲು ಸಹಾಯಕಗಳು—ಸಂಭವನೀಯ ಸಂಭಾಷಣಾ ತಡೆಗಳಿಗೆ ಪ್ರತಿಕ್ರಿಯಿಸುವ ವಿಧ
    2014 ನಮ್ಮ ರಾಜ್ಯದ ಸೇವೆ
  • ಮನೆಯವನು ಯೋಚಿಸಿ ತೀರ್ಮಾನಕ್ಕೆ ಬರುವಂತೆ ನೆರವಾಗಿ
    2011 ನಮ್ಮ ರಾಜ್ಯದ ಸೇವೆ
  • ಸುವಾರ್ತೆಯನ್ನು ನೀಡುವುದು ವಿವೇಚನೆಯೊಂದಿಗೆ
    1990 ನಮ್ಮ ರಾಜ್ಯದ ಸೇವೆ
  • ನಮ್ಮ ಜೀವರಕ್ಷಣೆಯ ಶುಶ್ರೂಷೆಯಲ್ಲಿ ಸಫಲರಾಗಿ ಭಾಗವಹಿಸುವುದು
    1993 ನಮ್ಮ ರಾಜ್ಯದ ಸೇವೆ
ಇನ್ನಷ್ಟು
1998 ನಮ್ಮ ರಾಜ್ಯದ ಸೇವೆ
km 5/98 ಪು. 6

ಪ್ರಶ್ನಾ ರೇಖಾಚೌಕ

◼ ಯೆಹೋವನ ಸಾಕ್ಷಿಗಳು ತನ್ನ ಮನೆಯನ್ನು ಮತ್ತೆ ಮತ್ತೆ ಭೇಟಿಮಾಡಬಾರದೆಂದು ಮನೆಯವನೊಬ್ಬನು ಒತ್ತಿಹೇಳುವಾಗ, ವಿಷಯಗಳು ಹೇಗೆ ನಿರ್ವಹಿಸಲ್ಪಡಬೇಕು?

ಬಾಗಿಲು ಇಲ್ಲವೆ ಗೇಟಿನ ಮೇಲೆ, ಧಾರ್ಮಿಕ ಸ್ವರೂಪದ ಭೇಟಿಗಳನ್ನು ಖಡಾಖಂಡಿತವಾಗಿ ನಿರೋಧಿಸುವ ಒಂದು ಸೂಚನೆಯನ್ನು—ವಿಶೇಷವಾಗಿ ಸೂಚನೆಯು ನಿರ್ದಿಷ್ಟವಾಗಿ ಯೆಹೋವನ ಸಾಕ್ಷಿಗಳಿಗೇ ಸೂಚಿಸಲ್ಪಟ್ಟಿರುವಲ್ಲಿ—ನೋಡುವುದಾದರೆ, ಮನೆಯವನ ಕೋರಿಕೆಗಳನ್ನು ಗೌರವಿಸಿ, ಬಾಗಿಲು ತಟ್ಟುವುದರಿಂದ ದೂರವಿರುವುದು ಅತ್ಯುತ್ತಮವಾಗಿರಬಹುದು.

ಕೆಲವೊಮ್ಮೆ ಮಾರಾಟಗಾರರು ಇಲ್ಲವೆ ದಾನಗಳನ್ನು ಕೋರುತ್ತಾ ಬರುವ ಜನರನ್ನು ನಿರೋಧಿಸುವಂತಹ ಸೂಚನೆಯನ್ನು ನಾವು ನೋಡಸಾಧ್ಯವಿದೆ. ನಾವು ದಾನಶೀಲವಾದ ಧಾರ್ಮಿಕ ಕೆಲಸವನ್ನು ಮಾಡುತ್ತಿರುವುದರಿಂದ, ಅದು ನಿಜವಾಗಿಯೂ ನಮಗೆ ಅನ್ವಯಿಸುವುದಿಲ್ಲ. ಮುಂದೆ ಹೋಗಿ ಅಂತಹ ಬಾಗಿಲುಗಳನ್ನು ತಟ್ಟುವುದು ಯೋಗ್ಯವಾಗಿರುವುದು. ಮನೆಯವನು ಆಕ್ಷೇಪಿಸುವುದಾದರೆ, ಅಂತಹ ಸೂಚನೆಗಳು ಏಕೆ ನಮ್ಮ ವಿಷಯದಲ್ಲಿ ಅನ್ವಯವಾಗುವುದಿಲ್ಲವೆಂದು ನಮಗನಿಸುವ ಕಾರಣವನ್ನು ನಾವು ಜಾಣ್ಮೆಯಿಂದ ವಿವರಿಸಸಾಧ್ಯವಿದೆ. ಆ ನಿರೋಧವು ಯೆಹೋವನ ಸಾಕ್ಷಿಗಳನ್ನು ಒಳಗೊಳ್ಳುತ್ತದೆಂದು ಮನೆಯವನು ತರುವಾಯ ಸ್ಪಷ್ಟಗೊಳಿಸುವುದಾದರೆ, ನಾವು ಅವನ ಕೋರಿಕೆಗಳನ್ನು ಗೌರವಿಸುವೆವು.

ನಾವು ಒಂದು ಟೆರಿಟೊರಿಯಲ್ಲಿ ಕೆಲಸಮಾಡುತ್ತಿರುವಾಗ, ಮನೆಯವನೊಬ್ಬನು ಬಹಳಷ್ಟು ಕೋಪಗೊಂಡು, ನಾವು ಪುನಃ ಭೇಟಿಮಾಡಬಾರದೆಂದು ನಿಶ್ಚಯಪೂರ್ವಕವಾಗಿ ಒತ್ತಿಹೇಳಬಹುದು. ವಿಷಯವನ್ನು ತರ್ಕಿಸಲು ಅವನು ನಿರಾಕರಿಸುವುದಾದರೆ, ನಾವು ಅವನ ವಿನಂತಿಯಂತೆ ವರ್ತಿಸಬೇಕು. ಟೆರಿಟೊರಿ ಮ್ಯಾಪಿನ ಹಿಂಬದಿಯಲ್ಲಿ ತಾರೀಖನ್ನು ಒಳಗೊಂಡ ಒಂದು ಟಿಪ್ಪಣಿಯು ಪೆನ್ಸಿಲ್‌ನಲ್ಲಿ ಬರೆಯಲ್ಪಡಬೇಕು, ಇದರಿಂದ ಭವಿಷ್ಯತ್ತಿನಲ್ಲಿ ಆ ಟೆರಿಟೊರಿಯಲ್ಲಿ ಕೆಲಸಮಾಡುವ ಪ್ರಚಾರಕರು ಆ ಮನೆಗೆ ಭೇಟಿನೀಡದಂತೆ ಎಚ್ಚರಿಕೆ ವಹಿಸುವರು.

ಅಂತಹ ಮನೆಗಳನ್ನು ಅನಿಶ್ಚಿತ ಕಾಲದ ವರೆಗೂ ಭೇಟಿಮಾಡದೆ ಬಿಡುವ ಅಗತ್ಯವಿಲ್ಲ. ಈಗ ಅಲ್ಲಿರುವ ಜನರು ಸ್ಥಳಾಂತರಿಸಬಹುದು. ಅನುಕೂಲಕರವಾಗಿ ಪ್ರತಿಕ್ರಿಯಿಸುವ ಮತ್ತೊಂದು ಕುಟುಂಬದ ಸದಸ್ಯನನ್ನು ನಾವು ಸಂಪರ್ಕಿಸಬಹುದು. ನಾವು ಯಾರೊಂದಿಗೆ ಮಾತಾಡಿದೆವೊ ಆ ಮನೆಯವನ ಮನಸ್ಸು ಬದಲಾವಣೆ ಹೊಂದಿ, ನಾವು ಭೇಟಿ ನೀಡುವುದಕ್ಕೆ ಅವನು ಒಪ್ಪಿಕೊಳ್ಳುವ ಸಾಧ್ಯತೆಯೂ ಇರುತ್ತದೆ. ಆದುದರಿಂದ ಸ್ವಲ್ಪ ಸಮಯದ ತರುವಾಯ, ಅಲ್ಲಿರುವವರ ಪ್ರಚಲಿತ ಅನಿಸಿಕೆಗಳನ್ನು ಕಂಡುಹಿಡಿಯಲಿಕ್ಕಾಗಿ, ಅವರ ಬಗ್ಗೆ ಜಾಣ್ಮೆಯಿಂದ ವಿಚಾರಿಸಿ ತಿಳಿದುಕೊಳ್ಳಬೇಕು.

ಎಲ್ಲಿ ಭೇಟಿ ನೀಡಬಾರದೆಂದು ನಮಗೆ ಹೇಳಲಾಗಿದೆಯೊ ಆ ಮನೆಗಳ ಒಂದು ಪಟ್ಟಿಯನ್ನು ಮಾಡುತ್ತಾ, ಟೆರಿಟೊರಿಯ ಫೈಲ್‌ ವರ್ಷಕ್ಕೊಮ್ಮೆ ಪುನರ್ವಿಮರ್ಶಿಸಲ್ಪಡಬೇಕು. ಸೇವಾ ಮೇಲ್ವಿಚಾರಕನ ಮಾರ್ಗದರ್ಶನದ ಕೆಳಗೆ, ಈ ಮನೆಗಳನ್ನು ಸಂದರ್ಶಿಸುವಂತೆ ಕೆಲವು ನಿಪುಣ, ಅನುಭವಸ್ಥ ಪ್ರಚಾರಕರು ನೇಮಿಸಲ್ಪಡಸಾಧ್ಯವಿದೆ. ಅದೇ ಮನೆಯವನು ಇನ್ನೂ ಅಲ್ಲಿರುವನೋ ಇಲ್ಲವೊ ಎಂಬುದನ್ನು ವಿಚಾರಿಸಲು ನಾವು ಭೇಟಿ ನೀಡುತ್ತಿದ್ದೇವೆಂದು ವಿವರಿಸಸಾಧ್ಯವಿದೆ. ಪ್ರಚಾರಕನು, ಬೈಬಲ್‌ ಚರ್ಚೆಗಳನ್ನು ಆರಂಭಿಸುವ ಮತ್ತು ಮುಂದುವರಿಸುವ ವಿಧ ಎಂಬ ಪುಸ್ತಿಕೆಯಲ್ಲಿ, 7-16ನೆಯ ಪುಟಗಳಲ್ಲಿರುವ “ಸಂಭವನೀಯ ಸಂಭಾಷಣಾ ತಡೆಗಟ್ಟುಗಳಿಗೆ ನೀವು ಪ್ರತಿಕ್ರಿಯಿಸಬಹುದಾದ ವಿಧ” ಎಂಬ ಶೀರ್ಷಿಕೆಯ ವಿಷಯದೊಂದಿಗೆ ಪರಿಚಿತನಾಗಿರಬೇಕು. ಸಮಂಜಸವಾದ ಪ್ರತಿಕ್ರಿಯೆಯು ದೊರೆಯುವಲ್ಲಿ, ಮುಂದಿನ ಭೇಟಿಗಳು ಸಾಮಾನ್ಯವಾದ ವಿಧದಲ್ಲಿ ಮಾಡಲ್ಪಡಸಾಧ್ಯವಿದೆ. ಮನೆಯವನು ವಿರೋಧಿಯಾಗಿಯೇ ಮುಂದುವರಿಯುವುದಾದರೆ, ಮುಂದಿನ ವರ್ಷದ ತನಕ ಯಾವ ಭೇಟಿಗಳನ್ನೂ ಮಾಡಬಾರದು. ವಿಶೇಷವಾದ ವಿದ್ಯಮಾನದಲ್ಲಿನ ಪರಿಸ್ಥಿತಿಗಳು, ವಿಷಯಗಳನ್ನು ಭಿನ್ನವಾಗಿ ನಿರ್ವಹಿಸುವುದನ್ನು ಸೂಕ್ತವಾಗಿ ಮಾಡುತ್ತವೊ ಇಲ್ಲವೊ ಎಂಬುದನ್ನು ಸ್ಥಳಿಕ ಹಿರಿಯರ ಮಂಡಲಿಯು ನಿರ್ಧರಿಸಸಾಧ್ಯವಿದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ